ತೊಗಲು ಗೊಂಬೆಯಾಟದಲ್ಲಿ ಸಾಧನೆ... ಅನುಪಮಾ ಹೊಸ್ಕೆರೆಗೆ ಒಲಿದ ಪದ್ಮಶ್ರೀ ಪ್ರಶಸ್ತಿ

ಕಥಾಸಂಕಲನದ ಪರಿಕಲ್ಪನೆಯ ಬಗ್ಗೆ ಸದಾ ಒಲವು ಹೊಂದಿದ್ದ ಹೊಸ್ಕೆರೆ ಅವರು ದೃಶ್ಯಕಲೆಗಳ ಮೂಲಕ ಅದನ್ನು ಪ್ರದರ್ಶಿಸುತ್ತಾರೆ. ತೊಗಲು ಗೊಂಬೆಯಾಟ ಅದರ ಅವಿಭಾಜ್ಯ ಅಂಗ.
ಅನುಪಮಾ ಹೊಸ್ಕೆರೆ
ಅನುಪಮಾ ಹೊಸ್ಕೆರೆ
Updated on

ಬೆಂಗಳೂರು: ಕಳೆದ ಗುರುವಾರ ಸಂಜೆ 4.30ರ ಸುಮಾರಿಗೆ ತೊಗಲು ಗೊಂಬೆಯಾಟಗಾರ್ತಿ ಅನುಪಮಾ ಹೊಸ್ಕೆರೆ ಅವರಿಗೆ ಗೃಹ ಸಚಿವರ ಕಚೇರಿಯಿಂದ ಒಂದು ಕರೆ ಬಂತು. ಕರೆ ಮಾಡಿದ ಮಹಿಳೆ ಮೆಲು ಧ್ವನಿಯಲ್ಲಿ 'ನೀವು ಪದ್ಮಶ್ರೀ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದೀರಿ, ನೀವು ಅದನ್ನು ಸ್ವೀಕರಿಸುತ್ತೀರಾ?' ಎಂದು ಕೇಳಿದರು.

ಅದಕ್ಕೆ ನಾನು ಶಾಂತವಾಗಿ 'ಹೌದು, ಖಂಡಿತ!' ಎಂದು ಉತ್ತರಿಸಿದೆ. ಆರಂಭದಲ್ಲಿ ನನಗೆ ಇದು ತಮಾಷೆಯ ಕರೆ ಎನಿಸಿತು, ನಿಜವಾದ ಕರೆ ಎಂದು ಅನಿಸಲಿಲ್ಲ, ನಾನು ಆಯಿತೆಂದು ಒಪ್ಪಿಕೊಂಡಾಗ ಕೂಡಲೇ ಫೋನ್ ಮಾಡಿದ ಮಹಿಳೆ ಅಭಿನಂದನೆಗಳು ಎಂದು ಹೇಳಿ ನನ್ನ ವಿಳಾಸ ಕೇಳಿದರು. ನಂತರ ಅಧಿಕೃತವಾಗಿ ನಿಮಗೆ ಮಾಹಿತಿ ಬರುತ್ತದೆ ಎಂದರು. ಆಗ ನನಗೆ ಇದು ನಿಜವಾದ ಕರೆ ಎನಿಸಿತು ಎನ್ನುತ್ತಾರೆ ಅನುಪಮಾ ಹೊಸ್ಕೆರೆ.  

ಈ ‘ಕಲ್ಪನಾತೀತ’ ಕರೆ ಸ್ವೀಕರಿಸಿದ ಸ್ವಲ್ಪ ಹೊತ್ತಿನ ನಂತರ ರಾತ್ರಿಯೇ ಪದ್ಮ ಪ್ರಶಸ್ತಿ ಪ್ರಕಟಗೊಂಡು ನನ್ನ ಹೆಸರೂ ಇದ್ದಿದ್ದು ಕಂಡಾಗ ನನ್ನ ಸಂತೋಷಕ್ಕೆ ಪಾರವೇ ಇಲ್ಲದಾಯಿತು ಎನ್ನುತ್ತಾರೆ.

ಕಥಾಸಂಕಲನದ ಪರಿಕಲ್ಪನೆಯ ಬಗ್ಗೆ ಸದಾ ಒಲವು ಹೊಂದಿದ್ದ ಹೊಸ್ಕೆರೆ ಅವರು ದೃಶ್ಯಕಲೆಗಳ ಮೂಲಕ ಅದನ್ನು ಪ್ರದರ್ಶಿಸುತ್ತಾರೆ. ತೊಗಲು ಗೊಂಬೆಯಾಟ ಅದರ ಅವಿಭಾಜ್ಯ ಅಂಗ. ಸಾಂಪ್ರದಾಯಿಕ ಭಾರತೀಯ ಕಲೆ, ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ತನ್ನ ಜವಾಬ್ದಾರಿ ಎಂದು ಹೊಸ್ಕೆರೆ ಹೇಳುತ್ತಾರೆ. 

“ಬಸವನಗುಡಿಯಲ್ಲಿ ಬೆಳೆದ ನಾನು ಸ್ಥಳೀಯ ಸಂಸ್ಕೃತಿ, ಹಬ್ಬ ಹರಿದಿನಗಳು ಮತ್ತು ಪುರಾಣ ಕಥೆಗಳಿಗೆ ಸದಾ ಪಾಲ್ಗೊಳ್ಳುತ್ತಿದ್ದೆ. 2004 ರಲ್ಲಿ ಗೊಂಬೆಯಾಟ ರಂಗಭೂಮಿ ಮತ್ತು ಸಂಸ್ಕೃತಿ ಶಿಕ್ಷಣ ಕೇಂದ್ರವಾದ 'ಧಾತು'ವನ್ನು ಸ್ಥಾಪಿಸಿದೆ ಎನ್ನುತ್ತಾರೆ. 

ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹೊಸ್ಕೆರೆ ಅವರು ತೊಗಲು ಗೊಂಬೆಯಾಟದ ಪ್ರಪಂಚವು ಎಷ್ಟು ಆವರಿಸಿದೆ ಎಂದು ನನಗೆ ತಿಳಿದಿರಲಿಲ್ಲ. ನಾನು ನಮ್ಮ ಮಹಾಕಾವ್ಯಗಳಲ್ಲಿ ಬಹಳಷ್ಟು ಮೌಲ್ಯವನ್ನು ಕಂಡುಕೊಂಡಿದ್ದೇನೆ. ಗೊಂಬೆಯಾಟದಲ್ಲಿನ ಸೌಂದರ್ಯ ಮತ್ತು ಸಾಮರ್ಥ್ಯವನ್ನು ನೋಡಿದೆ ಎನ್ನುತ್ತಾರೆ. 

ತೊಗಲು ಗೊಂಬೆಯಾಟವು ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ, ನಿರ್ದಿಷ್ಟವಾಗಿ ಯುರೋಪಿನ ಜನರೊಂದಿಗೆ ಬಾಂಧವ್ಯದ ಮಾರ್ಗವಾಗಿದೆ. ಬೆಂಗಳೂರು ಹೊರವಲಯ ಕನಕಪುರ ರಸ್ತೆಯಲ್ಲಿರುವ ಮಂಡಲ ಸಾಂಸ್ಕೃತಿಕ ಕೇಂದ್ರದಲ್ಲಿ ಈ ಪಯಣದಲ್ಲಿ ನನ್ನನ್ನು ಬೆಂಬಲಿಸಿದ ಸ್ನೇಹಿತರಿಗೆ ಚಿರಋಣಿ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com