ಉಡುಪಿ: ಯಕ್ಷಗಾನ ನೋಡಲು ಈಗಲೇ ಬುಕ್ ಮಾಡಿ, 21 ವರ್ಷ ಕಾಯಿರಿ!
ಮಂದಾರ್ತಿ ದೇವಸ್ಥಾನದ ಯಕ್ಷಗಾನ ತಂಡಗಳು (ಮೇಳಗಳು) ಒಂದು ಶತಮಾನದ ಇತಿಹಾಸವನ್ನು ಹೊಂದಿವೆ. ದೇವಾಲಯದ ಎರಡನೇ ತಂಡವನ್ನು 1992 ರಲ್ಲಿ ರಚಿಸಲಾಯಿತು ಮತ್ತು ಐದನೇ ತಂಡವು 2004 ರಲ್ಲಿ ಅಸ್ತಿತ್ವಕ್ಕೆ ಬಂದಿತು.
Published: 30th May 2023 02:02 PM | Last Updated: 30th May 2023 02:55 PM | A+A A-

ಮಂದಾರ್ತಿ ಯಕ್ಷಗಾನ ಮೇಳ( ಸಂಗ್ರಹ ಚಿತ್ರ)
ಉಡುಪಿ: ಐಷಾರಾಮಿ ಕಾರು ಮತ್ತು ಅಪಾರ್ಟ್ ಮೆಂಟ್ ಗಳಿಗಾಗಿ ಮೊದಲೇ ಬುಕ್ ಮಾಡಿ ಹಲವು ವರ್ಷಗಳ ತನಕ ಕಾಯುವುದು ವಾಡಿಕೆ, ಆದರೆ ಉಡುಪಿ ಜಿಲ್ಲೆಯ ಮಂದಾರ್ತಿಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಐದು ಯಕ್ಷಗಾನ ತಂಡಗಳು ಮುಂದಿನ 21 ವರ್ಷಗಳಿಗೆ ಕಾಯ್ದಿರಿಸಲ್ಪಟ್ಟಿವೆ.
ಮಂದಾರ್ತಿ ದೇವಸ್ಥಾನದ ಯಕ್ಷಗಾನ ತಂಡಗಳು (ಮೇಳಗಳು) ಒಂದು ಶತಮಾನದ ಇತಿಹಾಸವನ್ನು ಹೊಂದಿವೆ. ದೇವಾಲಯದ ಎರಡನೇ ತಂಡವನ್ನು 1992 ರಲ್ಲಿ ರಚಿಸಲಾಯಿತು ಮತ್ತು ಐದನೇ ತಂಡವು 2004 ರಲ್ಲಿ ಅಸ್ತಿತ್ವಕ್ಕೆ ಬಂದಿತು.
ಕಾಯುವ ಅವಧಿಯನ್ನು ಕಡಿಮೆ ಮಾಡಲು ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಆದರೂ, ಈಗ ಕಾರ್ಯಕ್ರಮವನ್ನು ಬುಕ್ ಮಾಡುವವರು 21 ವರ್ಷಗಳ ನಂತರ ಮಾತ್ರ ವೀಕ್ಷಿಸಬಹುದು.
ಎರಡು ತಂಡಗಳು ಮಳೆಗಾಲದಲ್ಲಿ ಪ್ರತಿದಿನವೂ ಪ್ರದರ್ಶನ ನೀಡುತ್ತಿವೆ, ಇದನ್ನು ಆಫ್-ಸೀಸನ್ ಎಂದು ಪರಿಗಣಿಸಲಾಗುತ್ತದೆ, ಆದರು ಕಳೆದ ಆರು ವರ್ಷಗಳಿಂದ ನಿಯಮಿತವಾಗಿ ನವೆಂಬರ್-ಮೇ ಹೊರತುಪಡಿಸಿ ಎಲ್ಲಾ ಸಮಯದಲ್ಲಿ ಮೇಳಗಳು ನಡೆಯುತ್ತಿವೆ.
ಭಕ್ತರು ಕಾಯ್ದಿರಿಸುವ ‘ಹರಕೆ’ಗಳ ಬೇಡಿಕೆಯನ್ನು ಪೂರೈಸಲು ಸೀಸನ್ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. ಈಗಾಗಲೇ 19,000 ಪ್ರದರ್ಶನಗಳಿಗೆ ಮುಂಗಡ ಬುಕಿಂಗ್‌ಗಳು ಆರಭವಾಗಿವೆ, ಹೀಗಾಗಿ ಕಾಯುವ ಅವಧಿಯು ಎರಡು ದಶಕಗಳವರೆಗೆ ವಿಸ್ತರಿಸಿದೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ ಹೇಳಿದ್ದಾರೆ.
ಈ ಋತುವಿನಲ್ಲಿ ತಂಡಗಳು ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ 970 ಪ್ರದರ್ಶನ ನೀಡುತ್ತಿವೆ. ಶ್ರೀ ದೇವಿ ಮಹಾತ್ಮೆ, ಮಂದಾರ್ತಿ ಕ್ಷೇತ್ರ ಮಹಾತ್ಮೆ, ಅಭಿಮನ್ಯು ಕಾಳಗ, ಕೃಷ್ಣಾರ್ಜುನ ಕಾಳಗ ಮುಂತಾದ ಕಥಾವಸ್ತುಗಳನ್ನು ತಂಡಗಳು ಪ್ರದರ್ಶಿಸುತ್ತವೆ.
ಡಿಸೆಂಬರ್ 2022 ರಿಂದ, ತಂಡಗಳು ತಮ್ಮ ಎಲ್ಲಾ ರಾತ್ರಿ ಪ್ರದರ್ಶನಗಳನ್ನು ಕಿರು ಅವಧಿಗೆ ಪರಿವರ್ತಿಸುವ ಮೂಲಕ ಮೊಟಕುಗೊಳಿಸಿದ ಪ್ರದರ್ಶನ ನೀಡುತ್ತಿವೆ. ತಮ್ಮ ತಂಡಗಳು ಶಬ್ದ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಅನುಸರಿಸುತ್ತವೆ ಎಂದು ದೇವಾಲಯದ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ. ಐದು ಯಕ್ಷಗಾನ ತಂಡಗಳಲ್ಲಿ ಸುಮಾರು 250 ಕಲಾವಿದರು ಇದ್ದಾರೆ.