ಯುಎಸ್ಎ ಕೊಲೊರಾಡೋ ಪೊಲೀಸ್ ಪಡೆಯಲ್ಲಿರುವ ಏಕೈಕ ಭಾರತೀಯ ಪ್ರೇಮ್ ಮೆನನ್!
ಅದು 2001ರ ಸಮಯ, ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ನಡೆದು ಬಹಳ ದಿನವೇನೂ ಆಗಿರಲಿಲ್ಲ. ಗ್ಯಾಸ್ ಸ್ಟೇಷನ್ ನ ಅಸಿಸ್ಟೆಂಟ್ ಮ್ಯಾನೇಜರ್ ಪ್ರೇಮ್ ತಡರಾತ್ರಿವರೆಗೂ ಕೆಲಸ ಮಾಡುತ್ತಿದ್ದಾಗ ಇರಾಕಿ ಭಯೋತ್ಪಾದಕರು ದಾಳಿ ಮಾಡಿದ್ದರು.
Published: 12th November 2021 03:57 PM | Last Updated: 12th November 2021 05:16 PM | A+A A-

ಪ್ರೇಮ್ ಅವರ ಪೋಟೋಗಳು
ವಾಷಿಂಗ್ಟನ್: ಅದು 2001ರ ಸಮಯ, ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ನಡೆದು ಬಹಳ ದಿನವೇನೂ ಆಗಿರಲಿಲ್ಲ. ಗ್ಯಾಸ್ ಸ್ಟೇಷನ್ ನ ಅಸಿಸ್ಟೆಂಟ್ ಮ್ಯಾನೇಜರ್ ಪ್ರೇಮ್ ತಡರಾತ್ರಿವರೆಗೂ ಕೆಲಸ ಮಾಡುತ್ತಿದ್ದಾಗ ಇರಾಕಿ ಭಯೋತ್ಪಾದಕರು ದಾಳಿ ಮಾಡಿದ್ದರು. ಪ್ರೇಮ್, ಎಮರ್ಜೆನ್ಸಿ ಬಟನ್ ಒತ್ತುವಲ್ಲಿ ಹೇಗೂ ಯಶಸ್ವಿಯಾದ್ದರಿಂದ ಎರಡು ನಿಮಿಷದೊಳಗೆ ಕೊಲೊರಾಡೋ ಪೊಲೀಸ್ ಅಲ್ಲಿಗೆ ಆಗಮಿಸಿತು.
ಮುಂದಿನ 120 ಸೆಕೆಂಡ್ ಗಳಲ್ಲಿ ದಾಳಿಕೋರರನ್ನು ಹಿಮ್ಮೆಟ್ಟಿಸಿ, ತನ್ನನ್ನು ರಕ್ಷಿಸಿಕೊಳ್ಳಬೇಕಾಗಿತ್ತು. ಆದರೆ, ಈ ವ್ಯಕ್ತಿ ಇನ್ನಿತರ ಯೋಜನೆಗಳನ್ನು ಹೊಂದಿದ್ದರು. ಮುಂದೆ ಏನಾಗುತ್ತಿದೆ ಎಂಬುದನ್ನು ತಿಳಿಯಲು ಪ್ರೇಮ್ ಅಮೆರಿಕದ ಪಡೆಯೊಂದಿಗೆ ಕಾಲ ಕಳೆದರು. ಆ ರಾತ್ರಿಯಿಂದ ದೇಶಕ್ಕಾಗಿ ಏನನ್ನಾದರೂ ಮಾಡಬೇಕು ಅಂದುಕೊಂಡೆ, ಆ ಘಟನೆ ಕೆಲ ದಿನಗಳ ಹಿಂದೆ ಮರೆತುಹೋಗಿದ್ದ ಹಳೆಯ ಆಸೆ ಮತ್ತೆ ಚಿಗುರುವಂತೆ ಮಾಡಿತು. ಅದು ನನ್ನ ಆರಂಭ ಎಂದು ಪ್ರೇಮ್ ಎಂದು ಹೇಳುತ್ತಾರೆ.
1997ರಲ್ಲಿ ಉನ್ನತ ಅಧ್ಯಯನಕ್ಕಾಗಿ ಯುಎಸ್ ಎಗೆ ಆಗಮಿಸಿದ ಕೇರಳದ ಪ್ರೇಮ್, ಮಿಷನ್ ಅಂಡ್ ಮಿನಿಸ್ಟ್ರಿಯಲ್ಲಿನ ಕೋರ್ಸ್ ವೊಂದಕ್ಕೆ ಕ್ರಿಶ್ಚಿಯನ್ ಕಾಲೇಜ್ ಸೇರಿಕೊಂಡರು ಮತ್ತು ಕ್ಯಾಂಪಸ್ ಕೆಫೆಟೇರಿಯಾದಲ್ಲಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದರು. ಶೀಘ್ರದಲ್ಲೆ ಅವರು ಕ್ಯಾಂಪಸ್ ಬಳಿಯಿರುವ ಹೊಟೇಲ್ ವೊಂದರ ಡಿಶ್ ವಾಶರ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ನಂತರ ಸರ್ವರ್ ಮತ್ತು ಫ್ರಂಟ್ ಡಸ್ಕ್ ಸಿಬ್ಬಂದಿಯಾಗಿ ಮುಂಬಡ್ತಿ ಪಡೆಯುತ್ತಾ ಬರುತ್ತಾರೆ.
ತನ್ನ ಅಧ್ಯಯನ ಮುಂದುವರೆಸಲು ಅನೇಕ ಕೆಲಸಗಳನ್ನು ಮಾಡಿರುವ ಪ್ರೇಮ್, ಪೆಟ್ರೋಲ್ ಬಂಕ್ ನಲ್ಲಿಯೂ ಕೆಲಸ ಮಾಡಿದ್ದಾರೆ. ತಿರುವನಂತಪುರಂನ ಎಂಜಿ ಕಾಲೇಜ್ ನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿದ ನಂತರ, ದೆಹಲಿಯಲ್ಲಿ ಕೆಲ ತಿಂಗಳು ಕೆಲಸ ಮಾಡಿದ್ದಾರೆ. ಚಿಕ್ಕವನಿದ್ದಾಗ ಕೇರಳದಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಬೇಕೆಂಬ ಕನಸು ಹೊಂದಿದ್ದೆ ಆದರೆ, ನಾನು ಬೆಳೆದಂತೆ ಆ ಬಯಕೆಗಳು ಸತ್ತು ಹೋದವು, ವಾಸ್ತವಿಕೆಯ ಬದುಕು ಹೆಚ್ಚು ಸ್ಪಷ್ಟವಾಯಿತು ಎಂದು ಪ್ರೇಮ್ ಹೇಳುತ್ತಾರೆ. ಅವರ ಪೋಷಕರು ಈಗಲೂ ಕೇರಳದ ನಾತನ್ ಕೋಡ್ ನಲ್ಲಿದ್ದಾರೆ.
ಪೊಲೀಸ್ ಯಾರಾಗಬಹುದು?
ಅಮೆರಿಕದಲ್ಲಿ ಪೊಲೀಸ್ ಆಗಲು ಕೇರಳಕ್ಕಿಂತ ತುಂಬಾ ಭಿನ್ನವಾಗಿರುತ್ತದೆ. ಹೆಚ್ಚಿನ ದಕ್ಷತೆಯೊಂದಿಗೆ ಕೆಲಸ ಮಾಡಿದ್ದೇನೆ. ಗ್ಯಾಸ್ ಸ್ಟೇಷನ್ ಗೆ ಭೇಟಿ ನೀಡುತ್ತಿದ್ದ ಪೊಲೀಸರು, ಸ್ನೇಹಿತರಿಂದ ಹೆಚೆಚ್ಚು ಕಲಿತಿದ್ದೇನೆ. 2003 ರಲ್ಲಿ ಗ್ರೀನ್ ಕಾರ್ಡ್ ಪಡೆದ ನಂತರ 2005ರೊಳಗೆ ಕೆಲಸಕ್ಕೆ ಅರ್ಜಿ ಹಾಕಲು ಅರ್ಹನಾದೆ. ತದನಂತರ ಹಿನ್ನೆಲೆ ಪರಿಶೀಲನೆ ನಂತರ ಅದೇ ವರ್ಷ ಕೆಲಸಕ್ಕೆ ಆಯ್ಕೆಯಾಗಿದ್ದಾಗಿ ಪ್ರೇಮ್ ತಿಳಿಸಿದ್ದಾರೆ.
ಅಮೆರಿಕದಲ್ಲಿ ಪೊಲೀಸ್ ಆಗಲು ಅಲ್ಲಿನ ಪೊಲೀಸ್ ಅಕಾಡೆಮಿಯಲ್ಲಿ 9 ತಿಂಗಳ ಕಾರ್ಯಕ್ರಮವವನ್ನು ಪ್ರತಿಯೊಬ್ಬ ಅಭ್ಯರ್ಥಿಯೂ ಮುಗಿಸಬೇಕಾದ ಅಗತ್ಯವಿದೆ. ಅದು ಕಠಿಣವಾಗಿರುತ್ತದೆ. ಮಾನಸಿಕ ಹಾಗೂ ದೈಹಿಕವಾಗಿ ತಯಾರಾದ ನಂತರ ಪೊಲೀಸ್ ಆಫೀಸರ್ ಆಗುತ್ತಾರೆ. ತನಿಖೆ, ವಿಚಾರಣೆಯ ತಂತ್ರಗಳು, ಸಂಶೋಧನೆ ಸೇರಿದಂತೆ ಎಲ್ಲಾ ರೀತಿಯ ತರಬೇತಿಗೆ ಅಭ್ಯರ್ಥಿಗಳು ಒಳಗಾಗಬೇಕಾಗುತ್ತದೆ. ಭಾರತದಲ್ಲಿ ಎಲ್ ಎಲ್ ಬಿ ವಿದ್ಯಾರ್ಥಿಗಳು ಇರುವಂತೆಯೇ ಇಲ್ಲಿನ ಪೊಲೀಸರು ಸಂಚಾರ, ಅಪರಾಧ, ಕುಟುಂಬದ ಕಾನೂನಿನ ಬಗ್ಗೆ ಕಡ್ಡಾಯವಾಗಿ ತಿಳಿಯಬೇಕಾಗುತ್ತದೆ. 9 ತಿಂಗಳ ಪ್ರೊಗ್ರಾಮ್ ಮುಗಿಸಿದ ನಂತರ ' ದಿ ಪೀಸ್ ಆಫೀಸರ್ ಸ್ಟಾಂಡರ್ಡ್ ಅಂಡ್ ಟ್ರೈನಿಂಗ್ ಪ್ರೋಗಾಂ post ಪರೀಕ್ಷೆ ನಡೆಯುತ್ತದೆ. ಅದರಲ್ಲಿ ಪಾಸ್ ಆದರೆ, ನೀವು ಪೊಲೀಸರೆಂದು ಮಾನ್ಯ ಮಾಡಲಾಗುತ್ತದೆ ಎಂದು ಪ್ರೇಮ್ ವಿವರಿಸಿದರು.

ಆದಾಗ್ಯೂ, ಪೊಲೀಸ್ ಗ್ಯಾರಂಟಿ ಉದ್ಯೋಗವೇನಲ್ಲಾ, ಮುಂದಿನ ಹಂತವು ವಿವಿಧ ರಾಜ್ಯ ಪೊಲೀಸ್ ಪಡೆಗಳು ಮತ್ತು ಶೆರಿಫ್ ಇಲಾಖೆಗಳಿಗೆ ನೇಮಕಾತಿಗಾಗಿ ನಿಮ್ಮನ್ನು ಲಭ್ಯವಾಗುವಂತೆ ಮಾಡುವುದು, ಕಿರುಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮನೋಶಾಸ್ತ್ರರಿಂದ ಮಾನಸಿಕ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ. ನಂತರ ಚೀಪ್ ಪೊಲೀಸರ ನಂತರದ ಕಮಾಂಡರ್ ಗಳಿಂದ ಸಂದರ್ಶನ ನಡೆಸಲಾಗುತ್ತದೆ. ಇದರಲ್ಲಿ ಉತ್ತೀರ್ಣರಾದವರಿಗೆ ನೇಮಕಾತಿ ಪತ್ರ ದೊರೆಯುತ್ತದೆ ಎಂದು ಅವರು ತಿಳಿಸಿದರು. ಒಂದು ವರ್ಷದಲ್ಲಿ 10 ಗಂಟೆ ಶಿಫ್ಟ್ ನಲ್ಲಿ ಹಿರಿಯ ಅಧಿಕಾರಿಯೊಬ್ಬರಿಂದ ಎಲ್ಲಾ ಅಧಿಕಾರಿಗಳ ಮೇಲ್ವಿಚಾರಣೆ ಮಾಡಲಾಗುತ್ತದೆ. ತದನಂತರ ಅಧಿಕೃತವಾಗಿ ಪೊಲೀಸ್ ಅಧಿಕಾರಿಯಾಗುತ್ತಾರೆ. ತದನಂತರವಷ್ಟೇ ಅವರು ಸ್ವಂತ ಕಾರು, ಬಾಡಿ ಕ್ಯಾಮ್, ಬಂದೂಕು ಮತ್ತಿತರ ಗ್ಯಾಡ್ಜೆಟ್ ಹೊಂದಲು ಅವಕಾಶ ನೀಡಲಾಗುತ್ತದೆ ಎಂದು ಪ್ರೇಮ್ ಹೇಳಿದರು.