ಪಾಲಿಮರ್ ಜೇಡಿಮಣ್ಣಿನಿಂದ ಧರಿಸುವ ತಿಂಡಿ-ತಿನಿಸುಗಳ ಆಭರಣ ತಯಾರಿಸುವ ಬೆಂಗಳೂರಿನ ಮಿನಿಯೇಚರ್ ಕಲಾವಿದೆ!

ನಿಮ್ಮಿಷ್ಟದ ಆಹಾರವನ್ನು ತಯಾರಿಸಿ ತಟ್ಟೆಯಲ್ಲಿ ಹಾಕಿ ನಿಮ್ಮ ಮುಂದೆ ಇಟ್ಟರೆ ಬಾಯಲ್ಲಿ ನೀರು ಬರದೆ ಇರುತ್ತದೆಯೇ? ಅದೇ ನಿಮ್ಮಿಷ್ಟದ ತಿಂಡಿತಿನಿಸಿನ ಕಿವಿಯೋಲೆ, ಆಭರಣಗಳನ್ನು ಜೇಡಿಮಣ್ಣಿನಲ್ಲಿ ತಯಾರಿಸಿದ್ದನ್ನು ನೋಡಲು ಎಷ್ಟು ಖುಷಿಯಾಗುತ್ತದೆ ಅಲ್ಲವೇ?
ರುಚಿಕಾ ನಂಬಿಯಾರ್ ತಮ್ಮ ಮಿನಿಯೇಚರ್ ಜೊತೆ
ರುಚಿಕಾ ನಂಬಿಯಾರ್ ತಮ್ಮ ಮಿನಿಯೇಚರ್ ಜೊತೆ

ಬೆಂಗಳೂರು: ನಿಮ್ಮಿಷ್ಟದ ಆಹಾರವನ್ನು ತಯಾರಿಸಿ ತಟ್ಟೆಯಲ್ಲಿ ಹಾಕಿ ನಿಮ್ಮ ಮುಂದೆ ಇಟ್ಟರೆ ಬಾಯಲ್ಲಿ ನೀರು ಬರದೆ ಇರುತ್ತದೆಯೇ? ಅದೇ ನಿಮ್ಮಿಷ್ಟದ ತಿಂಡಿ ತಿನಿಸಿನ  ಕಿವಿಯೋಲೆ, ಆಭರಣಗಳನ್ನು ಜೇಡಿಮಣ್ಣಿನಲ್ಲಿ ತಯಾರಿಸಿದ್ದನ್ನು ನೋಡಲು ಎಷ್ಟು ಖುಷಿಯಾಗುತ್ತದೆ ಅಲ್ಲವೇ?

ಅನೇಕ ಕಡೆ ನೀವು ಈ ಮಿನಿಯೇಚರ್ ಕಲೆಯನ್ನು ನೋಡಿರಬಹುದು. 2019 ರಲ್ಲಿ ಪ್ರಾರಂಭವಾದ ಹಲೋ ಮಿನಿವರ್ಸ್ ಎಂಬ ಉದ್ಯಮಕ್ಕೆ ಕೈಹಾಕಿದವರು ವರ್ಣಚಿತ್ರ ಕಲಾವಿದೆ(Miniature) ಕೀರ್ತಿ ಬಾಸಲ್, ಬಿಸ್ಕೆಟ್ ನಿಂದ ಹಿಡಿದು ಕಪ್ ಕೇಕ್ ವರೆಗೆ ಹಲವಾರು ಆಹಾರ ಪದಾರ್ಥಗಳನ್ನು ಚಿತ್ರಿಸುವ ಪಾಲಿಮರ್ ಮತ್ತು ದ್ರವ ಮಣ್ಣಿನಿಂದ ಬಿಡಿಭಾಗಗಳನ್ನು ರಚಿಸಿದ್ದಾರೆ. 

ಜನರು ತಮ್ಮ ಮೆಚ್ಚಿನ ಆಹಾರಗಳ ಮಿನಿಯೇಚರ್ ರಚಿಸಲು ಸಾಕಷ್ಟು ಮಂದಿ ಬೇಡಿಕೆ ನೀಡುತ್ತಾರೆ. ಬೆಂಗಳೂರಿನ ಹಲವು ಮಿನಿಯೇಚರ್ ಕಲಾವಿದರು ಕಲಾ ಪ್ರಕಾರದ ಪ್ರಯೋಗ ಮಾಡುತ್ತಿದ್ದಾರೆ. ರುಚಿಕಾ ನಂಬಿಯಾರ್ ಎಂಬುವವರು ಮಿಶ್ರ ಮಾಧ್ಯಮವನ್ನು ಬಳಸುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಡಾಲ್‌ಹೌಸ್ ಪ್ರಾಜೆಕ್ಟ್ ಮೂಲಕ ಕಥೆಯ ಪದ್ಯವನ್ನು ರಚಿಸಿದ್ದಾರೆ, ಇದು ನಂಬಿಯಾರ್ ಅವರ 5-ಇಂಚಿನ ಎತ್ತರದ ಆಲ್ಟರ್ ಇಗೋ, ಲಿಟಲ್ ಆರ್ ಜೀವನಾಧಾರಿತ ಕಥೆಯನ್ನು ಹೊಂದಿದೆ.

ಬೆಸ್ಟ್ ಇನ್ ಮಿನಿಯೇಚರ್ ನಂತಹ ರಿಯಾಲಿಟಿ ಶೋಗಳನ್ನು ಪ್ರಾರಂಭಿಸುವುದರೊಂದಿಗೆ ಮಿನಿಯೇಚರ್ ಆರ್ಟ್ ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಇತ್ತೀಚಿನ ಜನಪ್ರಿಯವಾಗಿದೆ ಎನ್ನುತ್ತಾರೆ ನಂಬಿಯಾರ್.

ಚಿಗುರು ಮಿನಿಗಾರ್ಡನ್ಸ್ ಎಂದು ಕರೆಯಲ್ಪಡುವ ಇಂಜಿನಿಯರ್-ಮಿನಿಯೇಚರ್ ಕಲಾವಿದೆ ವಾಣಿ ದೀಕ್ಷಿತ್ ಅವರು ಸುಂದರವಾದ ಮಿನಿ ಗಾರ್ಡನ್‌ಸ್ಕೇಪ್‌ಗಳನ್ನು ರಚಿಸುತ್ತಾರೆ. ನಾನು ತೋಟಗಾರಿಕೆಯನ್ನು ಪ್ರೀತಿಸುತ್ತೇನೆ ಮಿನಿಯೇಚರ್ ಕೂಡ ನನ್ನಿಷ್ಟದ ಒಲವಿನ ಹವ್ಯಾಸ.  ಇವು ಚಿಕ್ಕ ಚಿಕ್ಕ ಉದ್ಯಾನ ದೃಶ್ಯಗಳನ್ನು ನಿಮ್ಮ ಬಾಲ್ಕನಿಗಳಲ್ಲಿ ಅಥವಾ ಕೆಲವು ಹೊರಾಂಗಣ ಸ್ಥಳಗಳಲ್ಲಿ ಇರಿಸಬಹುದು. ಜೇಡಿಮಣ್ಣಿನಿಂದ ನನ್ನ ಸ್ವಂತ ಮಿನಿಯೇಚರ್‌ಗಳನ್ನು ಏಕೆ ರಚಿಸಬಾರದು ಎಂದು ನಾನು ಯೋಚಿಸಿದೆ ಮಾಡಿದೆ ಎನ್ನುತ್ತಾರೆ. 

ಮಿನಿಯೇಚರ್ ಕಲೆಯ ಮೂಲಕ ಕ್ಯುರೇಟಿಂಗ್ ಮತ್ತು ಹಿಂದಿನ ನೆನಪುಗಳನ್ನು ಕಲೆಯಲ್ಲಿ ಸೃಷ್ಟಿಸುವುದು ಕೂಡ ಹೆಚ್ಚುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com