ಕಲಾಪ್ರಿಯರನ್ನು ಕೈಬೀಸಿ ಕರೆಯುತ್ತಿದೆ ಗದಗ ಜಿಲ್ಲೆಯ ರೋಣ ಬಳಿ ಇರುವ 'ಕಲಾಕಾಶಿ'; ಕಲೆ, ನಾಣ್ಯ ಸಂಗ್ರಹಗಳ ಅಪರೂಪದ ಸಂಗ್ರಹಾಲಯ

ಇವರ ಕಲಾ ಸಂಗ್ರಹ ನೋಡಿದರೆ ಅಚ್ಚರಿಯಾಗಬಹುದು. 5ನೇ ಶತಮಾನದ ನಾಣ್ಯಗಳಿಂದ ಹಿಡಿದು ಇಲ್ಲಿಯತನಕದ ನಾಣ್ಯ ಸಂಗ್ರಹಗಳಿವೆ. ಪ್ರತಿ ಕೋಣೆಯಲ್ಲಿ ನಾಣ್ಯಗಳ ಛಾಯಾಚಿತ್ರಗಳಿವೆ. ಪೈಸೆಯಿಂದ ಹಿಡಿದು ಆಣೆಯಿಂದ ಹಿಡಿದು 10 ಸಾವಿರದ ನೋಟುಗಳಿವೆ.
ನಾಣ್ಯ
ನಾಣ್ಯ

ಗದಗ: ಇವರ ಕಲಾ ಸಂಗ್ರಹ ನೋಡಿದರೆ ಅಚ್ಚರಿಯಾಗಬಹುದು. 5ನೇ ಶತಮಾನದ ನಾಣ್ಯಗಳಿಂದ ಹಿಡಿದು ಇಲ್ಲಿಯತನಕದ ನಾಣ್ಯ ಸಂಗ್ರಹಗಳಿವೆ. ಪ್ರತಿ ಕೋಣೆಯಲ್ಲಿ ನಾಣ್ಯಗಳ ಛಾಯಾಚಿತ್ರಗಳಿವೆ. ಪೈಸೆಯಿಂದ ಹಿಡಿದು ಆಣೆಯಿಂದ ಹಿಡಿದು 10 ಸಾವಿರದ ನೋಟುಗಳಿವೆ.

ನಾಲ್ಕು ಎಕರೆ ವಿಸ್ತೀರ್ಣದ ಜಾಗದಲ್ಲಿ ಕಲಾಕಾಶಿಯನ್ನು ನಿರ್ಮಿಸಲಾಗಿದ್ದು ಗದಗ ಜಿಲ್ಲೆಯ ರೋಣ ಪಟ್ಟಣದಿಂದ 8 ಕಿಲೋ ಮೀಟರ್ ದೂರದಲ್ಲಿದೆ. ಕಲಾಕಾಶಿಯ 11 ದೊಡ್ಡ ಸಭಾಂಗಣಗಳಲ್ಲಿ 5 ಸಾವಿರಕ್ಕೂ ಹೆಚ್ಚು ನಾಣ್ಯಗಳಿದ್ದು 3ಡಿ ಮಾದರಿಯಲ್ಲಿದೆ. ಪ್ರತಿ ನಾಣ್ಯಗಳನ್ನು 3''*5'' ಫ್ರೇಮ್ ನಲ್ಲಿ ಪ್ರದರ್ಶಿಸಲಾಗಿದ್ದು ಎಲ್ಲಾ ವಿವರಗಳು ಸ್ಪಷ್ಟವಾಗಿ ಕಾಣುತ್ತದೆ. ಮೈಸೂರು ಅರಮನೆಯ ತದ್ರೂಪವನ್ನು ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ರೈತ, ಬಂಡಿ, ಗೊರಿಲ್ಲಾ ಮತ್ತು ಇನ್ನೂ ಹೆಚ್ಚಿನ ಗಾತ್ರದ ಶಿಲ್ಪಗಳನ್ನು ರಚಿಸಲಾಗುತ್ತಿದೆ.

32 ವರ್ಷಗಳ ಕಾಲ ಮೈಸೂರಿನ ಚಾಮರಾಜೇಂದ್ರ ಅಕಾಡೆಮಿ ಆಫ್ ವಿಶುವಲ್ ಆರ್ಟ್ಸ್ (CAVA) ಯಲ್ಲಿ ಸಂಸ್ಥಾಪಕ-ಉಪನ್ಯಾಸಕರಾಗಿ ಮತ್ತು ಮೈಸೂರಿನ ಅಲ್ಲಮಪ್ರಭು ಲಲಿತಕಲಾ ಅಕಾಡೆಮಿ (SALA) ನಲ್ಲಿ ಡೀನ್ ಆಗಿ ಸೇವೆ ಸಲ್ಲಿಸಿದ ಡಾ.ಡಿ.ಎ.ಉಪಾಧ್ಯ ಅವರು ನಿವೃತ್ತಿಯ ನಂತರ 2016ರಲ್ಲಿ ತಮ್ಮ ಹುಟ್ಟೂರು ಅಬ್ಬಿಗೇರಿಗೆ ಮರಳಿದರು. ಅವರ ಕನಸು: ಈ ಗ್ರಾಮೀಣ ಪ್ರದೇಶದಲ್ಲಿ ಕಲಾಲೋಕ ನಿರ್ಮಿಸಬೇಕು ಎಂಬುದಾಗಿತ್ತು. ಹೀಗಾಗಿ ಲಕ್ಷಗಟ್ಟಲೆ ಬಂಡವಾಳ ಹೂಡಿ ಇದನ್ನು ನಿರ್ಮಾಣ ಮಾಡಿದ್ದು, ಅದಕ್ಕಾಗಿ ನಿಸ್ವಾರ್ಥವಾಗಿ ಸಂಪನ್ಮೂಲ ಧಾರೆ ಎರೆಯುತ್ತಲೇ ಇದ್ದಾರೆ. ಅವರ ಕನಸು ಈಗ ಶೇ 70ರಷ್ಟು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಪೂರ್ಣವಾಗಲಿದೆ. 

ಡಾ. ಉಪಾಧ್ಯ ಅವರ ಮೂರು ವರ್ಷಗಳ ಪ್ರೀತಿಯ ಶ್ರಮವಾಗಿದೆ.  5 ನೇ ಶತಮಾನದ ಪ್ರಾಚೀನ ನಾಣ್ಯಗಳ ಛಾಯಾಚಿತ್ರಗಳನ್ನು ಶ್ರಮಪಟ್ಟು ಸಂಗ್ರಹಿಸಿದ್ದಾರೆ. ಇವರು ಸಂಗ್ರಹಿಸಿರುವ ನಾಣ್ಯಗಳಲ್ಲಿ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ, ಪಲ್ಲವ ಮತ್ತು ಕದಂಬ ರಾಜವಂಶದ ರಾಜರು, ಇಮ್ಮಡಿ ಪುಲಿಕೇಶಿ, ಕೃಷ್ಣ ದೇವರಾಯ ಮತ್ತು ಮರಾಠ, ಮೊಘಲ್, ಟಿಪ್ಪು ಸುಲ್ತಾನ್, ಡಚ್, ಫ್ರೆಂಚ್ ಮತ್ತು ಬ್ರಿಟಿಷ್ ಕಾಲದ ನಾಣ್ಯಗಳಿವೆ. ಪ್ರತಿಯೊಂದು ನಾಣ್ಯವು ಮತ್ತೊಂದು ಯುಗದ ಆಸಕ್ತಿದಾಯಕ ಕಥೆಯನ್ನು ಹೇಳುತ್ತದೆ.

ಡಾ ಉಪಾಧ್ಯ ಅವರು ಸಂಗ್ರಹಾಲಯಕ್ಕೆ ಭೇಟಿ ನೀಡುವವರಿಗೆ ಅಲ್ಲಿನ ನಾಣ್ಯಗಳ ಛಾಯಾಚಿತ್ರಗಳು ಮತ್ತು ಇತಿಹಾಸವನ್ನು ವಿವರಿಸುತ್ತಾರೆ. ನಾಣ್ಯಗಳನ್ನು ಹೇಗೆ ಸಂಗ್ರಹಿಸಿದರು ಎಂದು ತಿಳಿಸುತ್ತಾರೆ. 32 ವರ್ಷಗಳ ಕಾಲ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಉಪಾಧ್ಯ ಅವರ ಸಾವಿರಾರು ವಿದ್ಯಾರ್ಥಿಗಳು ಪ್ರಪಂಚದ ನಾನಾ ಕಡೆಗಳಲ್ಲಿ ಇಂದು ಹಲವು ಕ್ಷೇತ್ರಗಳಲ್ಲಿ ಮಿಂಚಿದ್ದಾರೆ. ಅವರಲ್ಲಿ ಕೆಲವರನ್ನು ಸಂಪರ್ಕಿಸಿ ಹಲವು ನಾಣ್ಯಗಳು, ಛಾಯಾಚಿತ್ರಗಳನ್ನು ಸಂಗ್ರಹಿಸಿ ತಂದಿದ್ದಾರೆ. ಡಾ ಉದಾಧ್ಯ ಅವರು ನಾಣ್ಯಶಾಸ್ತ್ರಜ್ಞ ಮಾತ್ರವಲ್ಲದೆ ರೈತ, ಬರಹಗಾರ, ಕವಿ, ನಾಟಕಗಾರ, ನಿರ್ದೇಶಕ ಮತ್ತು ತಂತ್ರಜ್ಞ ಕೂಡ ಹೌದು.

ಡಾ ಉಪಾಧ್ಯ ಅವರು ಯಾವಾಗಲೂ ವಿಶಿಷ್ಟವಾದದ್ದನ್ನು ಮಾಡಲು ಬಯಸುತ್ತಿದ್ದರು. ದೇಶ-ವಿದೇಶಗಳ ಕಲಾ ಗ್ಯಾಲರಿ, ಸಂಗ್ರಹಾಲಯಗಳನ್ನು ವೀಕ್ಷಿಸಿದ್ದರು. ನಾಣ್ಯಗಳ ಸಂಗ್ರಹಾಲಯವನ್ನು ಸ್ಥಾಪಿಸಲು ಯೋಚಿಸಿದ ಅವರು ಅಪರೂಪದ ಮತ್ತು ಸಾಮಾನ್ಯವಾಗಿ ಬಳಸುವ ನಾಣ್ಯಗಳ ಚಿತ್ರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. 

'ಗದಗ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಜನರಿಗೆ ಕಲೆ ತೋರಿಸಲು ಕಲಾಕಾಶಿ ಆರಂಭಿಸಿದ್ದೇನೆ. ಹಾವೇರಿ ತಾಲೂಕಿನ ಶಿಗ್ಗಾಂವಿ ಬಳಿ ಉತ್ಸವ ರಾಕ್ ಗಾರ್ಡನ್ ನಿರ್ಮಿಸಿದ ನನ್ನ ಗುರುಗಳಾದ ಡಾ.ಟಿ.ಬಿ.ಸೋಲಬಕ್ಕನವರ್ ಅವರು ನನಗೆ ಸ್ಫೂರ್ತಿ ಎನ್ನುತ್ತಾರೆ.
ಇಲ್ಲಿ ಏನಾದರೂ ಕಲೆಗೆ ಸಂಬಂಧಿಸಿದ್ದು ನಿರ್ಮಿಸಿ ಎಂದು ಗುರುಗಳು ಪ್ರೋತ್ಸಾಹಿಸಿದ್ದರಿಂದ  ಇಲ್ಲಿ ಅದ್ವಿತೀಯವಾದ ಕಲಾಲೋಕ ಕಟ್ಟೋಣ ಅಂತ ಯೋಚಿಸಿ ಕಲಾಕಾಶಿ ಹುಟ್ಟಿತು. ಹಲವು ಕಲಾ ಶಿಲ್ಪಗಳನ್ನು ಸಂಗ್ರಹಿಸಿ ಇಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದೇನೆ. ಈಗ, ಈಜುಕೊಳ ಮತ್ತು ಮೈಸೂರು ರಾಜರ ಆಸ್ಥಾನದ (ಆಸ್ಥಾನ) ಪ್ರತಿಕೃತಿ ನಿರ್ಮಾಣ ಹಂತದಲ್ಲಿದೆ. ಇಲ್ಲಿನ ಪ್ರೇಕ್ಷಕರು ಸರಿಯಾಗಿ ಬರುತ್ತಿಲ್ಲ, ಹೊರಗಿನಿಂದ ಜನರನ್ನು ಆಕರ್ಷಿಸಲು ಮೈಸೂರು ಅರಮನೆಯ ತದ್ರೂಪ ಕಟ್ಟಡ ಮತ್ತು ಈಜುಕೊಳ ನಿರ್ಮಿಸುತ್ತಿದ್ದೇನೆ, ಇಲ್ಲಿಂದ ಬರುವ ಆದಾಯದಿಂದಲೇ ಸಿಬ್ಬಂದಿಗೆ ವೇತನ ನೀಡಬೇಕಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ದೃಶ್ಯ ಕಲೆಗಳು ಮತ್ತು ನಾಣ್ಯಗಳ ಜ್ಞಾನವನ್ನು ಹರಡುವುದು ಮತ್ತು ಕಲಾ ಪ್ರಪಂಚದ ಅದ್ಭುತಗಳತ್ತ ಅವರನ್ನು ಆಕರ್ಷಿಸುವುದು ನನ್ನ ಉದ್ದೇಶವಾಗಿದೆ ಎಂದು ಡಾ ಉಪಾಧ್ಯ ಹೇಳುತ್ತಾರೆ. ಸಂದರ್ಶಕ ಚೆನ್ನವೀರಯ್ಯ ಹಿರೇಮಠ, ಗದಗ ಪಟ್ಟಣದಿಂದ ರೋಣಕ್ಕೆ ಹೋಗುತ್ತಿದ್ದೆವು. ನಾವು ಈ ಸ್ಥಳವನ್ನು ನೋಡಿ ಒಳಗೆ ಬಂದೆವು. ಅನೇಕ ಆಕರ್ಷಕ ಶಿಲ್ಪಗಳು ಮತ್ತು ನಾಣ್ಯಗಳನ್ನು ನೋಡಿ ನಮಗೆ ಆಶ್ಚರ್ಯ ಮತ್ತು ಸಂತೋಷವಾಗಿದೆ. ಇದು ನಿಜಕ್ಕೂ ಕಲಾಕಾಶಿ. ನಾವು ನಮ್ಮ ಕುಟುಂಬಗಳನ್ನು ಇಲ್ಲಿಗೆ ಕರೆತರುತ್ತೇವೆ, ಇದು ಭೇಟಿಗೆ ಯೋಗ್ಯ ಸ್ಥಳ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com