ಕೃಷಿ ಕ್ಷೇತ್ರದ ಸ್ಟಾರ್ಟ್ ಅಪ್ ಗೆ ಪ್ರಶಸ್ತಿ: ಬೆಂಗಳೂರು ಯುವತಿಯ ಯಶೋಗಾಥೆ!

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನಸ ಗೊಂಚಿಗರ್ ಅವರು ಯುವ ಜನ ಮತ್ತು ಕ್ರೀಡಾ ಇಲಾಖೆ ಸಚಿವ ಅನುರಾಗ್ ಠಾಕೂರ್ ಅವರಿಂದ ಪ್ರಶಸ್ತಿ ಪಡೆದಿದ್ದಾರೆ.
ಮಾನಸ ಗೊಂಚಿಗರ್
ಮಾನಸ ಗೊಂಚಿಗರ್

ಬೆಂಗಳೂರು: ಕೃಷಿ ಉದ್ಯಮ ಸವಾಲಿನ 10 ಯುವ ಯಶಸ್ವಿ ಉದ್ಯಮಿ ತಂಡಗಳಲ್ಲಿ ಬೆಂಗಳೂರು ಹುಡುಗಿ ಮಾನಸ ಗೊಂಚಿಗರ್ ಒಬ್ಬರಾಗಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನಸ ಗೊಂಚಿಗರ್ ಅವರು ಯುವ ಜನ ಮತ್ತು ಕ್ರೀಡಾ ಇಲಾಖೆ ಸಚಿವ ಅನುರಾಗ್ ಠಾಕೂರ್ ಅವರಿಂದ ಪ್ರಶಸ್ತಿ ಪಡೆದಿದ್ದಾರೆ.

25 ವರ್ಷದ ಯುವತಿ ಮಾನಸ, ಆರೋಗ್ಯ ಮಾರುಕಟ್ಟೆ ಬಗ್ಗೆ ತಿಳಿವಳಿಕೆ ಹೊಂದಿದ್ದ ತಮ್ಮ ಕೋ ಫೌಂಡರ್ ಆಯುಷ್ ನಿಗಮ್ ಜತೆ ಸೇರಿ ಸಾಹಸಕೈ ಹಾಕಿದರು. ಎಲ್ಲರ ಕನಸು ಎಂಬಂತೆ  ಪ್ಯೂರ್ ಸ್ಕ್ಯಾನ್ ಎಐ ಸಂಸ್ಥೆ ಆರಂಭವಾಯಿತು. ಆಹಾರದಿಂದ ಆರೋಗ್ಯ ಎನ್ನುವ ಉದ್ದೇಶದೊಂದಿಗೆ ಸಂಸ್ಥೆ ಹೆಜ್ಜೆ ಇಡಲು ಆರಂಭಿಸಿತು. ಈ ವರ್ಷ, ಅಂತರರಾಷ್ಟ್ರೀಯ ಯುವ ದಿನದ ಥೀಮ್ ಆಹಾರ ವ್ಯವಸ್ಥೆಗಳನ್ನು ಪರಿವರ್ತಿಸುವುದರ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದೆ.

ಮೆಕ್ಕೆಜೋಳ ಮತ್ತು ಕಡಲೆಕಾಯಿಗಳಲ್ಲಿ ಶೀಘ್ರವಾಗಿ ಅಫ್ಲಾಟಾಕ್ಸಿನ್ ಹೆಚ್ಚಳ ಹೇಗೆ ಆಗುತ್ತದೆ? ಇದರ ತಡೆಗೆ ಏನು ಮಾಡಬಹುದು?  ಮೆಣಸಿನಕಾಯಿ ಮತ್ತು ಸೂರ್ಯ ಕಾಂತಿ ಬೀಜಗಳಲ್ಲಿ ಈ ಅಂಶ ಇದೆಯೇ? ಎಂಬ ಮಾಹಿತಿಯನ್ನು ಪಡೆದುಕೊಂಡೆ ಎಂದು ತಮ್ಮ ಉದ್ಯಮ ಆರಂಭಕ್ಕೆ ಮುನ್ನ ಮಾಡಿಕೊಂಡ ಸಿದ್ಧತೆಯನ್ನು ತಿಳಿಸಿದ ಅವರು, ಅಪ್ಲಾಟಾಕ್ಸಿನ್ ಅಂಶ ದೇಹದ ಇಮ್ಯುನೊಸಪ್ರೆಸಿವ್ ಆರೋಗ್ಯ ಪರಿಣಾಮಗಳಿಗೆ ಕೊಡುಗೆ ನೀಡುತ್ತದೆ, ಇದು ಕುಂಠಿತ ಬೆಳವಣಿಗೆ ಮತ್ತು ಅಪೌಷ್ಟಿಕತೆಗೆ ಕಾರಣವಾಗುತ್ತದೆ ಎಂದಿದ್ದಾರೆ.

ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡುವ ಕೃಷಿ ಆಧಾರಿತ ವ್ಯಾಪಾರ ಉದ್ಯಮ ನಮ್ಮ ಮೊದಲ ಹೆಜ್ಜೆಯಾಗಿತ್ತು. ಕಡಲೆಕಾಯಿ ಮತ್ತು ಮೆಕ್ಕೆಜೋಳಕ್ಕೆ ಮೊದಲ ಆದ್ಯತೆ ನೀಡಿದೆವು. ಅವುಗಳ ಆಹಾರ ವಸ್ತು ಮಾರುಕಟ್ಟೆ ನಿರ್ಮಾಣ ಮಾಡಿಕೊಂಡು ರೈತ ಗುಂಪುಗಳೊಂದಿಗೆ ಒಪ್ಪಂದ ಮಾಡಿಕೊಂಡು ರಾಸಾಯನಿಕ ರಹಿತ ಬೆಳೆ ಬೆಳೆದು ಅದನ್ನು ಖರೀದಿ ಮಾಡಿ ವ್ಯಾಪಾರಿಗಳಿಗೆ ತಲುಪಿಸುವ ಯೋಜನೆ ಆರಂಭವಾಯಿತು. ಕಡಲೆಕಾಯಿ ಮತ್ತು ಮೆಕ್ಕೆಜೋಳದ ಮಾರುಕಟ್ಟೆ ನಿರ್ಮಾಣವಾಯಿತು. ಇತರೆ ಬೆಳೆಗಳಿಗೆ ವಿಸ್ತರಿಸುವ ಆಲೋಚನೆ ಇದೆ ಎಂದು ಮದ್ರಾಸ್ ಐಐಟಿಯ ಪದವೀಧರೆ ಮಾನಸ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಮಾನಸ ಮತ್ತು ರೈತನ ಮೊಮ್ಮಗಳು, ಅವರು ಕೃಷಿಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿದ್ದರು ಮತ್ತು ಐಐಟಿ-ಮದ್ರಾಸ್‌ನಲ್ಲಿ ಅನ್ವಯಿಕ  ಭೌತಶಾಸ್ತ್ರ ಓದುತ್ತಿದ್ದಾಗ, ಅವರು ಅಂತರಶಿಕ್ಷಣದ ಕೆಲಸದಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡರು.

ಸಹ-ಸಂಸ್ಥಾಪಕ ಆಯುಷ್ ನಿಗಮ್ ಅವರ ಸ್ಟಾರ್ಟ್ಅಪ್ ಸಂಸ್ಥೆ 'ಡಿಸ್ಟಿಂಕ್ಟ್ ಹಾರಿಜಾನ್ ಮೂಲಕ ಅಗ್ರಿಟೆಕ್ ಜಾಗದಲ್ಲಿ ಪರಿಣತಿ ಮಾನಸ ಅವರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿತು. ಸ್ವಿಟ್ಜರ್‌ಲ್ಯಾಂಡ್‌ನಲ್ಲಿನ ತನ್ನ ಅಕಾಡೆಮಿ ಇಂಡಸ್ಟ್ರಿ ತರಬೇತಿ ಸೇರಿದಂತೆ ತನ್ನ ವ್ಯಾಪಕ ಪ್ರಯಾಣವು ಆಹಾರ ಸುರಕ್ಷತೆಯ ವಿಷಯದಲ್ಲಿ ಭಾರತವು ಹೇಗೆ ಹಿಂದಿನ ಸ್ಥಾನವನ್ನು ಪಡೆದುಕೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು ಎಂದು ಮಾನಸ ಹೇಳುತ್ತಾರೆ. ಇಂದಿನಿಂದ ಐದು ವರ್ಷಗಳ ನಂತರ, ನಾವು ತಿನ್ನುವ ಆಹಾರದ ಗುಣಮಟ್ಟದಲ್ಲಿ ಭಾರೀ ಬದಲಾವಣೆ ತರಲು ಮಾನಸ ತಯಾರಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com