ಮೈಸೂರು ನಗರ ಎಷ್ಟೊಂದು ಸುಂದರ: ಇತಿಹಾಸ, ಸಂಸ್ಕೃತಿ, ವೈಭವದ ಹಂದರ

ಇನ್ನು ಕೆಲವೇ ದಿನಗಳಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಆರಂಭವಾಗಲಿದೆ. ಮೈಸೂರು ದಸರಾ ಎಂದರೆ ಕೇವಲ ನಮ್ಮ ರಾಜ್ಯದಿಂದ ಮಾತ್ರವಲ್ಲ ದೇಶ-ವಿದೇಶಗಳಿಂದ ಪ್ರವಾಸಿಗರು ಬಂದು ದಸರಾ ವೈಭವವನ್ನು ಕಣ್ತುಂಬಿಕೊಳ್ಳುವ ನಾಡಹಬ್ಬ. ಆದರೆ ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇನ್ನು ಕೆಲವೇ ದಿನಗಳಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಆರಂಭವಾಗಲಿದೆ. ಮೈಸೂರು ದಸರಾ ಎಂದರೆ ಕೇವಲ ನಮ್ಮ ರಾಜ್ಯದಿಂದ ಮಾತ್ರವಲ್ಲ ದೇಶ-ವಿದೇಶಗಳಿಂದ ಪ್ರವಾಸಿಗರು ಬಂದು ದಸರಾ ವೈಭವವನ್ನು ಕಣ್ತುಂಬಿಕೊಳ್ಳುವ ನಾಡಹಬ್ಬ. ಆದರೆ ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲಾಗುತ್ತಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಬಾರದೆ ವರ್ಚುವಲ್ ಮೂಲಕ ಸರ್ಕಾರ ಕೂಡ ದಸರಾ ಆಚರಣೆಗೆ ಒತ್ತು ನೀಡಿದೆ. ಈ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ಇತಿಹಾಸ, ಸಾಂಸ್ಕೃತಿಕ ಪರಂಪರೆ, ಅರಮನೆ ವೈಭವ, ಪ್ರವಾಸಿ ತಾಣಗಳ ಮೆಲುಕು ಹಾಕೋಣ ಬನ್ನಿ: 

ಮೈಸೂರು ಎಂಬ ಹೆಸರು ಆಂಗ್ಲ ಭಾಷೆಯಿಂದ ರೂಪಾಂತರಗೊಂಡಿದೆ. ಇದರ ಮೂಲ ಹೆಸರು 'ಮಹಿಷಪುರಿ', 'ಮಹಿಷೂರು'. ಇದರ ಅರ್ಥ ಮಹಿಷನ ವಾಸಸ್ಥಾನ ಎಂದು ಕನ್ನಡದಲ್ಲಿ ಹೇಳಬಹುದು. 'ಮಹಿಷ' ಎಂದರೆ ಮಹಿಷಾಸುರ ಎಂಬ ಪುರಾಣದಲ್ಲಿ ಬರುವ ಒಬ್ಬ ರಾಕ್ಷಸ.

ಈತ ಮಾನವ ಮತ್ತು ಎಮ್ಮೆ ಎರಡೂ ರೂಪದಲ್ಲಿ ಇರುವ ವ್ಯಕ್ತಿ. ಹಿಂದೂ ಪುರಾಣದ ಪ್ರಕಾರ ಈ ಪ್ರದೇಶವನ್ನು ರಾಕ್ಷಸ ಮಹಿಷಾಸುರನು ಆಳುತ್ತಿದ್ದ, ಆ ರಾಕ್ಷಸ, ತಾಯಿ ಚಾಮುಂಡೇಶ್ವರಿಯಿಂದ ಹತನಾಗುತ್ತಾನೆ. ಬಳಿಕ ಚಾಮುಂಡೇಶ್ವರಿಯು ಅದೇ ಬೆಟ್ಟದ ಮೇಲೆ ನೆಲೆಗೊಳ್ಳುತ್ತಾಳೆ.

ನಂತರ ಮಹಿ‍‌ಷೂರು-ಮಹಿಸೂರು-ಮಸೂರು ಆಗಿ ತದನಂತರ ಕೊನೆಯದಾಗಿ ಮೈಸೂರು ಎಂದು ಬದಲಾವಣೆಯಾಗಿದೆ. 

ಮೈಸೂರು ಸ್ಥಾಪನೆ: ಮೈಸೂರು ನಗರದ ಸ್ಥಾಪನೆ ಸುಮಾರು 11ನೇ ಶತಮಾನದಲ್ಲಿ ನಡೆಯಿತೆಂದು ನಂಬಲಾಗಿದೆ. 14ನೆಯ ಶತಮಾನದ ಕೊನೆಯ ಹೊತ್ತಿಗೆ ಒಡೆಯರ್ ವಂಶದ ಅರಸರು ಮೈಸೂರನ್ನು ಆಳಲಾರಂಭಿಸಿದರು. ಈ ವಂಶದ ಮೊದಲ ಅರಸು "ಯದುರಾಯ" ಹಾಗಾಗಿ ವಂಶದ ಹೆಸರು 'ಯದುವಂಶ' ಎಂದಾಯಿತು.

ಮೊದಲಿಗೆ ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದ ಮೈಸೂರು ಸಂಸ್ಥಾನ 1565 ರಲ್ಲಿ ವಿಜಯನಗರದ ಪತನದ ನಂತರ ಸ್ವತಂತ್ರ ರಾಜ್ಯವಾಯಿತು. ರಣಧೀರ ಕಂಠೀರವ ನರಸರಾಜ ಒಡೆಯರ್ ಈ ಸಂಸ್ಥಾನವನ್ನು ವಿಸ್ತರಿಸಿದವರಲ್ಲಿ ಮುಖ್ಯರು. 18ನೆಯ ಶತಮಾನದಲ್ಲಿ ಒಡೆಯರ್ ಅರಸರ ಪ್ರಭಾವ ಕಡಿಮೆಯಾಗಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಆಡಳಿತ ನಡೆಯಿತು. ಈ ಸಮಯದಲ್ಲಿ ಸಾಮ್ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣ ಮತ್ತು ಮೈಸೂರು ನಗರಗಳ ನಡುವೆ ಬದಲಾಗುತ್ತಿತ್ತು.

ಮೈಸೂರು ಸಂಸ್ಥಾನ ಆಧುನಿಕ ಕರ್ನಾಟಕದ ದಕ್ಷಿಣ ಭಾಗದ ಬಹುಭಾಗವನ್ನು ಒಳಗೊಂಡಿತ್ತು. 1799ರಲ್ಲಿ ಟಿಪ್ಪು ಸುಲ್ತಾನನ ಸೋಲಿನ ನಂತರ, ಬ್ರಿಟಿಷರು ಒಡೆಯರ್ ಮನೆತನದ ಸಿಂಹಾಸನದ ಮೇಲೆ ಪುನಃ ಸ್ಥಾಪಿಸಿದರು. ಮೈಸೂರು ಬ್ರಿಟಿಷ್ ಸಾಮ್ರಾಜ್ಯದ ವಶವಾಯಿತು, 1834ರಲ್ಲಿ ರಾಜಧಾನಿಯನ್ನು ಬೆಂಗಳೂರಿಗೆ ವರ್ಗಾಯಿಸಲಾಯಿತು.

ಮೈಸೂರು ಸಂಸ್ಥಾನ 1742ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯವನ್ನು ಸೇರಿ 1950 ರಲ್ಲಿ ಮೈಸೂರು ರಾಜ್ಯ ಎಂಬ ಹೆಸರು ಪಡೆಯಿತು. ನಂತರ, ಈ ರಾಜ್ಯ 1956ರ ಏಕೀಕರಣ ನಂತರ "ವಿಶಾಲ ಮೈಸೂರು ರಾಜ್ಯ" ಎಂಬ ಹೆಸರು ಪಡೆಯಿತು. ಆ ಬಳಿಕ 1973ರಲ್ಲಿ "ಕರ್ನಾಟಕ ರಾಜ್ಯ" ಎಂಬ ಹೆಸರು ಸ್ಥಿರವಾಯಿತು. ಮೈಸೂರು ನಗರ ಸಮುದ್ರ ಮಟ್ಟದಿಂದ 770ಮೀ ಎತ್ತರದಲ್ಲಿದೆ.

ಮೈಸೂರು ದಸರಾ: ಪ್ರತಿ ವರ್ಷ ಹತ್ತು ದಿನ-ಒಂಬತ್ತು ರಾತ್ರಿಗಳವರೆಗೆ ದಸರಾ ಅಥವಾ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ನಡೆಯುವುದು. ಮೈಸೂರು ನಗರವನ್ನು "ಅರಮನೆಗಳ ನಗರ " ಎಂದು ಕರೆಯಲಾಗುತ್ತದೆ. ಆದ್ದರಿಂದ ಅರಮನೆಗಳು ಪ್ರವಾಸಿ ಆಕರ್ಷಣೆಯಾಗಿದೆ. 

ಜೊತೆಗೆ ಇಂದು ವಿವಿಧ ಉದ್ದೇಶಗಳನ್ನು ಮೂರು ಪ್ರಸಿದ್ಧ ಮಹಲುಗಳನ್ನು ಕಾರಂಜಿ ಮ್ಯಾನ್ಷನ್ ,ಜಯಲಕ್ಷ್ಮೀ ಮ್ಯಾನ್ಷನ್ ಮತ್ತು ಚೆಲುವಾಂಬ ಮ್ಯಾನ್ಷನ್ ಇವೆ. ಎಲ್ಲಾ ಮಹಲುಗಳು, ಮೈಸೂರು ಅರಮನೆ ಕಾರಂಜಿಗಳನ್ನು ಸುಂದರ ವಿಸ್ತಾರವಾದ ತೋಟಗಳು ಸುತ್ತುವರಿದಿದೆ.

ಮೈಸೂರು ಅರಮನೆ: ಮೈಸೂರು ಅರಮನೆಯ ಮುಖ್ಯವಾದ ಅರಮನೆ "ಅಂಬಾ ವಿಲಾಸ", 1897ರಲ್ಲಿ ಕಟ್ಟಲಾರಂಭಿಸಿ 1912 ರಲ್ಲಿ ಸಿದ್ಧವಾದ ಅರಮನೆ. ಪ್ರತಿ ಭಾನುವಾರ ಸಂಜೆ ಸಾವಿರಾರು ದೀಪಗಳಿಂದ ಸುಂದರ ದೃಶ್ಯ ಇಲ್ಲಿ ಕಂಗೊಳಿಸುತ್ತದೆ. 

ರಾಜೇಂದ್ರ ವಿಲಾಸ ಅರಮನೆ : ಇದಕ್ಕೆ ಬೇಸಿಗೆ ಅರಮನೆ ಎಂದೂ ಹೆಸರು. ಇದು ಚಾಮುಂಡಿ ಬೆಟ್ಟದ ಮೇಲೆ ಇದೆ.

ಜಗನ್ಮೋಹನ ಅರಮನೆ: ಜಗನ್ಮೋಹನ ಅರಮನೆ ಈಗ ಒಂದು ಕಲಾ ಸಂಗ್ರಹಾಲಯ. ರಾಜಾ ರವಿವರ್ಮ ಮೊದಲಾದ ಅನೇಕ ಪ್ರಸಿದ್ಧ ಕಲಾವಿದರ ಚಿತ್ರಕೃತಿಗಳನ್ನು ಇಲ್ಲಿ ಕಾಣಬಹುದು. 

ಜಯಲಕ್ಷ್ಮಿ ವಿಲಾಸ ಅರಮನೆ: ಈಗ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಆವರಣದಲ್ಲಿ ಜಾನಪದ ವಸ್ತುಸಂಗ್ರಹಾಲಯವಾಗಿ ಪರಿವರ್ತಿತವಾಗಿದೆ.

ಲಲಿತ ಮಹಲ್ ಅರಮನೆ: ಈಗ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಡೆಸುವ ಹೋಟೆಲ್ ಆಗಿ ಪರಿವರ್ತಿತವಾಗಿದೆ.

ಚಾಮುಂಡಿ ಬೆಟ್ಟ: ಮೈಸೂರು ಇತಿಹಾಸದಲ್ಲಿ ಗಂಗರ ಆಳ್ವಿಕೆ ಬಗ್ಗೆ ಉಲ್ಲೇಖವಿದೆ. ಈಗಲೂ ಚಾಮುಂಡಿ ಬೆಟ್ಟದ ಮೇಲೆ ಇದನ್ನು ಕಾಣಬಹುದು. ಚೋಳರು, ಚಾಲುಕ್ಯರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ ಮತ್ತು ರಾಜವಂಶದ ನಂತರ ಗಂಗಾ ಸಾಮ್ರಾಜ್ಯವು ಮೊದಲು ಆಳ್ವಿಕೆ ನಡೆಸಿತು. ಹೊಯ್ಸಳರ ಕಟ್ಟಡ ಅಥವಾ ಚಾಮುಂಡಿ ಬೆಟ್ಟದ ಮೇಲೆ ಪ್ರಸಿದ್ಧ ಚಾಮುಂಡಿ ದೇವಸ್ಥಾನ ಸೇರಿದಂತೆ ನಗರದಲ್ಲಿ ನಿರ್ಮಿಸಿದ ಸುಂದರ ದೇವಾಲಯಗಳು ಅತ್ಯಂತ ವಿಸ್ತೃತವಾಗಿವೆ.

ನಂತರ ಚಾಮರಾಜ ಒಡೆಯರ್ ಎಂದು ಕರೆಯಲ್ಪಡುವ ಪ್ರಸಿದ್ಧ ರಾಜ ತಮ್ಮ ಆಳ್ವಿಕೆಯಲ್ಲಿ ಕೋಟೆಯನ್ನು, ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದರು. ಹೀಗೆ ರಾಜ ಒಡೆಯರ್ ಆಳ್ವಿಕೆಯಲ್ಲಿ, ಮೈಸೂರು ತನ್ನ ವೈಭವವನ್ನು ಮರಳಿ ಪಡೆಯಿತು. ಬೆಟ್ಟದ ಮೇಲೆ ಮಹಿಷಾಸುರನ ಪ್ರತಿಮೆ ಹಾಗೂ ದೇವತೆ ಚಾಮುಂಡೇಶ್ವರಿಯ ಬಳಿ ನಂದಿಯ ಒಂದು ಬೃಹತ್ ಪ್ರತಿಮೆ ಇದೆ. ಬೆಟ್ಟದ ಮೇಲಿಂದ ಇಡೀ ಮೈಸೂರು ನಗರದ ಪರಿದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಹಲವು ಆಕರ್ಷಣೀಯ ಪ್ರವಾಸಿ ಕೇಂದ್ರಗಳು: ಮೈಸೂರು ಕರ್ನಾಟಕದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಹಲವನ್ನು ಒಳಗೊಂಡಿದೆ. ಇಲ್ಲಿನ ಮುಖ್ಯ ಆಕರ್ಷಣೆಗಳಲ್ಲಿ ಕೆಲವೆಂದರೆ ಮೈಸೂರು ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ, ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ, ರೀಜನಲ್ ಮ್ಯೂಜಿಯಂ ಆಫ್ ನ್ಯಾಚುರಲ್ ಹಿಸ್ಟರಿ, ಜಗನ್ಮೋಹನ ಅರಮನೆ. 

ಮೈಸೂರಿಗೆ ಸಮೀಪದಲ್ಲಿರುವ ಆಕರ್ಷಣೆಗಳಲ್ಲಿ ಶ್ರೀರಂಗಪಟ್ಟಣ, ಕೃಷ್ಣರಾಜಸಾಗರ, ರಂಗನತಿಟ್ಟು, ಬಂಡೀಪುರ, ತಲಕಾಡು, ಮುಡುಕುತೊರೆ ಟಿ. ನರಸೀಪುರ ಇತ್ಯಾದಿ. ಭಾರತದ ಅತಿ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾಲಯ ಇದೇ ನಗರದಲ್ಲಿದೆ.

ಇತರ ಸಂಶೋಧನಾ ಸಂಸ್ಥೆಗಳೆಂದರೆ ಕೇಂದ್ರೀಯ ಆಹಾರ ಸಂಶೋಧನಾಲಯ (ಸಿಎಫ್‌ಟಿಆರ್‌ಐ), ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‌ಎಲ್), ಭಾರತೀಯ ಭಾಷಾ ಸಂಸ್ಥಾನಗಳಿವೆ. 

ಆಧುನಿಕತೆಯ ನಗರದ ಮೇಲೆ ತನ್ನ ಪ್ರಭಾವವನ್ನು ಹೊಂದಿದ್ದರೂ ಸಾಂಪ್ರದಾಯಿಕತೆ, ಸಂಸ್ಕೃತಿ-ಪರಂಪರೆಯನ್ನು ಉಳಿಸಿಕೊಂಡಿರುವ ನಗರ ಮೈಸೂರು. ಶ್ರೀಮಂತ ಪರಂಪರೆ, ಅರಮನೆ ವೈಭವಗಳು, ಅದ್ಭುತ ತೋಟಗಳು/ಉದ್ಯಾನವನಗಳ ಸಂರಕ್ಷಣೆ, ಭವ್ಯವಾದ ದೇವಾಲಯಗಳ ರಕ್ಷಣೆ, ಸಂಪ್ರದಾಯ ಮತ್ತು ಮೋಡಿಗಳನ್ನು ಉಳಿಸಿಕೊಂಡಿದೆ. 

ಮುಖ್ಯ ಮೈಸೂರು ಅರಮನೆಯ ಉಸ್ತುವಾರಿ ಈಗ ಕರ್ನಾಟಕ ಸರ್ಕಾರದ ಕೈಯಲ್ಲಿ ಇದ್ದರೂ, ಅರಮನೆಯ ಒಂದು ಭಾಗವನ್ನು ಹಿಂದಿನ ರಾಜಮನೆತನಕ್ಕೆ ಬಿಟ್ಟುಕೊಡಲಾಗಿದೆ.

ಚಾಮುಂಡಿ ಬೆಟ್ಟ: ಬೆಟ್ಟದ ಮೇಲೆ ಚಾಮುಂಡಿ ದೇವಾಲಯ ಒಂದು ಪ್ರಮುಖ ಧಾರ್ಮಿಕ ಕೇಂದ್ರ ಚಾಮುಂಡಿ ಬೆಟ್ಟದ ನಂದಿ ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು. ಇದು ಇಲ್ಲಿನ ದೇವಸ್ಥಾನಗಳು (ಮುಖ್ಯವಾಗಿ ಚಾಮುಂಡೇಶ್ವರಿ ದೇವಾಲಯ), ದೊಡ್ಡ ನಂದಿಯ ವಿಗ್ರಹ ಮತ್ತು ಮಹಿಷಾಸುರನ ಪ್ರತಿಮೆಗೆ ಹೆಸರಾಗಿದೆ.

ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್: ಮೈಸೂರು ಮೃಗಾಲಯ ಭಾರತದಲ್ಲಿರುವ ಪ್ರಾಚೀನ ಪ್ರಾಣಿ ಸಂಗ್ರಹಾಲಯಗಳಲ್ಲಿ ಒಂದಾಗಿದೆ. ಮೃಗಾಲಯದ ನೈಸರ್ಗಿಕ ಸಸ್ಯವರ್ಗ ಸಮೃದ್ಧವಾಗಿದೆ ಇದು ತುಂಬಾ ಉತ್ತಮ ಅಕ್ವೇರಿಯಂ ಹೊಂದಿದೆ. ಮೈಸೂರಿನ ಚಾಮರಾಜೇಂದ್ರ ವನ್ಯ ಮೃಗಾಲಯ ಅಥವಾ ಮೈಸೂರು ಝೂ ಭಾರತದ ಅತಿದೊಡ್ಡ ಮೃಗಾಲಯಗಳಲ್ಲಿ ಒಂದು.

ಮಾಹಿತಿ ಸಂಗ್ರಹ: ಆರ್.ಕೆ. ಪ್ರಸಾದ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com