ಹಾವೇರಿಯ ಪ್ರಸಿದ್ದ ಏಲಕ್ಕಿ ಹಾರ: ಇಂದಿನವರೆಗೆ ಎಲ್ಲಾ ಪ್ರಧಾನಿಗಳ ಕೊರಳನ್ನು ಅಲಂಕರಿಸಿರುವ ಹೆಗ್ಗಳಿಕೆ!

ಹಾವೇರಿಯ ಸಾಂಪ್ರದಾಯಿಕ ಏಲಕ್ಕಿ ಹಾರಗಳು ಜನಪ್ರಿಯತೆ ಪಡೆದಿವೆ. ಇಲ್ಲಿನ ಕುಟುಂಬವೊಂದು ದಶಕಗಳಿಂದ ಈ ಹಾರಗಳನ್ನು ಘಮ ಘಮ ಸುವಾಸನೆಯೊಂದಿಗೆ ತಯಾರಿಸುತ್ತಿದೆ.
ಸಾಂಪ್ರದಾಯಿಕ ಏಲಕ್ಕಿ ಮಾಲೆ
ಸಾಂಪ್ರದಾಯಿಕ ಏಲಕ್ಕಿ ಮಾಲೆ
Updated on

ಹಾವೇರಿ: 1990ರ ದಶಕದ ಉತ್ತರಾರ್ಧದಲ್ಲಿ ಹೊಸಮನಿ ಸಿದ್ದಪ್ಪ ಹಾವೇರಿ ಸಂಸದರಾಗಿದ್ದಾಗ ಪ್ರಧಾನಿ ಅಟಲ್ ಬಿಜಾರಿ ವಾಜಪೇಯಿ ಅವರನ್ನು ಅಭಿನಂದಿಸಲು ನವದೆಹಲಿಗೆ ತೆರಳಿದ್ದರು. ಕೈಯಲ್ಲಿ ಸಾಂಪ್ರದಾಯಿಕ ಮಾಲೆ ಹಿಡಿದು ಸರದಿಗಾಗಿ ಕಾಯುತ್ತಿದ್ದರು. ಕೈಯಲ್ಲಿ ಹಾರವನ್ನು ಹಿಡಿದಿದ್ದ ಕರ್ನಾಟಕದ ಸಂಸದರನ್ನು ಕರೆಯುವಂತೆ ವಾಜಪೇಯಿ ಅವರು ಭದ್ರತಾ ಸಿಬ್ಬಂದಿಗೆ ಹೇಳಿದದ್ದು, ಸಿದ್ದಪ್ಪ ಅವರಿಗೂ ಅಚ್ಚರಿ ತಂದಿತ್ತು. ಹೀಗೆ ಹಾವೇರಿಯ ಸಾಂಪ್ರದಾಯಿಕ ಏಲಕ್ಕಿ ಹಾರಗಳು ಜನಪ್ರಿಯತೆ ಪಡೆದಿವೆ.

ಇಲ್ಲಿನ ಕುಟುಂಬವೊಂದು ದಶಕಗಳಿಂದ ಈ ಹಾರಗಳನ್ನು ಘಮ ಘಮ ಸುವಾಸನೆಯೊಂದಿಗೆ ತಯಾರಿಸುತ್ತಿದೆ. ಸ್ವಾತಂತ್ರ್ಯದ ನಂತರ ಕುಟುಂಬ ಏಲಕ್ಕಿಯನ್ನು ಬಳಸಿ ಸಣ್ಣ ಹೂಮಾಲೆ ತಯಾರಿಸಲು ಪ್ರಾರಂಭಿಸಿತು. ತದನಂತರ ಹಿಂತಿರುಗಿ ನೋಡಲಿಲ್ಲ. ಇಂದು ಹಾಜಿ ಉಸ್ಮಾನ್ ಸಾಹೇಬ್ ಪಟವೇಗಾರ್ ನಡೆಸುತ್ತಿರುವ ಈ ಘಟಕದಲ್ಲಿ 150 ರೂ. ನಿಂದ 65,000 ರೂ. ವರೆಗಿನ ಹಾರಗಳು ಲಭ್ಯವಿವೆ.

ಪಟವೇಗಾರ್ ತಮ್ಮ ವಿಶಿಷ್ಟವಾದ ಸಾಂಪ್ರದಾಯಿಕ ಮಾಲೆಗಳಿಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವರ್ಣರಂಜಿತ ಎಳೆಗಳನ್ನು ಬಳಸಿ ರಚಿಸಲಾಗುವ ಸಾಂಪ್ರದಾಯಿಕ 'ಗೊಂಡೆ' ತಯಾರಿಸಲು ನಮ್ಮ ಪೂರ್ವಜನರು ರಾಜ ಮನೆತನಗಳು, ದೇವಾಲಯಗಳು ಮತ್ತು ದರ್ಗಾಗಳೊಂದಿಗೆ ಶತಮಾನಗಳಿಂದಲೂ ಕೆಲಸ ಮಾಡಿರುವುದಾಗಿ ಅವರು ಹೇಳುತ್ತಾರೆ. ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಏಲಕ್ಕಿ ಹಾರಕ್ಕೆ ಬೇಡಿಕೆ ಹೆಚ್ಚಿತು. ಮೂರು ದಿನಗಳ ಕಾರ್ಯಕ್ರಮಕ್ಕಾಗಿ ಕುಟುಂಬವು 1,000 ಹಾರಗಳನ್ನು ಮಾಡಿದೆ.

<strong>ಮಾಲೆ ಅಲಂಕರಿಸುತ್ತಿರುವ ಹಾಜಿ ಉಸ್ಮಾನ್ ಸಾಹೇಬ್ ಪಟವೇಗಾರ್</strong>
ಮಾಲೆ ಅಲಂಕರಿಸುತ್ತಿರುವ ಹಾಜಿ ಉಸ್ಮಾನ್ ಸಾಹೇಬ್ ಪಟವೇಗಾರ್

ಅಗತ್ಯದ ಆಧಾರದ ಮೇಲೆ ಹಾರಗಳನ್ನು ತಯಾರಿಸಲಾಗುತ್ತದೆ. ಕೆಲವು ಸಂಸ್ಥೆಗಳು ವಿವಿಧ ಬಣ್ಣ ಮತ್ತು ಹಾರಗಳ ಆಕಾರವನ್ನು ಬಯಸುತ್ತವೆ. ಜವಾಹರಲಾಲ್ ನೆಹರೂ ಅವರಿಂದ ಹಿಡಿದು ನರೇಂದ್ರ ಮೋದಿಯವರವರೆಗೆ ಭಾರತದ ಎಲ್ಲಾ ಪ್ರಧಾನ ಮಂತ್ರಿಗಳು ನಮ್ಮ ಹಾರಗಳನ್ನು ತೊಟ್ಟಿದ್ದಾರೆ ಎಂಬುದಕ್ಕೆ ಹೆಮ್ಮೆಪಡುತ್ತೇವೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಅನೇಕ ಭಾರತೀಯ ಮತ್ತು ವಿದೇಶಿ ಗಣ್ಯರಿಗೆ ಏಲಕ್ಕಿ ಹಾರಯನ್ನು ಹಾಕಲಾಗಿದೆ ಎಂದು ಪಾಟವೇಗಾರ್ ಹೇಳಿದರು.

ಪಟವೇಗರ ಕುಟುಂಬದ ಅನೇಕ ಸದಸ್ಯರು ಹಾರ ತಯಾರಿಕೆಯಲ್ಲಿ ಕೈಜೋಡಿಸುತ್ತಾರೆ. ಇಂದು ಧಾರವಾಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೇ ಹಾರವನ್ನು ಕಳುಹಿಸಲಾಗಿದೆ. ಕಳೆದ ತಿಂಗಳು ಕರ್ನಾಟಕದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸನ್ಮಾನಿಸಲು ಸ್ಥಳೀಯ ಸಂಸ್ಥೆಯೊಂದರ ಬೇಡಿಕೆ ಮೇರೆಗೆ 25 ಸಾವಿರ ರೂ.ಗಳ ಹಾರ ತಯಾರಿಸಲಾಗಿತ್ತು ಎಂದು ಅವರು ತಿಳಿಸಿದರು. 

ಪಟವೇಗರ ಮಗ ಹೈದರ್ ಅಲಿ ಮಾತನಾಡಿ,  ಹಾರಗಳ ಜೊತೆಗೆ ಏಲಕ್ಕಿ ಪೇಟಾಕ್ಕೂ ಬೇಡಿಕೆಯಿದೆ ಎನ್ನುತ್ತಾರೆ. ರಾಜಕಾರಣಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಸುಮಾರು 2,000 ರೂಪಾಯಿಗಳ ಬೆಲೆಯ ಇಂತಹ ಹಲವಾರು ಪೇಟಾಗಳನ್ನು ಕೇಳಲಾಗುತ್ತದೆ. ಹಾವೇರಿಗೆ ಬರುವ ಅನೇಕ ಜನರು ಮತ್ತು ಪ್ರವಾಸಿಗರು ಮಾಲೆಗಳನ್ನು ಕೇಳಿ ಖರೀದಿಸುತ್ತಾರೆ. ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಭಾಗಗಳಿಂದ ಖರೀದಿಸಿದ ಉತ್ತಮ ಗುಣಮಟ್ಟದ ಏಲಕ್ಕಿಯನ್ನು ಆಯ್ಕೆ ಮಾಡಿರುವುದರಿಂದ ಹಾವೇರಿಯಲ್ಲಿ ತಯಾರಿಸಿದ ಹಾರಗಳು ವಿಶಿಷ್ಟವಾದ ಪರಿಮಳವನ್ನು ಹೊಂದಿವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com