ದಸರಾ ಬೊಂಬೆ
ದಸರಾ ಬೊಂಬೆ

ದಸರಾ ಬೊಂಬೆ: ಮನೆಗೆ ಕಳೆ, ಸಂಪ್ರದಾಯ ಹೆಸರಲ್ಲಿ ಕಲೆ ಪ್ರದರ್ಶನಕ್ಕೆ ವೇದಿಕೆ

ನವರಾತ್ರಿ ಅಂದರೆ ದಸರಾ ಹಬ್ಬವನ್ನು ದೇಶದಾದ್ಯಂತ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ, ಪ್ರತಿಯೊಂದೂ ಒಂದಕ್ಕಿಂತ ಒಂದು ವಿಶಿಷ್ಟವಾಗಿದೆ. 
Published on

ಬೆಂಗಳೂರು: ನವರಾತ್ರಿ ಅಂದರೆ ದಸರಾ ಹಬ್ಬವನ್ನು ದೇಶದಾದ್ಯಂತ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ, ಪ್ರತಿಯೊಂದೂ ಒಂದಕ್ಕಿಂತ ಒಂದು ವಿಶಿಷ್ಟವಾಗಿದೆ. 

ಪೂರ್ವ ಭಾರತೀಯರು ಹಬ್ಬದ ಸಮಯದಲ್ಲಿ ಔತಣಕೂಟವನ್ನು ಏರ್ಪಡಿಸುವುದು, ಪಂಡಲ್ ಹಾಕಿ ಕುಣಿಯುವುದು ಇತ್ಯಾದಿ ಆಚರಣೆಗಳಲ್ಲಿ ತೊಡಗಿಕೊಂಡರೆ ಪಶ್ಚಿಮ ಭಾರತೀಯರು ಉಪವಾಸವಿದ್ದು, ಗರ್ಭಾ ಡ್ಯಾನ್ಸ್ ಗೆ ಖುಷಿಯಿಂದ, ಸಂತೋಷದಿಂದ ಕುಣಿಯುತ್ತಿರುತ್ತಾರೆ. ಉತ್ತರ ಭಾರತೀಯರು ರಾಮಾಯಣ ಕಥೆಗೆ ನಾಟಕ, ನೃತ್ಯ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ದಕ್ಷಿಣ ಭಾರತೀಯರು ತಾಯಿ ಚಾಮುಂಡಿಯನ್ನು ಪೂಜಿಸುತ್ತಾರೆ. 

ಮೈಸೂರು ದಸರಾ ಅಂಬಾರಿಗಿಂತಲೂ ದಸರಾದಲ್ಲಿ ಇನ್ನೂ ಹೆಚ್ಚಿನ ಆಚರಣೆಗಳಿವೆ. ಇದು ದಕ್ಷಿಣ ಭಾರತಕ್ಕೆ ವಿಶಿಷ್ಟವಾದ ಸಂಪ್ರದಾಯವಾಗಿದೆ, ದಕ್ಷಿಣ ಭಾರತೀಯರು ಮನೆಗಳನ್ನು ಮಣ್ಣಿನಿಂದ ಮಾಡಿದ ಸಾಂಪ್ರದಾಯಿಕ, ಪುರಾತನ ಮತ್ತು ಹಳೆಯ ಗೊಂಬೆಗಳಿಂದ ಅಲಂಕರಿಸಲಾಗುತ್ತದೆ, ಇದು ಪೀಳಿಗೆಯಿಂದ ಬಂದ ಆಚರಣೆಯಾಗಿರುತ್ತದೆ. ತಮ್ಮ ಬಾಲ್ಯದ ನೆನಪುಗಳನ್ನು ಸಂಪ್ರದಾಯಗಳಿಗೆ ಕಟ್ಟುತ್ತಾರೆ. ಜನರು ತಲೆಮಾರುಗಳಿಂದ ಜೀವಂತವಾಗಿರುವ ಅತ್ಯಂತ ವಿಶಿಷ್ಟವಾದ ಸಂಪ್ರದಾಯಗಳಲ್ಲಿ ಒಂದಾಗಿದೆ, ಇದು ವರ್ಷಗಳಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದೆ. ಪೌರಾಣಿಕ ಮಹಾಕಾವ್ಯಗಳ ದೃಶ್ಯಗಳನ್ನು ದಸರಾ ಆಚರಣೆಗಳಲ್ಲಿ ದಕ್ಷಿಣ ಭಾರತೀಯರು ಮರುಸೃಷ್ಟಿಸುತ್ತಾರೆ. ಅದು ಗೊಂಬೆಗಳನ್ನು ಕೂರಿಸುವ ಮೂಲಕ. 

ದಿವ್ಯಾ ತೇಜಸ್ವಿ ಅವರು ಗೊಂಬೆ ತಯಾರಿಸಿ ಅಲಂಕಾರ ಮಾಡುವ ಕೆಲಸದಲ್ಲಿ ತೊಡಗುತ್ತಿದ್ದು, ವಿಶೇಷವಾಗಿ ಗೊಂಬೆ ತಯಾರಿಕೆಯ ಆಧುನಿಕ ಕಲೆಯಲ್ಲಿ ಕೆಲಸ ಮಾಡುತ್ತಾರೆ, ಅವರು ತಮ್ಮ ತಾಯಿಯಿಂದ ಪಡೆದ ಈ ಕಲೆಯನ್ನು ದಸರಾ ಸಮಯದಲ್ಲಿ ವಿಷಯಾಧಾರಿತ ಗೊಂಬೆಗಳನ್ನು ಮರುಸೃಷ್ಟಿ ಮಾಡುತ್ತಾರೆ. ನವರಾತ್ರಿಯ ಗೊಂಬೆಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ನವದುರ್ಗೆಯ ಸೆಟ್ ಗಳು, ರಾಮಾಯಣ, ಮಹಾಭಾರತದ ದೃಶ್ಯಗಳು, ಕೃಷ್ಣ ಮತ್ತು ಯಶೋದೆ ನಡುವಿನ ದೃಶ್ಯಗಳು ಸೇರಿದಂತೆ ಹಲವು ವಿಷಯಗಳಲ್ಲಿ ಗೊಂಬೆಗಳು ರೂಪುಗೊಳ್ಳುತ್ತವೆ. 

ಈ ವರ್ಷ, ನವರಾತ್ರಿ ಗರ್ಬಾ ಗೊಂಬೆಗಳು ಮತ್ತು ರಾಸ್ ಲೀಲಾ, ಭಗವಾನ್ ಕೃಷ್ಣನ ಜೀವನದ ಅಧ್ಯಾಯಗಳ ಗೊಂಬೆಗಳಿಗೆ ಬೇಡಿಕೆ ಹೆಚ್ಚಾಗಿದೆ. ತಮ್ಮ ಪ್ರತಿಭೆಯ ಸೃಜನಶೀಲತೆಯನ್ನು ದಸರಾ ಬೊಂಬೆ ಕೂರಿಸುವುದರಲ್ಲಿ ತೋರಿಸುವ 67 ವರ್ಷದ ನಾಗಮಣಿಯವರು ತಮ್ಮ ದಸರಾ ಡೋಲು ಗೊಂಬೆಯ ಸೆಟ್‌ಗೆ ಉಣ್ಣೆಯ ಗೊಂಬೆಗಳನ್ನು ನೇಯ್ದಿದ್ದಾರೆ. ಈ ವರ್ಷದ ಅವರ ಸಂಪೂರ್ಣ ಸೆಟ್ ಕ್ರೋಚೆಟ್ ಮತ್ತು ನಾಟಿಂಗ್ ಬಳಸಿ ಮಾಡಿದ ಗೊಂಬೆಗಳಾಗಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com