ಚಿತ್ರದುರ್ಗ: ತಮಟಕಲ್ಲಿನಲ್ಲಿ 6ನೇ ಶತಮಾನದ ವೀರಗಲ್ಲು, ಪುರಾತನ ತಮಿಳು ಶಾಸನ ಮರುಸ್ಥಾಪನೆ!

ಚಿತ್ರದುರ್ಗ ನಗರದಿಂದ ವಾಯುವ್ಯ ದಿಕ್ಕಿನಲ್ಲಿ 8 ಕಿಲೋಮೀಟರ್ ದೂರದಲ್ಲಿರುವ ತಮಟಕಲ್ಲು ಗ್ರಾಮದಲ್ಲಿ ವಸ್ತುಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು  ಪುರಾತನ ವೀರಗಲ್ಲು ಮತ್ತು ಆರನೆಯ ಶತಮಾನದ ತಮಿಳು ಶಾಸನವನ್ನು ಪುನಃಸ್ಥಾಪಿಸಿದೆ.
ವೀರಗಲ್ಲು ಪುನಸ್ಥಾಪನೆ
ವೀರಗಲ್ಲು ಪುನಸ್ಥಾಪನೆ
Updated on

ಚಿತ್ರದುರ್ಗ: ಚಿತ್ರದುರ್ಗ ನಗರದಿಂದ ವಾಯುವ್ಯ ದಿಕ್ಕಿನಲ್ಲಿ 8 ಕಿಲೋಮೀಟರ್ ದೂರದಲ್ಲಿರುವ ತಮಟಕಲ್ಲು ಗ್ರಾಮದಲ್ಲಿ ವಸ್ತುಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು  ಪುರಾತನ ವೀರಗಲ್ಲು ಮತ್ತು ಆರನೆಯ ಶತಮಾನದ ತಮಿಳು ಶಾಸನವನ್ನು ಪುನಃಸ್ಥಾಪಿಸಿದೆ.

ಎರಡೂ ಕಲ್ಲುಗಳನ್ನು ಕೃಷಿ ಭೂಮಿಯಲ್ಲಿ ಮರು ಸ್ಥಾಪಿಸಲಾಗಿದೆ, ಎರಡೂ ಕಲ್ಲುಗಳು ಅಸ್ತವ್ಯಸ್ತವಾಗಿ ಬಿದ್ದಿರುವುದನ್ನು ಕೆಲವು ಗ್ರಾಮಸ್ಥರು ಗುರುತಿಸಿದ್ದರು. ಪುರಾತತ್ವ ಇಲಾಖೆ ವಸ್ತುಸಂಗ್ರಹಾಲಯ ಪರಂಪರೆ ಇಲಾಖೆಯವರು ಈ ಕಲ್ಲುಗಳನ್ನು ಗುರುತಿಸಿ ಸಂರಕ್ಷಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯು ಹಳಗನ್ನಡ ಲಿಪಿಯಲ್ಲಿ ಬರೆದ ಪ್ರಾಚೀನ ಶಾಸನಗಳ ನೆಲೆಯಾಗಿದೆ. ಕನ್ನಡ ಲಿಪಿಯಲ್ಲಿ ಬರೆದಿರುವ ತಮಟಕಲ್ ಗ್ರಾಮದಲ್ಲಿ 'ವೀರಗಲ್ಲು' ಎಂದು ವರ್ಗೀಕರಿಸಲಾದ ಶಾಸನಗಳು ಹೆಚ್ಚಾಗಿ ಆರನೇ ಶತಮಾನಕ್ಕೆ ಸೇರಿದ್ದು ಮತ್ತು ಮಾಸಿಕಪುರವನ್ನು ಆಳಿದ ಗುಣ ಮಧುರನ ಸ್ವಭಾವ ಮತ್ತು ಸಾಧನೆಗಳನ್ನು ವಿವರಿಸುತ್ತದೆ ಎಂದು ಪ್ರಖ್ಯಾತ ಇತಿಹಾಸಕಾರ ಮತ್ತು ಶಿಲಾಶಾಸನಕಾರ ಡಾ.ಬಿ.ರಾಜಶೇಖರಪ್ಪ ಹೇಳಿದ್ದಾರೆ.

ಆರನೇ ಶತಮಾನದಲ್ಲಿರುವ ತಮಿಳಿನ ವಟ್ಟೇಲುಟ್ಟು ಲಿಪಿಯನ್ನು ಬಿಎಲ್ ರೈಸ್ ಪತ್ತೆ ಹಚ್ಚಿದ್ದು ಆ ಶಾಸನದಲ್ಲಿರುವ ಲಿಪಿಗಳನ್ನು ಆತ ಓದಿ ವಿವರಿಸಿದ್ದರು, ಎಲೂರು ಮೊದಲ್ಲಾರ್ ಸಾತನ್ ಎಂದು ಇದನ್ನು ಓದಲಾಗಿತ್ತು. 

ತಮಿಳಿನಲ್ಲಿರುವ ಶಿಲಾಶಾಸನವು ಕರ್ನಾಟಕದ ಅತ್ಯಂತ ಪುರಾತನ  ಶಾಸನವಾಗಿದ್ದು, ಕೋಲಾರದಲ್ಲಿ ಪತ್ತೆಯಾದ ಹತ್ತನೆಯ ಶತಮಾನದ ಶಾಸನವಾಗಿತ್ತು. ಈ ಶಾಸನದಿಂದ ಕನ್ನಡಿಗರು ಮತ್ತು ತಮಿಳರ ನಡುವೆ ಆರನೇ ಶತಮಾನದ ಸಾಮರಸ್ಯವನ್ನು ಸಾರುತ್ತದೆ ಎಂದು ರಾಜಶೇಖರಪ್ಪ ತಿಳಿಸಿದ್ದಾರೆ.

ರಾಜಶೇಖರಪ್ಪ ಈ ಪ್ರದೇಶವನ್ನು ಆಳಿದ ಅಂದಿನ ರಾಜ ಗುಣ ಮಧುರನನ್ನು ವಿವರಿಸುವ ವೀರಗಲ್ಲನ್ನು ಪುನಃ ಓದಿದರು. ಗುಣ ಮಧುರನು ದೋಷರಹಿತನಾಗಿದ್ದರಿಂದ ಅವನು ಶತ್ರುಗಳಿಗೂ ಇಷ್ಟವಾಗುತ್ತಿದ್ದನು. ಗುಣ ಮಧುರ ಯಾವುದೇ ಕೆಟ್ಟ ಗುಣಗಳನ್ನು ಹೊಂದಿರಲಿಲ್ಲ ಮತ್ತು ಎಲ್ಲರೂ ಪ್ರೀತಿಸುತ್ತಿದ್ದರು 'ಎಂದು ಅವರು ಹೇಳಿದ್ದಾರೆ.

ಭಾರತೀಯ ಶಿಲಾಶಾಸನಕಾರ ಮತ್ತು ನಿವೃತ್ತ ನಾಗರಿಕ ಸೇವಕ ಐರಾವತಂ ಮಹಾದೇವನ್ ಅವರು ಈ ಶಾಸನವನ್ನು ನೋಡಲು ಚೆನ್ನೈನಿಂದ ಬಂದಿದ್ದರು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com