35 ವರ್ಷದ ನಂತರ ಕುಟುಂಬದಲ್ಲಿ ಹೆಣ್ಣುಮಗು ಜನನ: ನವಜಾತ ಶಿಶುವನ್ನು ಹೆಲಿಕಾಪ್ಟರ್ ನಲ್ಲಿ ಕರೆ ತಂದು ಪೋಷಕರ ಸಂಭ್ರಮ!

ಕುಟುಂಬದಲ್ಲಿ ಹೆಣ್ಣುಮಗು ಜನಿಸಿದ ಹಿನ್ನೆಲೆಯಲ್ಲಿ ರಾಜಸ್ತಾನದ ಕುಟುಂಬವೊಂದು ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡಿದೆ.
ಹೆಲಿಕಾಪ್ಟರ್ ನಲ್ಲಿ ಬಂದ ರಿಯಾ
ಹೆಲಿಕಾಪ್ಟರ್ ನಲ್ಲಿ ಬಂದ ರಿಯಾ

ಜೈಪುರ: ಕುಟುಂಬದಲ್ಲಿ ಹೆಣ್ಣುಮಗು ಜನಿಸಿದ ಹಿನ್ನೆಲೆಯಲ್ಲಿ ರಾಜಸ್ತಾನದ ಕುಟುಂಬವೊಂದು ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡಿದೆ.

35 ವರ್ಷಗಳ ನಂತರ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದ ಕಾರಣಕ್ಕಾಗಿ,4.5 ಲಕ್ಷ ರು ಹಣ ಖರ್ಚು ಮಾಡಿ ಹೆಲಿಕಾಪ್ಟರ್ ನಲ್ಲಿ ತಮ್ಮ ಕುಟುಂಬದ ಮೊಟ್ಟ ಮೊದಲ ಹೆಣ್ಣು ಮಗುವನ್ನು ಮನೆಗೆ ಕರೆ ತಂದಿದ್ದಾರೆ. ಈ ಮೂಲತ ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದ್ದಾರೆ.

ನಾಗೂರು ಜಿಲ್ಲೆಯ ನಿಂಬ್ಡಿ ಚಂಡವಾತ ಗ್ರಾಮದ ಜನರು ಹೆಣ್ಣು ಮಗುವನ್ನು ನೋಡಲು ಆಗಮಿಸಿದ್ದರು, ರಿಯಾ 2 ತಿಂಗಳ ಹಿಂದೆ ತನ್ನ ತಾಯಿಯ ತವರು ಮನೆಯಲ್ಲಿ ಜನಿಸಿದ್ದಳು, ರಾಮನವಮಿಯ ಶುಭ ಸಂದರ್ಭದಲ್ಲಿ ತನ್ನ ತಂದೆಯ ಮನೆಗೆ ಆಗಮಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಾಯಿ ಮತ್ತು ಮಗುವಿಗೆ ಹೂವಿನ ಮಳೆ ಸುರಿಸಿ ಸ್ವಾಗತ ಕೋರಿದರು.

ರಿಯಾ ಅವರ ತಾತ ಮದನ್ ಲಾಲ್ ಕುಮಾರ್ ಅವರ ಮನೆಯಲ್ಲಿ ಹಲವು ಮಕ್ಕಳು ಜನಿಸಿದ್ದಾರೆ. ಆದರೆ 35 ವರ್ಷದಿಂದ ಒಂದು ಹೆಣ್ಣು ಮಗುವು ಜನಿಸಿರಲಿಲ್ಲ, 

ಹೆಣ್ಣು ಮಗು ಬೇಕೇಂಬ ಕುಟುಂಬ ಸದಸ್ಯರ ಆಸೆ ಅಂತಿಮವಾಗಿ ಈಡೇರಿದಾಗ, ರಿಯಾ ತಾತ ಹೆಲಿಕಾಪ್ಟರ್‌ನಲ್ಲಿ ಬಾಲಕಿಯನ್ನು ಮನೆಗೆ ಕರೆತರಲು ನಿರ್ಧರಿಸಿದರು. ಇದಕ್ಕಾಗಿ ಅವರು ಜಿಲ್ಲಾಧಿಕಾರಿಯಿಂದ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ಪಡೆದರು ಮತ್ತು ಅಧಿಕಾರಿಗಳು ರಿಯಾ ಅವರ ತಾಯಿಯ ಮತ್ತು ತಂದೆಯ ಹಳ್ಳಿಗಳಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಕುಟುಂಬಕ್ಕೆ ಅವಕಾಶ ನೀಡಿದರು.

ಎರಡು ಗ್ರಾಮಗಳ ನಡುವೆ 30 ಕಿಮೀ ಅಂತರವಿದ್ದು, 20 ನಿಮಿಷದಲ್ಲಿ ಚಾಪರ್ ರಿಯಾ ತಂದೆ ಮನೆ ತಲುಪಿತು. ರಿಯಾಳನ್ನು ತನ್ನ ಎರಡು ತೋಳಗಳಲ್ಲಿ ಎತ್ತಿಕೊಂಡು ಬಂದ ರಿಯಾ ತಂದೆ ಹನುಮಾನ್ ರಾಮ್ ಪ್ರಜಾಪತ್ ಹೆಮ್ಮೆಯಿಂದ ತಮ್ಮ ಮಾತನಾಡಿದ್ದಾರೆ.

ಹೆಣ್ಣು ಮಗು ಹುಟ್ಟಿತೆಂದು ದುಃಖ ಪಡುವವರಿಗೆ ಇದೊಂದು ಸಂದೇಶವಾಗಲಿದೆ, ಹೆಣ್ಣುಮಗುವಿನ ಜನನವನ್ನು ಹಬ್ಬದಂತೆ ಆಚರಿಸಬೇಕು ಎಂದು ಹೇಳಿದ್ದಾರೆ.ರಿಯಾಳನ್ನು ಹೆಲಿಪ್ಯಾಡ್ ನಿಂದ ಮನೆಗೆ ಬ್ಯಾಂಡ್ ಸಮೇತ ಹಬ್ಬದ ಮೆರವಣಿಗೆಯಂತೆ ಕರೆದೊಯ್ಯಲಾಯಿತು.

ರಿಯಾ  ಚಾಪರ್ ಸವಾರಿ ಮತ್ತು ರಾಜಸ್ಥಾನದ ಗ್ರಾಮೀಣ ಭಾಗದಲ್ಲಿ ಇನ್ನೂ ಆಚರಣೆಯಲ್ಲಿರುವ ಗಂಡು-ಹೆಣ್ಣಿನ ಅಸಮಾನತೆ ಹೋಗಲಾಡಿಸಲು ಇದೊಂದು ವೇದಿಕೆಯಂತಾಗಿತ್ತು. ಹೆಣ್ಣು ಮಗು ಹುಟ್ಟುವುದೇ ಶಾಪ ಎಂದುಕೊಳ್ಳುವ ಇಂದಿನ ಸಮಾಜದಲ್ಲಿ ರಿಯಾ ಹುಟ್ಟಿದ ಆಚರಣೆಯಿಂದ ಜನ ಹೆಣ್ಣುಮಕ್ಕಳ  ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com