'ದಸರಾ ಗೊಂಬೆ'ಗಳಾಗಿ ವಿಜೃಂಭಿಸಿದ ಸಂವಿಧಾನ ಸಭೆಯ 15 ಮಹಿಳಾ ಸದಸ್ಯರು: ಬೆಂಗಳೂರಿನಲ್ಲಿ ಪ್ರದರ್ಶನ

ರಾಜಕೀಯ ಮತ್ತು ನೀತಿ ನಿರೂಪಣೆಯಲ್ಲಿ ಯುವಜನತೆ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ಬೆಂಗಳೂರಿನ ತಂಡವೊಂದು ಯುವ ನಾಗರಿಕರಿಗೆ ಸಂವಿಧಾನ ಮತ್ತು ಅದರ ಮೌಲ್ಯಗಳ ಬಗ್ಗೆ ಶಿಕ್ಷಣ ನೀಡುವ ಸೃಜನಶೀಲ ಮಾರ್ಗಗಳನ್ನು ಅನ್ವೇಷಿಸುತ್ತಿದೆ. 
ಸರೋಜಿನಿ ನಾಯ್ಡು, ಅಮ್ಮು ಸ್ವಾಮಿನಾಥನ್, ದಾಕ್ಷಾಯಣಿ ವೇಲಾಯುಧನ್ ಬೇಗಂ ಐಜಾಜ್ ರಸೂಲ್, ದುರ್ಗಾಬಾಯಿ ದೇಶಮುಖ್, ಹಂಸಾ ಮೆಹ್ತಾ, ಕಮಲಾ ಚೌಧರಿ, ಲೀಲಾ ರಾಯ್, ಮಾಲತಿ ಚೌಧರಿ, ಪೂರ್ಣಿಮಾ ಬ್ಯಾನರ್ಜಿ, ರಾಜಕುಮಾರಿಯರ ದಸರಾ ಬೊಂಬೆಗಳು
ಸರೋಜಿನಿ ನಾಯ್ಡು, ಅಮ್ಮು ಸ್ವಾಮಿನಾಥನ್, ದಾಕ್ಷಾಯಣಿ ವೇಲಾಯುಧನ್ ಬೇಗಂ ಐಜಾಜ್ ರಸೂಲ್, ದುರ್ಗಾಬಾಯಿ ದೇಶಮುಖ್, ಹಂಸಾ ಮೆಹ್ತಾ, ಕಮಲಾ ಚೌಧರಿ, ಲೀಲಾ ರಾಯ್, ಮಾಲತಿ ಚೌಧರಿ, ಪೂರ್ಣಿಮಾ ಬ್ಯಾನರ್ಜಿ, ರಾಜಕುಮಾರಿಯರ ದಸರಾ ಬೊಂಬೆಗಳು
Updated on

ಬೆಂಗಳೂರು: ರಾಜಕೀಯ ಮತ್ತು ನೀತಿ ನಿರೂಪಣೆಯಲ್ಲಿ ಯುವಜನತೆ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ಬೆಂಗಳೂರಿನ ತಂಡವೊಂದು ಯುವ ನಾಗರಿಕರಿಗೆ ಸಂವಿಧಾನ ಮತ್ತು ಅದರ ಮೌಲ್ಯಗಳ ಬಗ್ಗೆ ಶಿಕ್ಷಣ ನೀಡುವ ಸೃಜನಶೀಲ ಮಾರ್ಗಗಳನ್ನು ಅನ್ವೇಷಿಸುತ್ತಿದೆ. 

ರಿಕ್ಲೈಮ್ ಕಾನ್ಸ್ಟಿಟ್ಯೂಷನ್ ಪ್ರಾಜೆಕ್ಟ್ ನಗರದ ವಿವಿಧ ಭಾಗಗಳಲ್ಲಿ ದಸರಾ ಗೊಂಬೆಗಳನ್ನು ಪ್ರದರ್ಶಿಸುತ್ತದೆ. ಅದರಲ್ಲಿ ಸಂವಿಧಾನ ಸಭೆಯ 15 ಮಹಿಳಾ ಸದಸ್ಯರ ಕೊಡುಗೆಗಳನ್ನು ಉಲ್ಲೇಖಿಸಲಿದೆ- ಇವರು ಭಾರತ ಸಂವಿಧಾನ ರಚನೆ ಮತ್ತು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. 

ರಿಕ್ಲೈಮ್ ಕಾನ್ಸ್ಟಿಟ್ಯೂಷನ್ ನ ಸಂಸ್ಥಾಪಕ ವಿನಯ್ ಕುಮಾರ್, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡಿ, “ದೇಶದ ಯುವಜನತೆಯಲ್ಲಿ ರಾಜಕೀಯದಲ್ಲಿ ಆಸಕ್ತಿಯ ಕೊರತೆ ನಾವು ನೋಡುತ್ತೇವೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹೆಚ್ಚಿನ ಶೇಕಡಾವಾರು ಜನರು 50 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದವರು. ಇಂತಹ ಸೃಜನಾತ್ಮಕ ಉಪಕ್ರಮಗಳ ಮೂಲಕ, ದೇಶದ ಬಗ್ಗೆ ನಮಗೆ ಜವಾಬ್ದಾರಿ ಇದೆ ಎಂದು ಯುವಕರು ಅರಿತುಕೊಳ್ಳಬೇಕೆಂದು ನಾನು ಬಯಸುತ್ತೇನೆ.
ಸಾಂವಿಧಾನಿಕ ಪುಸ್ತಕವನ್ನು ಬರೆಯಲು ಸಾಮಾನ್ಯ ವರ್ಗದ ಜನರು ಒಗ್ಗೂಡಿ ಅದರಲ್ಲಿ ಖುಷಿ ಕಂಡುಕೊಳ್ಳಬೇಕು. ದಸರಾವನ್ನು ಕೇವಲ ವೈಯಕ್ತಿಕ ಮನೆಗಳಲ್ಲಿ ಮಾತ್ರ ಮಾಡದೆ ಸಮುದಾಯದ ಕಾರ್ಯಕ್ರಮವನ್ನಾಗಿ ಮಾಡುವ ಆಲೋಚನೆಯೂ ಇದೆ. ಈ ಉಪಕ್ರಮವು ಕರ್ನಾಟಕ ಮತ್ತು ರಾಷ್ಟ್ರದಲ್ಲಿ ವೈವಿಧ್ಯತೆಯನ್ನು ಉತ್ತೇಜಿಸುತ್ತದೆ ಎಂದರು.

“ಕೇವಲ ಧಾರ್ಮಿಕ ವ್ಯಕ್ತಿಗಳಲ್ಲ, ನಮ್ಮಲ್ಲಿ ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗಳೂ ಇವೆ. ಬೌದ್ಧ, ಜೈನ, ಕ್ರೈಸ್ತ ಮತ್ತು ಹಿಂದೂ ಧರ್ಮವನ್ನು ಪ್ರತಿನಿಧಿಸುವ ಗೊಂಬೆಗಳು ಸಹ ಪ್ರದರ್ಶನದಲ್ಲಿ ಇರುತ್ತವೆ ಎಂದು ಕುಮಾರ್ ಹೇಳಿದರು. ನಾಗರಿಕರು ಸಹ ಭಾಗವಹಿಸಬಹುದು. ಗೊಂಬೆಗಳನ್ನು ತಮ್ಮ ಸಂಘಗಳು ಮತ್ತು ಸಮಿತಿಗಳಲ್ಲಿ ಪ್ರದರ್ಶನಕ್ಕೆ ಇಡಬಹುದು, ಅದನ್ನು ರಿಕ್ಲೈಮ್ ಸಂವಿಧಾನದ ವೆಬ್‌ಸೈಟ್‌ನಿಂದ ಪಡೆಯಬಹುದು ಎಂದು ವಿವರಿಸಿದರು. 

15 ಮಹಿಳೆಯರ ಗೊಂಬೆಗಳಲ್ಲಿ ಸರೋಜಿನಿ ನಾಯ್ಡು, ಅಮ್ಮು ಸ್ವಾಮಿನಾಥನ್, ದಾಕ್ಷಾಯಣಿ ವೇಲಾಯುಧನ್, ಬೇಗಂ ಐಜಾಜ್ ರಸೂಲ್, ದುರ್ಗಾಬಾಯಿ ದೇಶಮುಖ್, ಹಂಸಾ ಮೆಹ್ತಾ, ಕಮಲಾ ಚೌಧರಿ, ಲೀಲಾ ರಾಯ್, ಮಾಲತಿ ಚೌಧರಿ, ಪೂರ್ಣಿಮಾ ಬ್ಯಾನರ್ಜಿ, ರಾಜಕುಮಾರಿ ಅಮೃತ್ ಕೌರ್, ರೇಣುಕಾ ಲಕ್ಷ್ಮಿ, ರೇಣುಕಾ ಲಕ್ಷ್ಮಿ ಪಂಡಿತ್ ಮತ್ತು ಅನ್ನಿ ಮಸ್ಕರೇನ್, ಜೊತೆಗೆ ಅಂಬೇಡ್ಕರ್ ಪ್ರತಿಮೆ ಮತ್ತು ಭಾರತದ ಸಂವಿಧಾನದ ಮೂರ್ತಿಗಳೂ ಇವೆ. 

ಭಾರತದ ಸಂವಿಧಾನದ 75 ನೇ ವರ್ಷದ ನೆನಪಿಗಾಗಿ ಸಂವಿಧಾನದ ಗೊಂಬೆಗಳು ಮುಂದಿನ ವರ್ಷ ಪ್ರವಾಸಿ ಪ್ರದರ್ಶನವಾಗಲಿದೆ. ಮೈಸೂರು ರಸ್ತೆಯ ಜಾನಪದ ಲೋಕದಲ್ಲಿ ಒಂದು ತಿಂಗಳ ಕಾಲ ಹಾಗೂ ನಗರದ ಸುತ್ತಮುತ್ತಲಿನ ಕಾಲೇಜುಗಳು ಮತ್ತು ವಸ್ತುಪ್ರದರ್ಶನ ಕೇಂದ್ರಗಳಲ್ಲಿ ಗೊಂಬೆಗಳು ಸಾರ್ವಜನಿಕರಿಗೆ ಪ್ರದರ್ಶನಗೊಳ್ಳಲಿವೆ. 15 ಮಹಿಳೆಯರ ಗೊಂಬೆ ಸೆಟ್ ತಯಾರಿಸಲು 20 ದಿನಗಳನ್ನು ತೆಗೆದುಕೊಂಡಿತು. ಚಿತ್ರಕಲಾ ಪರಿಷತ್ತಿನ ಕಲಾವಿದರು, ನಂದ ಗಿರೀಶ್, ಗಿರೀಶ್ ಎಸ್, ರಾಜು ಮತ್ತು ಫಾಸ್ಟಿನ್ ಪೆಡ್ರೋಸ್ ಈ ಯೋಜನೆಯ ಸಕ್ರಿಯ ಭಾಗವಾಗಿದ್ದಾರೆ ಎಂದು ವಿನಯ್ ಕುಮಾರ್ ಮಾಹಿತಿ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com