ಮುಂಬೈ: ಮುಂದಿನ ವರ್ಷ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭಾರತದ 30 ಸಂಭವನೀಯ ಆಟಗಾರರ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರ ಪ್ರಕಟಿಸಿದ್ದು, ಟೀ ಇಂಡಿಯಾದ ಐವರು ಹಿರಿಯ ಆಟಗಾರರಿಗೆ ಕೊಕ್ ನೀಡಲಾಗಿದೆ.
ಇಂದು ಮುಂಬೈನಲ್ಲಿ ನಡೆದ ಸಂದೀಪ್ ಪಾಟೀಲ್ ನೇತೃತ್ವದ ಐವರು ಸದಸ್ಯರ ರಾಷ್ಟ್ರೀಯ ಆಯ್ಕೆ ಸಮಿತಿ ಸಭೆಯಲ್ಲಿ 30 ಸಂಭವನೀಯ ಆಟಗಾರರ ಆಯ್ಕೆಯನ್ನು ಅಂತಿಮಗೊಳಿಸಲಾಗಿದ್ದು, ಹಿರಿಯ ಆಟಗಾರರಾದ ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್ ಖಾನ್, ಹರ್ಭಜನ್ ಸಿಂಗ್ ಹಾಗೂ ಗೌತಮ್ ಗಂಭೀರ್ ಅವರನ್ನು ವಿಶ್ವಕಪ್ ಪಂದ್ಯಾವಳಿಯಿಂದ ಹೊರಗಿಡಲಾಗಿದೆ.
ಕಳೆದ 2011ರ ವಿಶ್ವಕಪ್ ಟೂರ್ನಿಯ ಆಟಗಾರನಾಗಿ ಹೊರಹೊಮ್ಮಿದ್ದ ಯುವರಾಜ್ ಸಿಂಗ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬ್ಯಾಟಿಂಗ್ ವೈಫಲ್ಯದಿಂದ ಬಳಲುತ್ತಿದ್ದು, ಆಯ್ಕೆದಾರರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ.
2015ರ ವಿಶ್ವಕಪ್‌ಗೆ ಟೂರ್ನಿಗೆ ಆಯ್ಕೆಯಾದ ಆಟಗಾರರು
ಮಹೇಂದ್ರ ಸಿಂಗ್ ಧೋನಿ (ನಾಯಕ)
ವಿರಾಟ್ ಕೊಹ್ಲಿ
ಶಿಖರ್ ಧವನ್
ರೋಹಿತ್ ಶರ್ಮಾ
ಅಜಿಂಕ್ಯಾ ರಹನೆ
ರಾಬಿನ್ ಉತ್ತಪ್ಪ
ಸುರೇಶ್ ರೈನಾ
ಅಂಬಾಟಿ ರಾಯ್ಡು
ಕೇದಾರ್ ಜಾಧವ್
ಮನೋಜ್ ತಿವಾರಿ
ಮನಿಶ್ ಪಾಂಡೆ
ವೃದ್ಧಿಮಾನ್ ಸಹ
ಫರ್ವೇಜ್ ರಸೂಲ್
ರವೀಂದ್ರ ಜಡೆಜಾ
ಇಶಾಂತ್ ಶರ್ಮಾ
ಭುವನೇಶ್ವರ ಕುಮಾರ್
ಆರ್ ಅಶ್ವಿನ್
ಸಂಜು ಸ್ಯಾಮ್‌ಸನ್
ಅಕ್ಷರ್ ಪಟೇಲ್
ಕರ್ಣ್ ಶರ್ಮಾ
ಅಮಿತ್ ಮಿಶ್ರಾ
ಮೊಹಮ್ಮದ್ ಶಮಿ
ಉಮೇಶ್ ಯಾದವ್
ವರುಣ್ ಅರೋನ್
ಧವಲ್ ಕುಲಕರ್ಣಿ
ಸ್ಟುವರ್ಟ್ ಬಿನ್ನಿ
ಮೊಹಿತ್ ಶರ್ಮಾ
ಅಶೋಕ್ ದಿಂಡಾ
ಕುಲದೀಪ್ ಯಾದವ್
ಮುರಳಿ ವಿಜಯ್
Advertisement