ಆಸಕ್ತಿಯನ್ನೇ ಉದ್ಯಮವನ್ನಾಗಿಸಿಕೊಂಡ ಮಂಗಳೂರು ಯುವಕ; ನರ್ಸರಿ ಉದ್ಯಮದ ಯಶಸ್ಸಿನ ಕಥೆ ಇದು....

ಆತನ ಹೆಸರು ಗ್ಯಾನ್ ಶೆಟ್ಟಿ. ಮಂಗಳೂರಿನ ಬಿಕರ್ನಕಟ್ಟೆಯ ನಿವಾಸಿ. ಅಮ್ಮನೊಟ್ಟಿಗೆ ಗಿಡಗಳಿಗೆ ನೀರೆರೆಯುತ್ತಿದ್ದ ಆತನಿಗೆ ಬಾಲ್ಯದಿಂದಲೂ ಸಸ್ಯಗಳ ಬಗ್ಗೆ ಅತಿ ಹೆಚ್ಚು ಆಸಕ್ತಿ. ಇಂದು ಅದೇ ಆಸಕ್ತಿಯೇ  ಸಣ್ಣ ಉದ್ಯಮವಾಗಿ ಬೆಳೆದು ನಿಂತಿದೆ! 
ಗ್ಯಾನ್ ಶೆಟ್ಟಿ
ಗ್ಯಾನ್ ಶೆಟ್ಟಿ
Updated on

ಆತನ ಹೆಸರು ಗ್ಯಾನ್ ಶೆಟ್ಟಿ. ಮಂಗಳೂರಿನ ಬಿಕರ್ನಕಟ್ಟೆಯ ನಿವಾಸಿ. ಅಮ್ಮನೊಟ್ಟಿಗೆ ಗಿಡಗಳಿಗೆ ನೀರೆರೆಯುತ್ತಿದ್ದ ಆತನಿಗೆ ಬಾಲ್ಯದಿಂದಲೂ ಸಸ್ಯಗಳ ಬಗ್ಗೆ ಅತಿ ಹೆಚ್ಚು ಆಸಕ್ತಿ. ಇಂದು ಅದೇ ಆಸಕ್ತಿಯೇ  ಸಣ್ಣ ಉದ್ಯಮವಾಗಿ ಬೆಳೆದು ನಿಂತಿದೆ! 

ಟೆರೆಸ್ ಗಾರ್ಡನಿಂಗ್ ಪದ್ಧತಿಯ ಮೂಲಕ ತನಗಿರುವಷ್ಟೇ ಜಾಗದಲ್ಲಿ ಗಿಡಗಳನ್ನು ಬೆಳೆಸಲು ಮುಂದಾದ ಗ್ಯಾನ್ ಶೆಟ್ಟಿ ಇಂದು ತಮ್ಮ ನರ್ಸರಿಯಲ್ಲಿ  ಮಲ್ಬೆರಿಗಳು ಮತ್ತು ಮಾವಿನಹಣ್ಣುಗಳು, ಟೊಮ್ಯಾಟೊ ಮತ್ತು ದಾಳಿಂಬೆ ಮೊದಲಾದ ಸಂಪತ್ಭರಿತ ಸಸ್ಯಗಳನ್ನು ಹೊಂದಿದ್ದಾರೆ. 

ಕೇವಲ ಹಣ್ಣಿನ ಗಿಡಗಳಷ್ಟೇ ಅಲ್ಲದೇ, ಕ್ಯಾಪ್ಟರ್ಗಳು, ಲಿಲ್ಲಿಗಳು, ಔಷಧೀಯ ಗಿಡಮೂಲಿಕೆಗಳು, ಅಲಂಕಾರಿಕ ಸಸ್ಯಗಳನ್ನೂ ಗ್ಯಾನ್ ಶೆಟ್ಟಿ ಅವರ ಮನೆಯ ರೂಫ್ ಟಾಪ್ ನಲ್ಲಿ ಕಾಣಬಹುದಾಗಿದೆ.

<strong>ಗ್ಯಾನ್ ಶೆಟ್ಟಿ</strong>
ಗ್ಯಾನ್ ಶೆಟ್ಟಿ

28 ವರ್ಷದ ಗ್ಯಾನ್ ಶೆಟ್ಟಿ, ತಮ್ಮ ಆಸಕ್ತಿಯನ್ನು ಉದ್ಯಮವನ್ನಾಗಿಸಿದ್ದಾರೆ. ಜಾಗದ ಕೊರತೆಯಿಂದಾಗಿ ಸಸ್ಯಗಳನ್ನು ಅವರು ಮನೆಯ ಮಾಳಿಗೆಯಲ್ಲಿ ಬೆಳೆಯುವುದಕ್ಕೆ ಪ್ರಾರಂಭಿಸಿದರು.

ಈ ಬಗ್ಗೆ ಸ್ವತಃ ಅವರೇ ಮಾತನಾಡಿದ್ದು, "ಪಾಟ್ ಗಳಲ್ಲಿ ಸಣ್ಣ ಸಸ್ಯಗಳಿದ್ದವು, ಅದರೆ ನನಗೆ ಹಲವು ವಿಧದ ಸಸ್ಯಗಳನ್ನು ಬೆಳೆಯುವುದಕ್ಕೆ ಆಸಕ್ತಿ ಇತ್ತು. ಮಾವು, ಹಿಪ್ಪುನೇರಳೆ, ದಾಳಿಂಬೆ ಸೇರಿದಂತೆ ನಾನು ಕೆಲವು ಹಣ್ಣಿನ ಗಿಡಗಳನ್ನು ಬೆಳೆಸಿದ್ದೆನೆ, ಹಲವರು ಇದು ಬೆಳೆಯುವುದಿಲ್ಲ ಎಂದು ಹೇಳಿದ್ದರು ಆದರೆ ಹಣ್ಣಿನ ಗಿಡಗಳು ಬೆಳೆದಿವೆ. ಕೋವಿಡ್-19 ಪ್ಯಾಂಡಮಿಕ್ ಹಾಗೂ ಸಾಮಾಜಿಕ ಜಾಲತಾಣ ಟೆರೇಸ್ ಗಾರ್ಡನಿಂಗ್ ವ್ಯಾಪ್ತಿಯನ್ನು ಹೆಚ್ಚಿಸುವುದಕ್ಕೆ ನನಗೆ ಸಹಕಾರಿಯಾಯಿತು.

ಪ್ಯಾಂಡಮಿಕ್ ಅವಧಿಯಲ್ಲಿ ನಾನು ಮನೆಯಿಂದ ಕೆಲಸ ಮಾಡುತ್ತಿದ್ದಾಗ, ಗಿಡಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅದನ್ನು ಅಪ್ಲೋಟ್ ಮಾಡುತ್ತಿದ್ದೆ, ಇದಕ್ಕೆ ಕೆಲವರು ಹುಡುಗಿಯರ ಕೆಲಸ ಎಂದೂ ಕಾಮೆಂಟ್ ಹಾಕುತ್ತಿದ್ದರು. ಆಗಲೇ ನನ್ನ ವೃತ್ತಿಯನ್ನಾಗಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಉಂಟಾಗಿತ್ತು. ನನಗೆ ತೋಟಗಾರಿಕೆಯಲ್ಲಿ ಆಸಕ್ತಿ ಇತ್ತು ಅದರಲ್ಲೇ ನೆಮ್ಮದಿ ಕಂಡುಕೊಂಡೆ. ಇದು ನನ್ನ ಉದ್ಯಮವಾಗಲಿದೆ ಎಂದುಕೊಂಡಿರಲಿಲ್ಲ. ನಾನು ಕೆಲವು ಗಿಡಗಳನ್ನು ತಂದು ಅದನ್ನು ಸ್ನೇಹಿತರು, ಸಂಬಂಧಿಕರೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದೆ ಎನ್ನುತ್ತಾರೆ ಗ್ಯಾನ್ ಶೆಟ್ಟಿ. 

ಕ್ರಮೇಣ ಗ್ಯಾನ್ ಶೆಟ್ಟಿ ಅವರು ತಮ್ಮ ಮನೆಯ ಪಕ್ಕದ ಪ್ರದೇಶದಲ್ಲಿ ನರ್ಸರಿ ಪ್ರಾರಂಭಿಸಿದ್ದು ಈ ವರ್ಷದ ಫೆಬ್ರವರಿಯಲ್ಲಿ ಮಾಳಿಗೆಯಿಂದ ಸಸಿಗಳನ್ನು ನರ್ಸರಿಗೆ ವರ್ಗಾಯಿಸಿದ್ದಾರೆ. ದಿನ ನಿತ್ಯ ನರ್ಸರಿಗೆ ಗ್ರಾಹಕರು ಸಸಿಗಳನ್ನು ಖರೀದಿಸಲು ಬರುತ್ತಿದ್ದು ವ್ಯಾಪಾರವೂ ನಿಧಾನವಾಗಿ ಏರಿಕೆಯಾಗಿದೆ. 

ಗ್ಯಾನ್ ಹಾಗೂ ಅವರ ತಾಯಿ ಶೋಭಾ ನರ್ಸರಿಯನ್ನು ನೋಡಿಕೊಂಡರೆ, ಅವರ ತಂದೆ ಬಾಲಕೃಷ್ಣ ಶೆಟ್ಟಿ ಸಸಿಗಳ ವರ್ಗಾವಣೆಯಲ್ಲಿ ಸಹಾಯ ಮಾಡುತ್ತಾರೆ. ಗ್ಯಾನ್ ನರ್ಸರಿಯಲ್ಲಿ 30 ರೂಪಾಯಿಗಳಿಂದ 650 ರೂಪಾಯಿಗಳವರೆಗಿನ ಸಸಿಗಳು ಲಭ್ಯವಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com