ಜನರ ಕುಚೋದ್ಯಗಳಿಂದ ನೊಂದು ಕಾಡು ಸೇರಿದ್ದ 'ರಿಯಲ್‌ ಲೈಫ್ ಮೋಗ್ಲಿ' ಜಂಜೀಮನ್ ಏಲಿ ಮತ್ತೆ ನಾಡಿಗೆ!

ಆ 'ಜಂಗಲ್ ಬುಕ್' ಕಹಾನಿ, ಅದರಲ್ಲಿನ' ಮೋಗ್ಲಿ ಅನ್ನೋ ಕಾಡುಹುಡುಗನನ್ನು ಇಷ್ಟುದಿನ ನಾವು ಕಾರ್ಟೂನ್‌ಗಳಲ್ಲಿ ಕಣ್ತುಂಬಿಕೊಂಡಿದ್ದೆವು. ಇತ್ತೀಚೆಗೆ ಜಂಗಲ್ ಬುಕ್ ಚಿತ್ರವೂ ಪ್ರದರ್ಶನ ಕಂಡಿತ್ತು. ಇದೀಗ ನಿಜವಾದ ಮೋಗ್ಲಿ ಕಾಡು ಬಿಟ್ಟು ನಾಡಿಗೆ ಬಂದಿದ್ದಾನೆ ಅಂದರೆ ನಂಬ್ತೀರಾ?
ಜಂಜೀಮಾನ್ ಏಲಿ
ಜಂಜೀಮಾನ್ ಏಲಿ

ಆ 'ಜಂಗಲ್ ಬುಕ್' ಕಹಾನಿ, ಅದರಲ್ಲಿನ' ಮೋಗ್ಲಿ ಅನ್ನೋ ಕಾಡುಹುಡುಗನನ್ನು ಇಷ್ಟುದಿನ ನಾವು ಕಾರ್ಟೂನ್‌ಗಳಲ್ಲಿ ಕಣ್ತುಂಬಿಕೊಂಡಿದ್ದೆವು. ಇತ್ತೀಚೆಗೆ ಜಂಗಲ್ ಬುಕ್ ಚಿತ್ರವೂ ಪ್ರದರ್ಶನ ಕಂಡಿತ್ತು. ಇದೀಗ ನಿಜವಾದ ಮೋಗ್ಲಿ ಕಾಡು ಬಿಟ್ಟು ನಾಡಿಗೆ ಬಂದಿದ್ದಾನೆ ಅಂದರೆ ನಂಬ್ತೀರಾ?

ಹೌದು, ನೀವಿದನ್ನ ನಂಬಲೇ ಬೇಕು. ಯಾಕಂದ್ರೆ ಇದ್ಯಾವುದೋ ಕಟ್ಟುಕಥೆಯಾಗ್ಲೀ ಕಾಲ್ಪನಿಕವಾದ ಕಥೆಯ ಮೋಗ್ಲಿ ಅಲ್ಲ. ಇವನು ರಿಯಲ್ ಮೋಗ್ಲಿ.

ಈ ರಿಯಲ್ ಮೋಗ್ಲಿ ಕಾಡುಬಿಟ್ಟು ಸೂಟ್ ಬೂಟ್ ಧರಿಸಿ ಶಾಲೆಗೆ ಹೋಗಲಾರಂಭಿಸಿದಾನೆ. ಈ ರಿಯಲ್ ಮೋಗ್ಲಿ ಹೆಸರು "ಜಂಜೀಮಾನ್ ಏಲಿ" ಇವನು ಮನುಷ್ಯರ ಬದಲಿಗೆ ಪ್ರಾಣಿಗಳ ಜೊತೆ ಕಾಡಿನಲ್ಲಿ ವಾಸ ಮಾಡ್ತಿದ್ದ. ದೀರ್ಘಕಾಲದವರೆಗೆ ಪ್ರಾಣಿಗಳು ಮತ್ತು ಕಾಡುಗಳಲ್ಲಿ ವಾಸಿಸುತ್ತಿದ್ದ ಆತನ ಕಾರ್ಯಗಳು ಮನುಷ್ಯರಿಗಿಂತ ಸಂಪೂರ್ಣವಾಗಿ ಭಿನ್ನವಾದವು.

ಆಫ್ರಿಕಾದ ರವಾಂಡಾದ ಜಂಜೀಮನ್ ಏಲಿ ನನ್ನು ರಿಯಲ್‌ ಲೈಫ್ ಮೋಗ್ಲಿ ಅಂತಾನೇ ಕರೆಯಲಾಗ್ತಿದೆ. ಈ ರಿಯಲ್ ಲೈಫ್ ಮೋಗ್ಲಿ.

ಜಂಜೀಮಾನ್ ಏಲಿ
ಜಂಜೀಮಾನ್ ಏಲಿ

ಕಥೆ ನೋಡೋದಾದರೆ:

'ದ ಸನ್ ಯುಕೆ' ಪ್ರಕಾರ 1999ರಲ್ಲಿ ಜಂಜೀಮನ್ ಏಲಿ ಹುಟ್ಟುತ್ತಲೇ "ಮೈಕ್ರೋಸೆಫಲಿ" ಅನ್ನೋ ಕಾಯಿಲೆಯಿಂದ ಬಳಲ್ತಿದ್ದ. ಅದರಿಂದಾಗಿ ಅವನ ಮುಖವೇ ವಿಚಿತ್ರವಾಗತೊಡಗಿತು. ತಲೆ ದೇಹಕ್ಕನುಗುಣವಾಗಿ ಇರದೇ ತೀರಾ ಚಿಕ್ಕದಾಯಿತು. ಸ್ವಲ್ಪ ದೊಡ್ಡವನಾಗ್ತಿದ್ದಂತೆ ಜಂಜೀಮನ್ ನೋಡೋಕೆ ವಿಚಿತ್ರ ಭಯಾನಕವಾಗಿ ಕಾಣತೊಡಗಿದೆ. ಇವನ ಈ ಆಕಾರನ್ನ ನೋಡಿ ಜನರು ಅಣುಗಿಸೋಕೆ ಶುರುಮಾಡಿದರು.

ಅತಿಸಣ್ಣ ವಯಸಿನಲ್ಲೇ ಇದೆಲ್ಲದರಿಂದ ನೊಂದುಹೋದ ಜಂಜೀಮನ್ ನಾಡುಬಿಟ್ಟು ಕಾಡಿಗೆ ಬಂದ‌‌. ಹೆಚ್ಚಿನ ಸಮಯವನ್ನೆಲ್ಲ ಕಾಡಿನಲ್ಲೇ ಇರೋಕೆ ಆರಂಭಿಸಿದ. ತಂದೆತಾಯಿಗಳು ಎಷ್ಟೇ ಅವನನ್ನ ಕಾಡಿನಿಂದ ಬಿಡಿಸೋಕೆ ಪ್ರಯತ್ನ ಮಾಡಿದ್ರೂ ಅವನು ಕಾಡೊಳಗೆ ಒಬ್ಬನಾಗಿಬಿಟ್ಟಿದ್ದ. ಮನುಷ್ಯರ ಅಣಕು ಚೇಷ್ಟೆಯಿಂದ ನೊಂದಿದ್ದ ಆ ಜೀವಕ್ಕೆ ಕಾಡು, ಕಾಡಿನ ಪ್ರಾಣಿಗಳು ಆತ್ಮೀಯವಾಗತೊಡಗಿದವು. ಅವನ ಜೀವನಶೈಲಿ ಬಹುತೇಕ ಮೋಗ್ಲಿಯಂತೆ ಕಾಡಿನ ಪ್ರಾಣಿಗಳಂತೆ ಆಗಿಬಿಡ್ತು. ಹೀಗಾಗಿ ಜನ ಅವ್ನನ್ನ ರಿಯಲ್ ಲೈಫ್ ಮೋಗ್ಲಿ ಅಂತಾನೇ ಕರೆಯೋಕೆ ಶುರು ಮಾಡಿದ್ರು.

ಹೀಗೆ ಜಂಜೀಮನ್ ಬಗ್ಗೆ ಜನರಿಗೆ ಹೆಚ್ಚೆಚ್ಚು ತಿಳಿಯುತ್ತಿದ್ದಂತೆ ಅವ್ನನ್ನ ಮತ್ತೆ ವಾಪಸ್ ಜನರ ಮಧ್ಯೆ ಕರ್ಕೊಂಡ್ ಬರೋಕೆ ಕ್ರಮ ಆರಂಭವಾಯಿತು. ಇದಕ್ಕಾಗಿ ಆಫ್ರಿಮೈಕ್ಸ್ ಟೀವಿ ದೇಣಿಗೆ ಸಂಗ್ರಹಿಸೋಕೆ ಮುಂದಾಯಿತು‌. ದೇಣಿಗೆ ಹಣದಿಂದ ಜಂಜೀಮನ್ ಮತ್ತು ಆತನ ತಾಯಿಗೆ ಬದುಕಿಗೆ ಆಸರೆ ಸಿಕ್ಕಿದಂತಾಯಿತು.

ಆಫ್ರಿಕಾದ ಸ್ಥಳೀಯ ವಾಹಿನಿಯೊಂದರ ಪ್ರಕಾರ ದೇಣಿಗೆ ಹಣದಿಂದ ಜಂಜೀಮನ್‌ಗೆ ಬದುಕಿಗೆ ಖುಷಿ ಸಿಗ್ತಿದೆಯಂತೆ‌. ಸ್ಪೆಷಲ್ ಶಾಲೆಯೊಂದರಲ್ಲಿ ರಿಯಲ್ ಲೈಫ್ ಮೋಗ್ಲಿ ದಾಖಲಾಗಿದ್ದಾನೆ‌. ಇಷ್ಟುದಿನ ಮೋಗ್ಲಿಂತೆ ಒಂದು ಸಣ್ಣ ಎಲೆಯಿಂದ ಮರ್ಮಾಂಗ ಮುಚ್ಚಿಕೊಳ್ತಿದ್ದ ರಿಯಲ್‌ಲೈಫ್ ಮೋಗ್ಲಿ ಇದೀಗ ಶರ್ಟು ಪ್ಯಾಂಟು ಹಾಕ್ಕೊಂಡು ಶಾಲೆಗೆ ಹೋಗ್ತಿದಾನೆ. ಆದರೆ ಕಾಡಿನಂತೆ ಅವನು‌ ಮನೆಲ್ಲಿ ಇರೋದನ್ನ ಮಾತ್ರ ಮರಿತಿಲ್ಲ. ಅಂದ್ಹಾಗೆ ಕಳೆದ ವರ್ಷ ಜಂಜೀಮನ್ ರಿಯಲ್ ಲೈಫ್ ಮೋಗ್ಲಿ ಡಾಕ್ಯುಮೆಂಟರಿಯೂ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com