ನೆರವಿನ ಹಸ್ತ: ವಿಧವೆ ಹಾಗೂ ಆಕೆಯ 5 ಮಕ್ಕಳಿಗಾಗಿ 10 ಲಕ್ಷ ರೂ. ವೆಚ್ಚದಲ್ಲಿ ಹೊಸ ಮನೆ ಕಟ್ಟಿಸಿಕೊಟ್ಟ ಪೊಲೀಸರು

ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಸಿಕೊಡುವ ಮೂಲಕ ತಾವೂ ಮನುಷ್ಯರು, ಮೃದು ಸ್ವಭಾವದವರು ಎಂಬುದನ್ನು ವಿರುದಾಚಲಂನ ಸ್ಥಳೀಯ ಪೊಲೀಸ್ ಇಲಾಖೆಯು ಸಾಬೀತು ಪಡಿಸಿದೆ.
ಮುತ್ತುಲಕ್ಷ್ಮಿ ಕುಟುಂಬಕ್ಕೆ ಮನೆ ಕೀ ಹಸ್ತಾಂತರಿಸಿದ ಎಸ್ ಪಿ ರಾಜಾರಾಂ
ಮುತ್ತುಲಕ್ಷ್ಮಿ ಕುಟುಂಬಕ್ಕೆ ಮನೆ ಕೀ ಹಸ್ತಾಂತರಿಸಿದ ಎಸ್ ಪಿ ರಾಜಾರಾಂ
Updated on

ಕಡಲೂರು(ತಮಿಳುನಾಡು): ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಸಿಕೊಡುವ ಮೂಲಕ ತಾವೂ ಮನುಷ್ಯರು, ಮೃದು ಸ್ವಭಾವದವರು ಎಂಬುದನ್ನು ವಿರುದಾಚಲಂನ ಸ್ಥಳೀಯ ಪೊಲೀಸ್ ಇಲಾಖೆಯು ಸಾಬೀತು ಪಡಿಸಿದೆ.

ವಿಧವೆ ಮತ್ತು ಆಕೆಯ ಐದು ಮಕ್ಕಳು ಸಂದಿಗ್ಧ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದರು. ಇದು ತಿಳಿದ ಪೊಲೀಸರು ಅವರಿಗೊಂದು ಮನೆ ಕಟ್ಟಿಸಿಕೊಡಲು ಹಣವನ್ನು ಸಂಗ್ರಹಿಸಿದರು. ನೆರವಿನ ಹಸ್ತ ಅಲ್ಲಿಗೆ ನಿಂತಿಲ್ಲ. ಏಕೆಂದರೆ ಅವರು ಮಕ್ಕಳ ಶಿಕ್ಷಣವನ್ನು ಪ್ರಾಯೋಜಿಸಲು ಒಪ್ಪಿಕೊಂಡಿದ್ದಾರೆ. ಕುಟುಂಬಕ್ಕೆ ಅಗತ್ಯವಾದ ಗೃಹೋಪಯೋಗಿ ವಸ್ತುಗಳನ್ನು ಸಹ ಒದಗಿಸಿದ್ದಾರೆ.

ಮಾರ್ಚ್ 18ರಂದು ವಿರುದಾಚಲಂನ ಮಣಲೂರಿನ ಕೂಲಿ ಕಾರ್ಮಿಕ 38 ವರ್ಷದ ಶಕ್ತಿವೇಲ್ ಅಪಘಾತದಲ್ಲಿ ಅಕಾಲಿಕ ನಿಧನ ಹೊಂದಿದ್ದರು. ಇದು ಕುಟುಂಬವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿತ್ತು. ಶಕ್ತಿವೆಲ್ ಅವರ ಪತ್ನಿ 36 ವರ್ಷದ ಎಸ್ ಮುತ್ತುಲಕ್ಷ್ಮಿ ಇಂತಹ ಸ್ಥಿತಿಯಲ್ಲಿ ತನ್ನ ಐದು ಮಕ್ಕಳನ್ನು ಪೋಷಿಸಲು ಕೂಲಿ ಕೆಲಸ ಮಾಡುತ್ತಿದ್ದರು.

ತಮ್ಮ ಕಷ್ಟವನ್ನು ಅರಿತ ಮುತಿಲಕ್ಷ್ಮಿ ವಿರುದಾಚಲಂ ಉಪವಿಭಾಗದ ಡಿಎಸ್ಪಿ ಎ ಆರೋಕಿಯರಾಜ್ ಅವರ ಸಹಾಯವನ್ನು ಕೋರಿದರು. ಆರೋಕಿಯರಾಜ್ ಅವರನ್ನು ಭೇಟಿ ಮಾಡಿದಾಗ ಮುತ್ತುಲಕ್ಷ್ಮಿ ತಾವು ಫ್ಲೆಕ್ಸ್ ಬ್ಯಾನರ್ ಶೀಟ್‌ಗಳಿಂದ ಮುಚ್ಚಿದ ಹಾನಿಗೊಳಗಾದ ಗುಡಿಸಿಲಿನಲ್ಲಿ ವಾಸಿಸುತ್ತಿರುವುದಾಗಿ ಹೇಳಿ ಕಣ್ಣೀರಿಟ್ಟರು. ಈ ಮಾತುಗಳನ್ನು ಕೇಳಿದ ಆರೋಕಿಯರಾಜ್ ಅವರು ಸಮಯ ವ್ಯರ್ಥ ಮಾಡದೆ ಕುಟುಂಬಕ್ಕೆ ಮನೆ ನಿರ್ಮಿಸಲು ಬೆಂಬಲವನ್ನು ಕೋರಿ ಪೊಲೀಸ್ ವಾಟ್ಸಾಪ್ ಗುಂಪು ಉತಾವುಂ ಕರಂಗಲ್ ಮೂಲಕ ತಮ್ಮ ಸಹೋದ್ಯೋಗಿಗಳನ್ನು ತಲುಪಿದರು.

ಈ ವೇಳೆ ಹಲವು ಸಾಮಾಜಿಕ ಕಾರ್ಯಕರ್ತರು ನೆರವಿನ ಹಸ್ತ ಚಾಚಿದರು. ಡಿಎಸ್ಪಿ ಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ತಿಂಡಿವನಂನ ವಸತಿ ಶಾಲೆಯಲ್ಲಿ ಶಿಕ್ಷಣವನ್ನು ಮುಂದುವರಿಸಲು ವ್ಯವಸ್ಥೆ ಮಾಡಿದರು. ಅದೇ ಸಮಯದಲ್ಲಿ ಇನ್ನುಳಿದ ಮೂರು ಹುಡುಗರನ್ನು ವಿರುದಾಚಲಂನ ಸ್ಥಳೀಯ ಸರ್ಕಾರಿ ಶಾಲೆಗೆ ಸೇರಿಸಿ ಅವರಿಗೆ ಅಗತ್ಯ ಅಧ್ಯಯನ ಸಾಮಗ್ರಿಗಳನ್ನು ಸಹ ನೀಡಿದರು.

10 ಲಕ್ಷ ಹಣ ಸಂಗ್ರಹಿಸಿ ಕೇವಲ ನಾಲ್ಕೇ ತಿಂಗಳಲ್ಲಿ ಮನೆ ನಿರ್ಮಾಣ ಮಾಡಲಾಗಿದ್ದು, ಬುಧವಾರ ಕಡಲೂರು SP ಆರ್.ರಾಜಾರಾಂ ಅವರಿಂದ ಮನೆಯ ಕೀ ಹಸ್ತಾಂತರಿಸಲಾಯಿತು. ಆರು ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಮನೆಗೆ ‘ಕರುಣೈ ಇಲ್ಲಂ’ ಎಂದು ನಾಮಕರಣ ಮಾಡಲಾಗಿದೆ. 'ಇದು ನಮ್ಮೆಲ್ಲರೊಳಗೆ ನೆಲೆಸಿರುವ ದಯೆ ಮತ್ತು ಅದನ್ನು ನಾವು ವ್ಯಕ್ತಪಡಿಸುವ ಗಮನಾರ್ಹ ವಿಧಾನಗಳನ್ನು ಒತ್ತಿಹೇಳುತ್ತದೆ. ಈ ಅನುಭವವು ಅವರ ಅತ್ಯಂತ ಸವಾಲಿನ ಸಮಯದಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡಲು ನಮಗೆ ಅವಕಾಶಗಳು ಕೊಟ್ಟಿದೆ ಎಂಬ ನಂಬಿಕೆಯನ್ನು ಬಲಪಡಿಸುತ್ತದೆ ಎಂದು ರಾಜಾರಾಮ್ ಹೇಳಿದರು.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಕ್ಕೆ ಮನೆ ಕಟ್ಟಿಸಿಕೊಟ್ಟು ಸುಮ್ಮನಾಗಲಿಲ್ಲ. ಮನೆಗೆ ಬೇಕಾದ ಅಗತ್ಯ ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ 2 ಲಕ್ಷ ರೂಪಾಯಿ ಮೌಲ್ಯದ ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಉದಾರವಾಗಿ ನೀಡಿದರು. ವಿರುದಾಚಲಂ ಉಪವಿಭಾಗದ ಇನ್‌ಸ್ಪೆಕ್ಟರ್‌ಗಳು ಮತ್ತು ಸಬ್‌ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಕುಟುಂಬಕ್ಕೆ ಬೆಂಬಲದ ಸಂಕೇತವಾಗಿ ಈ ವಸ್ತುಗಳನ್ನು ನೀಡಿದರು.

ಪೊಲೀಸ್ ಅಧಿಕಾರಿಗಳು ನನ್ನ ಮಕ್ಕಳ ಶಿಕ್ಷಣದ ಆರ್ಥಿಕ ಹೊರೆಯನ್ನು ಹೊತ್ತಿದ್ದಾರೆ. ನಮಗಾಗಿ ಹೊಸ ಮನೆಯನ್ನು ಕಟ್ಟಿಸಿಕೊಟ್ಟಿದ್ದಾರೆ. ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಪರಿವರ್ತಿಸಿದ ಡಿಎಸ್ಪಿ ಆರೋಕಿಯರಾಜ್ ಅವರ ಅವಿರತ ಪ್ರಯತ್ನಗಳಿಗಾಗಿ ನಾವು ಅವರಿಗೆ ಋಣಿಯಾಗಿದ್ದೇವೆ ಎಂದು ಮುತಿಲಕ್ಷ್ಮಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com