
ಮುಂಬೈ: ಪ್ರಸ್ತುದ ಕ್ರೀಡಾಲೋಕದಲ್ಲಿ ಭಾರತ ಸಾಧಿಸಿರುವ ಪ್ರಗತಿ ತೃಪಿ ತಂದಿದೆ ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಭಾರತೀಯ ಕ್ರೀಡಾ ಸಾಧಕರು ಗಳಿಸಿರುವ ಯಶಸ್ಸು ಹಾಗೂ ಸಾಧನೆಯಿಂದ ಹರ್ಷಗೊಂಡಿರುವುದಾಗಿ ಅವರು ತಿಳಿಸಿದರು.
ರಾಜರ್ಹತ್‌ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಈಜು ಕೊಳವನ್ನು ಉದ್ಘಾಟಿಸಲು ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ 34 ಸಾವಿರ ಗುಲಾಬಿ ಹೂಗಳುಳ್ಳ ದೊಡ್ಡ ಹಾರವನ್ನು ಹಾಕಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಅವರು, ಬಾಕ್ಸಿಂಗ್, ಕುಸ್ತಿ, ಆರ್ಚೆರಿ, ಈಜು ಮುಂತಾದ ಕ್ರೀಡಾ ವಿಭಾಗಗಳಲ್ಲಿ ಭಾರತೀಯ ಕ್ರೀಡಾಪಟುಗಳು ವಿಶ್ವಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ದೇಶದ ಮೂಲೆಮೂಲೆಗಳಲ್ಲಿ ಅನೇಕ ಕ್ರೀಡಾಪತ್ರಿಭೆಗಳಿದ್ದಾರೆ. ಅವರೆಲ್ಲರನ್ನೂ ಹುಡುಕಿ ಅವರನ್ನು ಸೂಕ್ತವಾದ ರೀತಿಯಲ್ಲಿ ತರಬೇತುಗೊಳಿಸಬೇಕು. ಇದರಿಂದ, ಭವಿಷ್ಯದ ಜಾಗತಿಕ ಕ್ರೀಡಾರಂಗದಲ್ಲಿ ಭಾರತ ಬೆಳಗಲು ಸಹಾಯವಾಗುತ್ತದೆ ಎಂದರು.
Advertisement