ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ವಿಭಿನ್ನ ಪ್ರಯೋಗ: ಲಾಕ್ ಡೌನ್ ಸಮಯದಲ್ಲಿ 'ದಿವ್ಯ ಬಾನ್ಸುರಿ' ತಯಾರಿ

ಪ್ರವೀಣ್ ಗೋಡ್ಖಿಂಡಿ ಕೊರೋನಾ ಲಾಕ್ ಡೌನ್ ನ ಕಳೆದ ಒಂದೂವರೆ ವರ್ಷಗಳಲ್ಲಿ ಅವರು ಆಕ್ರಿಲಿಕ್‌ನಿಂದ ಮಾಡಿದ 'ದಿವ್ಯಾ ಬಾನ್ಸುರಿ' ಎಂಬ ಹೊಸ ಲೈಟ್ ಮತ್ತು ಅಂತರ್ನಿರ್ಮಿತ ಮೈಕ್ರೊಫೋನ್ ಅನ್ನು ಒಳಗೊಂಡ, ಬಿದಿರಿನ ಕೊಳಲುಗಳಂತೆಯೇ ಸಂಗೀತವನ್ನು ಹೊರಡಿಸುವ ವಿದ್ಯುತ್ ಕೊಳಲನ್ನು ಕಂಡುಹಿಡಿದಿದ್ದಾರೆ.
ಎಲ್ ಇಡಿ ಕೊಳಲಿನೊಂದಿಗೆ ಪ್ರವೀಣ್ ಗೋಡ್ಖಿಂಡಿ
ಎಲ್ ಇಡಿ ಕೊಳಲಿನೊಂದಿಗೆ ಪ್ರವೀಣ್ ಗೋಡ್ಖಿಂಡಿ

ಬೆಂಗಳೂರು: ಕೊಳಲು ನುಡಿಸುತ್ತಾ ಹಲವು ದಶಕಗಳಿಂದ ವಾದಕ ಪ್ರವೀಣ್ ಗೋಡ್ಖಿಂಡಿ ಸಂಗೀತದಲ್ಲಿ ಪ್ರಯೋಗ ಮಾಡುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಅದೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ಕೊಳಲಿಗೆ ಹೊಸ ಆಯಾಮವನ್ನು ನೀಡಿದ್ದು, ಕೊರೋನಾ ಲಾಕ್ ಡೌನ್ ನ ಕಳೆದ ಒಂದೂವರೆ ವರ್ಷಗಳಲ್ಲಿ ಅವರು ಆಕ್ರಿಲಿಕ್‌ನಿಂದ ಮಾಡಿದ 'ದಿವ್ಯಾ ಬಾನ್ಸುರಿ' ಎಂಬ ಹೊಸ ಲೈಟ್ ಮತ್ತು ಅಂತರ್ನಿರ್ಮಿತ ಮೈಕ್ರೊಫೋನ್ ಅನ್ನು ಒಳಗೊಂಡ, ಬಿದಿರಿನ ಕೊಳಲುಗಳಂತೆಯೇ ಸಂಗೀತವನ್ನು ಹೊರಡಿಸುವ ವಿದ್ಯುತ್ ಕೊಳಲನ್ನು ಕಂಡುಹಿಡಿದಿದ್ದಾರೆ. ಸಂಗೀತದ ದೃಶ್ಯದಲ್ಲಿನ ಹೊಸ ವಾದ್ಯವು ಪಾರದರ್ಶಕ ಕೊಳಲು ಆಗಿದ್ದು ಬ್ಯಾಟರಿಯೊಂದಿಗೆ ಕಾರ್ಯನಿರ್ವಹಿಸುತ್ತದೆ, ಸತತ ಎಂಟು ಗಂಟೆಗಳ ಕಾಲ ಬಳಸಬಹುದು ಎನ್ನುತ್ತಾರೆ ಪ್ರವೀಣ್ ಗೋಡ್ಖಿಂಡಿ.

ಬಿದಿರಿನ ಕೊಳಲಿನಂತಲ್ಲದೆ, ವಿದ್ಯುತ್ ಚಾಲಿತ(ಎಲೆಕ್ಟ್ರಿಕ್) ಕೊಳಲಿನ ಆಕಾರ ಮತ್ತು ಗಾತ್ರವು ವಿಭಿನ್ನವಾಗಿರುತ್ತದೆ. ಇದು ಸಿಲಿಂಡರಾಕಾರದಲ್ಲಿದ್ದು 120ರಿಂದ 125 ಗ್ರಾಂ ತೂಗುತ್ತದೆ. ಬ್ಯಾಟರಿಯನ್ನು ಎಲ್‌ಇಡಿ ಬಲ್ಬ್‌ಗಳಿಗೆ ಶಕ್ತಿಯನ್ನು ನೀಡಲು ಮಾತ್ರ ಬಳಸಲಾಗುತ್ತದೆ, ಬಾಹ್ಯ ಮಿಕ್ಸರ್ ಅಥವಾ ಸೌಂಡ್ ಸಿಸ್ಟಮ್‌ನಿಂದ ಶಕ್ತಿಯನ್ನು ಪಡೆಯಲು ಬಳಸಲಾಗುತ್ತದೆ. ವಿದ್ಯುತ್ ಹೊರತುಪಡಿಸಿ ಸಂಗೀತ ಉಪಕರಣವನ್ನು ಬಿದಿರಿನ ಕೊಳಲಿನ ಪರಿಮಾಣ, ಸ್ವರ ಮತ್ತು ವಿನ್ಯಾಸವನ್ನು ಉಳಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಪಾಶ್ಚಿಮಾತ್ಯ ಕೊಳಲು ಉಕ್ಕು ಮತ್ತು ಬೆಳ್ಳಿಯಿಂದ ಮಾಡಲ್ಪಟ್ಟಿದ್ದರೂ ಸ್ವರಗಳು ಭಾರತೀಯ ಸಂಗೀತಕ್ಕೆ ಸರಿಹೊಂದುವುದಿಲ್ಲ ಎನ್ನುತ್ತಾರೆ.

ಕೊಳಲಿನ ಬಗ್ಗೆ ತಿಳಿದುಕೊಳ್ಳುತ್ತಾ ಹೋದಾಗ ಗಾಜಿನ ಕೊಳಲನ್ನು ನೋಡಿದೆ, ಇದು ಈ ದಿನಗಳಲ್ಲಿ ಟ್ರೆಂಡಿಂಗ್ ಆಗಿರುವ ಅಕ್ರಿಲಿಕ್‌ನೊಂದಿಗೆ ಯೋಚಿಸಲು ಪ್ರೇರೇಪಿಸಿತು. ಇದು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಸೂಕ್ತವಾದ ಸಂಗೀತವನ್ನು ನೀಡುತ್ತದೆ ಎಂದು ಗೋಡ್ಖಿಂಡಿ ಹೇಳುತ್ತಾರೆ.

ಅವರು ತಮ್ಮ ವಿದ್ಯಾರ್ಥಿ ಗುರುಪ್ರಸಾದ್ ಹೆಗ್ಡೆಯೊಂದಿಗೆ 2020ರಲ್ಲಿ ಉಪಕರಣವನ್ನು ಪ್ರಯೋಗಿಸಲು ಪ್ರಾರಂಭಿಸಿದರು. ಬಾನ್ಸುರಿ ನುಡಿಸುವುದಕ್ಕೆ ಹೆಸರುವಾಸಿಯಾಗಿರುವ ಗೋಡ್ಖಿಂಡಿ ಶ್ರೀಕೃಷ್ಣನಿಗೆ ಸಾಂಕೇತಿಕ ಕೃತಜ್ಞತೆಯಾಗಿ ಇತ್ತೀಚೆಗೆ ಗೋಕುಲಾಷ್ಟಮಿಗೆ ಎಲ್ ಇಡಿ ಕೊಳಲನ್ನು ಬಿಡುಗಡೆ ಮಾಡಿದರು. 2019ರಲ್ಲಿ, ಗೋಡ್ಖಿಂಡಿ ಮತ್ತು ಅವರ ಪುತ್ರ ಷಡಜ್ ಗೋಡ್ಖಿಂಡಿ ಕೊಳಲಿನೊಂದಿಗೆ ಜುಗಲ್-ಬಂದಿ ಪ್ರದರ್ಶನ ನೀಡಿದ್ದರು.

ಗೋಡ್ಖಿಂಡಿ ವಿದ್ಯುತ್ ಕೊಳಲಿನ ವೈಶಿಷ್ಟ್ಯಗಳನ್ನು ಸುಧಾರಿಸುವ ಉಪಾಯಗಳನ್ನು ಹುಡುಕುತ್ತಿದ್ದಾರೆ. ಸಂಗೀತದ ವಿವಿಧ ಅಂಶಗಳನ್ನು ಅನ್ವೇಷಿಸಲು ಲಾಕ್‌ಡೌನ್ ನನಗೆ ಸಹಾಯ ಮಾಡಿತು. ಈ ಆಲೋಚನೆಗಳೇ ಇಂದಿನ ಅನ್ವೇಷಣೆಗೆ ಪ್ರೇರಣೆ ಎಂದು ಹೇಳುವ ಗೋಡ್ಖಿಂಡಿ ಇದನ್ನು ಸದ್ಯದಲ್ಲಿಯೇ ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com