ಶಿರೋಳ ಅಥವಾ ಗದಗಿನ ಯೋಗಗ್ರಾಮದ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ!

ಗದಗ ಪಟ್ಟಣದಿಂದ 52 ಕಿ.ಮೀ ದೂರದಲ್ಲಿರುವ ಶಿರೋಳ ಗ್ರಾಮವು ಫಿಟ್‌ನೆಸ್‌ನತ್ತ ಬಲವಾದ ಒಲವನ್ನು ಹೊಂದಿದೆ. ನರಗುಂದ ತಾಲೂಕಿನಲ್ಲಿರುವ 10,000 ಜನರ ಈ ಗ್ರಾಮ, ತನ್ನ ಗಡಿಗಳನ್ನು ಮೀರಿ ಪ್ರಾಚೀನ ಶಿಸ್ತಿನ ಮಾರ್ಗವನ್ನು ಹರಡಲು ಕೊಡುಗೆ ನೀಡಿದ ಯೋಗ ಸಾಧಕರ ತಲೆಮಾರುಗಳನ್ನು ಹುಟ್ಟುಹಾಕಿದೆ.
ಯೋಗಪಟು ಬಸವರಾಜು ಕೊಣ್ಣೂರು
ಯೋಗಪಟು ಬಸವರಾಜು ಕೊಣ್ಣೂರು

ಗದಗ: ಗದಗ ಪಟ್ಟಣದಿಂದ 52 ಕಿ.ಮೀ ದೂರದಲ್ಲಿರುವ ಶಿರೋಳ ಗ್ರಾಮವು ಫಿಟ್‌ನೆಸ್‌ನತ್ತ ಬಲವಾದ ಒಲವನ್ನು ಹೊಂದಿದೆ. ನರಗುಂದ ತಾಲೂಕಿನಲ್ಲಿರುವ 10,000 ಜನರ ಈ ಗ್ರಾಮ, ತನ್ನ ಗಡಿಗಳನ್ನು ಮೀರಿ ಪ್ರಾಚೀನ ಶಿಸ್ತಿನ ಮಾರ್ಗವನ್ನು ಹರಡಲು ಕೊಡುಗೆ ನೀಡಿದ ಯೋಗ ಸಾಧಕರ ತಲೆಮಾರುಗಳನ್ನು ಹುಟ್ಟುಹಾಕಿದೆ.

ಪ್ರತಿದಿನ ಬೆಳಿಗ್ಗೆ ತನ್ನ ಯೋಗ ಪಟುಗಳ ಆಸನಗಳಿಗೆ ಶಿರೋಳ ಗ್ರಾಮ ಎಚ್ಚರ ಮಾಡುತ್ತದೆ. 'ಯೋಗಗ್ರಾಮ' ಎಂಬ ಭವ್ಯ ಹೆಸರನ್ನು ಗಳಿಸಿರುವ ಈ ಊರಿನಲ್ಲಿ ಯೋಗ ಮಾಡುವ ಹಲವಾರು ನಿವಾಸಿಗಳು ಇದ್ದಾರೆ ಮತ್ತು ಅವರಲ್ಲಿ ಸುಮಾರು 30 ಜನರು ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಮತ್ತು ಪರಿಣತಿಯನ್ನು ಗಳಿಸಿದ್ದಾರೆ. ಅದರ ಹಲವಾರು ತಂತ್ರಗಳು ಮತ್ತು ಬೋಧನೆಗಳನ್ನು ದೇಶ ಮತ್ತು ಪ್ರಪಂಚದ ವಿವಿಧ ಭಾಗಗಳಿಗೆ ಕೊಂಡೊಯ್ಯುತ್ತಿದ್ದಾರೆ.

ಶಿರೋಳ ಒಂದು ಸಣ್ಣ ಹಳ್ಳಿ, ಆದರೆ ಯೋಗದಲ್ಲಿ ಅಲ್ಲಿನ ಕುಶಾಗ್ರಮತಿ ಮತ್ತು ಅರಿವು ಆಕರ್ಷಕವಾಗಿದೆ. ಆದಾಗ್ಯೂ, ಅದರ ಹಿಂದೆ ಒಂದು ಸ್ಪೂರ್ತಿದಾಯಕ ಕಥೆ ಇದೆ. ಗದಗದ ಖ್ಯಾತ ಯೋಗ ಶಿಕ್ಷಕ ಕೆ.ಎಸ್.ಪಲ್ಲೇದ್ ಅವರು ಶಿರೋಳಕ್ಕೆ ನಿತ್ಯ ಭೇಟಿ ನೀಡಿ ಗ್ರಾಮದ ಹೊರವಲಯದಲ್ಲಿರುವ ಉತ್ಸಾಹಿ ವಿದ್ಯಾರ್ಥಿಗಳಿಗೆ ಯೋಗ ಕಲಿಸುತ್ತಿದ್ದರು. 1984 ರಲ್ಲಿ ಗೋಪಾಲಕ ರುದ್ರಪ್ಪ ಅವರು ಪಲ್ಲೆಡ್ ಅವರು ನಡೆಸುತ್ತಿದ್ದ ಉಚಿತ ಯೋಗ ಸೆಷನ್‌ಗಳಿಗೆ ಹಾಜರಾಗಲು ಪ್ರಾರಂಭಿಸಿದರು. ನಂತರ ರುದ್ರಪ್ಪ ಅವರು ಗ್ರಾಮದ ಕೆಲ ಮಕ್ಕಳನ್ನು ಒಟ್ಟುಗೂಡಿಸಿ ಯೋಗ ಪಾಠ ಹೇಳಿಕೊಡಲು ಆರಂಭಿಸಿದರು.

ಯಚ್ಚರೇಶ್ವರ ಮಠದ ಶ್ರೀಗಳಾದ ಅಭಿನವ ಯಚ್ಚರೇಶ್ವರ ಸ್ವಾಮಿಗಳು ಸಹ ಚಿಕ್ಕ ವಯಸ್ಸಿನಲ್ಲೇ ಯೋಗಾಭ್ಯಾಸವನ್ನು ಪ್ರಾರಂಭಿಸಿದರು. 1990 ರ ದಶಕದಲ್ಲಿ ಹಲವಾರು ಮಕ್ಕಳಿಗೆ ಕಲಿಸಿದರು. ಹೀಗೆ ಯೋಗವನ್ನು ಕಲಿತವರು ತಮ್ಮ ಕಲಿಕೆಯನ್ನು ಮುಂದುವರೆಸಿದರು ಮತ್ತು ತಮ್ಮ ಸ್ವಂತ ಮಕ್ಕಳಿಗೆ ಕಲಿಸಿದರು ಮತ್ತು ಈ ರೀತಿಯಾಗಿ ಮೂರು ದಶಕಗಳಿಂದ ಈ ಗ್ರಾಮದಲ್ಲಿ ಯೋಗ ಸಂಪ್ರದಾಯ ಮತ್ತು ಅಭ್ಯಾಸವನ್ನು ಮುಂದುವರೆಸಿಕೊಂಡು ಬರಲಾಗಿದ್ದು, ಶಿರೋಳ್ ಗೆ ಯೋಗಗ್ರಾಮ ಎಂಬ ಬಿರುದನ್ನು ನೀಡಲಾಯಿತು.

ಈ ಪ್ರದೇಶದ ಇತರ ವೀಕ್ಷಕರು ಮತ್ತು ಗ್ರಾಮದ ಹಿರಿಯರು ಯೋಗದ ಪ್ರಸಾರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಇಂದು ಸುತ್ತಮುತ್ತಲಿನ ಕುಗ್ರಾಮಗಳ ಮಕ್ಕಳು ಮತ್ತು ಯುವಕರು ಯೋಗವನ್ನು ಕಲಿಯಲು ಮತ್ತು ಇತರರಿಗೆ ಕಲಿಸಲು ಶಿರೋಳ್ ಗೆ ಭೇಟಿ ನೀಡುತ್ತಾರೆ. ಯೋಗದ ಸಂದೇಶ ಮತ್ತು ಅದರ ಪ್ರಯೋಜನಗಳನ್ನು ಹೊತ್ತುಕೊಂಡು ಕೆಲವರು ಸಾಗರೋತ್ತರಕ್ಕೂ ಹೋಗಿದ್ದಾರೆ. ಶಿರೋಳ ನಿವಾಸಿ ಬಸವರಾಜ ಕೊಣ್ಣೂರ ಈಗ ವಿದೇಶದಲ್ಲಿ ಯೋಗ ಹೇಳಿಕೊಡುತ್ತಿದ್ದಾರೆ. ಎರಡು ನಿಮಿಷಕ್ಕೂ ಹೆಚ್ಚು ಕಾಲ 'ಶಾಲಭಾಸನ' ಮಾಡುವ ಅಪರೂಪದ ಸಾಧನೆಗಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿರುವ ಅವರು ಪ್ರಮುಖ ಯೋಗ ಸಾಧಕರಾಗಿದ್ದಾರೆ. 

ಈ ಸಂಕೀರ್ಣವಾದ ಯೋಗಾಸನವನ್ನು 'ಮಿಡತೆ ಭಂಗಿ' ಎಂದೂ ಕರೆಯುತ್ತಾರೆ, ಏಕೆಂದರೆ ಇದು ಸಂಸ್ಕೃತ ಪದ 'ಸಲಭ'ದಿಂದ ಬಂದಿದೆ, ಅಂದರೆ ಮಿಡತೆ. ಬೆನ್ನುಮೂಳೆಯನ್ನು ಬಗ್ಗಿಸುವ ಮತ್ತು ಬೆನ್ನಿನ ಸ್ನಾಯುಗಳು ಮತ್ತು ಆಂತರಿಕ ಅಂಗಗಳನ್ನು ಬಲಪಡಿಸುವ 32 ಆಸನಗಳಲ್ಲಿ ಇದು ಒಂದಾಗಿದೆ. ಜೂನ್ 18, 2018 ರಂದು ಪಂಜಾಬ್‌ನ ಮೊಹಾಲಿಯಲ್ಲಿ ನಡೆದ ಯೋಗ ಉತ್ಸವದಲ್ಲಿ ವಿಶ್ವ ಯೋಗ ಒಕ್ಕೂಟದ ಪ್ರಾಯೋಜಿತ ಕಾರ್ಯಕ್ರಮದ ಅಡಿಯಲ್ಲಿ ಕೊಣ್ಣೂರ್ ಈ ದಾಖಲೆಯನ್ನು ಬರೆದರು. 

“ ವಿಯೆಟ್ನಾಂ, ಯುಎಸ್, ಥೈಲ್ಯಾಂಡ್ ಮತ್ತು ಇತರ ದೇಶಗಳಲ್ಲಿ ಯೋಗವನ್ನು ಕಲಿಸುತ್ತಿದ್ದೇನೆ. ನಮ್ಮ ಹಳ್ಳಿಯಲ್ಲಿ ಎಲ್ಲಾ ಮಕ್ಕಳು ಮತ್ತು ಯುವಕರು ಯೋಗದ ಬಗ್ಗೆ ಆಸಕ್ತಿ ಹೊಂದಿದ್ದರೆ, ಅನೇಕರು ಅದರಲ್ಲಿ ಉತ್ತಮರಾಗಿದ್ದಾರೆ. ಇದೀಗ, ಅಕ್ಕಪಕ್ಕದ ಹಳ್ಳಿಗಳು ಮತ್ತು ಪಟ್ಟಣಗಳ ಜನರು ಯೋಗ ಕಲಿಯಲು ಶಿರೋಳ ಗೆ  ಭೇಟಿ ನೀಡುತ್ತಿದ್ದಾರೆ.ಇತ್ತೀಚೆಗಷ್ಟೇ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಿದ್ದು, ಈ ಮೂಲಕ ಗದಗ ಮತ್ತು ಆಚೆಗೂ ಹೆಚ್ಚು ಜನರು ಆಗಮಿಸಿ, ಕಲಿತು, ಯೋಗದ ಬಗ್ಗೆ ಪ್ರಚಾರ ಮಾಡುವಂತೆ ಪ್ರೇರೇಪಿಸಲು ಯೋಜನೆ ರೂಪಿಸಿದ್ದೇವೆ ಎಂದು ಕೊಣ್ಣೂರ ಹೇಳುತ್ತಾರೆ.

ಅದರಂತೆ, ಮೂರು ದಶಕಗಳ ಹಿಂದೆ ಇಲ್ಲಿ ಆರಂಭಿಸಲಾದ ಯೋಗ ಕ್ರಾಂತಿಯು ಅನೇಕ ನಿವಾಸಿಗಳಿಗೆ ಫಿಟ್‌ನೆಸ್ ಜೀವನವನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿತು ಮತ್ತು 50 ಕ್ಕೂ ಹೆಚ್ಚು ಯುವಕರಿಗೆ ಯೋಗ ಕಲಿಸುವುದನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಸಹಾಯ ಮಾಡಿದೆ.

ಮೂರು ದಶಕಗಳ ಯೋಗ ಮತ್ತು ಯುವ ಜನತೆ: 30 ವರ್ಷಗಳ ಹಿಂದೆ ಶಿರೋಳದ ಜನರಿಗೆ ಯೋಗ ಹೊಸ ಅನ್ವೇಷಣೆಯಾಗಿತ್ತು. ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳಿಗೆ ಯೋಗ ಎಂದರೆ ಏನೆಂದು ತಿಳಿಯುವುದು, ವಿಭಿನ್ನ ಆಸನಗಳನ್ನು ಮಾಡುವುದೂ ಒಂದು ವಿಶಿಷ್ಟ ಅನುಭವವಾಗಿತ್ತು. ಅನೇಕ ಮಕ್ಕಳು ಪರಿಶ್ರಮಪಟ್ಟು ಯೋಗಾಭ್ಯಾಸ ಕಲಿತರು ಮತ್ತು ನಂತರ ನಿಧನರಾದ ರುದ್ರಪ್ಪ ಕೂಡ ಕನಿಷ್ಠ 10-15 ಹಳ್ಳಿಗಳಲ್ಲಿ ಯೋಗ ಕಲಿಸಲು ಮಾರ್ಗದರ್ಶನ ನೀಡಿದರು. ಈ ಕಲ್ಪನೆಯು ಉತ್ತಮವಾಗಿ ಸ್ವೀಕರಿಸಲ್ಪಟ್ಟಿತು. ಶಿರೋಳ ಇಂದಿನ ಯೋಗ ಕೇಂದ್ರವಾಗಿ ಪರಿವರ್ತಿಸಿತು.

ಯೋಗಗ್ರಾಮ' ಟ್ಯಾಗ್ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ನಮ್ಮ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಕಷ್ಟಕರವಾದ ಆಸನಗಳನ್ನು ಮಾಡುತ್ತಾರೆ, ಆದರೆ ಅನೇಕರು ನಿರಂತರವಾಗಿ ಪಾಠಗಳನ್ನು ಕಲಿಸಲು ಪ್ರಯಾಣಿಸುತ್ತಾರೆ. ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳನ್ನು ಹೊಂದಿರುವ ಕೆಲವರು ಇದ್ದಾರೆ ಎಂದು ಗ್ರಾಮದ ನಿವಾಸಿ ಪ್ರಕಾಶಗೌಡ ತಿರಕನಗೌಡರ ಮಾಹಿತಿ ನೀಡಿದರು. “ಒಬ್ಬರ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗವು ಅತ್ಯುತ್ತಮ ಮಾರ್ಗವಾಗಿದೆ. ಯುವಕರು ಹೆಚ್ಚು ಹೆಚ್ಚು ಯೋಗದ ಹಾದಿ ಹಿಡಿಯುವಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಅಭಿನವ ಯಚ್ಚರೇಶ್ವರ ಸ್ವಾಮಿಗಳು ಹೇಳಿದರು. 

ಕೋವಿಡ್-19 ಜಾಗೃತಿ: ಕೋವಿಡ್ -19 ರ ಮೊದಲ ಮತ್ತು ಎರಡನೇ ಅಲೆಗಳ ಸಮಯದಲ್ಲಿ ಅನೇಕ ಶಿರೋಳ್ ನಿವಾಸಿಗಳು ಸ್ನೇಹಿತರು ಮತ್ತು ಸಂಬಂಧಿಕರಿಗೆ ಆನ್‌ಲೈನ್‌ನಲ್ಲಿ ಯೋಗವನ್ನು ಉಚಿತವಾಗಿ ಕಲಿಸಲು ಪ್ರಾರಂಭಿಸಿದರು. ಮೊಬೈಲ್‌ಗಳನ್ನು ಹೊಂದಿದ್ದ ನಿವಾಸಿ ಶಿಕ್ಷಕರು ಆಸನಗಳನ್ನು ಮಾಡುತ್ತಿದ್ದರು ಮತ್ತು ಅವರ ವೀಡಿಯೋಗಳನ್ನು ತಮ್ಮ ಹತ್ತಿರದ ಮತ್ತು ಆತ್ಮೀಯರೊಂದಿಗೆ ಹಂಚಿಕೊಳ್ಳುತ್ತಿದ್ದರು. ಇದು ಕಠೋರ ಅವಧಿಯಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಈ ಆನ್‌ಲೈನ್ ಪಾಠಗಳನ್ನು ಸ್ವೀಕರಿಸುವವರಿಗೆ ಸಹಾಯ ಮಾಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com