ವ್ಯಾಟ್ಸನ್‌ಗೂ ಕಾಡಿದ ಬೌನ್ಸರ್

ಶೇನ್ ವ್ಯಾಟ್ಸನ್
ಶೇನ್ ವ್ಯಾಟ್ಸನ್

ಮೊಲ್ಬೋರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡ ಅಭ್ಯಾಸ ನಡೆಸುತ್ತಿರುವ ವೇಳೆ ಬೌನ್ಸರ್ ಎಸೆತದಲ್ಲಿ ಚೆಂಡು ಆಲ್‌ರೌಂಡರ್ ಶೇನ್ ವ್ಯಾಟ್ಸನ್ ತಲೆಗೆ ಬಡಿದಿದೆ.

ಮಂಗಳವಾರ ಮೊಲ್ಬೋರ್ನ್ ಕ್ರಿಕೆಟ್ ಮೈದಾನದ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವಾಗ ಜೇಮ್ಸ್ ಪ್ಯಾಟಿನ್ಸ್‌ನ್ ಎಸೆದ ಬೌನ್ಸರ್, ವ್ಯಾಟ್ಸನ್ ಹೆಲ್ಮೆಟ್‌ಗೆ ಜೋರಾಗಿ ಬಡಿಯಿತು. ನಂತರ ಅವರು ಕೆಳಗೆ ಕೂತರು. ಸ್ವಲ್ಪ ಸಮಯದ ನಂತರ ನಿಧಾನವಾಗಿ ಹೆಲ್ಮೆಟ್ ತೆಗೆದು ವ್ಯಾಟ್ಸನ್, ಹೆಲ್ಮೆಟ್ ಅನ್ನು ಪರಿಶೀಲಿಸಿ ನಂತರ ನೆಟ್ಸ್‌ನಿಂದ ಹೊರ ನಡೆದರು. ತಂಡದ ವೈದ್ಯ ಪೀಟರ್ ಬ್ರುಕ್ನರ್ ಅವರು ವ್ಯಾಟ್ಸನ್‌ಗೆ ಚಿಕಿತ್ಸೆ ನೀಡಿದರು. ನಂತರ ತಲೆ ಮೇಲೆ ಕೈ ಇಟ್ಟುಕೊಂಡು ವ್ಯಾಟ್ಸನ್ ಎಸ್ಕಿಯಲ್ಲಿ ಬೇಸರದಿಂದ ಸಾಗಿದರು.

ಇದೇ ವೇಳೆ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್ ಅಭ್ಯಾಸ ಮಾಡುವಾಗ ಪೆಟ್ಟು ತಿಂದಿದ್ದಾರೆ. ನೆಟ್ ಬೌಲರ್ ಎಸೆದ ಚೆಂಡು ಸ್ಟಾರ್ಕ್ ಬ್ಯಾಟ್‌ನ ಒಳ ಅಂಚಿಗೆ ತಾಗಿ ಮಂಡಿಗೆ ಬಡಿದಿದೆ. ಶುಕ್ರವಾರದಿಂದ ಆರಂಭವಾಗಲಿರುವ ಮುಂದಿನ ಪಂದ್ಯದಲ್ಲಿ ಸ್ಟಾರ್ಕ್ ಸ್ಥಾನವನ್ನು, ಗಾಯದ ಸಮಸ್ಯೆಯಿಂದ ಗುಣಮುಖರಾಗಿರುವ ವೇಗಿ ರೆಯಾನ್ ಹ್ಯಾರಿಸ್ ತುಂಬುವ ಸಾಧ್ಯತೆಗಳು ಹೆಚ್ಚಾಗಿವೆ.

ಇನ್ನು 2ನೇ ಪಂದ್ಯದಲ್ಲಿ ಉಮೇಶ್ ಯಾದವ್ ಎಸೆತದಲ್ಲಿ ಹೆಬ್ಬೆರಳಿಗೆ ಗಾಯಮಾಡಿಕೊಂಡಿದ್ದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ಮಂಗಳವಾರ ಅಭ್ಯಾಸದಿಂದ ಹೊರ ಗುಳಿದಿದ್ದರು. ಅಲ್ಲದೆ ಬೆರಳಿಗೆ ಇನ್ನು ಬ್ಯಾಂಡೇಜ್ ಕಟ್ಟಿಕೊಂಡಿದ್ದು, ಮುಂದಿನ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.

ಏತನ್ಮಧ್ಯೆ, ಶೇನ್ ವ್ಯಾಟ್ಸನ್ ಅವರಿಗೆ ಗಂಭೀರ ಗಾಯವಾಗಿಲ್ಲ ಎಂದು ಆಸ್ಟ್ರೇಲಿಯಾ ತಂಡದ ಉಪನಾಯಕ ಬ್ರಾಡ್ ಹ್ಯಾಡಿನ್ ಖಚಿತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com