ಗದಗ: ವೃತ್ತಿಯಲ್ಲಿ ಸರ್ಜನ್, ಹೃದಯದಿಂದ ರೈತ ಡಾ. ಜಿ.ಬಿ.ಬಿದಿನ್ಹಾಳ್!

ವೃತ್ತಿಯಲ್ಲಿ ಸರ್ಜನ್ ಆಗಿ ಜನರಿಗೆ ಸೇವೆ ಒದಗಿಸುತ್ತಾ, ಹೊಲದಲ್ಲಿಯೂ ಕೆಲಸ ಮಾಡುವ ಗದಗದ 68 ವರ್ಷದ ಡಾ.ಜಿ.ಬಿ. ಬಿದಿನ್ಹಾಳ್  ತಮ್ಮ ವಯಸ್ಸಿಗೂ ಮೀರಿ ನಿಲ್ಲುತ್ತಾರೆ. ಅವರು ಇಂದಿಗೂ ತಮ್ಮ ಜಮೀನಿನಲ್ಲಿ ಕೆಲಸ ಮುಂದುವರೆಸಿದ್ದಾರೆ.  ಇವರು ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಸಮೀಪದ ಮುಸ್ತಿಕೊಪ್ಪದವರು.
ಹಗಲಿನ ಹೊತ್ತಿ ಸರ್ಜನ್ ಆಗಿ ಕೆಲಸ ಮುಗಿಸಿದ ನಂತರ ಜಮೀನಿನಲ್ಲಿ ಕೆಲಸ ಮಾಡುವ ಚಿತ್ರ
ಹಗಲಿನ ಹೊತ್ತಿ ಸರ್ಜನ್ ಆಗಿ ಕೆಲಸ ಮುಗಿಸಿದ ನಂತರ ಜಮೀನಿನಲ್ಲಿ ಕೆಲಸ ಮಾಡುವ ಚಿತ್ರ

ಗದಗ: ವೃತ್ತಿಯಲ್ಲಿ ಸರ್ಜನ್ ಆಗಿ ಜನರಿಗೆ ಸೇವೆ ಒದಗಿಸುತ್ತಾ, ಹೊಲದಲ್ಲಿಯೂ ಕೆಲಸ ಮಾಡುವ ಗದಗದ 68 ವರ್ಷದ ಡಾ. ಜಿ.ಬಿ.ಬಿದಿನ್ಹಾಳ್ ತಮ್ಮ ವಯಸ್ಸಿಗೂ ಮೀರಿ ನಿಲ್ಲುತ್ತಾರೆ. ಅವರು ಇಂದಿಗೂ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಾರೆ.  ಇವರು ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಸಮೀಪದ ಮುಸ್ತಿಕೊಪ್ಪದವರು.

ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಎಂಬಿಬಿಎಸ್ ಮತ್ತು ಎಂಎಸ್ ಮುಗಿಸಿರುವ ಅವರು, ಗದಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತ್ಯುತ್ತಮ ವೈದ್ಯರಲ್ಲಿ ಒಬ್ಬರು ಎಂಬ ಖ್ಯಾತಿ ಹೊಂದಿದ್ದಾರೆ. ಈಗ ಅವರು ಕೆಸಿ ರಾಣಿ ರಸ್ತೆಯಲ್ಲಿ ‘ರೇಣುಕಾ’ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ, ಅಲ್ಲಿ ಅವರು ದಿನಕ್ಕೆ 25-30 ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಬಡವರಿಂದ ಅವರು ಯಾವುದೇ ಶುಲ್ಕ ಪಡೆಯುವುದಿಲ್ಲ. 

ಯಾವಾಗಲೂ ನಗು ಮುಖದಿಂದ ಚಿಕಿತ್ಸೆ ನೀಡುವ ಅವರು, ಬೇಗನೆ ಗುಣಮುಖರಾಗಲು ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಾರೆ ಎಂದು ಅವರ ರೋಗಿಗಳು ಹೇಳುತ್ತಾರೆ. ಅವರ ಕೈಗಳಲ್ಲಿ ಮ್ಯಾಜಿಕ್ ಇದೆ, ಅದಕ್ಕಾಗಿಯೇ ಕಾಯಿಲೆಗಳಿಂದ ವಾಸಿಯಾಗಿದ್ದೇವೆ. ಇದಲ್ಲದೆ, ಅವರು ರೋಗಿಗಳನ್ನು ತಮ್ಮವರೆಂದು ಪರಿಗಣಿಸುತ್ತಾರೆ. ಸಹೋದರನಂತೆ ನೋಡಿಕೊಳ್ಳುತ್ತಾರೆ ಎಂದು ರೋಗಿಯೊಬ್ಬರು ಹೇಳಿದರು. 

ಡಾ. ಬಿದಿನ್ಹಾಳ್ ಸಮಾಜ ಪರ ಕೆಲಸಗಳಲ್ಲಿ ತೂಡಗಿಸಿಕೊಂಡಿದ್ದಾರೆ. ದಿವ್ಯಾಂಗ ಮಕ್ಕಳಿಗೆ ಅವರ ಅಗತ್ಯತೆಗಳು ಮತ್ತು ಶಿಕ್ಷಣಕ್ಕಾಗಿ ವಿವಿಧ ಸಾಧನಗಳನ್ನು ಖರೀದಿಸಲು ನೆರವಾಗಿದ್ದಾರೆ. ಮತ್ತೊಂದೆಡೆ ಗದಗ ಹೊರಾಂಗಣ ಕ್ರೀಡಾಂಗಣದಲ್ಲಿ ನಿತ್ಯ ವ್ಯಾಯಾಮ ಮಾಡುವ ಅವರು ಒಂದು ಗಂಟೆ ಓಡುತ್ತಾರೆ. ಆರೋಗ್ಯದ ಕಡೆಯ ಬದ್ಧತೆಯಿಂದಾಗಿ ಅವರು ಆಂಧ್ರಪ್ರದೇಶ ಒಲಿಂಪಿಕ್ಸ್‌ನಲ್ಲಿ ವಾಕಥಾನ್, 100-ಮೀಟರ್ ರಿಲೇ ಮತ್ತು 10 ಕಿಮೀ ಮ್ಯಾರಥಾನ್‌ನಲ್ಲಿ ಮೊದಲ ಸ್ಥಾನ ಪಡೆದರು. ಅವರು  ಕರ್ನಾಟಕ ಮತ್ತು ಗದಗಕ್ಕೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದು, ಅನೇಕ ಯುವಕರು ಮತ್ತು ಹಿರಿಯರಿಗೆ ಪ್ರೇರಣೆಯಾಗಿದ್ದಾರೆ. ವಾಪಸ್ಸಾದ ಅವರಿಗೆ ಜಿಲ್ಲೆಯ ಜನರಿಂದ ಅದ್ಧೂರಿ ಸ್ವಾಗತ ದೊರೆಯಿತು. ಗದಗ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಅವರಿಗೆ ನವೆಂಬರ್ 30 ರಂದು ಕ್ರೀಡಾಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.

<strong>ಡಾ. ಜಿ.ಬಿ.ಬಿದಿನ್ಹಾಳ್</strong>
ಡಾ. ಜಿ.ಬಿ.ಬಿದಿನ್ಹಾಳ್

ಪರ್ಯಾಯವಾಗಿ, ಅವರು ಬೇಸಾಯ ಮತ್ತು ಸಸಿ ನೆಡುವ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಸರ್ಜನ್ ಆಗಿ ಹಗಲಿನ ಕೆಲಸದ ನಂತರ ತನ್ನ ಜಮೀನಿಗೆ ಭೇಟಿ ನೀಡುತ್ತಾರೆ. ರೈತ ಪಾಲಕರಾದ ಭರಮಪ್ಪ ಮತ್ತು ಭರಮವ್ವ ದಂಪತಿಗೆ ಜನಿಸಿ ಎಂಎಸ್ ಮುಗಿಸಿರುವ ಬಿದಿನ್ಹಾಳ್ ಶಸ್ತ್ರ ಚಿಕಿತ್ಸಕರಾಗಿ ವೃತ್ತಿ ಜೀವನ ಆರಂಭಿಸಿದ ಮೇಲೂ ಕೃಷಿ ಬೇರುಗಳನ್ನು ಮರೆಯಲಿಲ್ಲ. ಕೃಷಿಯಲ್ಲಿನ ಅವರ ತೀವ್ರ ಆಸಕ್ತಿಯಿಂದಾಗಿ ಬೆಳೆಗಳು ಮತ್ತು ಪ್ರಸ್ತುತ ಮಾರುಕಟ್ಟೆ ಬೆಲೆಯ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳೆಗಳ ಬೆಲೆಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಹಿಡಿದು ರೈತರಿಗೆ ಉತ್ತಮ ಬೆಲೆಗಳು ಮತ್ತು ಮಾರಾಟ ಮಾಡುವ ಸ್ಥಳಗಳ ಬಗ್ಗೆ ಸಲಹೆಗಳನ್ನು ನೀಡುವವರೆಗೆ, ಆಳವಾದ ಜ್ಞಾನವನ್ನು ಹೊಂದಿದ್ದಾರೆ. ಉದಾಹರಣೆಗೆ, ಕಳೆದ ವರ್ಷ ಮೆಣಸಿನಕಾಯಿ ಬೆಳೆದ ರೈತರು ನಷ್ಟ ಅನುಭವಿಸಿದಾಗ ಉತ್ತಮ ಬೆಲೆಗೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತೆ ಸಲಹೆ ನೀಡಿದ್ದರು. 

ಗದಗದ ಹೊಟೇಲ್ ಉದ್ಯಮಿ ಕಲಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ್ ಮಾತನಾಡಿ, ಕಳೆದ ಮೂರು ದಶಕಗಳಿಂದ ಬಿದಿನ್ಹಾಳ್ ನನಗೆ ಗೊತ್ತು. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಾ, ಕಷ್ಟದಲ್ಲಿರುವವರಿಗೆ ಸಾಕಷ್ಟು ಸಾಲ ಕೊಟ್ಟಿದ್ದಾರೆ.  ಅನಾರೋಗ್ಯಕ್ಕೆ ಒಳಗಾದಾಗ, ಅವರ ಬಳಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ. ಇಡೀ ಗದಗ ತಾಲ್ಲೂಕು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಅವರು ರೋಗಿಗಳಿಗೆ ನೆಚ್ಚಿನ ವೈದ್ಯರಾಗಿದ್ದಾರೆ ಎಂದು ತಿಳಿಸಿದರು. 

 68 ವರ್ಷ ವಯಸ್ಸಿನ ಮತ್ತು ಇನ್ನೂ ಜಮೀನಿನಲ್ಲಿ ಕೆಲಸ ಮಾಡುವ ಸರ್ಜನ್ ಅವರನ್ನು ನೋಡಿಲ್ಲ ಗದಗದ ನಿವೃತ್ತ ಪ್ರಾಧ್ಯಾಪಕ ಶರಣಬಸವ ವೆಂಕಟಾಪುರ ಹೇಳಿದರು. 

ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ  ಬಿದಿನ್ಹಾಳ್, ಹೃದಯದಿಂದ ರೈತ ಆದರೆ ವೈದ್ಯರಾಗಿ ಕೆಲಸ ಮಾಡಲು ಆಯ್ಕೆ ಮಾಡಿಕೊಂಡಿದ್ದೇನೆ. ಗದ್ದೆಯಲ್ಲಿ ಕೆಲಸ ಮಾಡುವುದರಿಂದ ಆತ್ಮ ತೃಪ್ತಿ ಸಿಗುತ್ತದೆ. ಜಮೀನಿನಲ್ಲಿ ಮೆಣಸಿನಕಾಯಿ, ಈರುಳ್ಳಿ, ಹತ್ತಿ ಬೆಳೆದಿದ್ದೇನೆ. ಸರ್ಜನ್ ಆಗಿದ್ದರೂ ಕೃಷಿ ನನ್ನ ಜೀವನದ ಒಂದು ಭಾಗವಾಗಿದೆ ಮತ್ತು ನನ್ನ ಹೆತ್ತವರ ವೃತ್ತಿಯನ್ನು ನಾನು ತ್ಯಜಿಸಲಾರೆ. ಬೆಳೆಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡುವ ಸ್ಥಳಗಳು ನನಗೆ ತಿಳಿದಿದೆ. ರೋಗಿಗಳ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದ ಹೇಳುತ್ತೇನೆ. ಅವರ ಹೊಗಳಿಕೆಯನ್ನು ಮೆಚ್ಚುತ್ತೇನೆ ಆದರೆ ನಾನು ವೈದ್ಯರಾಗಿ ನನ್ನ ಕರ್ತವ್ಯವನ್ನು ಮಾತ್ರ ನಿರ್ವಹಿಸಿದ್ದೇನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com