ಮುರುಳ ವೆಂಕಟೇಶ್ವರಲು
ವಿಶೇಷ
ವಿಜಯವಾಡ: ಅನಾರೋಗ್ಯ ಪೀಡಿತ ಬೀದಿ ನಾಯಿಗಳಿಗೆ ವೈದ್ಯಕೀಯ ನೆರವು ಕಲ್ಪಿಸುವ ಪ್ರಾಣಿಪ್ರಿಯ ವೆಂಕಟೇಶ್ವರಲು!
ಆಂಧ್ರ ಪ್ರದೇಶದ 71 ವರ್ಷದ ಮುರುಳ ವೆಂಕಟೇಶ್ವರಲು ವಿಜಯವಾಡದಲ್ಲಿರುವ ತನ್ನ ವಿಶಿಷ್ಠ ಆಶ್ರಮದಲ್ಲಿ ಅನಾರೋಗ್ಯಕ್ಕೊಳಗಾದ ಬೀದಿನಾಯಿಗಳಿಗೆ ವೈದ್ಯಕೀಯ ನೆರವು ನೀಡುತ್ತಾ ಬಂದಿದ್ದಾರೆ.
ವಿಜಯವಾಡ: ಆಂಧ್ರ ಪ್ರದೇಶದ 71 ವರ್ಷದ ಮುರುಳ ವೆಂಕಟೇಶ್ವರಲು ವಿಜಯವಾಡದಲ್ಲಿರುವ ತನ್ನ ವಿಶಿಷ್ಠ ಆಶ್ರಮದಲ್ಲಿ ಅನಾರೋಗ್ಯಕ್ಕೊಳಗಾದ ಬೀದಿನಾಯಿಗಳಿಗೆ ವೈದ್ಯಕೀಯ ನೆರವು ನೀಡುತ್ತಾ ಬಂದಿದ್ದಾರೆ. ಈ ಆಶ್ರಮದಲ್ಲಿ ನಾಯಿಗಳಿಗೆ ಬೇಕಾದ ಎಲ್ಲಾ ರೀತಿಯ ಔಷಧಗಳು ಲಭ್ಯವಿದ್ದು, ಅನಾರೋಗ್ಯ ಪೀಡಿತ ನಾಯಿಗಳಿಗೆ ವೈದ್ಯಕೀಯ ನೆರವು ನೀಡಲಾಗುತ್ತದೆ.
ಮುರುಳ ವೆಂಕಟೇಶ್ವರಲು ಐದು ವರ್ಷದ ಬಾಲಕನಾಗಿದ್ದಾಗಿನಿಂದ ಈ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಆರಂಭದಲ್ಲಿ ತುಂಬಾ ಆರ್ಥಿಕ ಸಮಸ್ಯೆಯನ್ನು ಎದುರಿಸಿದ್ದೆ, ನನ್ನು ಇಡೀ ಆದಾಯವನ್ನು ನಾಯಿಗಳಿಗೆ ವೈದ್ಯಕೀಯ ವೆಚ್ಚಕ್ಕಾಗಿ ವೆಚ್ಚ ಮಾಡುತ್ತಿದ್ದಾಗಿ ತಿಳಿಸಿದ್ದಾರೆ.
ಈಗ ಜನರು ಕೂಡಾ ಪ್ರೇರಿತರಾಗಿದ್ದು, ದೇಣಿಗೆಯನ್ನು ಸ್ವೀಕರಿಸುತ್ತಿದ್ದೇವೆ, ಪ್ರತಿ ತಿಂಗಳು ಸುಮಾರು 80 ಸಾವಿರದಿಂದ 1 ಲಕ್ಷ ರೂ. ವರೆಗೂ ದೇಣಿಗೆ ಬರುತ್ತಿದೆ. ಜನರು ಕೂಡಾ ಅನಾರೋಗ್ಯದಿಂದ ಬಳಲುತ್ತಿರುವ ನಾಯಿಗಳನ್ನು ತರುತ್ತಿರುವುದಾಗಿ ಅವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ