ಶ್ರದ್ಧಾ ವಿಜಯ್ ರಾಘವನ್ ಅವರು ಇತ್ತೀಚೆಗೆ ಕೇಂದ್ರೀಯ ವಿದ್ಯಾಲಯ ನಡೆಸಿದ ರಾಷ್ಟ್ರೀಯ ವಿಜ್ಞಾನ ವಸ್ತುಪ್ರದರ್ಶನದಲ್ಲಿ
ಶ್ರದ್ಧಾ ವಿಜಯ್ ರಾಘವನ್ ಅವರು ಇತ್ತೀಚೆಗೆ ಕೇಂದ್ರೀಯ ವಿದ್ಯಾಲಯ ನಡೆಸಿದ ರಾಷ್ಟ್ರೀಯ ವಿಜ್ಞಾನ ವಸ್ತುಪ್ರದರ್ಶನದಲ್ಲಿ

ಮನೆಮದ್ದುಗಳ App ಅಭಿವೃದ್ಧಿಪಡಿಸಿದ ಬೆಂಗಳೂರಿನ ಬಾಲಕಿಗೆ ಸಿಕ್ಕಿತು ಉನ್ನತ ಮನ್ನಣೆ!

ಹಲವು ಸಂದರ್ಭಗಳಲ್ಲಿ ಅಜ್ಜಿಯಂದಿರ ಮನೆಮದ್ದು ಹಲವು ರೋಗಕ್ಕೆ ರಾಮಬಾಣವಾಗುತ್ತದೆ. ಇಂತಹ ಮನೆಮದ್ದುಗಳನ್ನು ತೆಗೆದುಕೊಳ್ಳಲು ವೈದ್ಯರು ಅನುಮತಿ ನೀಡಬೇಕಲ್ಲವೇ, ಇದಕ್ಕೆ 14 ವರ್ಷದ ಬಾಲಕಿ ಶ್ರದ್ಧಾ ವಿಜಯ್ ರಾಘವನ್ ಅವರು ತಮ್ಮ ವಿನೂತನ ಆ್ಯಪ್ ‘ಗ್ರ್ಯಾಂಡ್ಮಾಸ್ ಮ್ಯಾಜಿಕ್: ಹೀಲ್ @ ಹೋಮ್’ ನ್ನು ಬಿಡುಗಡೆ ಮಾಡಿದ್ದಾಳೆ.
Published on

ಬೆಂಗಳೂರು: ಹಲವು ಸಂದರ್ಭಗಳಲ್ಲಿ ಅಜ್ಜಿಯಂದಿರ ಮನೆಮದ್ದು ಹಲವು ರೋಗಕ್ಕೆ ರಾಮಬಾಣವಾಗುತ್ತದೆ. ಇಂತಹ ಮನೆಮದ್ದುಗಳನ್ನು ತೆಗೆದುಕೊಳ್ಳಲು ವೈದ್ಯರು ಅನುಮತಿ ನೀಡಬೇಕಲ್ಲವೇ, ಇದಕ್ಕೆ 14 ವರ್ಷದ ಬಾಲಕಿ ಶ್ರದ್ಧಾ ವಿಜಯ್ ರಾಘವನ್ ಅವರು ತಮ್ಮ ವಿನೂತನ ಆ್ಯಪ್ ‘Grandma’s Magic:Heal@Home’ ನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದ್ದಾಳೆ.

ಕೇಂದ್ರೀಯ ವಿದ್ಯಾಲಯವು ಇತ್ತೀಚೆಗೆ ನಡೆಸಿದ ರಾಷ್ಟ್ರೀಯ ವಿಜ್ಞಾನ ಪ್ರದರ್ಶನ 23-24 ರಲ್ಲಿ ಈ ಅಪ್ಲಿಕೇಶನ್ ಪ್ರಥಮ ಬಹುಮಾನವನ್ನು ಗೆದ್ದಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಕೇಂದ್ರೀಯ ವಿದ್ಯಾಲಯದಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಶ್ರದ್ಧಾ ಮೆಟಲರ್ಜಿಸ್ಟ್ ಆಗಿರುವ ತನ್ನ ಅಜ್ಜ ವಿ ಬಾಬು ಸತ್ಯನ್ ಅವರಿಂದ ಸ್ಫೂರ್ತಿ ಪಡೆದು ಆಪ್ ಅಭಿವೃದ್ಧಿಪಡಿಸಿದ್ದಾಳೆ. 

ಬಾಲ್ಯದಲ್ಲಿ ನಾನು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೆ, ಶಾಲೆಗೆ ಹೋಗದೆ ಮನೆಯಲ್ಲಿಯೇ ಇರಬೇಕಾಗಿತ್ತು. ಮನೆಯೊಳಗೆ ಇರಬೇಕಾಗಿತ್ತು. ಇದು ನವೀನ ಕಲ್ಪನೆಗೆ ಕಾರಣವಾಯಿತು, ಇದು ಆರೋಗ್ಯ ಸೇವೆ ಪಡೆದುಕೊಳ್ಳಲು ಸುಲಭವಾಗುತ್ತದೆ ಎಂದು ಹೇಳಿದರು. 

ಬಳಕೆದಾರರು ತಮ್ಮ ಮನೆಮದ್ದುಗಳನ್ನು ಹಂಚಿಕೊಳ್ಳಲು ಮತ್ತು ಇತರರು ಪಟ್ಟಿ ಮಾಡಿದ ಪರಿಹಾರಗಳನ್ನು ನೋಡಲು ಇದು ವೇದಿಕೆಯಾಗಿದೆ. ಚಿಕಿತ್ಸಾಲಯಗಳಿಗೆ ಭೇಟಿ ನೀಡದೆ ಮನೆಯಲ್ಲಿಯೇ ಹಲವು ಕಾಯಿಲೆಗಳನ್ನು ಸುಲಭವಾಗಿ ಗುಣಪಡಿಸಬಹುದು ಎಂದು ಅವರು ತಿಳಿಸಿದರು.

ಮನೆಮದ್ದುಗಳ ವಿಶ್ವಾಸಾರ್ಹತೆಯ ಕುರಿತು, ಶ್ರದ್ಧಾ ಅವರು ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡುವ ಮೊದಲು ಅವುಗಳನ್ನು ಅನುಮೋದಿಸಲು ಬೆಂಗಳೂರಿನಲ್ಲಿ ಐದು ವೈದ್ಯರಿದ್ದಾರೆ ಎಂದು ಹೇಳುವ ಶ್ರದ್ಧಾ, ಮನೆಮದ್ದುಗಳಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಡುತ್ತಾರೆ. 

ಒಂದು ದಿನದಲ್ಲಿ ಔಷಧಿಗೆ ಅನುಮೋದನೆ ಸಿಗುತ್ತದೆ. ಪರಿಹಾರವು ಕೆಲಸ ಮಾಡಿದೆ ಎಂದು ಬಳಕೆದಾರರು ಭಾವಿಸಿದರೆ, ಅವರು ಅದಕ್ಕೆ ಉತ್ತಮ ರೇಟಿಂಗ್ ನೀಡುತ್ತಾರೆ ಎಂದು ಅವರು ಹೇಳಿದರು.

ಅಜ್ಜಿಯ ಮ್ಯಾಜಿಕ್ 200 ಕ್ಕೂ ಹೆಚ್ಚು ಮನೆಮದ್ದುಗಳನ್ನು ಹೊಂದಿದೆ ಮತ್ತು ಪ್ಲೇಸ್ಟೋರ್‌ನಲ್ಲಿ 600 ಡೌನ್‌ಲೋಡ್‌ಗಳನ್ನು ಹೊಂದಿದೆ. ವಿಶ್ಲೇಷಣೆಗಳ ಪ್ರಕಾರ, ಪ್ರತಿದಿನ ಸುಮಾರು 60-100 ವ್ಯಕ್ತಿಗಳು ಅಪ್ಲಿಕೇಶನ್‌ಗೆ ಭೇಟಿ ನೀಡುತ್ತಾರೆ.

ಅಪ್ಲಿಕೇಶನ್ AI- ಆಧಾರಿತ ಚಾಟ್‌ಬಾಟ್ ನ್ನು ಸಹ ಹೊಂದಿದೆ, ಅದು ನಿಮಗೆ ಪರಿಹಾರಗಳನ್ನು ಸುಲಭವಾಗಿ ಹುಡುಕಲು ಅನುವು ಮಾಡಿಕೊಡುತ್ತದೆ. ನೀವು ಯಾವ ರೋಗಲಕ್ಷಣಗಳನ್ನು ಹೊಂದಿದ್ದೀರಿ ಎಂಬುದರ ಆಧಾರದ ಮೇಲೆ ನೀವು ಯಾವುದನ್ನು ಪ್ರಯತ್ನಿಸಬೇಕು ಎಂದು ನಿಮಗೆ ತಿಳಿಸುತ್ತದೆ ಎನ್ನುತ್ತಾಳೆ ಶ್ರದ್ಧಾ. 

ತನ್ನ ಹಿತ್ತಲಿನಲ್ಲಿ 150 ಕ್ಕೂ ಹೆಚ್ಚು ಸಸ್ಯ ಪ್ರಭೇದಗಳನ್ನು ಹೊಂದಿರುವ ಮಹತ್ವಾಕಾಂಕ್ಷಿ ಶ್ರದ್ಧಾ, ವಾಯುಪುತ್ರ ಎಂಬ ಸಾಧನವು ಕಲುಷಿತ ಗಾಳಿಯನ್ನು ಗೊಬ್ಬರವಾಗಿ ಪರಿವರ್ತಿಸುತ್ತದೆ. ಇದನ್ನು ಟ್ರಾಫಿಕ್ ಸಿಗ್ನಲ್‌ಗಳು, ಕೈಗಾರಿಕಾ ಚಿಮಣಿಗಳು ಮತ್ತು ಇತರ ಸ್ಥಳಗಳಲ್ಲಿ ಅಳವಡಿಸಬಹುದಾಗಿದೆ. ನಾನು ಅದನ್ನು ಅಭಿವೃದ್ಧಿಪಡಿಸಲು ಬರ್ನೌಲ್ಲಿ ಪ್ರಮೇಯವನ್ನು ಬಳಸಿದ್ದೇನೆ. ಸಾಧನವು ನಿರ್ವಾತವನ್ನು ಸೃಷ್ಟಿಸುತ್ತದೆ. ಅದರ ಸುತ್ತಲಿನ ಕಲುಷಿತ ಗಾಳಿಯನ್ನು ಹೀರಿಕೊಳ್ಳುತ್ತದೆ. ಕಲುಷಿತ ಗಾಳಿಯು ನಂತರ ರಾಸಾಯನಿಕ ಪ್ರಕ್ರಿಯೆಗೆ ಒಳಗಾಗುತ್ತದೆ. ಕೃಷಿಯಲ್ಲಿ ಬಳಸಬಹುದಾದ ಗೊಬ್ಬರವಾಗಿ ಉಪ ಉತ್ಪನ್ನವನ್ನು ಒಳಗೊಂಡಂತೆ ಆಮ್ಲಜನಕ-ಸಮೃದ್ಧ ಗಾಳಿಯನ್ನು ಬಿಡುಗಡೆ ಮಾಡುತ್ತದೆ ಎಂದು ಅವರು ಹೇಳಿದರು.

ಶ್ರದ್ಧಾ ಅವರು ಬಾಲ್ಯದಲ್ಲಿ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿದ್ದರು, ಅದು ವಾಯುಪುತ್ರವನ್ನು ಅಭಿವೃದ್ಧಿಪಡಿಸಲು ಪ್ರೇರೇಪಿಸಿತು. ನಾನು ಈ ಸಾಧನಕ್ಕೆ ಪೇಟೆಂಟ್ ಪಡೆಯಲು ಪ್ರಯತ್ನಿಸುತ್ತಿದ್ದೇನೆ. ಮೂಲಮಾದರಿಯನ್ನು ನಿಖರವಾಗಿ ಸುಧಾರಿಸಲು ಬಯಸುತ್ತೇನೆ. ಮುಂದೊಂದು ದಿನ ಅದನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ಸರ್ಕಾರ ಅಥವಾ ಯಾವುದೇ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದಲ್ಲವೇ ಎನ್ನುತ್ತಾಳೆ. 

ದೆಹಲಿಯಲ್ಲಿ ಜನವರಿ 29 ರಂದು ನಡೆದ "ಪರೀಕ್ಷಾ ಪೇ ಚರ್ಚಾ" ನಲ್ಲಿ ಯುವ ನವೋದ್ಯಮಿ ಶ್ರದ್ಧಾ ತನ್ನ ವಿಜ್ಞಾನ ಯೋಜನೆಯನ್ನು ಪ್ರಸ್ತುತಪಡಿಸಿದ್ದಳು. ಪ್ರಧಾನಿ ನರೇಂದ್ರ ಮೋದಿಯವರು ಸಹ ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

X
Open in App

Advertisement

X
Kannada Prabha
www.kannadaprabha.com