ಕೆಸರಿನಲ್ಲಿ ಬೈಕ್ ರೇಸಿಂಗ್ ಮಾಡಿ ಅರಳಿದ ಹೂ 'ಅಪೂರ್ವ ಬೈಕಾಡಿ'

ಈಕೆಗೆ ಬೈಕ್ ಹತ್ತಿ ರೈಡ್ ಮಾಡುವುದೆಂದರೆ ತೀವ್ರ ಉತ್ಸಾಹ.  ಬೈಕ್ ರೇಸ್ ಆಕೆಯ ಜೀವನ, ಸಾಧನೆಗೆ ಜೀವ ತುಂಬಿದೆ. ಉಡುಪಿಯ ಬೈಕಾಡಿಯ 25 ವರ್ಷದ ಅಪೂರ್ವ ಬೈಕಾಡಿ ಬೈಕ್ ರೇಸ್ ಕ್ರೀಡೆ ಪುರುಷರಿಗೆ ಮಾತ್ರ ಸೀಮಿತವಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
ಕೆಸರಿನ ಟ್ರ್ಯಾಕ್ ನಲ್ಲಿ ಅಪೂರ್ವ ಬೈಕಾಡಿ
ಕೆಸರಿನ ಟ್ರ್ಯಾಕ್ ನಲ್ಲಿ ಅಪೂರ್ವ ಬೈಕಾಡಿ

ಉಡುಪಿ: ಈಕೆಗೆ ಬೈಕ್ ಹತ್ತಿ ರೈಡ್ ಮಾಡುವುದೆಂದರೆ ತೀವ್ರ ಉತ್ಸಾಹ.  ಬೈಕ್ ರೇಸ್ ಆಕೆಯ ಜೀವನ, ಸಾಧನೆಗೆ ಜೀವ ತುಂಬಿದೆ. ಉಡುಪಿಯ ಬೈಕಾಡಿಯ 25 ವರ್ಷದ ಅಪೂರ್ವ ಬೈಕಾಡಿ ಬೈಕ್ ರೇಸ್ ಕ್ರೀಡೆ ಪುರುಷರಿಗೆ ಮಾತ್ರ ಸೀಮಿತವಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ರೇಸ್ ವೇಳೆ ಮೂಗಿಗೆ ಏಟು ಆಗಬಹುದೇ, ಗಾಯಗಳಾಗಬಹುದೇ ಎಂದು ಲೆಕ್ಕಿಸದೆ ಮುನ್ನುಗ್ಗುತ್ತಾರೆ. 

ಅಪೂರ್ವ ಅವರು 16 ವರ್ಷದವರಾಗಿದ್ದಾಗಿನಿಂದಲೇ ಬೈಕ್ ರೇಸಿಂಗ್ ಮಾಡುತ್ತಿದ್ದರು. ನಿಟ್ಟೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದಾಗ, ಬಾಸ್ಕೆಟ್‌ಬಾಲ್ ಮತ್ತು ಹ್ಯಾಂಡ್‌ಬಾಲ್‌ ಆಡುತ್ತಿದ್ದರಂತೆ. 2017 ರಲ್ಲಿ ಸಿಕ್ಕಿಂನಲ್ಲಿ ನಡೆದ ಸೀನಿಯರ್ ನ್ಯಾಷನಲ್ ಅಮೆಚೂರ್ ಮೌಯಿ ಥಾಯ್ ಚಾಂಪಿಯನ್‌ಶಿಪ್ ಆಯೋಜಿಸಿದ್ದ ಮೌಯಿ ಥಾಯ್ ಇಂಡಿಯನ್ ನ್ಯಾಶನಲ್ ಫೆಡರೇಶನ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು.

ಆದರೂ, ಕರಾವಳಿ ಜಿಲ್ಲೆಗಳಲ್ಲಿ ಕಲಿಯಲು ಯಾವುದೇ ಆಯ್ಕೆಗಳಿಲ್ಲದಿದ್ದರೂ, ಅಪೂರ್ವ ತನ್ನ ಬೈಕ್ ರೇಸಿಂಗ್ ಕನಸನ್ನು ಎಂದಿಗೂ ಬಿಡಲಿಲ್ಲ. ಚೆನ್ನೈಗೆ ಹೋಗಿ ಕಲಿಯಲು ಆಲೋಚಿಸಿದರು, ಸಾಮಾನ್ಯ ಬೈಕ್ ನಲ್ಲಿ ಅಭ್ಯಾಸ ಪ್ರಾರಂಭಿಸಿದ್ದರು. 

<strong>ಅಪೂರ್ವ ಬೈಕಾಡಿ</strong>
ಅಪೂರ್ವ ಬೈಕಾಡಿ

2015 ರಲ್ಲಿ ಮಂಗಳೂರು ಬೈಕರ್ನಿ ಗ್ರೂಪ್‌ಗೆ ಸೇರಿಕೊಂಡರು, ‘ಮಂಗಳೂರು ಬೈಕರ್ಣಿಯಲ್ಲಿ ನಮ್ಮ ತಂಡವಿದೆ, ಕರಾವಳಿ ನಗರದಲ್ಲಿ ಸಂಪೂರ್ಣ ಮಹಿಳಾ ರೈಡರ್ಸ್ ಚಾಪ್ಟರ್ ಇದೆ, ಅಲ್ಲಿಗೆ ಸೇರಿದ ನಂತರ ಬೈಕ್ ರೇಸಿಂಗ್ ನಲ್ಲಿ ಆಸಕ್ತಿ ಹೆಚ್ಚಿತು ಎನ್ನುತ್ತಾರೆ. 

2018 ರಲ್ಲಿ ತನ್ನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ, ಅಪೂರ್ವ ಉಡುಪಿಯ ಎಜುಟೆಕ್ ಕಂಪನಿಯೊಂದರಲ್ಲಿ ವ್ಯಾಪಾರ ಅಭಿವೃದ್ಧಿ ಸಹವರ್ತಿಯಾಗಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ 9ರಿಂದ 5 ಗಂಟೆಯವರೆಗೆ ಕೆಲಸವು ತಮ್ಮ ಕ್ರೀಡಾ ಆಸಕ್ತಿಗೆ ಹೊಂದಿಕೆಯಾಗುತ್ತಿರಲಿಲ್ಲ. ಹೀಗಾಗಿ ಕೆಲಸ ಇಷ್ಟವಾಗದೆ ಬಿಟ್ಟರು. 2019 ರಲ್ಲಿ ಅಪೂರ್ವ ಬೆಂಗಳೂರಿನಲ್ಲಿ ಟಿವಿಎಸ್ ಒನ್-ಮೇಕ್ ಚಾಂಪಿಯನ್‌ಶಿಪ್ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟರ್ ನೋಡಿದರಂತೆ. ಅದು ಅವರ ಬದುಕನ್ನು ಬದಲಿಸಿತು. ಅದು ತರಬೇತಿ ಮತ್ತು ಆಯ್ಕೆ ಪ್ರಕ್ರಿಯೆಯಾಗಿತ್ತು ಎನ್ನುತ್ತಾರೆ.

ಆಗ ನಾನು ಆಯ್ಕೆಯಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆಯ್ಕೆಯಾದಿ ಅಲ್ಲಿ ನಾನು ಕಲಿತ ತಂತ್ರಗಳು ನನಗೆ ತುಂಬಾ ಸಹಾಯ ಮಾಡಿತು. ಆರಂಭದಲ್ಲಿ, ಇದು ಸರ್ಕ್ಯೂಟ್ ರೇಸಿಂಗ್ ಆಗಿತ್ತು, ಈಗ ನಾನು ಡರ್ಟ್ ಟ್ರ್ಯಾಕ್ ರೇಸಿಂಗ್‌ನಲ್ಲಿದ್ದೇನೆ ಎಂದರು. 

ವಿವಿಧ ವಯೋಮಾನದ 45 ಮಹಿಳೆಯರು ಇದ್ದರು, ಅವರಲ್ಲಿ ಹಲವರು ಸಾಮಾಜಿಕ ಮಾಧ್ಯಮದ ತಾರೆಗಳು. ಅಪೂರ್ವ ದಕ್ಷಿಣ ವಲಯದಿಂದ ಆಯ್ಕೆಯಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆದ MRF MoGrip FMSCI ಇಂಡಿಯನ್ ನ್ಯಾಶನಲ್ ರ್ಯಾಲಿ ಚಾಂಪಿಯನ್‌ಶಿಪ್ 2W ಈವೆಂಟ್ (ಮಹಿಳಾ ವರ್ಗ) ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪಂಜದಲ್ಲಿ ನಡೆದ MRF MoGrip FMSCI ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್‌ಶಿಪ್‌ನ ಡಿ ಮಂಗಳೂರು - 2 ನೇ ಸುತ್ತಿನಲ್ಲಿ ಅಪೂರ್ವ ದ್ವಿತೀಯ ಬಹುಮಾನ ಪಡೆದರು. ಮುಂಬರುವ ಸುತ್ತಿನಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸ ಅವರಿಗಿದೆ. 

ಅಪೂರ್ವಗೆ ಅವರ ಪೋಷಕರಾದ ಭಾರತಿ ಮತ್ತು ಬಿ ಕೆ ನಾರಾಯಣ ತುಂಬು ಪ್ರೋತ್ಸಾಹ, ಸಹಕಾರ ನೀಡುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com