ಕೋಚಿಂಗ್ ಪಡೆಯಲು ಆರ್ಥಿಕ ಮುಗ್ಗಟ್ಟು: ಯೂಟ್ಯೂಬ್ ತರಗತಿ, ಪುಸ್ತಕಗಳ ನೆರವಿನಿಂದಲೇ ಎನ್ಇಇಟಿ ತೇರ್ಗಡೆಯಾದ ರಿತಿಕಾ!

2021 ರಲ್ಲಿ ಎನ್ಇಇಟಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಪೈಕಿ ಸರ್ವೋದಯ ಕನ್ಯ ವಿದ್ಯಾಲಯ, ಮೊಲಾರ್ಬ್ಯಾಂಡ್ ನ ವಿದ್ಯಾರ್ಥಿ ರಿತಿಕಾ ಕೂಡ ಒಬ್ಬರಾಗಿದ್ದು, ಯಾವುದೇ ಕೋಚಿಂಗ್ ನೆರವಿಲ್ಲದೇ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎನ್ನುವುದು ವಿಶೇಷವಾಗಿದೆ. 
ರಿತಿಕಾ
ರಿತಿಕಾ
Updated on

2021 ರಲ್ಲಿ ಎನ್ಇಇಟಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಪೈಕಿ ಸರ್ವೋದಯ ಕನ್ಯ ವಿದ್ಯಾಲಯ, ಮೊಲಾರ್ಬ್ಯಾಂಡ್ ನ ವಿದ್ಯಾರ್ಥಿ ರಿತಿಕಾ ಕೂಡ ಒಬ್ಬರಾಗಿದ್ದು, ಯಾವುದೇ ಕೋಚಿಂಗ್ ನೆರವಿಲ್ಲದೇ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎನ್ನುವುದು ವಿಶೇಷವಾಗಿದೆ. 
 
ಪ್ಯಾಂಡಮಿಕ್ ಅವಧಿಯಲ್ಲಿ ಆನ್ ಲೈನ್ ತರಗತಿಗಳಿಗೆ ಹಾಜರಾಗುವ ವ್ಯವಸ್ಥೆ ಇಲ್ಲದೇ ರಿತಿಕಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. 

ರಿತಿಕಾ ಬದಾರ್ಪುರ ನಿವಾಸಿಯಾಗಿದ್ದು 2 ಕೊಠಡಿಗಳಿರುವ ಮನೆಯಲ್ಲಿ ಪೋಷಕರು ಹಾಗೂ ಇಬ್ಬರು ಕಿರಿಯ ಸಹೋದರರೊಂದಿಗೆ ವಾಸಿಸುತ್ತಿದ್ದಾರೆ. ಆಕೆಯ ತಂದೆ ಖಾಸಗಿ ಕೈಗಾರಿಕೆಯೊಂದರಲ್ಲಿ ಎಂಬ್ರಾಯ್ಡ್ರಿ ನೌಕರಿ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡರು. 

"ಈ ಅವಧಿಯಲ್ಲಿ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಉಳಿತಾಯದಿಂದ ಹಣ ತೆಗೆದು ಖರ್ಚು ಮಾಡುತ್ತಿದ್ದೆವು. XII ನೇ ತರಗತಿಯಲ್ಲಿ ಶೇ.93 ರಷ್ಟು ಅಂಕ ಗಳಿಸಿದ್ದೆ. ಶಿಕ್ಷಣದಲ್ಲಿ ನನ್ನ ಆಸಕ್ತಿಯನ್ನು ಕಂಡ ಪೋಷಕರು ಚಿನ್ನವನ್ನು ಅಡವಿಟ್ಟು ಆಂಡ್ರಾಯ್ಡ್ ಫೋನ್ ಹಾಗೂ ಪುಸ್ತಕಗಳಿಗೆ ವ್ಯವಸ್ಥೆ ಮಾಡಿಕೊಟ್ಟರು" ಎನ್ನುತ್ತಾರೆ ರಿತಿಕಾ

500 ಅಂಕಗಳನ್ನು ಪಡೆದು ಪರಿಶಿಷ್ಟ ವರ್ಗಗಳ ಅಡಿಯಲ್ಲಿ 3,032 ಶ್ರೇಣಿಯಲ್ಲಿ ತೇರ್ಗಡೆಯಾದ ರಿತಿಕಾ ಖಾಸಗಿ ಕೋಚಿಂಗ್ ಗೆ ತೆರಳದೇ ಯೂಟ್ಯೂಬ್ ತರಗತಿಗಳು ಹಾಗೂ ಪುಸ್ತಕಗಳ ನೆರವಿಂದಲೇ ಎನ್ಇಇಟಿಯಲ್ಲಿ ತೇರ್ಗಡೆಯಾಗಿದ್ದು, "ನನ್ನ ಪ್ರಾಂಶುಪಾಲರು, ಶಿಕ್ಷಕರು, ಶಲೆಯ ಗ್ರಂಥಾಲಯ ಬಳಕೆ ಮಾಡಲು ಅವಕಾಶ ನೀಡಿ ಪ್ರೋತ್ಸಾಹಿಸಿದ್ದಾರೆ ಎಂದು ರಿತಿಕಾ ತಮಗೆ ದೊರೆತ ಸಹಾಯವನ್ನು ಸ್ಮರಿಸಿದ್ದಾರೆ. ದೆಹಲಿ ಶಾಲೆಗಳಿಂದ ಒಟ್ಟು 426 ವಿದ್ಯಾರ್ಥಿಗಳು ಈ ವರ್ಷ ಎನ್ಇಇಟಿ ತೇರ್ಗಡೆಯಾಗಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com