ಗೆದ್ದು ಬೀಗಿದ ಕರ್ನಾಟಕ

ಮಂಜು ಹಾಗೂ ಚಳಿಯ ವಾತಾವರಣದಿಂದ ಪಿಚ್‌ನಲ್ಲಿ ಸಿಕ್ಕ ಲಾಭವನ್ನು ಸಮರ್ಪಕವಾಗಿ ಬಳಸಿಕೊಂಡ ಕರ್ನಾಟಕ..
ಕರ್ನಾಟಕ ತಂಡ
ಕರ್ನಾಟಕ ತಂಡ

ನವದೆಹಲಿ: ಮಂಜು ಹಾಗೂ ಚಳಿಯ ವಾತಾವರಣದಿಂದ ಪಿಚ್‌ನಲ್ಲಿ ಸಿಕ್ಕ ಲಾಭವನ್ನು ಸಮರ್ಪಕವಾಗಿ ಬಳಸಿಕೊಂಡ ಕರ್ನಾಟಕ ತಂಡ , ರೈಲ್ವೇಸ್ ವಿರುದ್ಧದ ರಣಜಿ ಪಂದ್ಯದಲ್ಲಿ ಅರ್ಹ ಗೆಲವು ದಾಖಲಿಸಿದೆ.
ಪಂದ್ಯದ ನಾಲ್ಕನೇ ಹಾಗೂ ಅಂತಿಮ ದಿನವಾದ ಬುಧವಾರ ಕರ್ನಾಟಕ ತಂಡ 136  ರನ್‌ಗಳಿಂದ ದುರ್ಬಲ ರೈಲ್ವೇಸ್ ವಿರುದ್ಧ ಜಯ ಸಾಧಿಸಿತು. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿರುವ ರಾಜ್ಯ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೆಲವು ದಾಖಲಿಸಿ, ಚಾಂಪಿಯನ್ ರೀತಿಯಲ್ಲೇ ಪ್ರದರ್ಶನ ಮುಂದುವರಿಸಿದೆ. ಎ ಗುಂಪಿನಲ್ಲಿ 18 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ.

ಮೂರನೇ ದಿನದಾಟದ ಮೊತ್ತ : 1 ವಿಕೆಟ್‌ಗೆ 131 ರನ್‌ಗಳಿಂದ ಅಂತಿಮ ದಿನದಾಟ ಆರಂಭಿಸಿದ ಕರ್ನಾಟಕ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ 174 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತು, ನಂತರ ರೈಲ್ವೇಸ್ ತಂಡಕ್ಕೆ 251 ರನ್‌ಗಳ ಗುರಿ ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ರೈಲ್ವೇಸ್ ತಂಡ 114 ರನ್‌ಗಳಿಗೆ ಆಲೌಟ್  ಆಗುವ ಮೂಲಕ ಕರ್ನಾಟಕದ ಮುಂದೆ ತಲೆ ಬಾಗಿತು.

ಉತ್ತಪ್ಪ ಶತಕ ವಂಚಿತ: ಮುಂದಿನ ವರ್ಷ ವಿಶ್ವಕಪ್ ಟೂನಿಎಗೆ ಅಂತಿಮ 15ರ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವ ಕರ್ನಾಟಕದ  ರಾಬಿನ್ ಉತ್ತಪ್ಪ ಶತಕದ ಹೊಸ್ತಿಲಲ್ಲಿ ಎಡವಿದರು. 125 ಎಸೆತಗಳನ್ನು ಎದುರಿಸ ಉತ್ತಪ್ಪ 13 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 97 ರನ್ ಗಳಿಸಿದ್ದಾಗ ಉಪಾಧ್ಯಾಯ  ಎಸೆತದಲ್ಲಿ ಎಲ್ ಬಿ ಆದರು. ಇನ್ನು ಕರುಣ್ ನಾಯರ್ 63 ರನ್ ದಾಖಲಿ ಅನುರೀತ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು.

ಮಿಥುನ್ ಮ್ಯಾಜಿಕ್: ಕಠಿಣ ಗುರಿಯನ್ನು ಬೆನ್ನಟ್ಟಿದ ರೈಲ್ವೇಸ್ ತಂಡಕ್ಕೆ ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಮುಳವಾಗಿ ಪರಿಣಮಿಸಿದರು.

ರೈಲ್ವೇಸ್ ತಂಡದ ಪರ ಮೋಹನ್ ಭೋಸಲೆ (23), ಅನುಸ್ಟುಪ್ ಮಜುಂದಾರ್ (26) ಹಾಗೂ ಉಪಾಧ್ಯಾಯ (21) ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಆಟಗಾರ ಎರಡಂಕಿ ರನ್ ಗಳಿಸಲಿಲ್ಲ,

ಕರ್ನಾಟಕದ ಪರ ಮಿಥುನ್ 31 ರನ್ ಗಳಿಗೆ 5 ವಿಕೆಟ್ ಪಡೆದು ಮಿಂಚಿದರೆ, ಆರ್ ವಿನಯ್ ಕುಮಾರ್ 2 , ಅರವಿಂದ್, ಬಿನ್ನಿ ಹಾಗೂ ಶ್ರೇಯಸ್ ತಲಾ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com