ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ DYSP ಬಸವರಾಜ್ ಯಲಿಗಾರ್: 'ಬಸವಣ್ಣನ ವಚನ'ಗಳು ಇಂಗ್ಲೀಷ್ ಗೆ ಅನುವಾದ!

54 ವರ್ಷದ ಯಲಿಗಾರ್, ತನ್ನ ವೃತ್ತಿಗೂ ಮೀರಿದ ಇತರ ಕೆಲಸಗಳಿಂದಲೂ ಹೆಸರುವಾಸಿಯಾಗಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಇವರ 'ನನ್ನೊಳಗಿನ ನಾನು ನೀನೇ' (My Me is Thee) ಪುಸ್ತಕದಲ್ಲಿ ಬಸವಣ್ಣನವರ 959 ವಚನಗಳನ್ನು ಇಂಗ್ಲೀಷ್ ಗೆ ಅನುವಾದಿಸಿದ್ದಾರೆ.
Basavaraj Yeligar
ಬಸವರಾಜ್ ಯಲಿಗಾರ್
Updated on

ವಿಜಯಪುರದಲ್ಲಿ DYSP ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಬಸವರಾಜ್ ಯಲಿಗಾರ್, ತಮ್ಮ ಕೆಲಸದ ಒತ್ತಡದ ನಡುವೆಯೂ ಭಕ್ತಿ ಭಂಡಾರಿ ಬಸವಣ್ಣನವರ ವಚನಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದ ಮಾಡುತ್ತಾ ಹೆಸರುವಾಸಿಯಾಗುತ್ತಿದ್ದಾರೆ. ಸೋಲಾಪುರ ರಸ್ತೆಯ ತಮ್ಮ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಪ್ರಯಾಣಿಸುತ್ತಿರಲಿ ಅಥವಾ ಜಿಲ್ಲಾ ಪಂಚಾಯತ್‌ನಲ್ಲಿ ಸಭೆಗಳಿಗೆ ಹಾಜರಾಗುತ್ತಿರಲಿ, ಹೀಗೆ ಎಲ್ಲಿಯಾದರೂ ಸ್ವಲ್ಪ ಸಮಯ ಸಿಕ್ಕರೆ ಸಾಕು ಯೆಲಿಗರ್, ತಮ್ಮ ಅನುವಾದ ಕಾರ್ಯವನ್ನು ಮುಂದುವರಿಸಲು ಉಪಯೋಗಿಸಿಕೊಳ್ತಾರೆ.

ಎಲ್ಲಿಗಾದರೂ ಪ್ರಯಾಣಿಸುತ್ತಿದ್ದರೂ ಆ ಅವಧಿಯಲ್ಲೂ ವಚನ ಬರೆಯುತ್ತಾ ಇರ್ತಾರೆ. ಬಸವೇಶ್ವರ ಮತ್ತಿತರ ಸಂತರ ಜ್ಞಾನವನ್ನು ಇಂಗ್ಲಿಷ್ ಅನುವಾದಗಳ ಮೂಲಕ ಓದುಗರಿಗೆ ತಲುಪಿಸುತ್ತಿದ್ದಾರೆ. ಸಾಮಾನ್ಯವಾಗಿ ಕರ್ತವ್ಯದ ವೇಳೆ ವಚನ ಅನುವಾದಕ್ಕೆ ಸಾಧ್ಯವಾಗಲ್ಲ. ಹೀಗಾಗಿ ಪ್ರಯಾಣಿಸುವಾಗ ಅಥವಾ ಕಾಯುವಾಗ ಸಿಗುವ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುತ್ತೇನೆ. ವಚನಗಳನ್ನು ಭಾಷಾಂತರಿಸುವುದು ನನಗೆ ಅಪಾರ ಸಂತೋಷವನ್ನುಂಟು ಮಾಡುತ್ತದೆ ಎಂದು ಅವರು ಹೇಳುತ್ತಾರೆ.

ನನ್ನೊಳಗಿನ ನಾನು ನೀನೇ': 54 ವರ್ಷದ ಯಲಿಗಾರ್, ತನ್ನ ವೃತ್ತಿಗೂ ಮೀರಿದ ಇತರ ಕೆಲಸಗಳಿಂದಲೂ ಹೆಸರುವಾಸಿಯಾಗಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಇವರ 'ನನ್ನೊಳಗಿನ ನಾನು ನೀನೇ' (My Me is Thee) ಪುಸ್ತಕದಲ್ಲಿ ಬಸವಣ್ಣನವರ 959 ವಚನಗಳನ್ನು ಇಂಗ್ಲೀಷ್ ಗೆ ಅನುವಾದಿಸಿದ್ದಾರೆ. ಇದು ಮೂರು ಬಾರಿ ಪ್ರಕಟಗೊಂಡಿದ್ದು, ಸುಮಾರು 3,000 ಪ್ರತಿಗಳು ಈಗಾಗಲೇ ಮಾರಾಟವಾಗಿವೆ.

ಯಲಿಗಾರ್ ಬಾಲ್ಯದ ಬದುಕು:

ಗದಗ ಜಿಲ್ಲೆಯ ನರಗುಂದದಲ್ಲಿ ಜನಿಸಿದ ಯಲಿಗಾರ್, ಎಸ್‌ಎಸ್‌ಎಲ್‌ಸಿಗಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳಕ್ಕೆ ತೆರಳುವ ಮುನ್ನ ತಮ್ಮ ಊರಿನಲ್ಲಿಯೇ ಪ್ರಾಥಮಿಕ ಶಾಲಾ ಶಿಕ್ಷಣ ಪೂರ್ಣಗೊಳಿಸಿದರು. ನಂತರ ಧಾರವಾಡದಿಂದ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಧಾರವಾಡದ ಕೃಷಿ ಕಾಲೇಜಿನಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಪಿಎಸ್‌ಐ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಪೊಲೀಸ್ ಸೇವೆಗೆ ಸೇರ್ಪಡೆಯಾದರು. ಈಗ ವಿಜಯಪುರದ ಡಿಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಯಲಿಗಾರ್ ಅವರ ಬರವಣಿಗೆಯ ಪ್ರತಿಭೆ ಬಾಲ್ಯದಿಂದಲೇ ಬಂದಿದೆ. ಅವರ ತಂದೆ ಬಸವರಾಜ ಅವರನ್ನು ಗ್ರಾಮಸ್ಥರಿಗೆ ಭೂ ದಾಖಲೆಗಳು ಅಥವಾ ಹಣಕಾಸು ವಹಿವಾಟು ದಾಖಲೆಗಳನ್ನು ರಚಿಸುವಲ್ಲಿ ಸಹಾಯ ಮಾಡುವಂತೆ ಕೇಳುತ್ತಿದ್ದರು. ನಾನು ನನ್ನ ಶಾಲಾ ದಿನಗಳಿಂದ ಬರವಣಿಗೆಯ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಿದ್ದೆ. ನಂತರ ಅದು ನನ್ನ ಸಾಹಿತ್ಯ ಕೃತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ವಚನಗಳ ಪ್ರಭಾವ: ಅವರ ಕುಟುಂಬವು ನರಗುಂದದಲ್ಲಿರುವ ಅಲ್ಲಮಪ್ರಭು ಮಠಕ್ಕೆ ಭೇಟಿ ನೀಡುತ್ತಿತ್ತು. ಈ ಮಠವು ವಚನಗಳು, ಜಾತ್ಯತೀತ ತತ್ವಗಳು ಮತ್ತು ಸಮುದಾಯಗಳ ನಡುವಿನ ಸಾಮರಸ್ಯದ ಅಧ್ಯಯನ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ವಚನಗಳ ಬಗ್ಗೆ ನನ್ನ ಒಲವು ರೂಪಿಸುವಲ್ಲಿ ಮತ್ತು ನನ್ನ ಜಾತ್ಯತೀತ ದೃಷ್ಟಿಕೋನವನ್ನು ಪೋಷಿಸುವಲ್ಲಿ ಮಠವು ನಿರ್ಣಾಯಕ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

Basavaraj Yeligar
ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು...: ವಿದೇಶಿ ನೆಲದಲ್ಲಿ ಕನ್ನಡದ ಕಂಪು ಹರುಡುತ್ತಿರುವ 'ಕನ್ನಡ ಮಿತ್ರರು'!

ಯಲಿಗಾರ್ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಸಂತ-ಕವಿ ಶಿಶುನಾಳ್ ಶರೀಫ್ ಅವರ ದ್ವಿಪದಿಗಳನ್ನು ಭಾಷಾಂತರಿಸಲು ಪ್ರಯತ್ನಿಸಿದರು. ನಂತರ ಅವರು "ಡೆಲ್ಯೂಜ್ ಆಫ್ ಡ್ರಾಫ್ಟ್ - ಯಾರು ಜವಾಬ್ದಾರಿ?" ಎಂಬ ಸಾಮಾನ್ಯ ಕಾಲ್ಪನಿಕವಲ್ಲದ ಕೃತಿಯನ್ನು ಅನುವಾದಿಸಿದ್ದಾರೆ. 2021 ರಲ್ಲಿ ಬಸವೇಶ್ವರರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಲು ಪ್ರಾರಂಭಿಸಿದರು. 808 ಪುಟಗಳ ಸಂಪುಟವನ್ನು ಪೂರ್ಣಗೊಳಿಸಲು ಅವರಿಗೆ ಸುಮಾರು ನಾಲ್ಕು ವರ್ಷಗಳು ಬೇಕಾಯಿತು. ಅವರು ಈ ಹಿಂದೆ ವಚನಗಳ ಹಲವಾರು ಇಂಗ್ಲಿಷ್ ಅನುವಾದಗಳನ್ನು ಓದಿದಾಗ ಎಂದಿಗೂ ತೃಪ್ತಿ ಅನಿಸಲಿಲ್ಲ. ಬಸವಣ್ಣನವರ ಪದಗಳ ಪವಿತ್ರತೆ ಮತ್ತು ತಾತ್ವಿಕ ಶ್ರೀಮಂತಿಕೆ ಅವುಗಳಲ್ಲಿ ಇರಲಿಲ್ಲ. ಹೀಗಾಗಿ ನಾನೇ ಅನುವಾದ ಮಾಡಲು ಪ್ರಾರಂಭಿಸಿದ್ದಾಗಿ ಅವರು ಹೇಳುತ್ತಾರೆ.

ಹಳೆ ಗನ್ನಡ ಅರ್ಥಮಾಡಿಕೊಳ್ಳುವುದು ಸುಲಭದ ಕೆಲಸವಾಗಿರಲಿಲ್ಲ, ಏಕೆಂದರೆ ವಚನಗಳು ಹೆಚ್ಚಾಗಿ ಸಂಕೇತಗಳು,ತತ್ವಪದಗಳನ್ನು ಒಳಗೊಂಡಿರುತ್ತವೆ. ಹೀಗಾಗಿ ನಿಖರತೆಗಾಗಿ ಹಲವು ಸ್ವಾಮೀಜಿಗಳು, ವಿದ್ವಾಂಸರು ಮತ್ತು ಐತಿಹಾಸಿಕ ಕನ್ನಡ ಸಾಹಿತ್ಯದ ತಜ್ಞರನ್ನು ಯಲಿಗಾರ್ ಸಂಪರ್ಕಿಸಿದ್ದಾರೆ. ದಿವಂಗತ ವಿದ್ವಾಂಸ ಎಂ ಎಂ ಕಲ್ಬುರ್ಗಿ ಮತ್ತು ಇತರ ಪ್ರಖ್ಯಾತ ಸಂಶೋಧಕರ ಪುಸ್ತಕಗಳನ್ನು ಸಹ ಅಧ್ಯಯನ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.

Basavaraj Yeligar
ದೇಶಕ್ಕೆ ಹೆಮ್ಮೆ ತಂದ ತಿಪಟೂರು IAS ಅಧಿಕಾರಿ ಯಶೋಗಾಥೆ: ಮಧ್ಯಪ್ರದೇಶದಲ್ಲಿ 'ಮಣ್ಣಿನ ಮಗ'ನ ಜಲಕ್ರಾಂತಿ!

ಯಲಿಗಾರ್ ಈಗ ಸಂತ-ಕವಿ ಅಕ್ಕಮಹಾದೇವಿ ಬರೆದ ವಚನಗಳ ಅನುವಾದವನ್ನು ಕೈಗೊಂಡಿದ್ದಾರೆ. ಅವರು ಸುಮಾರು 450 ವಚನಗಳನ್ನು ಆಯ್ಕೆ ಮಾಡಿದ್ದಾರೆ, ಅವುಗಳಲ್ಲಿ ಸುಮಾರು 250 ವಚನಗಳನ್ನು ಈಗಾಗಲೇ ಅನುವಾದಿಸಿದ್ದಾರೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಅದನ್ನು ಪೂರ್ಣಗೊಳಿಸಲು ಮತ್ತು ಅಕ್ಕಮಹಾದೇವಿಯ ಜನ್ಮಸ್ಥಳವಾದ ಶಿವಮೊಗ್ಗ ಜಿಲ್ಲೆಯ ಉತಾಡಿ ಗ್ರಾಮದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಲು ಅವರು ಯೋಜಿಸಿದ್ದಾರೆ.

ಕನ್ನಡಕ್ಕೆ ಇಸ್ಲಾಮಿಕ್ ಪುಸ್ತಕ ಅನುವಾದ:

ಅವರು ಇಂಗ್ಲಿಷ್‌ನಿಂದ ಕನ್ನಡಕ್ಕೆ ಇಸ್ಲಾಮಿಕ್ ಪುಸ್ತಕವನ್ನು ಸಹ ಅನುವಾದಿಸುತ್ತಿದ್ದಾರೆ. ಮೊಹಮ್ಮದ್ ಅಹ್ಮದ್ ಬರೆದ 'Would You Like to Know Something About Islam'ಎಂಬ ಪುಸ್ತಕವನ್ನು ಇಸ್ಲಾಮಿಕ್ ಧರ್ಮಗುರು ಸಯೀದ್ ತನ್ವೀರ್ ಹಶ್ಮಿ ಅವರಿಗೆ ನೀಡಿದ್ದಾರೆ. ನಾನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಪುಸ್ತಕವನ್ನು ಅನುವಾದಿಸುತ್ತಿರುವುದು ಇದೇ ಮೊದಲು. ಒಂದು ತಿಂಗಳೊಳಗೆ ಅದನ್ನು ಪೂರ್ಣಗೊಳಿಸುವ ಇಚ್ಚೆ ವ್ಯಕ್ತಪಡಿಸಿದ್ದಾರೆ.

ಒತ್ತಡ ರಹಿತ ಜೀವನಕ್ಕೆ ಆಧ್ಯಾತ್ಮಿಕತೆ ಅತ್ಯಗತ್ಯ: ಆಧ್ಯಾತ್ಮಿಕ ಚಿಂತನೆಯೊಂದಿಗಿನ ಅವರ ಧೀರ್ಘ ಸಂಪರ್ಕ, ವಿಶೇಷವಾಗಿ ವಚನಗಳ ಮೂಲಕ, ಪೊಲೀಸ್ ಕಾರ್ಯದ ಸವಾಲುಗಳನ್ನು ಎದುರಿಸಲು ಸಾಧ್ಯವಾಗಿದೆ. ಆಧ್ಯಾತ್ಮಿಕತೆಯು ಶಾಂತಿ, ಸ್ಪಷ್ಟತೆ ಮತ್ತು ಭಾವನಾತ್ಮಕ ಸಮತೋಲನವನ್ನು ತರುತ್ತದೆ. ನನ್ನ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಅದು ನನಗೆ ಅಪಾರವಾಗಿ ನೆರವಾಗಿದೆ ಎಂದು ಯಲಿಗಾರ್ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com