ಮೊದಲ ಜೀವಾಮೃತ: ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಎದೆಹಾಲು ಬ್ಯಾಂಕ್; ವಿಜಯಪುರ ಸರ್ಕಾರಿ ಆಸ್ಪತ್ರೆ ಸಜ್ಜು!

ಸುಶೇನಾ ಹೆಲ್ತ್ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ ಸಂತೋಷ್ ಕರ್ಲೆಟ್ಟಿ ನೇತೃತ್ವದಲ್ಲಿ ಎದೆ ಹಾಲು ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತಿದ್ದು, ಅಕಾಲಿಕ ಮತ್ತು ಅನಾರೋಗ್ಯದ ಶಿಶುಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪರಿಹರಿಸುವ ಗುರಿ ಹೊಂದಲಾಗಿದೆ.
The staff at Vijayapura Government Hospital
ವಿಜಯಪುರ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ
Updated on

ವಿಜಯಪುರ: ಜಾಗತಿಕವಾಗಿ ಅತಿ ಹೆಚ್ಚು ಅವಧಿಪೂರ್ವ ಜನನ ಭಾರತದಲ್ಲಿ ಆಗುತ್ತಿದ್ದು, ಎಲ್ಲಾ ಹೆರಿಗೆಗಳಲ್ಲಿ ಶೇ. 12 ರಷ್ಟು ಅವಧಿಪೂರ್ವ ಶಿಶುಗಳ ಜನನಕ್ಕೆ ಕಾರಣವಾಗುತ್ತಿದೆ. ಇಂತಹ ಹಲವು ನವಜಾತ ಶಿಶುಗಳು ವಿಶೇಷವಾಗಿ ಹಿಂದುಳಿದಿರುವ ಜಿಲ್ಲೆಗಳಲ್ಲಿ ತಾಯಿಯ ಹಾಲಿನ ಕೊರತೆಯಿಂದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ವಿಜಯಪುರ ಸರ್ಕಾರಿ ಆಸ್ಪತ್ರೆಯು ಉತ್ತರ ಕರ್ನಾಟಕದಲ್ಲಿ ಮೊದಲ ಎದೆಹಾಲು ಬ್ಯಾಂಕ್ ಸ್ಥಾಪಿಸಲು ಮುಂದಾಗಿದೆ. ಇದು ವಾರ್ಷಿಕವಾಗಿ 2 ಸಾವಿರ ನವಜಾತ ಶಿಶುಗಳಿಗೆ ಸೇವೆ ಸಲ್ಲಿಸಲಿದೆ.

ಸುಶೇನಾ ಹೆಲ್ತ್ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ ಸಂತೋಷ್ ಕರ್ಲೆಟ್ಟಿ ನೇತೃತ್ವದಲ್ಲಿ ಎದೆ ಹಾಲು ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತಿದ್ದು, ಅಕಾಲಿಕ ಮತ್ತು ಅನಾರೋಗ್ಯದ ಶಿಶುಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪರಿಹರಿಸುವ ಗುರಿ ಹೊಂದಲಾಗಿದೆ. ಆರೋಗ್ಯ ಮತ್ತಿತತರ ಕಾರಣಗಳಿಂದಾಗಿ ತಾಯಿಯಂದರು ಎದೆಹಾಲು ನೀಡಲು ಸಾಧ್ಯವಾಗದಂತಹ ದುರ್ಬಲ ಮಕ್ಕಳಿಗೆ ಎದೆಹಾಲು ಒದಗಿಸುವ ಮೂಲಕ ನವಜಾತ ಶಿಶುಗಳ ಮರಣ ಕಡಿಮೆ ಮಾಡುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.

ಆಸ್ಪತ್ರೆಯಲ್ಲಿ ಪ್ರತಿ ವರ್ಷ ಸುಮಾರು 10,000 ಹೆರಿಗೆಗಳನ್ನು ಮಾಡಲಾಗುತ್ತದೆ. ಸುಮಾರು 1,000 ಅವಧಿ ಪೂರ್ವ ಶಿಶುಗಳು ಸೇರಿದಂತೆ 2,000 ನವಜಾತ ಶಿಶುಗಳಿಗೆ ನವಜಾತ ತೀವ್ರ ಆರೈಕೆಯ ಅಗತ್ಯವಿರುತ್ತದೆ. ಅಂತಹ ಶಿಶುಗಳಿಗೆ ಎದೆ ಹಾಲು ಅತ್ಯುತ್ತಮ ಪೌಷ್ಟಿಕಾಂಶದ ಆಯ್ಕೆಯಾಗಿದೆ. ಇದು ಸೋಂಕಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಮರಣವನ್ನು ಶೇಕಡಾ 20 ಕ್ಕಿಂತ ಕಡಿಮೆ ಮಾಡುತ್ತದೆ ಎಂದು ಡಾ ಕಾರ್ಲೆಟ್ಟಿ ಮಾಹಿತಿ ನೀಡಿದರು. ಈ ಮಧ್ಯೆ ಫಾರ್ಮುಲಾ ಅಥವಾ ಹಸುವಿನ ಹಾಲು ಅಕಾಲಿಕ ಶಿಶುಗಳಿಗೆ ಆರೋಗ್ಯದ ಅಪಾಯಗಳನ್ನು ಉಂಟುಮಾಡುತ್ತದೆ. ಹೀಗಾಗಿ ಎದೆಹಾಲು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಜನನದ ನಂತರ ಮೊದಲ ಲಸಿಕೆ: ಎದೆ ಹಾಲಿನ ಪ್ರಯೋಜನಗಳನ್ನು ವಿವರಿಸಿದ ಡಾ. ಕಾರ್ಲೆಟ್ಟಿ, ಹುಟ್ಟಿದ ಮೊದಲ ಗಂಟೆಯಲ್ಲಿ ಉತ್ಪತ್ತಿಯಾಗುವ ಕೊಲೊಸ್ಟ್ರಮ್ ನವಜಾತ ಶಿಶುವಿನ ಮೊದಲ ಲಸಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಕಾಮಾಲೆಯಂತಹ ರೋಗಗಳಿಂದ ರಕ್ಷಿಸುತ್ತದೆ. ಅದರಂತೆ, ನವಜಾತ ಶಿಶುಗಳ ಆರೋಗ್ಯ ಖಾತ್ರಿ ನಿಟ್ಟಿನಲ್ಲಿ ಹಾಲಿನ ಬ್ಯಾಂಕ್ ಪ್ರತಿ ಮಗುವಿಗೆ ತಮ್ಮ ಸ್ವಂತ ತಾಯಿ ಅಥವಾ ದಾನಿಯಿಂದ ಎದೆಹಾಲು ಸಿಗುವಂತೆ ಮಾಡುತ್ತದೆ. ತಾಯಂದರಿಗೆ ಅನಾರೋಗ್ಯ ಮತ್ತಿತರ ಕಾರಣಗಳಿಂದ ಹಾಲುಣಿಸಲು ಸಾಧ್ಯವಾಗದ ಶಿಶುಗಳಿಗೆ ದಾನಿ ಹಾಲು ವಿಶೇಷವಾಗಿ ಅತ್ಯಗತ್ಯ ಎಂದರು.

ಈ ಮಧ್ಯೆ ಮಾತನಾಡಿದ ವಿಜಯಪುರ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಾಸ್ತಿಹೊಳಿ, ತಾಯಿಯ ಸಾವು, ಅನಾರೋಗ್ಯ ಅಥವಾ ಸಾಕಷ್ಟು ಪ್ರಮಾಣ ಹಾಲು ಉತ್ಪಾದನೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಸುಮಾರು ಶೇ. 20 ರಷ್ಟು ನವ ಶಿಶುಗಳಿಗೆ ದಾನಿ ತಾಯಿಯ ಹಾಲು ಅಗತ್ಯವಿದೆ. ಆಸ್ಪತ್ರೆಯಲ್ಲಿ ಹೆರಿಗೆ ಮಾಡುವ 900 ತಾಯಂದಿರಲ್ಲಿ 150 ತಾಯಂದಿರನ್ನು ಹಾಲು ದಾನ ಮಾಡಲು ಮನವೊಲಿಸುವುದು ಸಹ ಬ್ಯಾಂಕಿನ ಆರಂಭಿಕ ಗುರಿಗಳನ್ನು ಪೂರೈಸುತ್ತದೆ ಎಂದು ತಿಳಿಸಿದರು.

ಉತ್ತರ ಕರ್ನಾಟಕ ಪ್ರದೇಶಗಳಿಗೆ ಹೆಚ್ಚಿನ ಪ್ರಯೋಜನ ಕಲ್ಪಿಸುವ ನಿಟ್ಟಿನಲ್ಲಿ ಈ ಹಾಲಿನ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ. ಬೀದರ್ ಮತ್ತು ಕಲಬುರಗಿಯಂತಹ ಇತರ ಜಿಲ್ಲೆಗಳಿಗೆ ಹಾಲು ವಿತರಣೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಆರಂಭದಲ್ಲಿ, ತಿಂಗಳಿಗೆ 45-50 ಲೀಟರ್ ಹಾಲು ಸಂಗ್ರಹಿಸುವ ಗುರಿಯನ್ನು ಹೊಂದಿದ್ದು, ಮೊದಲ ವರ್ಷಕ್ಕೆ ಪ್ರತಿ ತಿಂಗಳು 100 ಲೀಟರ್ ತಲುಪುವ ಗುರಿಯಿದೆ. ಅಂತಿಮವಾಗಿ ಅದನ್ನು 150 ಲೀಟರ್‌ಗೆ ಹೆಚ್ಚಿಸಿದೆ.

ಸಾಮಾಜಿಕ ಕಟ್ಟುಪಾಡುಗಳು: ಎದೆಹಾಲು ದಾನದ ಬಗ್ಗೆ ಸಾಮಾಜಿಕ ಕಟ್ಟುಪಾಡುಗಳೂ ಹೆಚ್ಚಾಗಿವೆ. ಆಸ್ಪತ್ರೆಯು ಶಿಕ್ಷಣ ಮತ್ತು ಸಮಾಲೋಚನೆಯ ಮೂಲಕ ಅವುಗಳನ್ನು ನಿವಾರಿಸಲು ಯೋಜಿಸಿದೆ. ಅನೇಕ ತಾಯಂದಿರಲ್ಲಿ ಹೆಚ್ಚಾಗಿ ಹಾಲು ಉತ್ಪತ್ತಿಯಾಗುತ್ತದೆ. ಇದನ್ನು ವ್ಯಕ್ತಪಡಿಸದಿದ್ದರೆ ತೊಡಕುಗಳಿಗೆ ಕಾರಣವಾಗಬಹುದು. ಅಂತಹ ತಾಯಂದಿರಿಗೆ ಸಲಹೆಗಾರರು ಹೆಚ್ಚುವರಿ ಹಾಲನ್ನು ದಾನ ಮಾಡಲು ಮಾರ್ಗದರ್ಶನ ನೀಡುತ್ತಾರೆ. ಇಲ್ಲದಿದ್ದರೆ ಅದು ವ್ಯರ್ಥವಾಗುತ್ತದೆ.

ರೋಮನ್, ಈಜಿಪ್ಟ್, ಗ್ರೀಕ್ ಮತ್ತು ಭಾರತೀಯ ಸಮಾಜಗಳನ್ನು ಒಳಗೊಂಡಂತೆ ಪ್ರಾಚೀನ ನಾಗರಿಕತೆಗಳಲ್ಲಿ ಎದೆಹಾಲು ದಾನವು ಐತಿಹಾಸಿಕ ಪೂರ್ವನಿದರ್ಶನಗಳನ್ನು ಹೊಂದಿದೆ. ಹಾಲಿನ ಬ್ಯಾಂಕ್ ಈ ಪದ್ಧತಿಯನ್ನು ಆಧುನಿಕ ವ್ಯವಸ್ಥೆಯಲ್ಲಿ ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ. ಹಾಲನ್ನು ಪಾಶ್ಚರೀಕರಿಸಲಾಗಿದೆ ಮತ್ತು ಆರು ತಿಂಗಳವರೆಗೆ ಸಂರಕ್ಷಿಸಲಾಗುತ್ತದೆ ಎಂದು ಡಾ. ಕಾರ್ಲೆಟ್ಟಿ ಹೇಳಿದರು.

ದಾನ ಮಾಡಿದ ಎಲ್ಲಾ ಹಾಲು ಪ್ರಮುಖ ಪೋಷಕಾಂಶಗಳು ಮತ್ತು ಪ್ರತಿಕಾಯಗಳನ್ನು ಸಂರಕ್ಷಿಸಲು ಪಾಶ್ಚರೀಕರಣಕ್ಕೆ ಒಳಗಾಗುತ್ತದೆ. ಆರು ತಿಂಗಳವರೆಗೆ ಸಂರಕ್ಷಿಸಲಾಗುತ್ತದೆ. ಹಾಲನ್ನು ಮೈನಸ್ 20 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಲಾಗುತ್ತದೆ ಆರೋಗ್ಯವಂತ ತಾಯಂದಿರು ಮಾತ್ರ ಹಾಲನ್ನು ದಾನ ಮಾಡಬಹುದು. ಕ್ಯಾನ್ಸರ್ ಅಥವಾ ಎಚ್‌ಐವಿಯಂತಹ ಗಂಭೀರ ಕಾಯಿಲೆ ಇರುವವರು ಅನರ್ಹರು. ಆದಾಗ್ಯೂ, ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ಪರಿಸ್ಥಿತಿ ಹೊಂದಿರುವ ತಾಯಂದಿರಿಗೆ ದಾನ ಮಾಡಲು ಅನುಮತಿಸಲಾಗುವುದು ಎಂದು ಅವರು ತಿಳಿಸಿದರು.

ಎದೆಹಾಲು ಬ್ಯಾಂಕ್
ಎದೆಹಾಲು ಬ್ಯಾಂಕ್

ನಿಲೋಫರ್ ಆಸ್ಪತ್ರೆ ಮಾದರಿ: ವಿಜಯಪುರದ ಹಾಲಿನ ಬ್ಯಾಂಕ್ ಹೈದರಾಬಾದ್‌ನ ನಿಲೋಫರ್ ಆಸ್ಪತ್ರೆಯ ಮಾದರಿಯನ್ನು ಅನುಸರಿಸುತ್ತದೆ. ಇದು ಭಾರತದ ಅತಿದೊಡ್ಡ ತಾಯಂದಿರ ಹಾಲಿನ ಬ್ಯಾಂಕ್ ಹೊಂದಿದೆ. ಇದು ತಿಂಗಳಿಗೆ 300 ಲೀಟರ್ ವರೆಗೆ ಹಾಲು ಸಂಗ್ರಹಿಸುತ್ತದೆ. ನಿಲೋಫರ್ ಆಸ್ಪತ್ರೆಯ ಗಮನಾರ್ಹ ದಾನಿಗಳಲ್ಲಿ ಒಬ್ಬರಾದ ಅರಿವಳಿಕೆ ತಜ್ಞರು ಕೇವಲ ಎರಡು ತಿಂಗಳಲ್ಲಿ 50 ಲೀಟರ್ ಹಾಲನ್ನು ನೀಡಿದರೆ, ಸಾಫ್ಟ್‌ವೇರ್ ಇಂಜಿನಿಯರ್ 28 ಲೀಟರ್ ದಾನ ಮಾಡಿದ್ದಾರೆ ಎಂದು ಡಾ. ಕಾರ್ಲೆಟ್ಟಿ ತಿಳಿಸಿದರು.

ಉಚಿತ ಸೇವೆ: ವಿಜಯಪುರದ ಹಾಲಿನ ಬ್ಯಾಂಕ್‌ನ ಸೇವೆಗಳು ತಪಾಸಣೆ, ಪಾಶ್ಚರೀಕರಣ ಮತ್ತು ಹಾಲು ವಿತರಣೆ ಸೇರಿದಂತೆ ಎಲ್ಲವೂ ಸಂಪೂರ್ಣ ಉಚಿತವಾಗಿರುತ್ತದೆ. ಹಾಲನ್ನು ಸ್ವೀಕರಿಸುವವರಿಂದ ಯಾವುದೇ ಶುಲ್ಕ ಪಡೆಯುವುದಿಲ್ಲ. ಈ ಕ್ರಮ ಉತ್ತರ ಕರ್ನಾಟಕದಲ್ಲಿ ನವಜಾತ ಶಿಶುಗಳ ಆರೈಕೆಯಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ ಮತ್ತು ಶಿಶುಗಳ ಬದುಕುಳಿಯುವಿಕೆಯ ಪ್ರಮಾಣವನ್ನು ಗಣನೀಯವಾಗಿ ಸುಧಾರಿಸುತ್ತದೆ ಎಂದು ಡಾ ಮಾಸ್ತಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುಷೇನಾ ಹೆಲ್ತ್ ಫೌಂಡೇಶನ್‌ನಿಂದ 2 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಲಿನ ಬ್ಯಾಂಕ್ ಅನ್ನು ಡಿಸೆಂಬರ್‌ನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರಿಸುವ ಮೊದಲು ಸಂಸ್ಥೆಯು ಘಟಕವನ್ನು ಎರಡು ವರ್ಷಗಳ ಕಾಲ ನಿರ್ವಹಿಸುತ್ತದೆ. ಈ ಸಮಯದಲ್ಲಿ ಸ್ಥಳೀಯ ಸಿಬ್ಬಂದಿ ಅದರ ಕಾರ್ಯಾಚರಣೆ, ನಿರ್ವಹಣೆಗೆ ಅಗತ್ಯ ತರಬೇತಿಯನ್ನು ಪಡೆಯುತ್ತಾರೆ. ಶಿಕ್ಷಣ, ದಾನಿಗಳ ಭಾಗವಹಿಸುವಿಕೆ ಮತ್ತು ಸುಧಾರಿತ ಸಂರಕ್ಷಣೆ ತಂತ್ರಗಳ ಮೂಲಕ, ಈ ನವೀನ ಉಪಕ್ರಮವು ಜೀವಗಳನ್ನು ಉಳಿಸುತ್ತದೆ ಮತ್ತು ಪ್ರದೇಶದಾದ್ಯಂತ ಭವಿಷ್ಯದ ಹಾಲು ಬ್ಯಾಂಕ್‌ಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

The staff at Vijayapura Government Hospital
ರಸ್ತೆ ಬದಿ ಬಿದ್ದಿದ್ದ ನವಜಾತ ಶಿಶುವಿಗೆ ಎದೆಹಾಲು ಉಣಿಸಿ ಮಾನವೀಯತೆ ಮೆರೆದ ಪೇದೆ!

ಜೀವನಕ್ಕೆ ಪ್ರಯೋಜನಗಳು: ಹುಟ್ಟಿನಿಂದಲೇ ಮಗುವಿಗೆ ತಾಯಿಯ ಹಾಲು ಪ್ರಯೋಜನಕಾರಿಯಾಗಿದೆ:

ಪೌಷ್ಟಿಕಾಂಶ: ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ವಿಟಮಿನ್‌ಗಳು, ಖನಿಜಗಳು ಮತ್ತು ನೀರು ಸೇರಿದಂತೆ ಮಗುವಿನ ಜೀವನದ ಮೊದಲ ಆರು ತಿಂಗಳವರೆಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ

ರಕ್ಷಣೆ: ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ ಮತ್ತು ಆಸ್ತಮಾ, ಸ್ಥೂಲಕಾಯತೆ, ಟೈಪ್ 1 ಮಧುಮೇಹ, ಕಿವಿ ಸೋಂಕುಗಳು ಮತ್ತು ಹಠಾತ್ ಶಿಶು ಸಾವಿನ ಸಿಂಡ್ರೋಮ್ (SIDS) ಸೇರಿದಂತೆ ಅನೇಕ ಕಾಯಿಲೆಗಳು ಮತ್ತು ರೋಗಗಳಿಂದ ಶಿಶುಗಳನ್ನು ರಕ್ಷಿಸುತ್ತದೆ.

ಪ್ರತಿಕಾಯ (Antibodies) ತಾಯಿಯಿಂದ ಪ್ರತಿಕಾಯಗಳನ್ನು ಹೊಂದಿರುತ್ತದೆ. ಇದು ಮಗುವನ್ನು ರಕ್ಷಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com