ಅಶ್ವಥ ಎಲೆಯಲ್ಲಿ ಅರಳಿದ ಚಿತ್ರಕಲೆ
ಅಶ್ವಥ ಎಲೆಯಲ್ಲಿ ಅರಳಿದ ಚಿತ್ರಕಲೆ

ಎಲೆಯ ಮೇಲೆ ಕಲೆ: ಉಡುಪಿಯ ಕಲಾವಿದ ಮಹೇಶ್ ಮರ್ನೆ ವಿಶಿಷ್ಟ ಪ್ರತಿಭೆ

ಮರದಿಂದ ಬಿದ್ದ ಎಲೆ ನಮ್ಮ-ನಿಮ್ಮಂತ ಸಾಮಾನ್ಯ ಜನರಿಗೆ ನಿಷ್ಪ್ರಯೋಜಕ ವಸ್ತುವಾಗಬಹುದು, ಇಲ್ಲವೇ ಗಿಡಗಳಿಗೆ ಗೊಬ್ಬರವಾಗಬಹುದು. ಆದರೆ ಉಡುಪಿಯ ಈ 36 ವರ್ಷದ ಯುವಕನಿಗೆ ತಮ್ಮ ಅಪರೂಪದ ಚಿತ್ರಕಲೆಯನ್ನು ಪ್ರದರ್ಶಿಸಲು ಇರುವ ವಸ್ತು. ತಮ್ಮ ಕುಶಲತೆಯಿಂದ ಎಲೆಯಲ್ಲಿ ಸುಂದರ ಚಿತ್ರಗಳನ್ನು, ವಿನ್ಯಾಸಗಳನ್ನು ರೂಪಿಸುತ್ತಾರೆ.
Published on

ಉಡುಪಿ: ಮರದಿಂದ ಬಿದ್ದ ಎಲೆ ನಮ್ಮ-ನಿಮ್ಮಂತ ಸಾಮಾನ್ಯ ಜನರಿಗೆ ನಿಷ್ಪ್ರಯೋಜಕ ವಸ್ತುವಾಗಬಹುದು, ಇಲ್ಲವೇ ಗಿಡಗಳಿಗೆ ಗೊಬ್ಬರವಾಗಬಹುದು. ಆದರೆ ಉಡುಪಿಯ ಈ 36 ವರ್ಷದ ಯುವಕನಿಗೆ ತಮ್ಮ ಅಪರೂಪದ ಚಿತ್ರಕಲೆಯನ್ನು ಪ್ರದರ್ಶಿಸಲು ಇರುವ ವಸ್ತು. ತಮ್ಮ ಕುಶಲತೆಯಿಂದ ಎಲೆಯಲ್ಲಿ ಸುಂದರ ಚಿತ್ರಗಳನ್ನು, ವಿನ್ಯಾಸಗಳನ್ನು ರೂಪಿಸುತ್ತಾರೆ.

ಮಹೇಶ್ ಮರ್ನೆ ಎಂಬ ಕಲಾವಿದ ಎಲೆಯಲ್ಲಿ ಕೃಷ್ಣ ದೇವರು, ಸಚಿನ್ ತೆಂಡೂಲ್ಕರ್, ಭಾರತದ ಭೂಪಟ ಚಿತ್ರಿಸಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸುವ ಚಿತ್ರಗಳನ್ನು ಚಿತ್ರಿಸಿದ್ದಾರೆ. ಅಶ್ವಥ ಎಲೆಯಲ್ಲಿ ತಮ್ಮ ಚಿತ್ತಾರವನ್ನು ಬಿಡಿಸುತ್ತಾರೆ.

ಮಹೇಶ್ ಓದಿದ್ದು ಕೇವಲ ಹತ್ತನೇ ತರಗತಿಯವರೆಗೆ. ಆದರೆ ತಮ್ಮ ಕಲೆಯಿಂದ ಅವರು ವಿಶಿಷ್ಟತೆ ಮೆರೆದಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಓದುವಾಗಲೇ ಅವರಿಗೆ ಚಿತ್ರಕಲೆಯಲ್ಲಿ ವಿಶೇಷ ಒಲವಿತ್ತು. ಉಡುಪಿಯ ಪಾಟ್ಲಾದಲ್ಲಿ ಯುಎಸ್ ನಾಯಕ್ ಹೈಸ್ಕೂಲ್ ನಲ್ಲಿ ಓದಿದ್ದು.ಶಾಲಾ ದಿನಗಳಲ್ಲಿ ಓದುತ್ತಿದ್ದಾಗ ಮಹೇಶ್ ಅವರ ಡ್ರಾಯಿಂಗ್ ಟೀಚರ್ ಸದಾನಂದ ಪಂಚನಬೆಟ್ಟು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಅದರಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದರು.

ಕಾರ್ಕಳ ತಾಲೂಕಿನ ಮಿಯಾರ್‌ನಲ್ಲಿರುವ ಸಿಇ ಕಾಮತ್ ಇನ್‌ಸ್ಟಿಟ್ಯೂಟ್ ಫಾರ್ ಆರ್ಟಿಸನ್‌ನಲ್ಲಿ ಕಲ್ಲು ಮತ್ತು ಮರದ ಮೇಲೆ 18 ತಿಂಗಳ ತೀವ್ರ ತರಬೇತಿ ಮಹೇಶ್ ಅವರ ಕಲಾ ಪ್ರತಿಭೆಗೆ ಅಡಿಪಾಯ ಹಾಕಿತು. ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ 10 ವರ್ಷಗಳ ಕಾಲ ಕಲಾವಿದರಾಗಿ ಕೆಲಸ ಮಾಡಿ ಅಲ್ಲಿ ಸೂಕ್ಷ್ಮಗಳನ್ನು ಕಲಿತು ತಮ್ಮ ಕೌಶಲ್ಯವನ್ನು ಚುರುಕುಗೊಳಿಸಿದರು. ಅವರು ಐದು ಬಾರಿ ಮೈಸೂರು ದಸರಾದಲ್ಲಿ ಕರಾವಳಿ ಕರ್ನಾಟಕವನ್ನು ಪ್ರತಿನಿಧಿಸುವ ಟ್ಯಾಬ್ಲೋಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ವೇದಿಕೆಯನ್ನು ಸಹ ವಿನ್ಯಾಸಗೊಳಿಸಿದ್ದಾರೆ.

ಕಲ್ಲು, ಮರ, ಫೋಮ್ ಶೀಟ್, ತರಕಾರಿಗಳು, ಸೀಮೆಸುಣ್ಣ ಮತ್ತು ಸಾಬೂನುಗಳ ಮೇಲೆ ಸಣ್ಣ ಶಿಲ್ಪಗಳನ್ನು ರಚಿಸುವಲ್ಲಿ ಮಹೇಶ್ ಪರಿಣತಿ ಪಡೆದ ನಂತರ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಲಾಕ್‌ಡೌನ್ ಸಮಯದಲ್ಲಿ ಮರದಿಂದ ಉದುರಿದ ಎಲೆಯನ್ನು ತೆಗೆದುಕೊಂಡು ಅದಕ್ಕೆ ಜೀವ ತುಂಬಲು ಮಹೇಶ್ ಅವರನ್ನು ಪ್ರೇರೇಪಿಸಿತು.

"ಎಲೆಯ ಮೇಲೆ ಚಿತ್ರಗಳನ್ನು ಕೆತ್ತಲು ಸಾಕಷ್ಟು ತಾಳ್ಮೆ ಬೇಕು. ಇದಕ್ಕೆ ಸಾಕಷ್ಟು ಕಲ್ಪನೆ ಮತ್ತು ಪರಿಪೂರ್ಣತೆಯ ಅಗತ್ಯವಿದೆ. ನನ್ನ ಕಲೆ ಜನರ ಗಮನ ಸೆಳೆಯುತ್ತಿದೆ ಎಂದು ಖುಷಿಯಿಂದ ಹೇಳುತ್ತಾರೆ ಮಹೇಶ್. ನಾನು ಮರದಿಂದ ಹೊಸದಾಗಿ ಬಿದ್ದ ಎಲೆಯನ್ನು ಬಳಸುತ್ತೇನೆ ಏಕೆಂದರೆ ಅದರಲ್ಲಿ ಚಿತ್ರ ಬರೆಯಲು ಸುಲಭ. ಮೊದಲು ಎಲೆಯನ್ನು ನೀರಿನಲ್ಲಿ ನೆನೆಸಿ ನಂತರ ಕೆತ್ತನೆಯನ್ನು ಪ್ರಾರಂಭಿಸುತ್ತೇನೆ ಎನ್ನುತ್ತಾರೆ.

ಮಂಗಳೂರಿನ ಸ್ವರೂಪ್ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್, ಮಹೇಶ್ ಅವರು ವಿನ್ಯಾಸದಲ್ಲಿ ಉತ್ಕೃಷ್ಟರಾಗಿದ್ದಾರೆ, ಕಲೆಯ ಮಾಧ್ಯಮದಲ್ಲಿ ಕೌಶಲ್ಯಗಳನ್ನು ಅನ್ವಯಿಸುವ ಅವರ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ. 

ಮಹೇಶ್ ಅವರು 100ಕ್ಕೂ ಹೆಚ್ಚು ಜೋಡಿಗಳ ಭಾವಚಿತ್ರಗಳನ್ನು ಬಿಡಿಸಿದ್ದಾರೆ. ಮಹೇಶ್ ಅವರ ಹೆಸರಿನಲ್ಲಿ ಹಲವು ದಾಖಲೆಗಳಿವೆ. ಏಳು ನಿಮಿಷಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ ‘ಎಲೆಯ ಮೇಲೆ ಅತಿವೇಗದ ಭಾವಚಿತ್ರ’ ನಿರ್ಮಿಸಿದ್ದಕ್ಕಾಗಿ ಅವರು ಈ ವರ್ಷದ ಮಾರ್ಚ್‌ನಲ್ಲಿ ‘ವಿಶೇಷ ವಿಶ್ವ ದಾಖಲೆ’ ಪ್ರಮಾಣಪತ್ರವನ್ನು ಪಡೆದರು. 2015 ರಲ್ಲಿ, ಮಹೇಶ್ 3 ಸಾವಿರದ 500 ಐಸ್ ಕ್ರೀಮ್ ಸ್ಟಿಕ್ಗಳು ಮತ್ತು 750 ಬೆಂಕಿಕಡ್ಡಿಗಳೊಂದಿಗೆ ಗಣೇಶನ ವಿಗ್ರಹವನ್ನು ರಚಿಸಿ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ಅನ್ನು ಪ್ರವೇಶಿಸಿದ್ದಾರೆ. ಕಲೆ ತಮಗೆ ಸೀಮಿತವಾಗಬಾರದು ಎಂಬ ಕಾರಣಕ್ಕೆ ಮಕ್ಕಳಿಗೆ ಎಲೆಯ ಮೇಲೆ ಕಲೆಯ ತರಬೇತಿ ನೀಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com