ಬೆಳಗಾವಿ: ದೇವದಾಸಿ ಪದ್ಧತಿಯನ್ನು ಶತಮಾನಗಳಿಂದಲೂ ದಕ್ಷಿಣ ಭಾರತದಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ ಪದ್ಧತಿ. ಹಿಂದೊಮ್ಮೆ ದೇವದಾಸಿಯರು ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಹೊಂದಿದ್ದರು. ಅನೇಕರು ಉನ್ನತ ಶಿಕ್ಷಣ ಪಡೆದಿದ್ದರು.
ಆದರೆ ಇನ್ನೂ ಹಲವು ಮಂದಿ ಇದೇ ಪದ್ಧತಿಯಲ್ಲಿ ಮುಂದುವರಿದುಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ. ಹೂವಕ್ಕ ಭೀಮಪ್ಪ ಎಂಬ ಮಹಿಳೆ ದೇವರ ಹೆಸರಲಿನಲ್ಲಿ ಹಲವಾರು ವರ್ಷಗಳಿಂದ ಈ ಲೈಂಗಿಕ ಗುಲಾಮಗಿರಿಯ ಭಾಗವಾಗಿ ಬದುಕುತ್ತಿದ್ದಾರೆ. ಸೀರೆ ಮತ್ತು ಚಿನ್ನಾಭರಣದ ಆಮೀಷ ಒಡ್ಡಿ ಆಕೆಯ ಚಿಕ್ಕಪ್ಪನೇ ಅತ್ಯಾಚಾರ ಮಾಡಿದ. ಇನ್ನೂ 10 ವರ್ಷ ವಯಸ್ಸು ತುಂಬಿರಲಿಲ್ಲ, ಹೂವಕ್ಕ ನನ್ನು ದೇವದಾಸಿಯನ್ನಾಗಿ ಮಾಡಲಾಯಿತು. ಪೋಷಕರು ಬಾಲಕಿಯರನ್ನು ಹಿಂದೂ ದೇವತೆ ಜೊತೆ ವಿವಾಹ ಮಾಡಿ ನಂತರ ದೇವದಾಸಿಯನ್ನಾಗಿಸುತ್ತಾರೆ, ಅದರಲ್ಲಿ ಹಲವರು ಅಕ್ರಮ ವೇಶ್ಯಾವಾಟಿಕೆಗೆ ಬಲಿಯಾಗುತ್ತಿದ್ದಾರೆ.
ದೇವದಾಸಿಯರು ಧಾರ್ಮಿಕ ಭಕ್ತಿಯ ಜೀವನವನ್ನು ನಿರೀಕ್ಷಿಸುತ್ತಾರೆ, ಈ ಆಚರಣೆಗೆ ಒಳಪಟ್ಟವರು ಮನುಷ್ಯರನ್ನು ಮದುವೆಯಾಗುವುದನ್ನು ನಿಷೇಧಿಸಲಾಗಿದೆ. ಪ್ರೌಢಾವಸ್ಥೆಯಲ್ಲಿ ಹಣ ಅಥವಾ ಉಡುಗೊರೆಗಳಿಗೆ ಪ್ರತಿಯಾಗಿ ತಮ್ಮ ಕನ್ಯತ್ವವನ್ನು ವಯಸ್ಸಾದ ವ್ಯಕ್ತಿಗೆ ತ್ಯಾಗ ಮಾಡುವಂತೆ ಒತ್ತಾಯಿಸಲಾಗುತ್ತದೆ. ಆದರೆ ನನ್ನ ಕನ್ಯತ್ವ ಕಳೆದದ್ದು ನನ್ನ ತಾಯಿಯ ಸಹೋದರ ಎಂದು 40 ವರ್ಷದ ಹೂವಕ್ಕ ಭೀಮಪ್ಪ ಹೇಳಿದ್ದಾರೆ.
ವರ್ಷಗಳ ಲೈಂಗಿಕ ಗುಲಾಮಗಿರಿ, ದೇವಿಯ ಸೇವೆಯ ಹೆಸರಿನಲ್ಲಿ ಇತರ ಪುರುಷರೊಂದಿಗೆ ಮಲಗಿ ಅದರ ಮೂಲಕ ಹಣ ಸಂಪಾದಿಸಿ ಕುಟುಂಬ ಸಾಕಬೇಕಾಗುತ್ತದೆ. ಕೆಲವು ದಿನಗಳ ನಂತರ ನಾನು ಈ ಪದ್ದತಿಯಿಂದ ಬಚಾವಾಗಿ ಬಂದೆ, ಆದರೆ ನನಗೆ ಶಿಕ್ಷಣವಿರಲಿಲ್ಲ, ಹೀಗಾಗಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡಿ ಜೀವನ ನಡೆಸಿದೆ. ಹಿಂದೂ ದೇವತೆ ಯಲ್ಲಮ್ಮನ ಭಕ್ತಳಾಗಿರುವ ಆಕೆಯನ್ನು ಸಮುದಾಯ ಬಹಿಷ್ಕರಿಸಿದೆ.
ನಾನು ಒಮ್ಮೆ ಒಬ್ಬ ವ್ಯಕ್ತಿಯನ್ನು ಪ್ರೀತಿಸಿದ್ದೆ, ಆದರೆ ಅವನನ್ನು ಮದುವೆಯಾಗಲು ಕೇಳುವ ಬಗ್ಗೆ ನನಗೆ ಯೋಚನೆ ಮಾಡಲಾಗಲಿಲ್ಲ, ನಾನು ದೇವದಾಸಿ ಅಲ್ಲದಿದ್ದರೆ, ನನಗೆ ಕುಟುಂಬ ಮತ್ತು ಮಕ್ಕಳು ಇರುತ್ತಿತ್ತು, ನನ್ನ ಬಳಿಯೂ ಸ್ವಲ್ಪ ಹಣವಿದ್ದು, ನಾನು ಚೆನ್ನಾಗಿ ಬದುಕುತ್ತಿದ್ದೆ ಎಂದು ಅವರು ಹೇಳಿದರು.
ದೇವದಾಸಿಯರು ಶತಮಾನಗಳಿಂದ ದಕ್ಷಿಣ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ಒಮ್ಮೆ ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಹೊಂದಿದ್ದರು. ಅನೇಕರು ಉನ್ನತ ಶಿಕ್ಷಣ ಪಡೆದರು, ಶಾಸ್ತ್ರೀಯ ನೃತ್ಯ ಮತ್ತು ಸಂಗೀತದಲ್ಲಿ ತರಬೇತಿ ಪಡೆದರು, ಆರಾಮದಾಯಕ ಜೀವನವನ್ನು ನಡೆಸಿದರು. ಮತ್ತೆ ಕೆಲವರು ತಮ್ಮದೇ ಆದ ಲೈಂಗಿಕ ಪಾಲುದಾರರನ್ನು ಆರಿಸಿಕೊಂಡರು.
ಧಾರ್ಮಿಕವಾಗಿ ಅನುಮೋದಿಸಲಾದ ಲೈಂಗಿಕ ಗುಲಾಮಗಿರಿಯ ಈ ಕಲ್ಪನೆಯು ಮೂಲ ವ್ಯವಸ್ಥೆಯ ಭಾಗವಾಗಿರಲಿಲ್ಲ ಎಂದು ಇತಿಹಾಸಕಾರ ಗಾಯತ್ರಿ ಅಯ್ಯರ್ ಹೇಳಿದ್ದಾರೆ. 19 ನೇ ಶತಮಾನದಲ್ಲಿ, ಬ್ರಿಟಿಷ್ ವಸಾಹತುಶಾಹಿ ಯುಗದಲ್ಲಿ, ದೇವದಾಸಿ ಮತ್ತು ದೇವಿಯ ನಡುವಿನ ದೈವಿಕ ಒಪ್ಪಂದವು ಲೈಂಗಿಕ ಶೋಷಣೆಯ ಸಂಸ್ಥೆಯಾಗಿ ವಿಕಸನಗೊಂಡಿತು ಎಂದು ಅಯ್ಯರ್ ಹೇಳಿದರು. ಇದು ಈಗ ಭಾರತದ ಕಟ್ಟುನಿಟ್ಟಿನ ಜಾತಿ ಶ್ರೇಣಿಯ, ತಳಭಾಗದಿಂದ ಬಡತನದಿಂದ ಬಳಲುತ್ತಿರುವ ಕುಟುಂಬಗಳಿಗೆ ತಮ್ಮ ಹೆಣ್ಣುಮಕ್ಕಳ ಜವಾಬ್ದಾರಿಯಿಂದ ತಮ್ಮನ್ನು ಮುಕ್ತಗೊಳಿಸಲು ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ.
1982 ರಲ್ಲಿ ಭೀಮಪ್ಪ ಅವರ ತವರು ರಾಜ್ಯವಾದ ಕರ್ನಾಟಕದಲ್ಲಿ ಈ ಅಭ್ಯಾಸವನ್ನು ಕಾನೂನುಬಾಹಿರಗೊಳಿಸಲಾಯಿತು. ಸರ್ವೋಚ್ಚ ನ್ಯಾಯಾಲಯವು ದೇವಸ್ಥಾನಗಳಿಗೆ ಯುವತಿಯರನ್ನು ದೇವದಾಯನ್ನಾಗಿ ಮಾಡಿ ಬಿಡುವುದನ್ನು "ದುಷ್ಟ ಪದ್ಧತಿ ಎಂದು ವಿವರಿಸಿತು. ಯುವತಿಯರನ್ನು ಇನ್ನೂ ಕೆಲವು ಕಡೆ ರಹಸ್ಯವಾಗಿ ದೇವದಾಸಿ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಈ ಪದ್ಧತಿ ನಿಷೇಧದ ನಂತರ ನಾಲ್ಕು ದಶಕಗಳ ನಂತರ, ಕರ್ನಾಟಕದಲ್ಲಿ ಇನ್ನೂ 70,000 ಕ್ಕೂ ಹೆಚ್ಚು ದೇವದಾಸಿಯರಿದ್ದಾರೆ ಎಂದು ಭಾರತದ ಮಾನವ ಹಕ್ಕುಗಳ ಆಯೋಗವು ಕಳೆದ ವರ್ಷ ಬರೆದಿದೆ.
ವಿವಾಹದ ವರದಕ್ಷಿಣೆಯ ಸಂಪ್ರದಾಯದಿಂದಾಗಿ ಹೆಣ್ಣುಮಕ್ಕಳನ್ನು ಸಾಮಾನ್ಯವಾಗಿ ಭಾರತದಲ್ಲಿ ಹೊರೆ ಎಂದು ಭಾವಿಸಲಾಗುತ್ತದೆ . ಹೆಣ್ಣು ಮಕ್ಕಳನ್ನು ದೇವದಾಸಿಯರನ್ನಾಗಿಸುವ ಮೂಲಕ ಬಡ ಕುಟುಂಬಗಳು ಆದಾಯದ ಮೂಲವನ್ನು ಗಳಿಸುತ್ತವೆ ಮತ್ತು ಅವರಿಗೆ ಮದುವೆ ಮಾಡುವ ವೆಚ್ಚವನ್ನು ತಪ್ಪಿಸುತ್ತವೆ.
ಸೌಂದತ್ತಿಯ ಸುತ್ತಲಿನ ಅನೇಕ ಮನೆಗಳಲ್ಲಿ ಯಲ್ಲಮ್ಮ ದೇವರನ್ವು ಪೂಜಿಸಲಾಗುತ್ತದೆ. ಈ ದೇವಸ್ಥಾನದಲ್ಲಿ ಸೀತವ್ವ ಡಿ.ಜೋಡಟ್ಟಿ ಅವರು ಎಂಟು ವರ್ಷದವಳಿದ್ದಾಗ ದೇವಿಯನ್ನು ವಿವಾಹವಾಗಲು ನಿಶ್ಚಯಿಸಿದ್ದರು. ಆದರೆ ಆಕೆಯ ಸಹೋದರಿಯರು ಬೇರೆ ಪುರುಷರನ್ನು ವಿವಾಹವಾದರು, ಆಕೆಯ ಪೋಷಕರನ್ನು ಸಾಕುವ ಉದ್ದೇಶದಿಂದ ಅವಳನ್ನು ಯಲ್ಲಮ್ಮನಿಗೆ ಅರ್ಪಿಸಲು ನಿರ್ಧರಿಸಿದರು.
ಬೇರೆಯವರು ಮದುವೆಯಾಗುವಾಗ ಅಲ್ಲಿ ವಧು-ವರರು ಇದ್ದರು ಆದರೆ ನಾನು ವಿವಾಹವಾದದ್ದು ಒಂಟಿಯಾಗಿ, ಇದೆಲ್ಲಾ ನನಗೆ ತಿಳಿದ ಮೇಲೆ ಅಳಲು ಆರಂಭಿಸಿದೆ ಎಂದು 49 ವರ್ಷದ ಜೋಡಟ್ಟಿ ತಿಳಿಸಿದ್ದಾರೆ.
ಅಸುರಕ್ಷಿತ ಲೈಂಗಿಕತೆಯಿಂದಾಗಿ ಅನೇಕ ದೇವದಾಸಿಯರು ಎಚ್ ಒ ವಿಗೆ ತುತ್ತಾದರು. ಲೈಂಗಿಕವಾಗಿ ಹರಡುವ ಸೋಂಕುಗಳಿಗೆ ಒಳಗಾದರು. ಸೋಂಕಿಗೆ ಒಳಗಾದ ಮಹಿಳೆಯರ ಬಗ್ಗೆ ನನಗೆ ತಿಳಿದಿದೆ ಈಗ ಅದು ಅವರ ಮಕ್ಕಳಿಗೆ ಹರಡಿದೆ" ಎಂದು ದೇವದಾಸಿಯರೊಂದಿಗೆ ಕೆಲಸ ಮಾಡುವ ಕಾರ್ಯಕರ್ತರೊಬ್ಬರು ಹೇಳಿದರು.
ಸೋಂಕು ಹರಡಿರುವುದನ್ನು ಮರೆಮಾಡುತ್ತಾರೆ ಮತ್ತು ಅದರೊಂದಿಗೆ ರಹಸ್ಯವಾಗಿ ಬದುಕುತ್ತಾರೆ, ಅನೇಕ ಮಹಿಳೆಯರು ಸಾವನ್ನಪ್ಪಿದ್ದಾರೆ.
ತಮ್ಮ ಹೆಣ್ಣುಮಕ್ಕಳನ್ನು ದೇವದಾಸಿಗಳಾಗಿ ಸೇರಿಸಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಪಾಲಕರು ಕಾನೂನು ಕ್ರಮ ಜರುಗಿಸುತ್ತಾರೆ. ದೇವದಾಸಿ ಪದ್ಧತಿ ಆಚರಣೆ ಆದೇಶವನ್ನು ತೊರೆಯುವ ಮಹಿಳೆಯರಿಗೆ ತಿಂಗಳಿಗೆ 1,500 ರೂಪಾಯಿಗಳ ಅತ್ಯಲ್ಪ ಸರ್ಕಾರಿ ಪಿಂಚಣಿಗಳನ್ನು ನೀಡಲಾಗುತ್ತದೆ.
ಇತ್ತೀಚೆಗೆ ದೇವಸ್ಥಾನಗಳಿಗೆ ಮಹಿಳೆಯರನ್ನು ಅರ್ಪಿಸಿದ ಉದಾಹರಣೆಗಳಿಲ್ಲ ಎಂದು ಸೌಂದತ್ತಿ ಆಡಳಿತ ನಡೆಸುವ ಪೌರಕಾರ್ಮಿಕ ನಿತೇಶ್ ಪಾಟೀಲ್ ಹೇಳಿದ್ದಾರೆ.
ಭಾರತದ ಹಕ್ಕುಗಳ ಆಯೋಗವು ಕಳೆದ ವರ್ಷ ಕರ್ನಾಟಕ ಮತ್ತು ಇತರ ಹಲವಾರು ಭಾರತೀಯ ರಾಜ್ಯಗಳಿಗೆ ಈ ಆಚರಣೆಯನ್ನು ತಡೆಯಲು ಏನು ಮಾಡುತ್ತಿದೆ ಎಂಬುದನ್ನು ವಿವರಿಸಲು ಆದೇಶಿಸಿದೆ.
Advertisement