
ಲಂಡನ್: ಮುಂದಿನ ವರ್ಷ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಇಂಗ್ಲೆಂಡ್ ತಂಡ ಅಂತಿಮ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ತಂಡದಲ್ಲಿ ಇಷ್ಟು ದಿನಗಳ ಕಾಲ ನಾಯಕರಾಗಿದ್ದ ಆಲಸ್ಟೇರ್ ಕುಕ್ ಸ್ಥಾನ ಪಡೆಯದಿರುವುದು ಅಚ್ಚರಿ ಮೂಡಿಸಿದೆ.
ಶನಿವಾರ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ 15 ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಅಂತಿಮ ತಂಡ ಪ್ರಕಟಿಸಿದ ಮೊದಲ ತಂಡವಾಗಿದೆ ತಂಡದ ನಾಯಕರನ್ನಾಗಿ ಎಡಗೈ ಬ್ಯಾಟ್ಸ್‌ಮನ್ ಐಯಾನ್ ಮಾರ್ಗನ್ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಕಟಗೊಂಡಿರುವ ತಂಡ
ಐಯಾನ್ ಮಾರ್ಗನ್(ನಾಯಕ), ಮೊಯೀನ್ ಅಲಿ, ಜೇಮ್ಸ್ ಆ್ಯಂಡರ್ಸನ್, ಗ್ಯಾರಿ ಬ್ಯಾಲೆನ್ಸ್, ಇಯಾನ್ ಬೆಲ್, ರವಿ ಬೊಪಾರ, ಸ್ಟುವರ್ಟ್ ಬ್ರಾಡ್, ಜೋಸ್ ಬಟ್ಲರ್, ಸ್ಟೀವನ್ ಫಿನ್, ಅಲೆಕ್ಸ್ ಹೇಲ್ಸ್, ಕ್ರಿಸ್ ಜೋರ್ಡನ್, ಜೋರೂಟ್, ಜೇಮ್ಸ್ ಟೇಲರ್, ಜೇಮ್ಸ್ ಟ್ರೆಡ್‌ವೆಲ್, ಕ್ರಿಸ್ ವೊಕ್ಸ್.
Advertisement