ಐಎಎಸ್ ಅಧಿಕಾರಿಗಳ ಸಂಘದಿಂದ ಟಾಪರ್ ಸೇರಿದಂತೆ 25 ಯಶಸ್ವಿ ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಮಾರ್ಗದರ್ಶನ!

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ 761 ಅಭ್ಯರ್ಥಿಗಳ ಪೈಕಿ ಟಾಪರ್ ಸೇರಿದಂತೆ 25ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನ್ಯಾಷನಲ್ ಅಸೋಸಿಯೇಶನ್ ಆಫ್ ಸಿವಿಲ್ ಸರ್ವೆಂಟ್ಸ್(ಎನ್‌ಎಸಿಎಸ್) ಮಾರ್ಗದರ್ಶನ ನೀಡಿದೆ.
ಶುಭಂ ಕುಮಾರ್
ಶುಭಂ ಕುಮಾರ್

ಪಾಟ್ನಾ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ 761 ಅಭ್ಯರ್ಥಿಗಳ ಪೈಕಿ ಟಾಪರ್ ಸೇರಿದಂತೆ 25ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನ್ಯಾಷನಲ್ ಅಸೋಸಿಯೇಶನ್ ಆಫ್ ಸಿವಿಲ್ ಸರ್ವೆಂಟ್ಸ್(ಎನ್‌ಎಸಿಎಸ್) ಮಾರ್ಗದರ್ಶನ ನೀಡಿದೆ.

ಎನ್‌ಎಸಿಎಸ್ ನಿಂದ ಮಾರ್ಗದರ್ಶನ ಪಡೆದ ಬಿಹಾರದ ಕತಿಹಾರ್ ಜಿಲ್ಲೆಯ ಶುಭಂ ಕುಮಾರ್ ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದರೆ, ಇನ್ನೂ ಅನೇಕರು ಉತ್ತಮ ರ್ಯಾಂಕ್ ಗಳನ್ನು ಗಳಿಸಿದ್ದಾರೆ.

ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಬಿಹಾರ ಮತ್ತು ಜಾರ್ಖಂಡ್ ಐಎಎಸ್ ಅಧಿಕಾರಿಗಳು ಸಂಘ(ಎನ್‌ಎಸಿಎಸ್) 
ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಸಂದರ್ಶನಕ್ಕೆ ಹೇಗೆ ಸಿದ್ಧಗೊಳ್ಳಬೇಕು ಎಂದು ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಿತ್ತು. 

ದೆಹಲಿಯಲ್ಲಿ ಬಿಹಾರದ ರೆಸಿಡೆಂಟ್ ಆಯುಕ್ತರಾದ ಪಾಲ್ಕಾ ಸಾಹ್ನಿ ಅವರು ತಮ್ಮಂದಿ ಮಾರ್ಗದರ್ಶನ ಪಡೆದ 
ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದ ಶುಭಂ ಕುಮಾರ್ ಮತ್ತು ಇತರರನ್ನು ಅಭಿನಂದಿಸಿದ್ದಾರೆ.

ಶುಭಂ ಕುಮಾರ್ ಅವರು ಎನ್ಎಸಿಎಸ್ ಮಾತ್ರವಲ್ಲದೆ ಇಡೀ ಬಿಹಾರ ಮತ್ತು ಜಾರ್ಖಂಡ್ ಅನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಎನ್‌ಎಸಿಎಸ್ ಸದಸ್ಯರಲ್ಲಿ ಒಬ್ಬರಾದ ವಿಜಯ್ ಕುಮಾರ್ ಅವರು ಹೇಳಿದ್ದಾರೆ.

"ಶುಭಂ ಕುಮಾರ್ ಅವರನ್ನು ಹೊರತುಪಡಿಸಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಎನ್ ಎಸಿಎಸ್ ನಡೆಸುವ ಸಂದರ್ಶನ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು" ಎಂದು ವಿಜಯ್ ಕುಮಾರ್ ಅವರು ಹೇಳಿದ್ದಾರೆ.

ಇತರ ಯಶಸ್ವಿ ವಿದ್ಯಾರ್ಥಿಗಳಲ್ಲಿ ಪ್ರವೀಣ್ ಕುಮಾರ್ 7ನೇ ರ್ಯಾಂಕ್, ಸತ್ಯಂ ಕುಮಾರ್ 10ನೇ ರ್ಯಾಂಕ್, ದಲ್ಜಿತ್ ಕುಮಾರ್ 114, ರೋಹನ್ ಝಾ 164, ಸಂದೀಪ್ ಕುಮಾರ್ ಶ್ರೇಣಿ 186, ಶುಭಂ ಮೋಹಂಕಾ 196, ಅಲ್ತ್ಮಾಶ್ ಘಾಜಿ 282, ರಾಹುಲ್ ದುಬೆ 296, ಸುಮಿತ್ ಕುಮಾರ್ ಪಾಂಡೆ 337, ಅನಾಮಿಕಾ 348, ಪವನ್ ಕುಮಾರ್ ಯಾದವ್ 375, ಪರಿಚಯ ಕುಮಾರ್ 410, ಸೌರಭ್ ಸಿಂಗ್ 411, ಅಮಿತ್ ರಂಜನ್ 431, ರಿತೇಶ್ ಸಿಂಗ್ 451, ರಶ್ಮಿ ರಾಣಿ 457, ಪೂಜಾ ಕುಮಾರಿ 472, ಸನ್ನಿ ಕುಮಾರ್ 500, ಜಯ ಸ್ನೇಹ 527 , ಅಕ್ಷಯ್ ರಂಜುಮೇಶ್ 547, ವಿಕಾಸ್ ಕುಮಾರ್ 603, ರಾಜಹನ್ಸ್ ಕುಮಾರ್ ಸಿಂಗ್ ಶ್ರೇಣಿ 619, ವಿವೇಕಾನಂದ ಶುಕ್ಲಾ 632, ಧವಳೇಂದು ಕುಮಾರ್ 663 ಮತ್ತು ಕುಮಾರ್ ಸೌಮ್ಯ ಅವರು 746ನೇ ರ್ಯಾಂಕ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com