ಗದಗ: ಚಿಕ್ಕಟ್ಟಿ ಶಾಲೆಯಲ್ಲಿ ಉತ್ತರ ಕರ್ನಾಟಕದ ಮೊದಲ ವಿಶಿಷ್ಟ ರೀತಿಯ 'ಸೈನ್ಸ್ ಪಾರ್ಕ್' ಸ್ಥಾಪನೆ

ಗದಗದ ಚಿಕ್ಕಟ್ಟಿ ಶಾಲೆಯ ಮುಂಭಾಗದಲ್ಲಿ ಉತ್ತರ ಕರ್ನಾಟಕದಲ್ಲಿಯೇ ಮೊದಲನೆಯದು ಎಂಬಂತಹ  ವಿಶಿಷ್ಟ ರೀತಿಯ 'ಸೈನ್ಸ್ ಪಾರ್ಕ್' ಎಂದು ಸ್ಥಾಪಿಸಲಾಗಿದೆ. ಇದು ಯುವ ಮತ್ತು ಕುತೂಹಲದ ಮನಸ್ಸಿಗೆ ಮಾಹಿತಿಯ ಆಗರವಾಗಿದೆ.  
ಚಿಕ್ಕಟ್ಟಿ ಶಾಲೆಯ ಸೈನ್ಸ್ ಪಾರ್ಕ್ ನಲ್ಲಿ ವಿದ್ಯಾರ್ಥಿಗಳು
ಚಿಕ್ಕಟ್ಟಿ ಶಾಲೆಯ ಸೈನ್ಸ್ ಪಾರ್ಕ್ ನಲ್ಲಿ ವಿದ್ಯಾರ್ಥಿಗಳು
Updated on

ಗದಗ: ಗದಗದ ಚಿಕ್ಕಟ್ಟಿ ಶಾಲೆಯ ಮುಂಭಾಗದಲ್ಲಿ ಉತ್ತರ ಕರ್ನಾಟಕದಲ್ಲಿಯೇ ಮೊದಲನೆಯದು ಎಂಬಂತಹ ವಿಶಿಷ್ಟ ರೀತಿಯ 'ಸೈನ್ಸ್ ಪಾರ್ಕ್' ಸ್ಥಾಪಿಸಲಾಗಿದೆ. ಇದು ಯುವ ಮತ್ತು ಕುತೂಹಲದ ಮನಸ್ಸಿಗೆ ಮಾಹಿತಿಯ ಆಗರವಾಗಿದೆ. ಉತ್ಸಾಹಿ ವಿದ್ಯಾರ್ಥಿಗಳಿಗೆ 31 ವಿಜ್ಞಾನದ ಪ್ರಾಯೋಗಿಕ ಮಾದರಿಗಳು ವಿಜ್ಞಾನದ ತತ್ವಗಳನ್ನು ಕಲಿಸುತ್ತವೆ ಮತ್ತು ಪ್ರತಿಯೊಂದೂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸುತ್ತದೆ. 

ಸುಮಾರು ಒಂದು ಎಕರೆ ಪ್ರದೇಶದಲ್ಲಿ ವಿಜ್ಞಾನ ಉದ್ಯಾನ ಹರಡಿಕೊಂಡಿದ್ದು, ಪಾರ್ಕ್ ನಲ್ಲಿನ ಅಗತ್ಯ ವಸ್ತುಗಳನ್ನು ಖರೀದಿಸಲು 30 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಪ್ರವೇಶ ಉಚಿತ. ಪಾರ್ಕ್ 2019 ರಲ್ಲಿ ಕೆಲವು ಮಾದರಿಗಳೊಂದಿಗೆ ಪ್ರಾರಂಭವಾಗಬೇಕಿತ್ತು. ಆದರೆ ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಗಿತ್ತು ಮತ್ತು ಎರಡು ವರ್ಷಗಳ ನಂತರ ಆರಂಭಿಸಲಾಗಿದೆ. 

ಶಾಲಾ ಸಂಸ್ಥಾಪಕ ಎಸ್.ವೈ.ಚಿಕ್ಕಟ್ಟಿ, ತಮ್ಮ ವಿದ್ಯಾರ್ಥಿಗಳು ಪ್ರಾಯೋಗಿಕ ಮಾದರಿಗಳ ಮೂಲಕ ವಿಜ್ಞಾನ ಕಲಿಯಬೇಕೆಂದು ಬಯಸಿದ್ದು, ಸರ್ಕಾರಿ, ಖಾಸಗಿ ಶಾಲಾ ವಿದ್ಯಾರ್ಥಿಗಳು ಮತ್ತು ಇತರ ಆಸಕ್ತರನ್ನು ಉದ್ಯಾನವನಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ. ಚಿಕ್ಕಟ್ಟಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯನ್ನು ಇಲ್ಲಿ ಕಾಲ ಕಳೆಯುತ್ತಾರೆ, ತಮ್ಮ ಕುತೂಹಲವನ್ನು ಪರಿಹರಿಸಿಕೊಳ್ಳುತ್ತಾ ಹೊಸ ವಿಷಯಗಳನ್ನು ಕಲಿಯುತ್ತಾರೆ. 

ವಿಜ್ಞಾನದ ಮಾದರಿಗಳು ನ್ಯೂಟನ್‌ನ ನಿಯಮ, ಆಪ್ಟಿಕಲ್ ಇಲ್ಯೂಷನ್, ಬಾರ್ಟನ್‌ನ ಲೋಲಕ, ಕೇಂದ್ರಾಪಗಾಮಿ ಬಲ ಮುಂತಾದ ವಿಜ್ಞಾನದ ಜನಪ್ರಿಯ ಪ್ರಾಯೋಗಿಕ ಮಾದರಿಗಳು ಇಲ್ಲಿವೆ.  ಗದಗಕ್ಕೆ ಭೇಟಿ ನೀಡಲಾಗದ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮಾದರಿಗಳ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಎಲ್ಲಾ ವೀಡಿಯೊಗಳನ್ನು ಚಿಕ್ಕಟ್ಟಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ.

<strong>ಸೈನ್ಸ್ ಪಾರ್ಕ್ ನಲ್ಲಿ ವಿದ್ಯಾರ್ಥಿಯ ಚಿತ್ರ</strong>
ಸೈನ್ಸ್ ಪಾರ್ಕ್ ನಲ್ಲಿ ವಿದ್ಯಾರ್ಥಿಯ ಚಿತ್ರ

ಸೈನ್ಸ್ ಪಾರ್ಕ್ ಕುರಿತು ಮಾತನಾಡಿದ ಚಿಕ್ಕಟ್ಟಿ ಶಾಲೆಯ ವಿದ್ಯಾರ್ಥಿನಿ ರಮ್ಯಾ ಬೊಮ್ಮನಹಳ್ಳಿ, ಶಾಲಾ ಆವರಣದಲ್ಲಿ ವಿಜ್ಞಾನ ಉದ್ಯಾನವನ ಇರುವುದು ಸಂತಸ ತಂದಿದೆ. ನಾವು ಎಲ್ಲಾ 30 ಮಾದರಿಗಳನ್ನು ಅಧ್ಯಯನ ಮಾಡಿದ್ದೇವೆ ಮತ್ತು ಈಗ ಪ್ರತಿ ಮಾದರಿಯನ್ನು ಸಂದರ್ಶಕರಿಗೆ ವಿವರಿಸಬಹುದು. 9, 10 ಮತ್ತು ಪಿಯು ತರಗತಿಗಳ ವಿದ್ಯಾರ್ಥಿಗಳು ತಮ್ಮ ಬಿಡುವಿನ ಅವಧಿ ಆಧಾರದ ಮೇಲೆ ಸಂದರ್ಶಕರೊಂದಿಗೆ ಸಮನ್ವಯ ಸಾಧಿಸುತ್ತಾರೆ. ಅನೇಕ ವಿದ್ಯಾರ್ಥಿಗಳು ಆಪ್ಟಿಕಲ್ ಇಲ್ಯೂಷನ್, ಹೀಟ್ ಪರ್ಸೆಪ್ಶನ್, ಮ್ಯೂಸಿಕಲ್ ಪೈಪ್ಸ್ ಮತ್ತು ಇತರ ಮಾದರಿಗಳೊಂದಿಗೆ ಆನಂದಿಸಿದರು. ಅವುಗಳೊಂದಿಗೆ ಸೆಲ್ಫಿ ತೆಗೆದುಕೊಂಡರು ಎಂದು ತಿಳಿಸಿದರು.

9 ನೇ ತರಗತಿಯ ವಿದ್ಯಾರ್ಥಿಗಳಾದ ಯೂಸುಫ್ ಯರಗುಡಿ, ರಮ್ಯಾ ತಡಹಾಳ್ ಮತ್ತು ದೃಷ್ಟಿ ಜಾದರ್ ಮಾತನಾಡಿ, ತಮ್ಮ ಶಾಲೆಯು ವಿಶಿಷ್ಟವಾದ ವಿಜ್ಞಾನ ಉದ್ಯಾನವನವನ್ನು ಹೊಂದಿರುವುದು ಸಂತೋಷವಾಗಿದೆ ಎಂದು ಹೇಳಿದರು. ಶಾಖದ ಗ್ರಹಿಕೆ ಇಲ್ಲಿ ಉತ್ತಮ ಮಾದರಿಗಳಲ್ಲಿ ಒಂದಾಗಿದೆ. ಬಿಸಿಲಿನ ದಿನಗಳಲ್ಲಿ, ವಿವಿಧ ಬಣ್ಣದ ವೃತ್ತಾಕಾರದ ಫಲಕಗಳ ಮೇಲೆ ಶಾಖವನ್ನು ನೋಡಬಹುದು, ಬಿಳಿ ಯಾವಾಗಲೂ ಕಡಿಮೆ ತಾಪಮಾನವನ್ನು ಹೊಂದಿರುತ್ತದೆ ಮತ್ತು ಕಪ್ಪು ಹೆಚ್ಚಿನ ತಾಪಮಾನವನ್ನು ಹೊಂದಿರುತ್ತದೆ ಎಂದರು.

  
  

ರಿಫ್ಲೆಕ್ಷನ್ ಆಫ್ ಸೌಂಡ್’ ಎಂದು ಇನ್ನೊಂದು ಇದೆ. ಇಲ್ಲಿ ಬೇರೊಬ್ಬ ವ್ಯಕ್ತಿಯೊಂದಿಗೆ ಇನ್ನೊಂದು ಗೋಳದಲ್ಲಿ ನಿಂತು ಮಾತನಾಡಬಹುದು, ಇದು ಬೆಳಕಿನ ತರಂಗಗಳಂತೆಯೇ ಧ್ವನಿ ತರಂಗಗಳು ಪ್ರತಿಫಲನವಾಗಿ ಚಲಿಸುತ್ತವೆ ಎಂಬ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ ಎಂದು  ಹೇಳಿದರು.

ಇತ್ತೀಚೆಗೆ ಸೈನ್ಸ್ ಪಾರ್ಕ್‌ಗೆ ಭೇಟಿ ನೀಡಿದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾದ ವಿಕಾಸ್ ಮರೆಗುದ್ದಿ ಮತ್ತು ಗಣೇಶ ಪರಸನ್ನವರ್ ಮಾತನಾಡಿ, ಉದ್ಯಾನವನ ಚೆನ್ನಾಗಿದ್ದು, ಅನೇಕ ವಿಷಯಗಳನ್ನು ಕಲಿತಿದ್ದೇವೆ. ಉತ್ತರ ಕರ್ನಾಟಕದ ಯಾವ ಶಾಲೆಯಲ್ಲಿಯೂ ಕಾಣದ ವಿಜ್ಞಾನ ಉದ್ಯಾನವನ ಇಲ್ಲಿರುವುದು ನಮಗೆ ಸಂತಸ ತಂದಿದೆ. ನಮಗೆ ಇಲ್ಲಿ ಅವಕಾಶ ನೀಡಿದ ಚಿಕ್ಕಟ್ಟಿ ಸರ್ ಅವರಿಗೆ ನಾವು ಕೃತಜ್ಞರಾಗಿದ್ದು, ಇತರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಇಲ್ಲಿಗೆ ಬರುವಂತೆ ಹೇಳಲು ಬಯಸುತ್ತೇವೆ. ಯಾವುದೇ ಪ್ರವೇಶ ಶುಲ್ಕವಿಲ್ಲದಿರುವುದು ಒಳ್ಳೆಯದು ಎಂದರು. 

ಸೈನ್ಸ್ ಪಾರ್ಕ್ ಕುರಿತು ಮಾತನಾಡಿದ ಚಿಕ್ಕಟ್ಟಿ, "ಇದು ಆರ್ಥಿಕ ಹೊರೆ ಎಂದು ಭಾವಿಸುವುದಿಲ್ಲ, ಸಾವಿರಾರು ವಿದ್ಯಾರ್ಥಿಗಳಿಗೆ ಹೊಸ ಪರಿಕಲ್ಪನೆಗಳನ್ನು ಕಲಿಯಲು ಅವಕಾಶವಿದೆ. ಇಲ್ಲಿ ಸಮಯ ಕಳೆಯುವ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆ. ಯಾರು ಬೇಕಾದರೂ ಸೈನ್ಸ್ ಪಾರ್ಕ್‌ಗೆ ಭೇಟಿ ನೀಡಬಹುದು. ಅನೇಕ ಪೋಷಕರು, ಸುತ್ತಮುತ್ತಲಿನ ಗ್ರಾಮಸ್ಥರು, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಎಲ್ಲಾ ಮಾದರಿಗಳನ್ನು ನೋಡಲು ಎರಡರಿಂದ ಮೂರು ಗಂಟೆ ಅಗತ್ಯವಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com