ಶಿವ-ಪಾರ್ವತಿಯಂತೆ ವಿವಾಹ: ಜೋಡಿಗಳ ಮನಸೂರೆಗೊಳ್ಳುತ್ತಿದೆ ಉತ್ತರಾಖಂಡದ ತ್ರಿಯುಗಿನಾರಾಯಣ ದೇಗುಲ!

ರುದ್ರಪ್ರಯಾಗ-ಗೌರಿಕುಂಡ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೋನ್‌ಪ್ರಯಾಗದಿಂದ 11 ಕಿ.ಮೀ ದೂರದಲ್ಲಿರುವ ಈ ತಾಣ, ಪೌರಾಣಿಕ ಗ್ರಂಥಗಳ ಪ್ರಕಾರ ಶಿವ ಮತ್ತು ಪಾರ್ವತಿ ದೇವಿ ಮದುವೆ ಮಾಡಿಕೊಂಡ ಸ್ಥಳ ಎಂಬ ನಂಬಿಕೆಯಿದೆ.
Triyuginarayan Temple
ತ್ರಿಯುಗಿನಾರಾಯಣ ದೇವಾಲಯ
Updated on

ಡೆಹ್ರಾಡೂನ್: ಉತ್ತರಾಖಂಡ್‌ನ ರುದ್ರಪ್ರಯಾಗ ಜಿಲ್ಲೆಯ ಹೃದಯಭಾಗದಲ್ಲಿರುವ ಪುರಾತನ ತ್ರಿಯುಗಿನಾರಾಯಣ ದೇವಾಲಯವು ರಾಷ್ಟ್ರಾದ್ಯಂತ ಮದುವೆಗೆ ಸಜ್ಜಾಗಿ ನಿಂತಿರುವ ಜೋಡಿಗಳ ಮನಸೂರೆಗೊಳ್ಳುತ್ತಿದ್ದು, ಇಲ್ಲಿ ವಿವಾಹ ಮಾಡಿಕೊಳ್ಳಲು ಬೇಡಿಕೆ ಸ್ಥಳವಾಗಿದೆ.

ರುದ್ರಪ್ರಯಾಗ-ಗೌರಿಕುಂಡ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೋನ್‌ಪ್ರಯಾಗದಿಂದ 11 ಕಿ.ಮೀ ದೂರದಲ್ಲಿರುವ ಈ ತಾಣ, ಪೌರಾಣಿಕ ಗ್ರಂಥಗಳ ಪ್ರಕಾರ ಶಿವ ಮತ್ತು ಪಾರ್ವತಿ ದೇವಿ ಮದುವೆ ಮಾಡಿಕೊಂಡ ಸ್ಥಳ ಎಂಬ ನಂಬಿಕೆಯಿದೆ. ಇದರ ಧಾರ್ಮಿಕ ಪ್ರಾಮುಖ್ಯತೆಯನ್ನು ಗುರುತಿಸಿ, ಸರ್ಕಾರ 2017 ರಲ್ಲಿ ಈ ಪವಿತ್ರ ಮೈದಾನವನ್ನು ಸುಂದರವಾದ ಸ್ಥಳವಾಗಿ ಕಂಗೊಳಿಸುವಂತೆ ಮಾಡಿ ಮದುವೆಯಾಗುವ ತರುಣ-ತರುಣಿಯರಿಗೆ ಪ್ರಶಸ್ತ ಸ್ಥಳವಾಗಿ ಮಾಡಿದೆ.

ಅಂದಿನಿಂದ, ಇದು ಬೇಡಿಕೆಯ ಮದುವೆಯ ತಾಣವಾಗಿದೆ. ಈ ವರ್ಷ, ತ್ರಿಯುಗಿನಾರಾಯಣ್‌ನಲ್ಲಿರುವ ಶಿವ-ಪಾರ್ವತಿ ವಿವಾಹ ಸ್ಥಳದಲ್ಲಿ 150 ಕ್ಕೂ ಹೆಚ್ಚು ಜೋಡಿಗಳು ವಿವಾಹ ಬಂಧನಕ್ಕೊಳಗಾಗಿದ್ದಾರೆ. ಕಳೆದ ನವೆಂಬರ್ ಒಂದರಲ್ಲೇ 100 ಕ್ಕೂ ಹೆಚ್ಚು ವಿವಾಹಗಳು ನಡೆದಿವೆ ಎಂದು ಬದ್ರಿ ಕೇದಾರ್ ಮಂದಿರ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಕೇದಾರನಾಥ ದೇಗುಲದ ಪ್ರಧಾನ ಅರ್ಚಕ ಶಿವಶಂಕರ್ ಲಿಂಗ್, ಶಿವ ಮತ್ತು ಪಾರ್ವತಿಯ ನಡುವಿನ ವಿವಾಹದ ದೈವಿಕ ಪುರಾವೆಗಳು ಇಂದಿಗೂ ಇಲ್ಲಿವೆ ಎಂದು ಹೇಳುತ್ತಾರೆ.

Triyuginarayan Temple
ಗದಗದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ; ಬಸವ ಪುರಾಣಕ್ಕೆ ಮುಸ್ಲಿಂ ಬಾಂಧವರಿಗೆ ಆಹ್ವಾನ

ವಿವಾಹ ಕಾರ್ಯಕ್ರಮಗಳಿಗೆ ಹೆಚ್ಚಿದ ಬೇಡಿಕೆ ಮತ್ತು ಭಕ್ತಾದಿಗಳು ಹೆಚ್ಚು ಬರುತ್ತಿರುವುದರಿಂದ ಸ್ಥಳೀಯ ಮಾರುಕಟ್ಟೆ ಬೆಳೆದಿದೆ. ತ್ರಿಯುಗಿನಾರಾಯಣ್ ಟ್ರೇಡರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಮಹೇಂದ್ರ ಸೆಮ್ವಾಲ್, ಈ ವರ್ಷ, ಯಾತ್ರಾ ಋತುವಿನಲ್ಲಿ ದಾಖಲೆಯ ಸಂಖ್ಯೆಯ ಯಾತ್ರಾರ್ಥಿಗಳು ಬಂದಿದ್ದಾರೆ ಎಂದು ಹೇಳಿದರು. ಸೋನ್‌ಪ್ರಯಾಗ-ತ್ರಿಯುಗಿನಾರಾಯಣ ರಸ್ತೆಯನ್ನು ಸುಧಾರಿಸಲು ಮತ್ತು ದೇವಾಲಯದ ಪ್ರದೇಶದಲ್ಲಿ ಇತರ ಅಗತ್ಯ ಸೌಲಭ್ಯಗಳನ್ನು ಹೆಚ್ಚಿಸಲು ಅವರು ಸರ್ಕಾರ ಮತ್ತು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ.

ಈ ವರ್ಷ ಮಕರ ಸಂಕ್ರಾಂತಿ, ಬಸಂತ್ ಪಂಚಮಿ, ಮಹಾಶಿವರಾತ್ರಿ, ಬೈಸಾಖಿ ಮತ್ತು ವಿಜಯದಶಮಿಯಂದು ಹಲವಾರು ವಿವಾಹ ಕಾರ್ಯಕ್ರಮಗಳು ನಡೆದಿವೆ ಎಂದು ದೇವಸ್ಥಾನದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್‌ನಲ್ಲಿ, ಸ್ಥಳೀಯರು ಮಾತ್ರವಲ್ಲದೆ ಪೌರಿ, ಶ್ರೀನಗರ, ಡೆಹ್ರಾಡೂನ್, ದೆಹಲಿ ಮತ್ತು ಇತರ ಪ್ರದೇಶಗಳಿಂದ ಬಂದು ಸಹ ಇಲ್ಲಿ ಮದುವೆಯಾಗಿದ್ದಾರೆ. ಮುಂಬರುವ ಮಂಗಳಕರ ದಿನಾಂಕಗಳಂದು ಮದುವೆ ಮಾಡಿಕೊಳ್ಳಲು ಈಗಾಗಲೇ ಕಾಯ್ದಿರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com