ಗಂಟೆಗೆ 1000 ಕಿ.ಮೀ ಚಲಿಸುವ ರೈಲು ಮಾದರಿಗೆ ಯುರೋಪಿಯನ್ ಪ್ರಶಸ್ತಿ: ಭಾರತೀಯ ವಿದ್ಯಾರ್ಥಿಗಳ ಸಾಧನೆ

ಬೆಂಗಳೂರು- ಚೆನ್ನೈ ನಡುವೆ ಈ ರೈಲು ಯೋಜನೆ ಕಾರ್ಯಗತಗೊಂಡರೆ ಕೇವಲ 30 ನಿಮಿಷಗಳಲ್ಲಿ ಗುರಿ ಮುಟ್ಟಬಹುದು.
ಟೀಮ್ ಆವಿಷ್ಕಾರ್ ತಂಡ
ಟೀಮ್ ಆವಿಷ್ಕಾರ್ ತಂಡ

ಚೆನ್ನೈ: ಮೂರು ವರ್ಷಗಳ ಹಿಂದೆ ಐಐಟಿ ಮದ್ರಾಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಾನ ಮನಸ್ಕ ವಿದ್ಯಾರ್ಥಿಗಳು ಟೀಮ್ ಆವಿಷ್ಕಾರ್ ಎನ್ನುವ ತಂಡ ಕಟ್ಟಿಕೊಂಡು ಹೈಪರ್ ಲೂಪ್ ಹೈಸ್ಪೀಡ್ ರೈಲು ಪ್ರಯೋಗದಲ್ಲಿ ನಿರತರಾಗಿದ್ದರು. ಈಗ ಹವ್ಯಾಸಕ್ಕೆಂದು ತೊಡಗಿಕೊಂಡಿದ್ದ ಸಂಶೋಧನೆಗೆ ಯುರೋಪಿಯನ್ ಪ್ರಶಸ್ತಿ ದೊರೆತಿದೆ. 

ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಗಂಟೆಗೆ 1000 ಕಿ.ಮೀ ಓಡುವ ರೈಲಿನ ಪ್ರಯೋಗದಲ್ಲಿ ವಿದ್ಯಾರ್ಥಿಗಳು ನಿರತರಾಗಿದ್ದರು. ಆದರೆ ಇಂದು ರೈಲು ಮಾದರಿಗೆ ಜಾಗತಿಕ ಮಟ್ತದಲ್ಲಿ ಮನ್ನಣೆ ದೊರೆತಿದೆ. 

ಈ ಮಾದರಿಯನ್ನು ಮೊದಲು ಅಮೆರಿಕದ ಪ್ರತಿಷ್ಟಿತ ತಂತ್ರಜ್ನಾನ ಸಂಸ್ಥೆಯಾದ ಸ್ಪೇಸ್ ಎಕ್ಸ್ ಆಯೋಜಿಸುವ ಹೈಪರ್ ಲೂಪ್ ಸ್ಪರ್ಧೆಗೆಂದು ರೂಪಿಸಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಆ ಸ್ಪರ್ಧೆ ರದ್ದುಗೊಂಡಿತ್ತು. 

ನಂತರ ಯುರೋಪಿಯನ್ ಹೈಪರ್ ಲೂಪ್ ಸ್ಪರ್ಧೆಯಲ್ಲಿ ಈ ಮಾದರಿಯನ್ನು ಪ್ರದರ್ಶಿಸಿದ್ದರು. ಅಂದ ಹಾಗೆ ಸ್ಪರ್ಧೆಯನ್ನು ವಿಡಿಯೋ ಕಾನ್ಫರೆನ್ಸ್ ಮುಖಾಂತರ ನಡೆಸಲಾಗಿತ್ತು.

ಬೆಂಗಳೂರು- ಚೆನ್ನೈ ನಡುವೆ ಈ ರೈಲು ಯೋಜನೆ ಕಾರ್ಯಗತಗೊಂಡರೆ ಕೇವಲ 30 ನಿಮಿಷಗಳಲ್ಲಿ ಗುರಿ ಮುಟ್ಟಬಹುದು ಎನ್ನುವುದು ತಂಡದ ಅಭಿಪ್ರಾಯ. ಸದ್ಯ ಬೆಂಗಳೂರಿನಿಂದ ಚೆನ್ನೈ ತಲುಪಲು ಹೆಚ್ಚೂಕಮ್ಮಿ 6 ಗಂಟೆಗಳು ತಗುಲುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com