ಫುಡ್ ಡೆಲಿವರಿ ಉದ್ಯೋಗದಿಂದ ಪದಕ ಗೆಲ್ಲುವವರೆಗೆ...: ವಿಶೇಷ ಚೇತನ ವ್ಯಕ್ತಿಯ ಮಾದರಿ ಬದುಕು...

ಕುಟುಂಬದ ಬೆಂಬಲಕ್ಕೆ ನಿಲ್ಲಲು ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ. ಮನೆಯಲ್ಲಿ ಪತ್ನಿ ಮತ್ತು ಅನಾರೋಗ್ಯ ಹೊಂದಿದ ತಾಯಿ ಇದ್ದಾರೆ. ಕ್ರೀಡೆಯಲ್ಲಿ ಅವರ ಕನಸುಗಳ ಅನ್ವೇಷಣೆಯೊಂದಿಗೆ ಜೀವನದ ಕಠಿಣ ವಾಸ್ತವಗಳನ್ನು ಅರಿತು ಸಮತೋಲನದಿಂದ ಜೀವನ ಸಾಗಿಸುತ್ತಿದ್ದಾರೆ.
Sidragavali poses with his trophy and certifcate.
ತನ್ನ ಟ್ರೋಫಿ ಮತ್ತು ಪ್ರಮಾಣಪತ್ರದೊಂದಿಗೆ ದಿನೇಶ್ ಸಿದ್ರಗಾವಳಿ
Updated on

ಬೆಳಗಾವಿ: ಬೆಳಗಾವಿಯ ಫುಡ್ ಡೆಲಿವರಿ ಏಜೆಂಟ್ ದಿನೇಶ್ ಸಿದ್ರಗಾವಳಿ ಅವರನ್ನು ಜೀವನವು ನಿರಂತರವಾಗಿ ಪರೀಕ್ಷಿಸುತ್ತಾ ಬಂತು. ಪಾರ್ಶ್ವವಾಯು ಪೀಡಿತ ಕಾಲುಗಳೊಂದಿಗೆ ಜನಿಸಿದ ದಿನೇಶ್ ಸಿದ್ರಗಾವಳಿ ಎರಡು ವರ್ಷದ ಮಗುವಾಗಿದ್ದಾಗಿನಿಂದ ಹಲವಾರು ಸವಾಲುಗಳನ್ನು ಎದುರಿಸುತ್ತಾ ಬಂದಿದ್ದರು.

ಆದರೂ, ಅದಮ್ಯ ಮನೋಭಾವದಿಂದ ಪ್ರತಿ ಅಡೆತಡೆಗಳನ್ನು ಜಯಿಸಲು, ಪ್ರತಿಕೂಲತೆಯನ್ನು ಬೆಳವಣಿಗೆಯ ಅವಕಾಶಗಳಾಗಿ ಪರಿವರ್ತಿಸಿತು. ದೈಹಿಕ ಮಿತಿಗಳ ಹೊರತಾಗಿಯೂ, ಸಿದ್ರಗಾವಳಿ ಅವರು ಖಾಸಗಿ ಕಂಪನಿಯೊಂದರಲ್ಲಿ ಆಹಾರ ವಿತರಣಾ ಚಾಲಕರಾಗಿ ದಣಿವರಿಯಿಲ್ಲದೆ ಕೆಲಸ ಮಾಡುತ್ತಾರೆ, ಕುಟುಂಬದ ಬೆಂಬಲಕ್ಕೆ ನಿಲ್ಲಲು ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ. ಮನೆಯಲ್ಲಿ ಪತ್ನಿ ಮತ್ತು ಅನಾರೋಗ್ಯ ಪೀಡಿತ ತಾಯಿ ಇದ್ದಾರೆ. ಕ್ರೀಡೆಯಲ್ಲಿ ಅವರ ಕನಸುಗಳ ಅನ್ವೇಷಣೆಯೊಂದಿಗೆ ಜೀವನದ ಕಠಿಣ ವಾಸ್ತವಗಳನ್ನು ಅರಿತು ಸಮತೋಲನದಿಂದ ಜೀವನ ಸಾಗಿಸುತ್ತಿದ್ದಾರೆ.

ನನ್ನ ಜೀವನದಲ್ಲಿ ಎರಡು ದೊಡ್ಡ ಅಡಚಣೆಗಳು ನನ್ನ ಪಾರ್ಶ್ವವಾಯು ಕಾಲುಗಳು ಮತ್ತು ಬಡತನವಾಗಿದೆ. ಆದರೆ ಹೋರಾಟವನ್ನು ಮುಂದುವರಿಸುವ ನನ್ನ ಸಂಕಲ್ಪವು ಯಾವಾಗಲೂ ಜೀವನದ ಕಹಿಯನ್ನು ಸಿಹಿಯನ್ನಾಗಿ ಪರಿವರ್ತಿಸಿದೆ. ಕ್ರೀಡೆಯು ಅದಕ್ಕೆ ಸಹಾಯ ಮಾಡಿದೆ ಎನ್ನುತ್ತಾರೆ.

ಸವಾಲುಗಳ ನಡುವೆಯೂ ಸಿದ್ರಗಾವಲಿ ಅವರು ಕ್ರೀಡಾಪಟುವಾಗಿ ಮಿಂಚಿದ್ದಾರೆ. ಅವರು ಕರ್ನಾಟಕ ಪ್ಯಾರಾ ಟೇಬಲ್ ಟೆನಿಸ್ ಸ್ಪರ್ಧೆ ಮತ್ತು 2023 ರಲ್ಲಿ 5 ನೇ ರಾಷ್ಟ್ರೀಯ ವೀಲ್‌ಚೇರ್ ರಗ್ಬಿ ಚಾಂಪಿಯನ್‌ಶಿಪ್ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ, ಅಲ್ಲಿ ಅವರು ತಮ್ಮ ಅಸಾಧಾರಣ ಪ್ರದರ್ಶನಕ್ಕಾಗಿ ಪ್ರಶಂಸೆಯನ್ನು ಗಳಿಸಿದ್ದಾರೆ.

2008ರಲ್ಲಿ ತಂದೆ ರಾಮದಾಸ್ ಹೃದಯಾಘಾತದಿಂದ ನಿಧನರಾದಾಗ ಸಿದ್ರಗಾವಲಿ ಅವರು 8ನೇ ತರಗತಿಯಲ್ಲಿ ಓದುತ್ತಿದ್ದರು. ಆಗ ಅವರು, ತಾಯಿ ಹಾಗೂ ಸಹೋದರಿ ಜೊತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಕುಟುಂಬವನ್ನು ಪೋಷಿಸಲು, ಅವರ ತಾಯಿ ಮತ್ತು ಸಹೋದರಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು.

ಸಿದ್ರಗಾವಳಿ ಅವರು ತಮ್ಮ 10 ನೇ ತರಗತಿಯನ್ನು ಹೇಗಾದರೂ ಮಾಡಿ ಪೂರ್ಣಗೊಳಿಸಿದರು, ಕುಟುಂಬದ ಆರ್ಥಿಕ ಹೊರೆಗಳನ್ನು ಕಡಿಮೆ ಮಾಡಲು ವಿವಿಧ ಉದ್ಯೋಗಗಳನ್ನು ಅರಸಿಕೊಂಡು ಹೋಗಿ ಮಾಡತೊಡಗಿದರು. ಬೆಂಗಳೂರಿನ ಮಾನವ ಸಂಪನ್ಮೂಲ ಟ್ರಸ್ಟ್‌ಗೆ ಸೇರಿದರು, ಐಐಟಿ ಚೆನ್ನೈನ ಇಂಜಿನಿಯರ್‌ಗಳು ರಚಿಸಿದ ವಿಶೇಷವಾಗಿ ವಿನ್ಯಾಸಗೊಳಿಸಿದ, ಡಿಟ್ಯಾಚೇಬಲ್ ವಾಹನವನ್ನು ಟ್ರಸ್ಟ್ ಅವರಿಗೆ ಒದಗಿಸಿತು.

ಗಾಲಿಕುರ್ಚಿಯಂತೆ ಈ ವಾಹನವು ಆಹಾರ ವಿತರಣಾ ಏಜೆಂಟ್ ಆಗಿ ಕೆಲಸ ಮಾಡಲು ಅವರಿಗೆ ಸಹಾಯ ಮಾಡಿತು. ಆರು ತಿಂಗಳ ಕಾಲ, ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದರು ಆದರೆ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದ ಅವರ ತಾಯಿಯನ್ನು ನೋಡಿಕೊಳ್ಳಲು ಬೆಳಗಾವಿಗೆ ಮರಳಬೇಕಾಯಿತು.

Sidragavali poses with his trophy and certifcate.
ರಾಯಬಾಗ: ರೈತ ಮಹಿಳೆ 'ಮಲ್ಲವ್ವ' ಶಿಕ್ಷಣ ಕ್ರಾಂತಿ; ಬಡ ವಿದ್ಯಾರ್ಥಿಗಳ ಆಶಾಕಿರಣ

ಪ್ರಸ್ತುತ ಬೆಳಗಾವಿಯಲ್ಲಿ ನೆಲೆಸಿರುವ ಸಿದ್ರಗಾವಳಿ ಅವರು ಕಳೆದ ಒಂದೂವರೆ ವರ್ಷದಿಂದ ಫುಡ್ ಡೆಲಿವರಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಕೈಲಾದಷ್ಟು ಕೆಲಸ ಮಾಡಿದರೂ, ಗ್ರಾಹಕರು ತಮ್ಮ ಮನೆ ಬಾಗಿಲಿಗೆ ಆಹಾರವನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರನ್ನು ದೂಷಿಸಿದ ಸಂದರ್ಭಗಳಿವೆ. ಆದರೆ ಸಾಕಷ್ಟು ಒಳ್ಳೆಯ ಅನುಭವಗಳೂ ಆಗಿವೆ ಎನ್ನುತ್ತಾರೆ.

ಇತ್ತೀಚೆಗಷ್ಟೇ ಅವರು ದೈಹಿಕ ನ್ಯೂನತೆ ಹೊಂದಿರುವ ಅಮೃತಾ ಅವರನ್ನು ವಿವಾಹವಾದರು. ಅವರ ಜೀವನದಲ್ಲಿ ಈ ಹೊಸ ಅಧ್ಯಾಯವು ಹೆಚ್ಚುವರಿ ಜವಾಬ್ದಾರಿಗಳನ್ನು ತಂದಿದೆ ಮತ್ತು ಹೋರಾಟಗಳು ತೀವ್ರಗೊಂಡಿವೆ.

ಸಿದ್ರಗಾವಳಿ ಅವರ ಕ್ರೀಡಾಪ್ರೇಮ ಗಟ್ಟಿಯಾಗಿದ್ದರೂ, ಟೂರ್ನಿಗಳಲ್ಲಿ ಭಾಗವಹಿಸಲು ಆರ್ಥಿಕ ಹೊರೆ ಅವರ ಕನಸುಗಳನ್ನು ಮಸುಕಾಗಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com