ದಾವಣಗೆರೆಯ 'ಶಕ್ತಿ ಮೆನ್'ಗಳ ಕಥೆ: ಸರ್ಕಾರದ ನೆರವಿಲ್ಲದೇ ಸ್ವಂತ ಖರ್ಚಿನಲ್ಲೇ ಕ್ರೀಡೆಯನ್ನು ಉತ್ತೇಜಿಸುತ್ತಿರುವ ಕ್ರೀಡಾಪಟುಗಳು

ಮಹತ್ವದ ಘಟನೆಗಳ ವೇಳೆ, ನಿಭಾಯಿಸಲಾಗದ ತೊಂದರೆಗಳನ್ನು ಮರೆತುಬಿಡುತ್ತೇವೆ ಪ್ರಮುಖವಾಗಿ ಕ್ರೀಡಾ ಸಾಧನೆಯ ವಿಷಯದಲ್ಲಿ ಈ ರೀತಿಯ ವಿಸ್ಮೃತಿ ಉಂಟಾಗುವುದುಂಟು.
ಕ್ರೀಡಾಪಟುಗಳು (ಸಂಗ್ರಹ ಚಿತ್ರ)
ಕ್ರೀಡಾಪಟುಗಳು (ಸಂಗ್ರಹ ಚಿತ್ರ)
Updated on

ಮಹತ್ವದ ಘಟನೆಗಳ ವೇಳೆ, ನಿಭಾಯಿಸಲಾಗದ ತೊಂದರೆಗಳನ್ನು ಮರೆತುಬಿಡುತ್ತೇವೆ ಪ್ರಮುಖವಾಗಿ ಕ್ರೀಡಾ ಸಾಧನೆಯ ವಿಷಯದಲ್ಲಿ ಈ ರೀತಿಯ ವಿಸ್ಮೃತಿ ಉಂಟಾಗುವುದುಂಟು.
 
ಕ್ರೀಡಾಪಟುಗಳಿಗೆ ಸೂಕ್ತ ಸಮ್ಮಾನವೇನೋ ಸಿಗಲಿದೆ, ಆದರೆ ಅವರು ಆ ಮಟ್ಟಕ್ಕೆ ಏರಲು ಎದುರಿಸಿದ ತೊಡಕುಗಳು, ತೊಂದರೆಗಳು ಗೌಣವಾಗಿ ಉಳಿದುಬಿಡಲಿದೆ. ಎಲ್ಲಾ ತೊಂದರೆಗಳನ್ನೂ ನಿಭಾಯಿಸಿ ಸಾಧನೆ ಮಾಡಿ ವಿಶ್ವ ದರ್ಜೆಯ ಕ್ರೀಡಾಪಟುಗಳೊಂದಿಗೆ ಸೆಣೆಸಬೇಕಾದರೆ ಸರ್ಕಾರದಿಂದ ಅವರಿಗೆ ನೆರವಿನ ಅಗತ್ಯವೂ ಇರಲಿದೆ.

ದಾವಣಗೆರೆಯಲ್ಲಿ ಇಬ್ಬರು ಕ್ರೀಡಾಪಟುಗಳು ಸರ್ಕಾರದ ನೆರವು ಇಲ್ಲದೇ, ತಮ್ಮ ಕ್ರೀಡಾ ಕೌಶಲ್ಯಗಳನ್ನು ಉತ್ತಮಗೊಳಿಸಿಕೊಳ್ಳುವುದಕ್ಕೆ ಆರ್ಥಿಕ ನೆರವಿಲ್ಲದೇ ಪರದಾಡುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕೀರ್ತಿ ಸಂಪಾದಿಸಿದ ಕ್ರೀಡಾ ಪಟುಗಳಿಗೆ ದೊರೆತ ನೆರವು ಈ ಕ್ರೀಡಾಪಟುಗಳಿಗೆ ದೊರೆತರೆ, ಅವರೂ ಸಹ ಅಂತಹ ಸಾಧನೆ ಮಾಡಬಲ್ಲರು.

ಹೂವು ಮಾರಾಟಗಾರ 20 ವರ್ಷದ ಮಣಿಕಂಠ ಅವರ ದಿನಚರಿ ಆರಂಭವಾಗುವುದು ಬೆಳಗಿನ ಜಾವ 4 ಗಂಟೆಗೆ, ತಾಜಾ ಹೂವುಗಳನ್ನು ಎಣಿಸಿ ಗ್ರಾಹಕರಿಗೆ ತಲುಪಿಸುವುದು ಅವರ ಕಾಯಕ, ಈ ಕೆಲಸ ಪೂರ್ಣಗೊಂಡ ಬೆನ್ನಲ್ಲೇ ಆತ ಪವರ್ ಲಿಫ್ಟಿಂಗ್ ನ್ನು ಅಭ್ಯಾಸ ಮಾಡುತ್ತಾರೆ. ಒಲಂಪಿಕ್ಸ್ ವೇಯ್ಟ್ ಲಿಫ್ಟಿಂಗ್ ನಲ್ಲಿ ಭಾಗಿಯಾವುದಕ್ಕೆ ತಕ್ಕ ತಯಾರಿ ಮಾಡಿಕೊಳ್ಳಲು ಸಾಧ್ಯವಾಗದೇ ಅರೆಕಾಲಿಕ ಅಭ್ಯಾಸದಲ್ಲಿ ತೊಡಗಿದ್ದಾರೆ. 

<strong>ಮಣಿಕಂಠ</strong>
ಮಣಿಕಂಠ

ಬೇರೆ ಕ್ರೀಡೆಗಳಿಗೆ ಹೋಲಿಸಿದರೆ, ಪವರ್ ಲಿಫ್ಟಿಂಗ್ ತುಲನಾತ್ಮಕವಾಗಿ ಕಡಿಮೆ ಪರಿಣತಿ ಸಾಕಿದ್ದು, ಸ್ನಾಯುಗಳನ್ನು ಬಲಿಷ್ಠಗೊಳಿಸುತ್ತದೆ. ಪ್ರಾರಂಭದಲ್ಲಿ ಮಣಿಕಂಠ ಅವರಿಗೆ ಪವರ್ ಲಿಫ್ಟಿಂಗ್ ಎಂಬುದು ಕೇವಲ ಅಭ್ಯಾಸವಾಗಿತ್ತು. ಕ್ರಮೇಣ, ದಿನನಿತ್ಯದ ಭಾಗವಾಯಿತು. ದಾವಣಗೆರೆಯ ಡಿಸಿಎಂ ಟೌನ್ ಶಿಪ್ ನಲ್ಲಿರುವ ಸಾಯಿ ಜಿಮ್ ಗೆ ನಲ್ಲಿ ಬೆಳಿಗ್ಗೆ 7 ರಿಂದ 9 ವರೆಗೆ ಪವರ್ ಲಿಫ್ಟಿಂಗ್ ನ್ನು ಅಭ್ಯಾಸ ಮಾಡುತ್ತಾರೆ.

ಎರಡು ಗಂಟೆಗಳ ಅವಧಿಯ ಜಿಮ್ ಅಭ್ಯಾಸದಲ್ಲಿ ಅವರ ಜೀವನದ ಏಕತಾನತೆ ಕಳೆಯುತ್ತದೆಯೇ ಹೊರತು ಪವರ್ ಲಿಫ್ಟಿಂಗ್ ಇನ್ನಷ್ಟೇ ಕಾರ್ಯಕ್ರಮದ ಭಾಗವಾಗಬೇಕಿರುವುದರಿಂದ ಒಲಂಪಿಕ್ಸ್ ಆಸೆಗೆ ಯಾವುದೇ ರೀತಿ ಪೋಷಣೆ ದೊರೆಯುವುದಿಲ್ಲ. 

ನಾನು ವೇಯ್ಟ್ ಲಿಫ್ಟರ್ ಆಗಬೇಕೆಂಬ ಕನಸು ಹೊತ್ತಿದ್ದೆ.  ಕ್ರೀಡಾ ಇಲಾಖೆಯಿಂದ ಸೂಕ್ತ ತರಬೇತಿ ಹಾಗೂ ಬೆಂಬಲದ ಕೊರತೆ ಇರುವ ಹಿನ್ನೆಲೆಯಲ್ಲಿ ನಾನು ಪವರ್ ಲಿಫ್ಟಿಂಗ್ ನ್ನು ಆಯ್ಕೆ ಮಾಡಿಕೊಂಡೆ, ನಾನು ಸಾಯಿ ನಾಥ್ ಅವರಿಂದ ತರಬೇತಿ ಪಡೆಯುತ್ತಿದ್ದೇನೆ.  ಉತ್ತಮವಾದ ತರಬೇತಿ ಲಭ್ಯವಾದಲ್ಲಿ ನಾನು ದೇಶಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪದಕ ಗೆಲ್ಲುತ್ತೇನೆ ಎಂಬ ವಿಶ್ವಾಸ ನನ್ನಲ್ಲಿದೆ ಎನ್ನುತಾರೆ ಮಣಿಕಂಠ.

ಚಂದ್ರಣ್ಣ ಮತ್ತೋರ್ವ ಪವರ್ ಲಿಫ್ಟರ್ ಆಗಿದ್ದು,  ಸನ್ ಗ್ಲಾಸ್, ವಾಲೆಟ್, ಬೆಲ್ಟ್ ಹಾಗೂ ಇತರ ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟದ ನಡುವೆ ತಮ್ಮ ಆಸಕ್ತಿಯನ್ನು ಮುಂದುವರೆಸುತ್ತಿದ್ದಾರೆ. 54 ವರ್ಷದ ಚಂದ್ರಣ್ಣ, ಮಾಸ್ಟರ್ಸ್ ವಿಭಾಗದಲ್ಲಿ ಭಾಗವಹಿಸುತ್ತಿದ್ದು, ಜಿಮ್ ನಲ್ಲಿ ದಣಿವರಿಯದೇ ಕೆಲಸ ಮಾಡುತ್ತಿದ್ದಾರೆ. 

ಮಹಾರಾಷ್ಟ್ರದ ಅಮ್ರಾವತಿಯಲ್ಲಿ 2021ರಲ್ಲಿ ನಡೆದ ಅಂತಾರಾಷ್ಟ್ರೀಯ ಆಹ್ವಾನ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ನಲ್ಲಿ 2 ಸೇರಿದಂತೆ ಚಂದ್ರಣ್ಣ ಈ ವರೆಗೂ 80 ಪದಕಗಳನ್ನು ಗೆದ್ದಿದ್ದಾರೆ. ಚತ್ತೀಸ್ ಗಢ, ಉತ್ತರ ಪ್ರದೇಶ, ಮಧ್ಯಪ್ರದೆಶ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.
 
"ಪವರ್ ಲಿಫ್ಟಿಂಗ್ ನನ್ನ ಹವ್ಯಾಸ, ಹಾಗೂ ಅದನ್ನು ನಾನು ಕೆಲವು ಸಮಯದಿಂದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೇನೆ. ಈಗ ನನ್ನ ಮಗಳೂ ಸಹ ಪವರ್ ಲಿಫ್ಟಿಂಗ್ ಹಾಗೂ ಕುಸ್ತಿಯಲ್ಲಿ ತೊಡಗಿದ್ದಾಳೆ ಎಂದು ಹೇಳಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com