ದೇಶಿ ಕಾಳುಮೆಣಸು ಬೆಳೆ ಸಂರಕ್ಷಣೆಗಾಗಿ ಕೊಡಗಿನ ರೈತನಿಗೆ ಪ್ರಶಸ್ತಿ
ಪ್ರಗತಿಪರ ರೈತ, ಕೊಡಗು ಜಿಲ್ಲೆಯ ನಾಪಂಡ ಪೂಣಚ್ಚ ಅವರು ಪ್ರಕೃತಿ ಪರ ಕೃಷಿಕರಾಗಿ ಗುರುತಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಅವರು ಜೈವಿಕ ವೈವಿಧ್ಯತೆಯ ಮೇಲೆ ಕಡಿಮೆ ಅಥವಾ ಕೆಟ್ಟ ಪರಿಣಾಮ ಬೀರದ ವಾಣಿಜ್ಯ ಬೆಳೆಗಳನ್ನು...
Published: 18th November 2021 03:10 PM | Last Updated: 18th November 2021 03:37 PM | A+A A-

ಪ್ರಶಸ್ತಿ ಸ್ವೀಕರಿಸುತ್ತಿರುವ ನಾಪಂಡ ಪೂಣಚ್ಚ
ಮಡಿಕೇರಿ: ಪ್ರಗತಿಪರ ರೈತ, ಕೊಡಗು ಜಿಲ್ಲೆಯ ನಾಪಂಡ ಪೂಣಚ್ಚ ಅವರು ಪ್ರಕೃತಿ ಪರ ಕೃಷಿಕರಾಗಿ ಗುರುತಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಅವರು ಜೈವಿಕ ವೈವಿಧ್ಯತೆಯ ಮೇಲೆ ಕಡಿಮೆ ಅಥವಾ ಕೆಟ್ಟ ಪರಿಣಾಮ ಬೀರದ ವಾಣಿಜ್ಯ ಬೆಳೆಗಳನ್ನು ಗುರುತಿಸಲು ವ್ಯಾಪಕವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು 'ಆದಿ ಪೆಪ್ಪರ್' ನ ಸ್ಥಳೀಯ ಬೆಳೆಗಳ ಸಂರಕ್ಷಣೆಗಾಗಿ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಇತ್ತೀಚೆಗೆ ಅವರಿಗೆ ಪ್ಲಾನೆಂಟ್ ಜೀನೋಮ್ ಸೇವಿಯರ್ ಫಾರ್ಮರ್ ರಿವಾರ್ಡ್ (2019-20) ನೀಡಲಾಗಿದೆ.
ಕೇಂದ್ರ ಕೃಷಿ ಸಚಿವಾಲಯದ ಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಿಂದ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ನವೆಂಬರ್ 11 ರಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪೂಣಚ್ಚ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಇದನ್ನು ಓದಿ: ಅಕಾಲಿಕ ಮಳೆಯಿಂದ ಎದುರಾದ ಸಂಕಷ್ಟ: ಸೌದೆ ಒಲೆ ಮೂಲಕ ಕಾಫಿ ಬೀಜ ಒಣಗಿಸಲು ಬೆಳೆಗಾರರು ಮುಂದು!
“ಜೈವಿಕ ವೈವಿಧ್ಯತೆಗೆ ಉಪಯುಕ್ತವಾದ ಬೆಳೆಗಳನ್ನು ಗುರುತಿಸುವ, ಸಂರಕ್ಷಿಸುವ ಮತ್ತು ಉತ್ತೇಜಿಸುವ ರೈತರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅದೇ ರೀತಿ, ಕೊಡಗಿನ ಗರ್ವಾಲೆ ಗ್ರಾಮದ ನೈಸರ್ಗಿಕ ಆವಾಸಸ್ಥಾನದಲ್ಲಿ ವ್ಯಾಪಕವಾಗಿ ಬೆಳೆಯುತ್ತಿರುವ ಸ್ಥಳೀಯ ತಳಿಯಾದ ‘ಆದಿ ಮೆಣಸು’ - ನನ್ನ ಸಂಶೋಧನೆ, ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ನಾನು ಈ ಪ್ರಶಸ್ತಿಯನ್ನು ಪಡೆದಿದ್ದೇನೆ ಎಂದು ಪೂಣಚ್ಚ ಅವರು ವಿವರಿಸಿದ್ದಾರೆ.
ಪೂಣಚ್ಚ ಅವರು ಗರ್ವಾಲೆಯಲ್ಲಿರುವ ಆದಿ ಪೆಪ್ಪರ್ ಡೆಮೊ ಫಾರ್ಮ್ ಮತ್ತು ಸಂಶೋಧನಾ ಕೇಂದ್ರದ ಮಾಲೀಕರಾಗಿದ್ದು, ಪರಿಸರ ವ್ಯವಸ್ಥೆಗೆ ಹಾನಿಯಾಗದಂತೆ ವಾಣಿಜ್ಯ ಬೆಳೆಗಳನ್ನು ಮತ್ತು ಜಿಲ್ಲೆಯ ಇತರೆ ಸ್ಥಳೀಯ ಬೆಳೆಗಳನ್ನು ಗುರುತಿಸುವಲ್ಲಿ ವ್ಯಾಪಕವಾಗಿ ತೊಡಗಿಸಿಕೊಂಡಿದ್ದಾರೆ.