ಟೈಪ್ 1 ಮಧುಮೇಹವನ್ನು ಮೆಟ್ಟಿನಿಂತ ಯೋಧನ ಯಶೋಗಾಥೆ...

ಎಲ್ಲಾ ಸವಾಲುಗಳನ್ನು ಮೆಟ್ಟಿ ಜೀವನೋತ್ಸಾಹದ ಉತ್ತುಂಗದಲ್ಲಿ ಜೀವಿಸುವುದಕ್ಕೆ ಯೋಧನ ರೀತಿಯ ಪರಿಶ್ರಮದ ಅಗತ್ಯವಿರುತ್ತದೆ. ಅಂತೆಯೇ ಓರ್ವ ಯೋಧ ತನ್ನ ಆರೋಗ್ಯದ ಸವಾಲನ್ನು ಮೆಟ್ಟಿ ಎಲ್ಲರಿಗೂ ಮಾದರಿಯಾಗಿದ್ದಾರೆ. 
ಯೋಧ ಮೇಜರ್ ಕುಮಾರ್ ಗೌರವ್
ಯೋಧ ಮೇಜರ್ ಕುಮಾರ್ ಗೌರವ್
Updated on

ಬೆಂಗಳೂರು: ಎಲ್ಲಾ ಸವಾಲುಗಳನ್ನು ಮೆಟ್ಟಿ ಜೀವನೋತ್ಸಾಹದ ಉತ್ತುಂಗದಲ್ಲಿ ಜೀವಿಸುವುದಕ್ಕೆ ಯೋಧನ ರೀತಿಯ ಪರಿಶ್ರಮದ ಅಗತ್ಯವಿರುತ್ತದೆ. ಅಂತೆಯೇ ಓರ್ವ ಯೋಧ ತನ್ನ ಆರೋಗ್ಯದ ಸವಾಲನ್ನು ಮೆಟ್ಟಿ ಎಲ್ಲರಿಗೂ ಮಾದರಿಯಾಗಿದ್ದಾರೆ. 

ಪ್ರಕೃತ ಬೆಂಗಳೂರಿನ ಎಂಇಜಿ ಕೇಂದ್ರದಲ್ಲಿ ಕರ್ತವ್ಯಕ್ಕೆ ನಿಯೋಜನೆ ಗೊಂಡಿರುವ ಯೋಧ ಮೇಜರ್ ಕುಮಾರ್ ಗೌರವ್,  2011 ರಿಂದಲೂ ಟೈಪ್-1 ಡಯಾಬಿಟಿಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ಅದನ್ನೇ ಸವಾಲಾಗಿ ಸ್ವೀಕರಿಸಿರುವ ಕುಮಾರ್ ಗೌರವ್, ತಮ್ಮ ಜೀವನ ಹಾಗೂ ದೇಹದ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಮಧುಮೇಹದ ಸಮಸ್ಯೆಯನ್ನು ಮೆಟ್ಟಿನಿಂತಿದ್ದಾರೆ. 

ಫಿಟ್ನೆಸ್ ಎಂಬುದು ಸೇನಾ ಅಧಿಕಾರಿಯ ಅವಿಭಾಜ್ಯ ಅಂಶ ಹಾಗೂ ಅದನ್ನೇ ಕುಮಾರ್ ಗೌರವ್ ಅವರು ಎಡೆಬಿಡದೇ ಪಾಲಿಸುತ್ತಿದ್ದಾರೆ. ಫಿಟ್ನೆಸ್ ಹಾಗೂ ಆರೋಗ್ಯ ಅಗತ್ಯತೆಗಳ ನಡುವೆ ಸಮತೋಲನ ಕಾಯ್ದುಕೊಂಡಿದ್ದಾರೆ. ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೆ ಮೇಜರ್ ಕುಮಾರ್ ಗೌರವ್ ಗೆ ನಿರಂತರ ಗ್ಲೂಕೋಸ್ ಮಾನಿಟರ್ (CGM) ಅತ್ಯಂತ ಸಹಕಾರಿಯಾಗಿದ್ದು, ದೇಹದಲ್ಲಿನ ಗ್ಲೂಕೋಸ್ ಅಂಶದ ಏರಿಳಿತದ ಬಗ್ಗೆ ಇದು ನಿಖರ ಮಾಹಿತಿ ನೀಡುತ್ತದೆ" ಎನ್ನುತ್ತಾರೆ ಸೇನಾ ಅಧಿಕಾರಿ

ಟೈಪ್-1 ಮಧುಮೇಹದ ನಡುವೆಯೂ ಮ್ಯಾರಥಾನ್ ಹಾಗೂ ಇತರ ಅಥ್ಲೆಟಿಕ್ ಕಾರ್ಯಕ್ರಮಗಳಲ್ಲಿ ಮೇಜರ್ ಕುಮಾರ್ ಗೌರವ್ ಭಾಗಿಯಾಗುತ್ತಾರೆ. 

ಈಗ ವಿಶ್ವದಲ್ಲೇ ಅತ್ಯಂತ ಏಕದಿನ ಕ್ರೀಡಾ ಕಾರ್ಯಕ್ರಮವಾಗಿರುವ ಐರನ್‌ಮ್ಯಾನ್ ಟ್ರಯಥ್ಲಾನ್ ನಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿದ್ದಾರೆ. ಈ ಟ್ರಯಥ್ಲಾನ್ ಜೂನ್/ಜುಲೈ 2022 ರಲ್ಲಿ ಹ್ಯಾಮ್ ಬರ್ಗ್/ ಫ್ರಾಂಕ್ಫುರ್ಟ್ ನಲ್ಲಿ ನಡೆಯಲಿದೆ. 3.8 ಕಿ.ಮೀ ಓಪನ್ ವಾಟರ್ ಸ್ವಿಮ್ಮಿಂಗ್, 180 ಕಿ.ಮೀ ಸೈಕ್ಲಿಂಗ್, 42.2 ಕಿ.ಮೀಟರ್ ಓಟ ಇವಿಷ್ಟನ್ನೂ 17 ಗಂಟೆಗಳಲ್ಲಿ ಮುಕ್ತಾಯಗೊಳಿಸಬೇಕಿರುವ ಕ್ರೀಡಾ ಕಾರ್ಯಕ್ರಮವಾಗಿದೆ. 

ಗೌರವ್ ತಮ್ಮ ಮಗಳ ಮೊದಲ ಜನ್ಮದಿನದಂದು (ಸೆ.08, 2016)  ಮೊದಲ ಅರ್ಧ ಮ್ಯಾರಥಾನ್ ಗೆ ನೋಂದಣಿ ಮಾಡಿಸಿಕೊಂಡಿದ್ದರು, ಅಂದು ಅತ್ಯಂತ ಉತ್ಸಾಹದಿಂದ ಓಡಿದ್ದ ನಾನು 50-60 ಮಂದಿಯ ಪೈಕಿ 4 ನೆಯವನಾಗಿ ಓಟವನ್ನು ಮುಗಿಸಿದ್ದೆ. ಅಂದಿನಿಂದ ಅತ್ಯಂತ ಉತ್ಸಾಹಭರಿತನಾಗಿ ಓಡುತ್ತಿರುವೆ. 

ತಾವಷ್ಟೇ ಫಿಟ್ ಆಗಿರುವುದಲ್ಲದೇ ಸ್ಥಳೀಯ ಸ್ನೇಹಿತರಿಗೂ ಅವರು ತರಬೇತಿ ನೀಡುತ್ತಾರೆ. ಟೈಪ್-1 ಮಧುಮೇಹ ಎದುರಿಸುತ್ತಿರುವವರ ಸಬಲೀಕರಣ ಹಾಗೂ ಇಂತಹ ಸಮಸ್ಯೆ ಎದುರಿಸುತ್ತಿರುವ ನಾವೆಷ್ಟು ಬಲಿಷ್ಠರಾಗಿದ್ದೀವಿ ಎಂಬುದನ್ನು ತೋರಿಸಿ ಸ್ಪೂರ್ತಿ ತುಂಬುವುದೇ ನನ್ನ ಗುರಿ ಎನ್ನುತ್ತಾರೆ ಮೇಜರ್ ಗೌರವ್. 

ಟೈಪ್-1 ಮಧುಮೇಹ ಎದುರಿಸುತ್ತಿರುವವರಿಗೆ ಜೀವನದಲ್ಲಿ ಸಾಕಷ್ಟು ಶಿಸ್ತು ಅಗತ್ಯವಿದೆ. ಕಳಪೆ ಜೀವನ ಶೈಲಿ ಹೊಂದಿರುವವರಿಗಷ್ಟೇ ಟೈಪ್-1 ಡಯಾಬಿಟೀಸ್ ಬರಬಹುದು ಎಂಬುದು ಸತ್ಯವಲ್ಲ, ಯಾರನ್ನು  ಬೇಕಾದರೂ ಇದು ಕಾಡಬಹುದು ಎಂದು ಮೇಜರ್ ಗೌರವ್ ಹೇಳುತ್ತಾರೆ. ಅವರನ್ನು kugo_type1@gmail.com ಮೂಲಕ ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com