ಗದಗ ಜಿಲ್ಲೆಯಲ್ಲಿ 'ಚುನಾವಣಾ ದೇವರು': ಗೆಲುವು ನಿಶ್ಚಿತ ಎಂಬ ನಂಬಿಕೆ; ಪೂಜೆ ಸಲ್ಲಿಸಲು ರಾಜಕೀಯ ಮುಖಂಡರ ಸಾಲು!

ಗದಗ ಜಿಲ್ಲೆಯ ಮೈಕಲಜೇರಿ ಗ್ರಾಮದ ಹನುಮಂತ ದೇವರನ್ನು ಪೂಜಿಸಿದರೆ ಚುನಾವಣೆಯಲ್ಲಿ ರಾಜಕೀಯ ನಾಯಕರು ಗೆಲ್ಲುತ್ತಾರೆ ಎಂಬ ನಂಬಿಕೆ ಹಲವಾರು ವರ್ಷಗಳಿಂದ ಇದೆ.
ಶಾಸಕ ಕಾಳಕಪ್ಪ ಬಂಡಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಬಂದಿರುವುದು
ಶಾಸಕ ಕಾಳಕಪ್ಪ ಬಂಡಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಬಂದಿರುವುದು

ಗದಗ: ಗದಗ ಜಿಲ್ಲೆಯ ಮೈಕಲಜೇರಿ ಗ್ರಾಮದ ಹನುಮಂತ ದೇವರನ್ನು ಪೂಜಿಸಿದರೆ ಚುನಾವಣೆಯಲ್ಲಿ ರಾಜಕೀಯ ನಾಯಕರು ಗೆಲ್ಲುತ್ತಾರೆ ಎಂಬ ನಂಬಿಕೆ ಹಲವಾರು ವರ್ಷಗಳಿಂದ ಇದೆ. 2023ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇಲ್ಲಿನ ಪ್ರಸಿದ್ಧ ‘ಚುನಾವಣಾ ದೇವರ’ ದರ್ಶನಕ್ಕೆ ದೇವಸ್ಥಾನಕ್ಕೆ ಭೇಟಿ ನೀಡಲಾರಂಭಿಸಿದ್ದಾರೆ.

ಈ ದೇವಾಲಯವು ಗಜೇಂದ್ರಗಡ ಪಟ್ಟಣದಿಂದ 9 ಕಿಮೀ ದೂರದಲ್ಲಿದೆ. ಮೈಕಲಜೆರಿ ಗದಗ ಜಿಲ್ಲೆಯ ಈಶಾನ್ಯಕ್ಕೆ ನೆಲೆಗೊಂಡಿರುವುದರಿಂದ ಇದನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದೇವಸ್ಥಾನಕ್ಕೆ ಚುನಾವಣೆಗೆ ಮುನ್ನ ರಾಜಕೀಯ ಮುಖಂಡರು ನಾಮಪತ್ರದೊಂದಿಗೆ ಬಂದು ಪೂಜೆ ಸಲ್ಲಿಸುವುದು ಅಥವಾ ಪ್ರಚಾರವನ್ನು ಪ್ರಾರಂಭಿಸುವುದು ಕಳೆದ ನಾಲ್ಕು ದಶಕಗಳಿಂದ ನಡೆದುಕೊಂಡು ಬಂದಿದೆ.

ಗೆಲುವಿನ ಆಶೀರ್ವಾದ
ದೇವರನ್ನು ಮೊದಲು ಪೂಜಿಸುವವರು ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ನಂಬಿಕೆಯೂ ಇದೆ. ರೋಣ ಶಾಸಕ ಕಳಕಪ್ಪ ಬಂಡಿ ನಿನ್ನೆ ಬುಧವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಹ ಅಭ್ಯರ್ಥಿಗಳು ದೇವಸ್ಥಾನಕ್ಕೆ ತ್ವರಿತವಾಗಿ ಬಂದು ಪ್ರಾರ್ಥನೆ ಸಲ್ಲಿಸಿ ಪೂಜೆ ನೆರವೇರಿಸುತ್ತಾರೆ. 

2008ರಲ್ಲಿ ಬಿಜೆಪಿಯ ಬಂಡಿ ಇಲ್ಲಿಂದಲೇ ಪ್ರಚಾರ ಆರಂಭಿಸಿ ಗೆಲುವು ಸಾಧಿಸಿದ್ದರು. 2013ರಲ್ಲಿ ಕಾಂಗ್ರೆಸ್ ಸದಸ್ಯ ಜಿ.ಎಸ್.ಪಾಟೀಲ ಇಲ್ಲಿಂದ ನಿಂತು ಗೆದ್ದಿದ್ದರು. ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದ ಶಿವಕುಮಾರ್ ಉದಾಸಿಯವರಿಗ 2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯವನ್ನು ತಂದುಕೊಟ್ಟಿತು. ಕಳೆದ ವರ್ಷ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಮುಖಂಡರು ದೇವಸ್ಥಾನಕ್ಕೆ ಭೇಟಿ ನೀಡಿ ಗೆದ್ದಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಿ ಇಲ್ಲಿಗೆ ಮೊದಲು ಬಂದು ಪೂಜೆ, ಹರಕೆ ಸಲ್ಲಿಸುವ ಅಭ್ಯರ್ಥಿ ಗೆಲುವು ಕಾಣುತ್ತಾರೆ, ಎರಡನೇ, ಮೂರನೇ ಅಭ್ಯರ್ಥಿ ಸೋಲುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ. 

ಎಲ್ಲ ಪಕ್ಷಗಳ ಮುಖಂಡರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಅವರಲ್ಲಿ ಹೆಚ್ಚಿನವರು ರಾತ್ರಿಯಲ್ಲಿ ಭೇಟಿ ನೀಡುತ್ತಾರೆ. ಇಲ್ಲಿ ಹನುಮಂತನನ್ನು 'ಚುನಾವಣಾ ದೇವರು' ಎಂದು ಪರಿಗಣಿಸಲಾಗಿದೆ ಆದರೆ ಇದು ಹೇಗೆ ಪ್ರಾರಂಭವಾಯಿತು ಎಂದು ನಮಗೆ ತಿಳಿದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. 

ರೋಣ ತಾಲ್ಲೂಕಿನ ಕೆಲವು ಬಿಜೆಪಿ ನಾಯಕರು, ನಾವು ದೇವಸ್ಥಾನಕ್ಕೆ ಭೇಟಿ ನೀಡಿದ್ದೇವೆ. ನಮ್ಮ ನಾಯಕನ ಗೆಲುವಿಗಾಗಿ ಪ್ರಾರ್ಥಿಸಿದ್ದೇವೆ. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡುವುದು ಸಂಪ್ರದಾಯವಾಗಿದೆ. ನಮ್ಮ ನಾಯಕರು ಸ್ಥಳೀಯ ಮುಖಂಡರ ಜೊತೆ ಸಭೆ ನಡೆಸಿದ್ದರು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com