ಈ ಗ್ರಾಮದಲ್ಲಿ ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧಾತ್ಮಕ ಪರೀಕ್ಷಾ ಗ್ರಂಥಾಲಯ: ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯಡಿ ನಿರ್ಮಾಣ

ಕರಲ ಗ್ರಾಮದ ಬಾಲಕಿಯರು ಮೆಡಿಕಲ್, ಎಂಜಿನಿಯರಿಂಗ್, ಯುಪಿಎಸ್ಸಿ ಮತ್ತಿತರ ಪ್ರವೇಶ ಪರೀಕ್ಷೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಗ್ರಂಥಾಲಯ ನೆರವಾಗಲಿದೆ.
ಗ್ರಂಥಾಲಯದ ಒಳಾಂಗಣ
ಗ್ರಂಥಾಲಯದ ಒಳಾಂಗಣ
Updated on

ನವದೆಹಲಿ: ಉತ್ತರ ದೆಹಲಿಯ ಕರಲ ಎಂಬ ಹಳ್ಳಿಯೊಂದರಲ್ಲಿ  ಬಾಲಕಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಪ್ರೋತ್ಸಾಹ ನೀಡುವ ಸಲುವಾಗಿ ಪ್ರತ್ಯೇಕ ಗ್ರಂಥಾಲಯವನ್ನು ಪ್ರಾರಂಭ ಮಾಡಲಾಗಿದೆ.   

ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆ ಅಡಿ ಈ ಲೈಬ್ರರಿಯನ್ನು ತೆರೆಯಲಾಗಿದೆ. ಈ ಭಾಗದ ಸುತ್ತಮುತ್ತ ಎಲ್ಲೂ ಗ್ರಂಥಾಲಯಗಳಿಲ್ಲ. ಓದಲು ಹೋಗಬೇಕೆಂದರೆ ತುಂಬಾ ದೂರ ಪ್ರಯಾನ ನಡೆಸಬೇಕು. ಅದು ಹಳ್ಳಿಯ ಹೆಣ್ಣುಮಕ್ಕಳಿಗೆ ಆಗದ ಮಾತು. ಹೀಗಾಗಿ ಈ ಸವಲತ್ತನ್ನು ತೆರೆಯಲಾಗಿದೆ. 

ಗ್ರಂಥಾಲಯದ ಉಪಯೋಗವನ್ನು ಕೇವಲ ಶಾಲಾ ಕಾಲೇಜು ಬಾಲಕಿಯರು ಮಾತ್ರವಲ್ಲ, ಹೆಂಗಸರೂ ಪಡೆದುಕೊಳ್ಳಬಹುದಾಗಿದೆ. ಮೆಡಿಕಲ್, ಎಂಜಿನಿಯರಿಂಗ್, ಯುಪಿಎಸ್ಸಿ ಮತ್ತಿತರ ಪ್ರವೇಶ ಪರೀಕ್ಷೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿಕೊಳ್ಳಲು ಗ್ರಂಥಾಲಯ ನೆರವಾಗಲಿದೆ. 

ಈ ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಐಎಎ ಸ್ ತರಬೇತಿ ಕೇಂದ್ರ ಆರಿಸಿದೆ. ಗ್ರಾಮದ ಪುರುಷರು ತಮ್ಮ ಬಳಿ ಬಂದು ಬಾಲಕಿಯರಿಗಾಗಿಯೇ ಪ್ರತ್ಯೇಕ ಸ್ಪರ್ಧಾತ್ಮಕ ಪುಸ್ತಕಗಳನ್ನೊಳಗೊಂಡ ಗ್ರಂಥಾಲಯ ಸ್ಥಾಪನೆಗೆ ನೆರವು ಕೋರಿದ್ದರು ಎಂದು ಸೌಮ್ಯಾ ಶರ್ಮಾ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com