ಜುಮ್ಮೆನ್ನುವ ಗೆಳತಿಯೇ ಜಿಮ್ಮು!
ಬಾರ್ಸಿಲೋನಾ ಫುಟ್ಬಾಲ್ ಕ್ಲಬ್‌ದಲ್ಲಿ 15 ವರ್ಷಗಳ ವೈಭವದ ವೃತ್ತಿಜೀವನ ಕಳೆದವನು ಆತ. ಹತ್ತು ವರ್ಷ ತಂಡದ ನಾಯಕತ್ವ ವಹಿಸಿಕೊಂಡಿದ್ದಾನೆ. ಅಲ್ಲದೆ, ನಾಯಕತ್ವದ ಅವಧಿಯಲ್ಲಿ ಬಾರ್ಸಿಲೋನಾಕ್ಕೆ 21 ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾನೆ. ಆತ ಮತ್ತ್ಯಾರೂ ಅಲ್ಲ, ಕಾರ್ಲಸ್ ಪಿಯೋಲ್!
36ನೇ ವಯಸ್ಸಿನಲ್ಲಿ ಮೊಣಕಾಲು ನೋವು ಕಾಣಿಸಿಕೊಂಡಿದ್ದರಿಂದ ಫುಟ್ಬಾಲ್ ವೃತ್ತಿಗೆ ನಿವೃತ್ತಿ ಹೇಳದ ಮನುಷ್ಯ. ಆದರೆ, ವೃತ್ತಿ ಜೀವನದ ನಂತರ ಫಿಟ್ನೆಸ್ ಉಳಿಸಿಕೊಳ್ಳುವುದು ಮಾತ್ರ ಆತನಿಗೆ ಸಮಸ್ಯೆಯಾಯಿತು. ಅದಕ್ಕೆ ಆತ ಕಂಡುಕೊಂಡ ದಾರಿ ತುಂಬಾ ರೋಚಕ.
ಜಿಮ್‌ಗಾಗಲಿ, ಫುಟ್ಬಾಲ್ ಮೈದಾನಕ್ಕೆ ಮರಳಿ ವ್ಯಾಯಾಮ ಮಾಡುವ ಗೋಜಿಗಾಗಲಿ ಆತ ಹೋಗಲಿಲ್ಲ. ಬದಲಾಗಿ ಆತ ಕಂಡ ಸುಲಭ ಉಪಾಯ ತನ್ನ ಗೆಳತಿಯನ್ನೇ ಫಿಟ್ನೆಸ್ ಸಾಧನಾಗಿ ಬಳಸಿಕೊಂಡಿದ್ದು! ವೆನೆಸ್ಸಾ ಲಾರೆಂಜೋ ಅವರನ್ನೇ ಫಿಟ್ನೆಸ್ ಸಾಧನವಾಗಿಸಿಕೊಂಡ ಪಿಯೋಲ್ ತಮ್ಮ ಅಂಗಸೌಷ್ಟವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಪಿಯೋಲ್ ತಮ್ಮ ಗೆಳತಿಯೊಂದಿಗೆ ಹೀಗೆಲ್ಲ ವ್ಯಾಯಾಮ ಮಾಡುತ್ತಿರುವುದು, ಭವಿಷ್ಯದಲ್ಲಿ ವೇಟ್‌ಲಿಫ್ಟಿಂಗ್‌ಗೆ ಸೇರಲೆಂದೇ ಎಂದು ಅವರ ಗೆಳೆಯರು ಗುಮಾನಿ ವ್ಯಕ್ತಪಡಿಸಿದ್ದಾರಂತೆ!
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ