ರೈತನಾಗಿ ಬದಲಾದ ಜಾರ್ಖಂಡ್ ಎಂಜಿನಿಯರ್ ಯಶೋಗಾಥೆ: ಸಾವಯವ ಕೃಷಿ ಮೂಲಕ ರೈತರ ಆದಾಯ ದುಪ್ಪಟ್ಟು!

ಲಕ್ಷಗಟ್ಟಲೆ ವೇತನದ ಉದ್ಯೋಗ ತೊರೆದು ಸಮುದಾಯ ಕೃಷಿಯನ್ನು ಆರಂಭಿಸಿ 80ಕ್ಕೂ ಹೆಚ್ಚು ರೈತರಿಗೆ ಸಹಾಯ ಮಾಡುತ್ತಿದ್ದಾರೆ ಈ 30 ವರ್ಷದ ಎಂಜಿನಿಯರಿಂಗ್ ಪದವೀಧರ ರಾಕೇಶ್ ಮಹಂತಿ.
ರಾಕೇಶ್ ಮಹಂತಿ
ರಾಕೇಶ್ ಮಹಂತಿ

ರಾಂಚಿ: ಲಕ್ಷಗಟ್ಟಲೆ ವೇತನದ ಉದ್ಯೋಗ ತೊರೆದು ಸಮುದಾಯ ಕೃಷಿಯನ್ನು ಆರಂಭಿಸಿ 80ಕ್ಕೂ ಹೆಚ್ಚು ರೈತರಿಗೆ ಸಹಾಯ ಮಾಡುತ್ತಿದ್ದಾರೆ ಈ 30 ವರ್ಷದ ಎಂಜಿನಿಯರಿಂಗ್ ಪದವೀಧರ ರಾಕೇಶ್ ಮಹಂತಿ.

ಪರಿಸ್ಥಿತಿಯನ್ನು ಉತ್ತಮ ರೀತಿಯಲ್ಲಿ ಬದಲಾಯಿಸಬೇಕೆಂದರೆ ಒಬ್ಬ ವ್ಯಕ್ತಿ ಬೇರೆಯವರಿಗೆ ಮಾದರಿಯಾಗಿ ಉದಾಹರಣೆಯಾಗಿ ಬದುಕಬೇಕು. ಆಗ ಬೇರೆ ಜನರು ಸಹಜವಾಗಿ ಆತನನ್ನು ಅನುಸರಿಸುತ್ತಾರೆ. ಹೀಗಾಗಿ ನಾನು ನನ್ನ ಜೊತೆ ಸಣ್ಣ ಭೂಮಿಯಲ್ಲಿ ಈಗಾಗಲೇ ಕೆಲಸ ಮಾಡುವ 5 ಮಂದಿ ರೈತರೊಂದಿಗೆ ಮಾದರಿ ಕೃಷಿಯನ್ನು ಆರಂಭಿಸಿದೆನು. ಪರಿಸ್ಥಿತಿ ಬದಲಾಗುತ್ತಾ ಹೋಯಿತು, ಜನರು ನಿಧಾನವಾದಿ ಸಮುದಾಯ ಕೃಷಿಯನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದರು. ಇಂದು 80ಕ್ಕೂ ಹೆಚ್ಚು ರೈತರು ನನ್ನ ಹಾಗೆ ಕೃಷಿ ಮಾಡಿ ಅದರಿಂದ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಮಹಂತಿ ಹೇಳುತ್ತಾರೆ. ಇವರು ಮೂಲತಃ ಜಾರ್ಖಂಡ್ ರಾಜ್ಯದ ಜಮ್ಶೆಡ್ ಪುರ ಜಿಲ್ಲೆಯ ಪತಮ್ಡಾ ಬ್ಲಾಕ್ ನಲ್ಲಿ ನೆಲೆಸಿದ್ದಾರೆ.

ಮಹಂತಿಯವರ ಯಶೋಗಾಥೆ: 2017 ರ ಆರಂಭದಲ್ಲಿ, ಮಹಂತಿಯು ತಮ್ಮ ಸಾಮಾಜಿಕ ಉದ್ಯಮವಾದ 'ಬ್ರೂಕ್ ಎನ್ ಬೀಸ್' ಅನ್ನು ಪ್ರಾರಂಭಿಸಿದರು, ಇದು ಪ್ರಾಥಮಿಕವಾಗಿ ಸಮುದಾಯ ಕೃಷಿಯ ಪರಿಕಲ್ಪನೆಯ ಮೇಲೆ ಕೆಲಸ ಮಾಡುತ್ತದೆ. ಇದರ ಮೂಲಕ ಸಾವಯವ ಬೆಳೆಗಳನ್ನು ಬೆಳೆಯಲು ಸ್ಥಳೀಯ ರೈತರೊಂದಿಗೆ ಸಹಕರಿಸಿದರು. ರಾಕೇಶ್ ಮತ್ತು ಇತರ ರೈತರು ತಮ್ಮ ಭೂಮಿ, ಸಂಪನ್ಮೂಲಗಳು, ಜ್ಞಾನ, ಸಲಕರಣೆಗಳು, ಕಾರ್ಮಿಕ ಮತ್ತು ಯಂತ್ರೋಪಕರಣಗಳನ್ನು ಪರಸ್ಪರ ಹಂಚಿಕೊಂಡರು, ಸ್ವಂತ ಭೂಮಿ ಹೊಂದಿದವರಿಗೆ ಬೆಳೆ ಬೆಳೆದು ಬಂದ ಆದಾಯದಲ್ಲಿ ಹಣ ಹಂಚಿಕೊಂಡರೆ ಭೂಮಿಯಿಲ್ಲದ ರೈತರಿಗೆ ಪ್ರತಿ ತಿಂಗಳು 6 ಸಾವಿರ ರೂಪಾಯಿ ವೇತನ ನೀಡಲಾಗುತ್ತದೆ.

ರೈತರು ತಾವು ಬೆಳೆದ ಬೆಳೆಯನ್ನು ಹೇಗೆ, ಯಾರಿಗೆ ಮಾರಾಟ ಮಾಡುವುದು, ಸಾಗಾಟ ವ್ಯವಸ್ಥೆ ಹೇಗೆ ಎಂದು ಚಿಂತಿಸಬೇಕಾಗಿಲ್ಲ. 

2012ರಲ್ಲಿ ಬೆಂಗಳೂರಿನ ಬಿಐಟಿ ಸಂಸ್ಥೆಯಲ್ಲಿ ಬಿ.ಟೆಕ್ ಪದವಿ ಮುಗಿಸಿದ ನಂತರ ಮಹಂತಿಯವರಿಗೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ನಲ್ಲಿ ಕೆಲಸ ಸಿಕ್ಕಿತಂತೆ. ಆದರೆ ದಿನಗಳೆದಂತೆ ಅವರಿಗೆ ತಮಗೆ ಈ 9ರಿಂದ 5ರವರೆಗಿನ ಉದ್ಯೋಗ ಸರಿಹೊಂದುವುದಿಲ್ಲ, ಗ್ರಾಮದ ಅಭಿವೃದ್ಧಿಗೆ  ಮತ್ತು ತಮ್ಮ ಹಳ್ಳಿಯ ಜನರ ಅಭಿವೃದ್ಧಿಗೆ ಕೆಲಸ ಮಾಡಬೇಕೆಂದು ಮನವರಿಕೆ ಮಾಡಿಕೊಂಡರಂತೆ.
ನಾಲ್ಕು ವರ್ಷ ಕೆಲಸ ಮಾಡಿ ಉದ್ಯೋಗ ತೊರೆದು ಜಮ್ಶೆಡ್ ಪುರದ ಮ್ಯಾನೇಜ್ ಮೆಂಟ್ ಪ್ರೊಗ್ರೇಮ್ ಗೆ ಸೇರಿದರು. ಕೃಷಿಯಲ್ಲಿ ಅತಿ ಹೆಚ್ಚು ಸಂಶೋಧನೆ ಮಾಡುವ ಹುಮ್ಮಸ್ಸಿನಲ್ಲಿ ಪ್ರತಿದಿನ ಜಮ್ಶೆಡ್ ಪುರದ ತಮ್ಮ ಭೂಮಿಗೆ ಪ್ರತಿದಿನ ಭೇಟಿ ನೀಡುತ್ತಿದ್ದರು. ಅದರ ಜೊತೆಗೆ ಎಂಬಿಎ ಪದವಿ ಪಡೆದರು. 

ಎಂಬಿಎ ಓದುತ್ತಿರುವಾಗ, ನಾನು ಕೃಷಿಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡೆ. ಕೃಷಿಯನ್ನು ಉದ್ಯಮವಾಗಿ ಪರಿವರ್ತಿಸಲು ಬಯಸಿದೆ. ಸಮಯ ಕಳೆದಂತೆ ಕೃಷಿಯಲ್ಲಿ ನಿಭಾಯಿಸಲು ಕಷ್ಟಕರವಾದ ಹಲವಾರು ಸವಾಲುಗಳಿವೆ ಎಂದು ನಾನು ಗಮನಿಸಿದೆ. ಆ ಸಮಸ್ಯೆಗಳನ್ನು ನಿಭಾಯಿಸಲು, ಭಾರತದಾದ್ಯಂತ ತೀವ್ರವಾಗಿ ಪ್ರಯಾಣಿಸಿ ರೈತರನ್ನು, ಅವರ ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳುತ್ತಾ ಹೋದೆ. 

ರೈತರು ಅವರ ಕೃಷಿ ವಿಧಾನ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳುತ್ತಿದ್ದರು. ಅಂತಿಮವಾಗಿ, ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಬೇಕೆಂದು ನಾನು ತೀರ್ಮಾನಿಸಿದೆ. 'ಪರಿಸರ ಸುಸ್ಥಿರ ಕೃಷಿ' ಎಂಬ ಪರಿಕಲ್ಪನೆಯನ್ನು ತಂದು ಅದರಡಿಯಲ್ಲಿ ಸಮಸ್ಯೆಗಳನ್ನು ಮೂರು ಅಂಶಗಳನ್ನು ನೋಡಿಕೊಂಡು ಬಗೆಹರಿಸಲಾಗಿದೆ - ಪರಿಸರ , ಸಾಮಾಜಿಕ ಮತ್ತು ಆರ್ಥಿಕ. " ಈ ಪರಿಕಲ್ಪನೆಯ ಅಡಿಯಲ್ಲಿ, ಸ್ಥಳೀಯ ಸಮುದಾಯದ ಅವಶ್ಯಕತೆಗಳಿಗೆ ಅನುಗುಣವಾಗಿ ವಿಷಯಗಳನ್ನು ಸಂದರ್ಭೋಚಿತವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳುತ್ತಾರೆ. 

ನಂತರ, ಮಹಂತಿಯು ತನ್ನ ಉತ್ಪನ್ನಗಳಿಗೆ ತನ್ನ ಸುತ್ತಮುತ್ತಲಿನ ಮಾರುಕಟ್ಟೆಯಲ್ಲಿ ಅಗತ್ಯವಿದೆಯೆಂದು ಅರಿತುಕೊಂಡರು. ಆದ್ದರಿಂದ, 'ಕೃಷಿ ಭಾಗವಹಿಸುವಿಕೆ ಯೋಜನೆ' ಎಂಬ ಇನ್ನೊಂದು ಉಪಕ್ರಮವನ್ನು ಆರಂಭಿಸಿದರು. ಇದರ ಅಡಿಯಲ್ಲಿ, ಸ್ಥಳೀಯ ಆಹಾರದ ಬಗ್ಗೆ ತಿಳಿದುಕೊಳ್ಳಲು ನಗರ ಪ್ರದೇಶದ ಜನರಿಗೆ ಕೃಷಿ ಕ್ಷೇತ್ರಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಲಾಯಿತು. ವ್ಯವಸ್ಥೆ, ಆಹಾರ ಉತ್ಪನ್ನಗಳನ್ನು ಹೇಗೆ ಉತ್ಪಾದಿಸಲಾಗುತ್ತದೆ, ಕೃಷಿ-ಪರಿಸರ ವಿಜ್ಞಾನ, ರೈತರ ಜೀವನೋಪಾಯದ ಬಗ್ಗೆ ಅದರಲ್ಲಿ ವಿವರಿಸಲಾಯಿತು. 

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರ ನಡುವಿನ ಅಂತರವನ್ನು ಕಡಿಮೆ ಮಾಡುವುದು, ಇದರಿಂದ ಅವರು ಪರಸ್ಪರರ ಬಗ್ಗೆ ತಿಳಿದುಕೊಳ್ಳುವುದು, ಸ್ಥಳೀಯ ಆಹಾರ ವ್ಯವಸ್ಥೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ "ಎಂದು ಮಹಂತಿ ಹೇಳುತ್ತಾರೆ. 

ಈ ಮಧ್ಯೆ, 'ಫಾರ್ಮರ್ಸ್ ಹ್ಯಾಟ್' ಅನ್ನು ಪ್ರಾರಂಭಿಸಲಾಯಿತು, ಸಾವಯವ ಉತ್ಪನ್ನಗಳನ್ನು ಗ್ರಾಹಕರಿಗೆ ಅವರ ಮನೆಬಾಗಿಲಿಗೆ ಲಭ್ಯವಾಗುವಂತೆ ಮಾಡಲು ಮತ್ತು ಅವರಲ್ಲಿ ಸಾವಯವ ಉತ್ಪನ್ನಗಳನ್ನು ಸೇವಿಸುವ ಅಭ್ಯಾಸವನ್ನು ಸೃಷ್ಟಿಸಲಾಯಿತು.
ಕೃಷಿಯನ್ನು ಮಾಡುವುದರ ಜೊತೆಗೆ, ಅವರು ಹಣ್ಣಿನ ಮರಗಳ ಸಸಿಗಳನ್ನು, ಮರ-ಅಲ್ಲದ ಅರಣ್ಯ ಉತ್ಪನ್ನಗಳು, ಮರ, ಔಷಧೀಯ ಸಸ್ಯಗಳನ್ನು ದೀರ್ಘಕಾಲೀನ ಯೋಜನೆಯಾಗಿ ನೆಡುತ್ತಾರೆ, ಇದು ಭೂಮಿಯ ಪರಿಸರ ಪುನಃಸ್ಥಾಪನೆಗೆ ಸಹಾಯ ಮಾಡುತ್ತದೆ.

ಇಲ್ಲಿಯವರೆಗೆ, ದೇಶಾದ್ಯಂತ ಸುಮಾರು 200 ರೈತರು ನನಗೆ ಸಂಪರ್ಕ ಹೊಂದಿದ್ದಾರೆ, ಆದರೆ ಪಟಮಡಾ ಬ್ಲಾಕ್‌ನಲ್ಲಿ ಸುಮಾರು 80 ರೈತರು ನನ್ನ ಜೊತೆ ಸಮುದಾಯ ಕೃಷಿ ಮಾಡುತ್ತಿದ್ದಾರೆ. ಭಾರತದಾದ್ಯಂತ ರೈತರಿಂದ ಅಗತ್ಯವಿದ್ದಾಗ ನಾನು ಅವರಿಗೆ ಸಲಹೆ ನೀಡುತ್ತೇನೆ ಎನ್ನುತ್ತಾರೆ ಮಹಂತಿ. 

ಒಬ್ಬ ವಿದ್ಯಾವಂತ ಕೃಷಿಕನಾಗಿ, ಅವರು ಇತರರ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದಾರೆ. ಅವರು ಈ ಪ್ರದೇಶದ ಇತರ ಅನೇಕ ಯುವಕರಿಗೆ ಪ್ರೇರಣೆಯಾಗುತ್ತಾರೆ. ಹೈಟೆಕ್ ಸಾವಯವ ಕೃಷಿ ಮಾಡುತ್ತಾ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಜಿಲ್ಲಾ ತೋಟಗಾರಿಕೆ ಅಧಿಕಾರಿ ಮಿಥಲೇಶ್ ಕುಮಾರ್ ಕಲಿಂದಿ ಮಹಂತಿಯನ್ನು ಶ್ಲಾಘಿಸುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com