ಸರಿತಾ ದೇವಿಯನ್ನು ರಕ್ಷಿಸುವುದಕ್ಕಾಗಿಯೇ ನಾನು ಪತ್ರ ಬರೆದಿದ್ದೆ: ಸಚಿನ್

ಇಂಚಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಹಿಂತಿರುಗಿಸಿದ್ದಕ್ಕಾಗಿ ಬಾಕ್ಸರ್ ಸರಿತಾ ದೇವಿಗೆ ಅಂತಾರಾಷ್ಟ್ರೀಯ ...
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ಮುಂಬೈ: ಇಂಚಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಹಿಂತಿರುಗಿಸಿದ್ದಕ್ಕಾಗಿ ಬಾಕ್ಸರ್ ಸರಿತಾ ದೇವಿಗೆ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ನಿಷೇಧ ಹೇರಿರುವ ಬಗ್ಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದಾರೆ.

ಆಕೆಯ ವೃತ್ತಿಜೀವನ ನಿಂತು ಹೋಗುದಂತೆ ತಡೆಯಲು ನಾನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್‌ಗೆ ಪತ್ರ ಬರೆದಿದ್ದೆ ಎಂದು ಸಚಿನ್ ಹೇಳಿದ್ದಾರೆ.

ಆಕೆ ಒಂದು ಚಿಕ್ಕ ತಪ್ಪು ಮಾಡಿದ್ದಾರೆ ಅಷ್ಟೇ. ಅದರಿಂದಾಗಿ ಆಕೆಯ ವೃತ್ತಿ ಜೀವನವೇ ಇಕ್ಕಟ್ಟಿಗೆ ಸಿಲುಕುವಂತಾಗಬಾರದು ಎಂದು ನಾನು ಪತ್ರ ಬರೆದಿದ್ದೆ ಎಂದಿದ್ದಾರೆ ಸಚಿನ್.

ಬುಧವಾರ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ಬಾಕ್ಸರ್ ಸರಿತಾ ದೇವಿಗೆ 1 ವರ್ಷ ನಿಷೇಧ ಹೇರಿದೆ.

ಸರಿತಾ ಅವರ ನಿಷೇಧ ಕಾಲಾವಧಿ ಅಕ್ಟೋಬರ್ 1, 2014 ರಿಂದ ಅಕ್ಟೋಬರ್ 1, 2015ರವರೆಗೆ ಆಗಿದ್ದು, 1000 ಸ್ವಿಸ್ ಫ್ರಾಂಕ್ಸ್  ದಂಡವನ್ನೂ ಪಾವತಿಸುವಂತೆ ಅಸೋಸಿಯೇಷನ್ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com