
ಬೆಂಗಳೂರು: ತಮ್ಮ ಸೃಜನಶೀಲತೆ, ಚತುರ ಬೆರಳುಗಳುಗಳಿಂದ ಪುರಾತನ ಕಲಾ ಸಂಪ್ರದಾಯದ ಮೇಲೆ ಪಾಂಡಿತ್ಯದಿಂದ ಪೂಜಾರಿ ಅಕ್ಷಯ್ ಜಾಲಿಹಾಲ್ ಮಾಂತ್ರಿಕತೆಯನ್ನು ತಮ್ಮ ಕೈಚಳಕದಲ್ಲಿ ತೋರಿಸುತ್ತಾರೆ.
ಬೆಂಗಳೂರಿನ ಚಂದಾಪುರದ 28 ವರ್ಷದ ನಿವಾಸಿ, ಸಾಂಪ್ರದಾಯಿಕವಾಗಿ ಮಹಿಳಾ ಕಲಾವಿದರು ರಂಗೋಲಿ ಹಾಕುವ ಕಲಾಕೋಟೆಯಲ್ಲಿ ತಮ್ಮ ಕೈಚಳಕವನ್ನು ತೋರಿಸುತ್ತಿದ್ದಾರೆ. ವಿಶಿಷ್ಟವಾದ, ಜನಪ್ರಿಯವಾಗಿರುವ, ಹೂವಿನ ಹಾಗೂ ವಿವಿಧ ವಿನ್ಯಾಸಗಳ ವಿಶೇಷವಾಗಿ ಮನೆಗಳ ಹೊರಗೆ, ವಿವಿಧ ವಿಷಯಗಳು ಮತ್ತು ವ್ಯಕ್ತಿತ್ವಗಳ ಮೇಲೆ ಕಣ್ಣಿಗೆ ಕಟ್ಟುವ ರಂಗೋಲಿಗಳನ್ನು ರಚಿಸುವಲ್ಲಿ ಜಾಲಿಹಾಲ್ ಪ್ರಾವೀಣ್ಯತೆಯನ್ನು ಗಳಿಸಿದ್ದಾರೆ. ಇತ್ತೀಚೆಗೆ, ಡಾ ಬಿಆರ್ ಅಂಬೇಡ್ಕರ್ ಮೆಟ್ರೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ ದಿನದಂದು ರಾಜ್ಯದ ಪ್ರವಾಸಿ ಆಕರ್ಷಣೆಗಳನ್ನು ಮತ್ತು ಕಂಠೀರವ ಸ್ಟುಡಿಯೋದಲ್ಲಿ ದಿವಂಗತ ನಟ ಪುನೀತ್ ರಾಜ್‌ಕುಮಾರ್(Puneet Rajkumar) ಕುರಿತು ಮುಖ್ಯಮಂತ್ರಿಗಳ ಕಚೇರಿಯ ನಿರ್ದೇಶನದಂತೆ ರಂಗೋಲಿ ಬಿಡಿಸಿದ್ದಾರೆ.
ಇಷ್ಟು ದೂರ ಬಂದ ಜಾಲಿಹಾಲ್ ಅವರ ಹಾದಿ ಹೂವಿನದ್ದಾಗಿರಲಿಲ್ಲ,ಸಾಕಷ್ಟು ಶ್ರಮಪಟ್ಟಿದ್ದಾರೆ. ಮಹಿಳೆಯರು ಹಾಕುವ ರಂಗೋಲಿಯನ್ನು ಓರ್ವ ಹುಡುಗ ಯುವಕ ಹಾಕುತ್ತಾನೆ ಎಂದು ಗೇಲಿ ಮಾಡಿದವರೂ ಇದ್ದಾರೆ. ಆದರೆ ಜಾಲಿಹಾಲ್ ಅದರಿಂದ ಎದೆಗುಂದಲಿಲ್ಲ. ಈ ಮಧ್ಯೆ ಪೂರ್ಣಪ್ರಜ್ಞ ವಿದ್ಯಾಪೀಠ ಮತ್ತು ವಾಸುದೇವ ಗುರುಕುಲದಿಂದ ಶಿಕ್ಷಣ ಪೂರೈಸಿದ ಜಾಲಿಹಾಲ್ ಸಂಸ್ಕೃತದಲ್ಲಿ ಅಲಂಕಾರ ಶಾಸ್ತ್ರ ಮತ್ತು ತಂತ್ರಸಾರ ಆಗಮದಲ್ಲಿ ಎಂ ಎ ಮುಗಿಸಿದ್ದಾರೆ, ಲಲಿತ ಕಲೆಯಲ್ಲಿ ವಿಶೇಷತೆ ಮತ್ತು ಡಿಪ್ಲೊಮಾ ಗಳಿಸಿದ್ದಾರೆ.
ವರ್ಣಚಿತ್ರಕಾರರಿಗೆ ಹೆಚ್ಚಿನ ಮೌಲ್ಯವಿದೆ, ಅವರ ಚಿತ್ರಗಳು ಕೋಟಿಗೆ ಮಾರಾಟವಾಗುತ್ತವೆ. ರಂಗೋಲಿ ಪ್ರಾಚೀನ ಭಾರತೀಯ ಕಲಾ ಪ್ರಕಾರವಾಗಿದೆ, ರಾಮಾಯಣ ಮತ್ತು ಮಹಾಭಾರತದಲ್ಲಿ ಉಲ್ಲೇಖವನ್ನು ಕಂಡುಕೊಳ್ಳುತ್ತದೆ. ಇದು ನಮ್ಮ ಶ್ರೇಷ್ಠ ಭಾರತೀಯ ಸಂಪ್ರದಾಯದ ಒಂದು ಭಾಗವಾಗಿದೆ. ಆದರೂ, ನಾವು ಅದನ್ನು ಏಕೆ ಸಾಕಷ್ಟು ಮೌಲ್ಯೀಕರಿಸುತ್ತಿಲ್ಲ ಎಂದು ಜಾಲಿಹಾಲ್ ಕೇಳುತ್ತಾರೆ.
ಕಳೆದ ವರ್ಷ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಜಾಲಿಹಾಲ್ ಅವರನ್ನು ರಂಗೋಲಿ ಬಿಡಿಸಲು ಆಹ್ವಾನಿಸಲಾಗಿತ್ತು. ನೀರಜ್ ಚೋಪ್ರಾ ಟೋಕಿಯೋದಲ್ಲಿ ಒಲಂಪಿಕ್ ಚಿನ್ನ ಗೆದ್ದಾಗ, ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಮಾಲ್‌ನಲ್ಲಿ ಅವರ ರಂಗೋಲಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿತ್ತು. ದಬಾಂಗ್3 ಚಿತ್ರ ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ಐನಾಕ್ಸ್ ಫಿಲ್ಮ್ ಸಿಟಿಯಲ್ಲಿ ಚಿತ್ರಿಸಿದ ಚಿತ್ರವೂ ಸಾಕಷ್ಟು ಕೀರ್ತಿಗಳಿಸಿತ್ತು. ಕೆಲವು ವರ್ಷಗಳ ಹಿಂದೆ ಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2 ರಂದು ಶಾಲೆಯೊಂದರಲ್ಲಿ ಮಹಾತ್ಮರ ರಂಗೋಲಿ ಬಿಡಿಸಲು ಜಾಲಿಹಾಳ್ ಸಿಂಗಪುರಕ್ಕೆ ಭೇಟಿ ನೀಡಿದ್ದರು.
ಪೂಜಾರಿಯಾಗಿ ಅವರ ನಿಯಮಿತ ಉದ್ಯೋಗವು ಜನರ ಮನೆಗಳಲ್ಲಿ ಪೂಜೆಗಳನ್ನು ಮಾಡುವುದಾಗಿದ್ದು, ಹವ್ಯಾಸವಾಗಿ ರಂಗೋಲಿಯನ್ನು ಮುಂದುವರಿಸಿದ್ದಾರೆ. "ಈಗಲೂ ನಾನು ರಂಗೋಲಿಯ ಕಲ್ಪನೆಯನ್ನು ಪ್ರಸ್ತಾಪಿಸಿದಾಗ, ಜನರು ಆರಂಭದಲ್ಲಿ ನಾನು ಅದನ್ನು ತಯಾರಿಸಲು ಮಹಿಳೆಯರನ್ನು ಕರೆತರುತ್ತೇನೆ ಎಂದು ಭಾವಿಸುತ್ತಾರೆ. ನಾನು ಅದನ್ನು ನಾನೇ ಮಾಡುತ್ತೇನೆ ಎಂದು ಅವರು ಆಗಾಗ್ಗೆ ಆಶ್ಚರ್ಯ ಪಡುತ್ತಾರೆ ಎನ್ನುತ್ತಾರೆ, ಇವರು ರಂಗೋಲಿ ಕಲಿಸುವ ಕಾರ್ಯಾಗಾರಗಳನ್ನು ಮಾಡುತ್ತಿದ್ದು ಅನೇಕ ಪುರುಷ ವಿದ್ಯಾರ್ಥಿಗಳಿದ್ದಾರಂತೆ.
ಅವರ ತಂದೆ, ಆಯುರ್ವೇದ ವೈದ್ಯರಾದ ಜೆ ರವೀಂದ್ರ ಅವರು ಸ್ವಲ್ಪ ಸಹಾಯ ಮಾಡುತ್ತಾರಂತೆ. ಒಂದೇ ಸ್ಥಳದಲ್ಲಿ ಹಲವಾರು ಸಾಮಾನ್ಯ ರಂಗೋಲಿಗಳನ್ನು ಮಾಡಲು ನಮ್ಮನ್ನು ಕೇಳುವ ಸಂದರ್ಭಗಳಿವೆ. ಅಂತಹ ಸಂದರ್ಭಗಳಲ್ಲಿ ನನ್ನ ತರಬೇತಿ ಪಡೆದ ವಿದ್ಯಾರ್ಥಿಗಳನ್ನು ನಾನು ನನ್ನೊಂದಿಗೆ ಕರೆದೊಯ್ಯುತ್ತೇನೆ ಎಂದು ಜಾಲಿಹಾಲ್ ಹೇಳುತ್ತಾರೆ.
Advertisement