ಉಸೇನ್ ಬೋಲ್ಟ್
ಉಸೇನ್ ಬೋಲ್ಟ್

ಒಲಿಂಪಿಕ್ಸ್‌ನಲ್ಲಿ ಬದಲಾವಣೆ ಹಾಸ್ಯಾಸ್ಪದ: ಬೋಲ್ಟ್

Published on

ಕಿಂಗ್‌ಸ್ಟನ್: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 200 ಮಿ. ಓಟ ಸೇರಿದಂತೆ ಇತರೆ ಐದು ಸ್ಪರ್ಧೆಗಳಲ್ಲಿ ಬದಲಾವಣೆ ತರುವ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಖ್ಯಾತ ಸ್ಪ್ರಿಂಟರ್ ಜಮೈಕಾದ ಉಸೇನ್ ಬೋಲ್ಟ್, ಒಲಿಂಪಿಕ್ಸ್ ಕಾರ್ಯಕ್ರಮದಲ್ಲಿ ಈ ಬದಲಾವಣೆ ಹಾಸ್ಯಾಸ್ಪದ. ಇದು ಉತ್ತಮ ಬೆಳವಣಿಗೆಯಲ್ಲಿ ಎಂದಿದ್ದಾರೆ.

ಆಸ್ಟ್ರೇಲಿಯಾ ಮಾಧ್ಯಮದಲ್ಲಿ ಬಂದಿರುವ ವರದಿ ಪ್ರಕಾರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 200 ಮೀ. ಓಟದ ಜತೆಗೆ ಇನ್ನು ಐದು ಕ್ರೀಡೆಗಳನ್ನು ಕೈಬಿಡುವ ಬಗ್ಗೆ ಸಲಹೆ ನೀಡಲಾಗಿದೆ ಎಂದು ತಿಳಿಸಲಾಗಿತ್ತು. ಈ ವರದಿ ಹಿನ್ನೆಲೆಯಲ್ಲಿ ಬೋಲ್ಟ್ ಪ್ರತಿಕ್ರಿಯೆ ನೀಡಿದ್ದಾರೆ.

ಒಲಿಂಪಿಕ್ಸ್ ಪ್ರಮುಖ ಹೈಲೆಟ್ ಎಂದರೆ, ಫೀಲ್ಡ್ ಹಾಗೂ ಟ್ರ್ಯಾಕ್ ಸ್ಪರ್ಧೆಗಳು. ಹಾಗಾಗಿ ಈ ಸ್ಪರ್ಧೆಗಳಲ್ಲಿ ಬದಲಾವಣೆ ಸರಿಯಲ್ಲ. ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆಗಳ ಒಕ್ಕೂಟ(ಐಎಎಎಫ್) ಈ ನಿರ್ಧಾರಕ್ಕೆ ಒಪ್ಪಿಕೊಳ್ಳಬಾರದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com