ಮೈಸೂರು To ಸಿಯಾಚಿನ್: ಪ್ರಪಂಚದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಮೊದಲ ಮಹಿಳಾ ಸೇನಾಧಿಕಾರಿ ಕ್ಯಾ. ಸುಪ್ರೀತಾ

ಮೈಸೂರಿನಿಂದ ಸಿಯಾಚಿನ್‌ನ ಭೂಪ್ರದೇಶದವರೆಗಿನ ಪ್ರಯಾಣವು ಸುಪ್ರೀತಾ ಅವರ ಅಚಲ ನಿರ್ಧಾರ ಮತ್ತು ಪ್ರಬಲ ಮನೋಸ್ಥೈರ್ಯಕ್ಕೆ ಸಾಕ್ಷಿಯಾಗಿದೆ.
ಕ್ಯಾಪ್ಟನ್ ಸುಪ್ರೀತಾ
ಕ್ಯಾಪ್ಟನ್ ಸುಪ್ರೀತಾ
Updated on

ಮೈಸೂರು: ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲು ದೇಶದ ಮೊದಲ ಭಾರತೀಯ ಸೇನಾ ಅಧಿಕಾರಿಯಾಗಿ (ಆರ್ಮಿ ಏರ್‌ಡಿಫೆನ್ಸ್) ಮೈಸೂರಿನ ಸುಪ್ರಿತಾ ಸಿ.ಟಿ. ಆಯ್ಕೆಯಾಗಿದ್ದಾರೆ.

ಮೂಲತಃ ಚಾಮರಾಜನಗರದ ಸುಪ್ರಿತಾ ಮೈಸೂರಿನ ಸರ್ದಾರ್ ವಲ್ಲಭಬಾಯಿ ನಗರದ ನಿವಾಸಿ. ಇವರ ತಂದೆ ತಿರುಮಲ್ಲೇಶ್ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ತಲಕಾಡು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ನಿರ್ಮಲ ಗೃಹಿಣಿಯಾಗಿದ್ದು, ಮೈಸೂರಿನಿಂದ ಸಿಯಾಚಿನ್‌ನ ಭೂಪ್ರದೇಶದವರೆಗಿನ ಪ್ರಯಾಣವು ಸುಪ್ರೀತಾ ಅವರ ಅಚಲ ನಿರ್ಧಾರ ಮತ್ತು ಪ್ರಬಲ ಮನೋಸ್ಥೈರ್ಯಕ್ಕೆ ಸಾಕ್ಷಿಯಾಗಿದೆ.

2021 ರಲ್ಲಿ, ಸುಪ್ರೀತಾ ಅವರು ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡಾಗ ಅವರ ಮಿಲಿಟರಿ ಕನಸುಗಳಿಗೆ ರೆಕ್ಕೆ ಬಂದವು. ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA) ಯಲ್ಲಿನ ಕಠಿಣ ತರಬೇತಿಯು ಆರ್ಮಿ ಏರ್ ಡಿಫೆನ್ಸ್ ಯೂನಿಟ್‌ನಲ್ಲಿ ಕರ್ತವ್ಯ ನಿರ್ವಹಿಸಲು ಅವರನ್ನು ಸಿದ್ಧಪಡಿಸಿತು. ಆಕೆಯ ಸೇವೆಯು ಆಯಕಟ್ಟಿನ ಸ್ಥಳಗಳಾದ ಅನಂತನಾಗ್, ಜಬಲ್‌ಪುರ್ ಮತ್ತು ಲೇಹ್‌ನಲ್ಲಿ ನಿಯೋಜಿಸಲ್ಪಟ್ಟಿತು. ಜುಲೈ 18 ರಂದು ಸಿಯಾಚಿನ್ ಗ್ಲೇಸಿಯರ್‌ಗೆ ಆಕೆಯ ಪೋಸ್ಟಿಂಗ್ ಬಂದಿದೆ ಎಂದು ಚಾಮರಾಜನಗರ ಜಿಲ್ಲೆಯವರಾದ ತಿರುಮಲೇಶ್ ಹೇಳಿದ್ದಾರೆ.

ಕ್ಯಾಪ್ಟನ್ ಸುಪ್ರೀತಾ
ಮಡಿಕೇರಿ: ಭೂಕುಸಿತದಲ್ಲಿ ಎಲ್ಲರನ್ನೂ ಕಳೆದುಕೊಂಡು ಒಬ್ಬಂಟಿ; ಧೃತಿಗೆಡದೆ ಡಾಕ್ಟರೇಟ್ ಗಳಿಸಿದ ಪಲ್ಲವಿ!

ತಲಕಾಡು ಪೊಲೀಸ್ ಠಾಣೆಯ ಎಸ್‌ಐ ಆಗಿರುವ ತಿರುಮಲೇಶ್ ಅವರು ತಮ್ಮ ಮಗಳ ಸಾಧನೆಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದರು. ಸುಪ್ರೀತಾ ಯಾವಾಗಲೂ ದೃಢನಿಶ್ಚಯ ಮತ್ತು ಏಕಾಗ್ರತೆ ಹೊಂದಿದ್ದಾಳೆ. ಸಿಯಾಚಿನ್‌ಗೆ ಆಕೆಯ ಪ್ರಯಾಣದಿಂದ ಅವರ ಕನಸು ನನಸಾಗಿದೆ ಮತ್ತು ಅನೇಕರಿಗೆ ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದರು.

ಸುಪ್ರೀತಾ ಅವರು ಹುಣಸೂರಿನ ಶಾಸ್ತ್ರಿ ವಿದ್ಯಾ ಸಂಸ್ಥೆ, ಎಚ್‌ಡಿ ಕೋಟೆಯ ಸೇಂಟ್ ಮೇರಿಸ್, ಕೆಆರ್ ನಗರದ ಸೇಂಟ್ ಜೋಸೆಫ್ ಮತ್ತು ಮೈಸೂರಿನ ಮರಿಮಲ್ಲಪ್ಪ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಎಲ್ಎಲ್ ಬಿ ವ್ಯಾಸಂಗ ಮಾಡಿದರು ಮತ್ತು ಬಿಬಿಎ ಕೂಡ ಪಡೆದರು.

ತನ್ನ ಅಧ್ಯಯನದ ಸಮಯದಲ್ಲಿ, ಅವರು ಎನ್‌ಸಿಸಿ ಏರ್ ವಿಂಗ್ ಸಿ ಪ್ರಮಾಣಪತ್ರ ಗಳಿಸಿದರು, ಅಖಿಲ ಭಾರತ ವಾಯು ಸೈನಿಕ ಶಿಬಿರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದರು. 2016 ರಲ್ಲಿ ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮೆರವಣಿಗೆ ನಡೆಸಿದರು. ಸುಪ್ರೀತಾ 2024 ರಲ್ಲಿ ಕರ್ನಲ್ (ನಿವೃತ್ತ) ರಿಚರ್ಡ್ ಬ್ಲೇಜ್ ಮತ್ತು ಲೆಫ್ಟಿನೆಂಟ್ ಕರ್ನಲ್ ವಿಜಯಲಕ್ಷ್ಮಿ ಅವರ ಮಗ ಮೇಜರ್ ಜೆರ್ರಿ ಬ್ಲೇಜ್ ಅವರನ್ನು ವಿವಾಹವಾದರು. ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಒಟ್ಟಿಗೆ ಭಾಗವಹಿಸಿದ ಮೊದಲ ಜೋಡಿಯಾಗಿ ದಂಪತಿ ಸುದ್ದಿ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com