ಮೈಸೂರು: ರಾಷ್ಟ್ರ ಪ್ರಶಸ್ತಿ ಪಡೆಯಲು ವಿದ್ಯಾರ್ಥಿನಿಗೆ ಸಹಾಯ ಮಾಡಿದ ಕಲಾ ಶಿಕ್ಷಕಿ!

ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಯಾವುದೇ ಯಂತ್ರೋಪಕರಣಗಳು ಮತ್ತು ಇತರೆ ಉಪಕರಣಗಳು ಲಭ್ಯವಿಲ್ಲದ ಕಾರಣ ರಾಷ್ಟ್ರೀಯ ಕಲಾ ಉತ್ಸವದಲ್ಲಿ ಸ್ಪರ್ಧಿಸುವ ಭರವಸೆಯನ್ನೇ ಕಳೆದುಕೊಂಡಿದ್ದ ಮೈಸೂರು ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ...
ಸಂಗೀತಾ ಹಾಗೂ ಚಂದನಾ
ಸಂಗೀತಾ ಹಾಗೂ ಚಂದನಾ
Updated on

ಮೈಸೂರು: ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಯಾವುದೇ ಯಂತ್ರೋಪಕರಣಗಳು ಮತ್ತು ಇತರೆ ಉಪಕರಣಗಳು ಲಭ್ಯವಿಲ್ಲದ ಕಾರಣ ರಾಷ್ಟ್ರೀಯ ಕಲಾ ಉತ್ಸವದಲ್ಲಿ ಸ್ಪರ್ಧಿಸುವ ಭರವಸೆಯನ್ನೇ ಕಳೆದುಕೊಂಡಿದ್ದ ಮೈಸೂರು ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿನಿಗೆ ಆಕೆಯ ಶಿಕ್ಷಕಿ ಸಮಯೋಚಿತ ನೆರವು ನೀಡಿ ರಾಷ್ಟ್ರ ಪ್ರಶಸ್ತಿ ಪಡೆಯುವಂತೆ ಮಾಡಿದ್ದಾರೆ.

ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲ್ಲೂಕಿನ ಸರಗೂರು ಸರ್ಕಾರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಚಂದನಾ ಎ, ಇತ್ತೀಚೆಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷ ಅಭಿಯಾನ ಕಾರ್ಯಕ್ರಮದಡಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕಲಾ ಉತ್ಸವದಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಸ್ವದೇಶಿ ಆಟಿಕೆಗಳು ಮತ್ತು ಆಟಗಳು ವಿಭಾಗದಡಿ ಚಂದನಾ ಮಾಡಿರುವ ಕರಕುಶಲ ಕಲೆಗೆ ಬಹುಮಾನ ಸಿಕ್ಕಿದೆ. 

ಕಲಾ ಶಿಕ್ಷಕಿ ಕೆ ಸಂಗೀತಾ ಅವರು ಚಂದನಾ ಅವರನ್ನು ಮೂರು ದಿನಗಳ ಕಾಲ ಮನೆಗೆ ಕರೆದುಕೊಂಡು ಹೋಗಿ ಅವರ ಕಲೆಯ ಕೌಶಲ್ಯವನ್ನು ಸುಧಾರಿಸಲು ಸಹಾಯ ಮಾಡಿದ್ದಾರೆ. ಚಂದನಾ ಸ್ಥಳೀಯ ಮಟ್ಟದ ಆಟಿಕೆಗಳು ಮತ್ತು ಆಟಗಳ ಅಡಿಯಲ್ಲಿ ರಾಷ್ಟ್ರಮಟ್ಟದ ಕಲಾ ಉತ್ಸವದಲ್ಲಿ ಎರಡನೇ ಸ್ಥಾನವನ್ನು ಗಳಿಸಿದ್ದಾರೆ.

ಸರಗೂರಿನ ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕಿ ಸಂಗೀತಾ ಅವರು ಒಬ್ಬ ಉತ್ತಮ ಶಿಕ್ಷಕ ವಿದ್ಯಾರ್ಥಿಯ ಸ್ಫೂರ್ತಿ ಮತ್ತು ಕಲ್ಪನೆಯನ್ನು ಹುಟ್ಟುಹಾಕಬಹುದು ಎಂಬ ಗಾದೆಯನ್ನು ಸಾಬೀತುಪಡಿಸಿದ್ದಾರೆ.

ಟೈಲರ್ ಒಬ್ಬರ ಮಗಳಾಗಿರುವ ಚಂದನಾ ಗ್ರಾಮದಲ್ಲಿ ಪದೇ ಪದೇ ವಿದ್ಯುತ್ ಕಡಿತದಿಂದಾಗಿ ಬಹುತೇಕ ಭರವಸೆ ಕಳೆದುಕೊಂಡಿದ್ದಳು. ನಂತರ ಲಾಕ್‌ಡೌನ್‌ ನಿಂದ ಶಾಲೆಗಳು ಬಂದ್ ಆಗಿದ್ದರಿಂದ ತರಬೇತಿಯನ್ನು ಸಹ ಕಳೆದುಕೊಂಡಳಿದ್ದರು. ಗ್ರಾಮದಲ್ಲಿ ಸರಿಯಾದ ವಿದ್ಯುತ್ ಪೂರೈಕೆಯ ವ್ಯವಸ್ಥೆಯಿಲ್ಲ, ದೊಡ್ಡ ದೊಡ್ಡ ಯಂತ್ರಗಳ ಸಹಾಯವಿಲ್ಲದೆ ತನ್ನ ಕೈಗೆ ಸಿಕ್ಕಿದ ಅಲ್ಪ ಸೌಕರ್ಯದಲ್ಲಿ ಕನಸಿನ ಬೆನ್ನತ್ತಿದ ಚಂದನಾಗೆ ಶಿಕ್ಷಣ ಸರಿಯಾದ ಮಾರ್ಗದರ್ಶನ ಮಾಡಿದ ಶಿಕ್ಷಕಿ ಸಂಗೀತಾ ಅವರು ತನ್ನ ವಿದ್ಯಾರ್ಥಿನಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವಂತೆ ಮಾಡಿದ್ದರು.

ಚಂದನಾ ಅವರ ಹಳ್ಳಿಯಲ್ಲಿ ಆಗಾಗ್ಗೆ ವಿದ್ಯುತ್ ಕಡಿತ ಉಂಟಾಗುತ್ತಿತ್ತು, ಹಾಗಾಗಿ ನಾನು ಅವಳನ್ನು ಮೈಸೂರಿನ ನನ್ನ ನಿವಾಸಕ್ಕೆ ಕರೆದೊಯ್ದಿದ್ದೆ. ಅವಳು ನನ್ನೊಂದಿಗೆ ಮೂರು ದಿನಗಳ ಕಾಲ ಇದ್ದಳು ಎಂದು ಚಂದನಾರ ಕಲಾ ಶಿಕ್ಷಕಿ ಕೆ ಸಂಗೀತ ಹೇಳಿದ್ದಾರೆ.

ತನ್ನ ಗೆಲುವಿಗೆ ಶಿಕ್ಷಕಿ ಕಾರಣ ಎಂದು ಚಂದನಾ ಹರ್ಷ ವ್ಯಕ್ತಪಡಿಸುತ್ತಾಳೆ, ನನ್ನಲ್ಲಿರುವ ಕಲೆಯ ಕೌಶಲ್ಯಕ್ಕೆ ಶಿಕ್ಷಕಿ ಪ್ರೋತ್ಸಾಹ ನೀಡಿದರು.ಜನರು ನನ್ನನ್ನು ಗುರುತಿಸಲು ಆರಂಭಿಸಿದ್ದಾರೆ ಎನ್ನುವ ಚಂದನಾಗೆ ಮುಂದೆ ವೈದ್ಯೆಯಾಗುವ ಕನಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com