ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮ ಶೀಗೆಹಳ್ಳಿಯ ವಿದ್ಯಾರ್ಥಿನಿ ಚೈತ್ರ ಹೆಗಡೆಗೆ 20 ಚಿನ್ನದ ಪದಕ!

ರಸ್ತೆ ಬದಿಯ ಬೀದಿ ದೀಪದ ಕೆಳಗೆ ಕುಳಿತು ವಿಶ್ವೇಶ್ವರಯ್ಯನವರು ವ್ಯಾಸಂಗ ಮಾಡಿ ಸಾಧನೆ ಮಾಡಿದ ಸಾಹಸ ಕೇಳಿದ್ದೀರಿ. ಆದರೆ ಕೇವಲ ದಿನಕ್ಕೆರಡು ಭಾರಿ ಸರ್ಕಾರಿ ಬಸ್ ದರ್ಶನಭಾಗ್ಯ ಪಡೆಯುವ ಕುಗ್ರಾಮದ ಯುವತಿಯೊಬ್ಬಳು 20 ಚಿನ್ನದ ಪದಕ ಗೆದ್ದಿದ್ದಾರೆ.
ಚೈತ್ರಾ ಹೆಗಡೆ
ಚೈತ್ರಾ ಹೆಗಡೆ

ಮೈಸೂರು: ರಸ್ತೆ ಬದಿಯ ಬೀದಿ ದೀಪದ ಕೆಳಗೆ ಕುಳಿತು ವಿಶ್ವೇಶ್ವರಯ್ಯನವರು ವ್ಯಾಸಂಗ ಮಾಡಿ ಸಾಧನೆ ಮಾಡಿದ ಸಾಹಸ ಕೇಳಿದ್ದೀರಿ. ಆದರೆ ಕೇವಲ ದಿನಕ್ಕೆರಡು ಭಾರಿ ಸರ್ಕಾರಿ ಬಸ್ ದರ್ಶನಭಾಗ್ಯ ಪಡೆಯುವ ಕುಗ್ರಾಮದ ಯುವತಿಯೊಬ್ಬಳು 20 ಚಿನ್ನದ ಪದಕ ಗೆದ್ದಿದ್ದಾರೆ.

ಮೈಸೂರು ವಿಶ್ವವಿದ್ಯಾಲಯ ದಲ್ಲಿ ಎಂಎಸ್ಸಿ ರಸಾಯನಶಾಸ್ತ್ರದಲ್ಲಿ ವ್ಯಾಸಂಗ ಮಾಡಿದ ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮದ, ಬಡ ಕುಟುಂಬದ ವಿದ್ಯಾರ್ಥಿನಿ ಚೈತ್ರ ಹೆಗಡೆ ಅಪ್ರತಿಮ ಸಾಧನೆ ಮಾಡಿ ಒಂದಲ್ಲ, ಎರಡಲ್ಲ 20 ಚಿನ್ನದ ಪದಕ ಹಾಗೂ ನಾಲ್ಕು ದತ್ತಿ ಬಹುಮಾನಗಳನ್ನು ಒಟ್ಟಿಗೆ ಬಾಚಿಕೊಂಡಿದ್ದಾರೆ.

ಎಂ.ಎಸ್ಸಿ ರಸಾಯನ ವಿಜ್ಞಾನ ವಿಷಯದಲ್ಲಿ ಸಾಧನೆ ಮಾಡಿರುವ ಚೈತ್ರಾ ನಾರಾಯಣ ಹೆಗಡೆ ಅವರಿಗೆ ಮೈಸೂರು ವಿ.ವಿ ಯ ಕ್ರಾಫರ್ಡ್ ಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಪದಕ ಪ್ರದಾನ ಮಾಡಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಬಯೊಕೆಮಿಸ್ಟ್ರಿ ವಿಭಾಗದ ಗೌರವ ಪ್ರಾಧ್ಯಾಪಕ ಗೋವಿಂದರಾಜನ್ ಪದ್ಮನಾಭನ್ ಹಾಗೂ ಆಕ್ಸೆಲ್ ಇಂಡಿಯಾ ಸಂಸ್ಥಾಪಕ ಪಾಲುದಾರ ಪ್ರಶಾಂತ್ ಪ್ರಕಾಶ್ ಅವರಿಗೂ ಸಹ ಇಂದು ಗೌರವ ರಾಜ್ಯಪಾಲರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಮತ್ತಿತರರು ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com