55 ವರ್ಷಗಳ ನಂತರ ತಂದೆಯ ಸಮಾಧಿ ಪತ್ತೆಹಚ್ಚಲು ಮಲೇಷ್ಯಾಗೆ ಹೋದ ಮಗ; ಸಮಾಧಿ ಕಂಡು ಪುತ್ರ ಮಾಡಿದ್ದೇನು?
ತಿರುನಲ್ವೇಲಿ ಜಿಲ್ಲೆಯ ವೆಂಕಡಂಪಟ್ಟಿ ಗ್ರಾಮದ ಕಾರ್ಯಕರ್ತರಾಗಿರುವ ತಿರುಮಾರನ್ ಗೂಗಲ್ ಸರ್ಚ್‌ನಿಂದ ಸಿಕ್ಕಿದ ಮಾಹಿತಿ ಪ್ರಕಾರ, ಈಗ ತನ್ನ ತಂದೆಯ ಸಮಾಧಿಯನ್ನು ಹುಡುಕುವ ಅನ್ವೇಷಣೆಗೆ ಹೊರಟಿದ್ದಾರೆ.
Published: 22nd November 2022 11:36 AM | Last Updated: 22nd November 2022 03:24 PM | A+A A-

ತಂದೆಯ ಸಮಾಧಿ ಮುಂದೆ ಮಗ ತಿರುಮಾರನ್
ತೆಂಕಶಿ: ಐವತ್ತಾರು ವರ್ಷದ ತಿರುಮಾರನ್‌ಗೆ ತಂದೆಯ ನೆನಪೇ ಇಲ್ಲ. ಅವರ ತಂದೆ ಕೆ ರಾಮಸುಂದರಂ ಅಲಿಯಾಸ್ ಪೂಂಗುಂಟ್ರಾನ್ ಮಲೇಷ್ಯಾದ ಶಾಲೆಯಲ್ಲಿ ಶಿಕ್ಷಕರಾಗಿದ್ದರು ಎಂದು ಕೇಳಿ ಗೊತ್ತಿದೆ. ತಿರುಮಾರನ್ ಜನಿಸಿದ ಆರು ತಿಂಗಳ ನಂತರ ನಿಧನರಾಗಿದ್ದರು. ತಿರುನಲ್ವೇಲಿ ಜಿಲ್ಲೆಯ ವೆಂಕಡಂಪಟ್ಟಿ ಗ್ರಾಮದ ಕಾರ್ಯಕರ್ತರಾಗಿರುವ ತಿರುಮಾರನ್ ಗೂಗಲ್ ಸರ್ಚ್‌ನಿಂದ ಸಿಕ್ಕಿದ ಮಾಹಿತಿ ಪ್ರಕಾರ, ಈಗ ತನ್ನ ತಂದೆಯ ಸಮಾಧಿಯನ್ನು ಹುಡುಕುವ ಅನ್ವೇಷಣೆಗೆ ಹೊರಟಿದ್ದಾರೆ.
ತಮ್ಮ ಅನ್ವೇಷಣೆಯ ಪಯಣದಲ್ಲಿ ಯಶಸ್ವಿಯಾಗಿರುವುದು ಮಾತ್ರವಲ್ಲದೆ ತಮ್ಮ ತಂದೆಯ ಅವರ ವಿದ್ಯಾರ್ಥಿಗಳಿಂದ ಹಲವು ವಿಷಯಗಳನ್ನು ತಿಳಿದುಕೊಂಡಿದ್ದಾರೆ. 1967 ರಲ್ಲಿ ಅನಾರೋಗ್ಯದಿಂದ ನಿಧನರಾದಾಗ ನನ್ನ ತಂದೆಗೆ ಆಗ 37 ವರ್ಷ. ನನ್ನ ತಾಯಿ ರಾಧಾಭಾಯಿ ತಂದೆಯನ್ನು ಸಮಾಧಿ ಮಾಡಿ ನನ್ನನ್ನು ಭಾರತಕ್ಕೆ ಕರೆತಂದರು. ತಾಯಿ ಕೂಡ 35 ವರ್ಷಗಳ ಹಿಂದೆ ನಿಧನರಾದರು ಎಂದು ಹೇಳುವ ತಿರುಮಾರನ್, ತಮ್ಮ ತಂದೆಯನ್ನು ಸಮಾಧಿ ಮಾಡಿದ ಸ್ಥಳವನ್ನು ಹುಡುಕಲು ಪ್ರಯತ್ನಿಸುತ್ತಿದ್ದರು.
ಮಲೇಷ್ಯಾದ ಕೆರ್ಲಿಂಗ್‌ನಲ್ಲಿರುವ ಕರ್ಲಿಂಗ್ ತೊಟ್ಟ ಥೇಸಿಯಾ ವಕೈ ತಮಿಳು ಪಲ್ಲಿ ಎಂಬ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಗೊತ್ತಾಯಿತು. ಶಾಲೆಯ ಕಟ್ಟಡ ಈಗ ಶಿಥಿಲಗೊಂಡಿದೆ. ಶಾಲೆಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಗೂಗಲ್ ಮೂಲಕ ನಾನು ಕಂಡುಕೊಂಡೆ. ನಾನು ಮುಖ್ಯೋಪಾಧ್ಯಾಯ ಕುಮಾರ್ ಚಿದಂಬರಂ ಅವರ ಇಮೇಲ್ ವಿಳಾಸವನ್ನು ಪಡೆದುಕೊಂಡು ತಂದೆಯ ಸಮಾಧಿಯನ್ನು ಹುಡುಕಲು ಬಯಸುತ್ತೇನೆ ಅವರಿಗೆ ಹೇಳಿದೆ ಎನ್ನುತ್ತಾರೆ ತಿರುಮಾರನ್.
ಮಲೇಷ್ಯಾದ ಪೊದೆಗಳಲ್ಲಿ ತಂದೆಯ ಸಮಾಧಿ
ಶಾಲೆಯ ಮುಖ್ಯೋಪಾಧ್ಯಾಯ ಚಿದಂಬರಂ ರಾಮಸುಂದರಂ ಅವರ ಹಳೆಯ ವಿದ್ಯಾರ್ಥಿಗಳಾದ ಮೋಹನ ರಾವ್ ಮತ್ತು ನಾಗಪ್ಪನ್ ಅವರ ಸಂಪರ್ಕ ಸಾಧಿಸಿದರು, ಅವರಿಬ್ಬರೂ ಎಂಭತ್ತರ ಹರೆಯದವರಾಗಿದ್ದಾರೆ. ಅವರು ಇಬ್ಬರೂ ತಮ್ಮ ಶಿಕ್ಷಕರ ಸಮಾಧಿಯನ್ನು ಕರ್ಲಿಂಗ್‌ನಲ್ಲಿ ಪತ್ತೆ ಮಾಡಿ ತಿರುಮಾರನ್‌ಗೆ ಮಾಹಿತಿ ನೀಡಿದರು. ಕಳೆದ ನವೆಂಬರ್ 8ರಂದು ಮಲೇಷ್ಯಾಗೆ ಹೋಗಿ ತಂದೆಯ ಸಮಾಧಿ ನೋಡಿಕೊಂಡು ಬಂದೆ ಎನ್ನುತ್ತಾರೆ ತಿರುಮಾರನ್.
ಸಮಾಧಿಯಲ್ಲಿ ನನ್ನ ತಂದೆಯ ಚಿತ್ರವಿದೆ, ಜೊತೆಗೆ ಅವರ ಹೆಸರು ಮತ್ತು ಜನನ ಮತ್ತು ಮರಣ ದಿನಾಂಕಗಳು ಸಮೂದಾಗಿವೆ. ನವೆಂಬರ್ 16 ರಂದು ಭಾರತಕ್ಕೆ ಮರಳುವ ಮೊದಲು ನಾನು ಸಮಾಧಿಯಲ್ಲಿ ಹಲವಾರು ಬಾರಿ ಪ್ರಾರ್ಥನೆ ಸಲ್ಲಿಸಿದೆ ಎಂದು ತಿರುಮಾರನ್ ಹೇಳುತ್ತಾರೆ, ತಂದೆಯ ಬಗ್ಗೆಯೂ ಸಾಕಷ್ಟು ತಿಳಿದುಕೊಂಡಿದ್ದಾರೆ.
ನನ್ನ ಜೀವನ ರೂಪಿಸುವಲ್ಲಿ ನಿಮ್ಮ ತಂದೆಯವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರ ವಿದ್ಯಾರ್ಥಿ ನಾಗಪ್ಪನ್ ಹೇಳಿದರು. ತರಗತಿಯಲ್ಲಿ ಗಮನ ಹರಿಸದ ಕಾರಣಕ್ಕೆ ನನ್ನ ತಂದೆ ಹೊಡೆದಾಗ ಪ್ರಜ್ಞೆ ತಪ್ಪಿ ಬಿದ್ದೆ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಕಮಲಂ ಹೇಳಿದ್ದಾರೆ. ನಂತರ ತಂದೆ ಆಕೆಯನ್ನು ತೊಡೆಯ ಮೇಲೆ ಮಲಗಿಸಿ ಚೇತರಿಸಿಕೊಳ್ಳಲು ಸಹಾಯ ಮಾಡಿದರಂತೆ. ನನ್ನ ತಂದೆ ಪೆರುಮಾಳ್‌ಗೆ ಕಾಲೇಜಿಗೆ ಹೋಗಲು ಸಹಾಯ ಮಾಡಲು ಸೈಕಲ್ ಉಡುಗೊರೆಯಾಗಿ ನೀಡಿದರು. ಪೆರುಮಾಳ್ ನನ್ನನ್ನು ಮಲೇಷ್ಯಾದಲ್ಲಿ ಎರಡು ಬಾರಿ ಭೇಟಿಯಾದರು ಎಂದು ಹಳೆ ವಿದ್ಯಾರ್ಥಿಗಳು ನೆನೆಸಿಕೊಳ್ಳುತ್ತಾರೆ.
ತಂದೆ-ತಾಯಿ ಇಲ್ಲದೆ ಸ್ವತಃ ಅನಾಥರಾಗಿರುವ ತಿರುಮಾರನ್ ಅನಾಥಾಶ್ರಮವನ್ನು ನಡೆಸುತ್ತಿದ್ದಾರೆ. "ನಾನು ಸುಮಾರು 60 ಅನಾಥರಿಗೆ ಮದುವೆ ಮಾಡಲು ಸಹಾಯ ಮಾಡಿದ್ದೇನೆ. 100 ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ದೊರಕಿಸಿಕೊಟ್ಟಿದ್ದೇನೆ. 3,009 ರಕ್ತದಾನ ಶಿಬಿರಗಳನ್ನು ನಡೆಸಿದ್ದೇನೆ. ತಂದೆ-ತಾಯಿಯನ್ನು ಕಳೆದುಕೊಂಡ ನನಗೆ ಅನಾಥನಾಗುವುದು ಎಷ್ಟು ಕಷ್ಟ ಎಂಬುದು ಗೊತ್ತಿದೆ ಎನ್ನುತ್ತಾರೆ.